Instagram: ಇನ್ಸ್ಟಾಗ್ರಾಮ್ ನಲ್ಲಿ ನಿಮ್ಮ ಅಕೌಂಟ್ ರೀತಿಯ ಫೇಕ್ ಅಕೌಂಟ್ ಇದೆಯಾ, ಹಾಗಿದ್ರೆ ಈ ರೀತಿ ರಿಪೋರ್ಟ್ ಮಾಡಿ ಅಕೌಂಟ್ ಡಿಲೀಟ್ ಮಾಡಿಸಿ.?
ಎಲ್ಲರಿಗೂ ನಮಸ್ಕಾರ. Instagram: ಇತ್ತೀಚಿನ ದಿನಗಳಲ್ಲಿ ಅತಿ ಹೆಚ್ಚು ಜನ ಮೊಬೈಲ್ ಬಳಕೆ ಮಾಡುತ್ತಿದ್ದಾರೆ ಎಂದರೆ ಅದಕ್ಕೆ ಈ ಇನ್ಸ್ಟಾಗ್ರಾಮ್ ಕೂಡ ಒಂದು ಕಾರಣ ಅಲ್ಲದೆ ಸದ್ಯದ ದಿನದಲ್ಲಿ ಸೋಶಿಯಲ್ ಮೀಡಿಯಾ ಎಂದರೆ ಅದರಲ್ಲಿ ಹೆಚ್ಚಿನ ಪಾತ್ರ ಇನ್ಸ್ಟಾಗ್ರಾಮ್ ದೇ ಇರುತ್ತದೆ ಯಾವುದೇ ವಿಷಯವಾದರೂ ಹೆಚ್ಚು ಬೇಗ ಜನರಿಗೆ ತಲುಪುವಂತಹ ಸಾಮಾಜಿಕ ಜಾಲತಾಣವೆಂದರೆ ಅದು ಇನ್ಸ್ಟಾಗ್ರಾಮ್ ಎಂದು ಹೇಳಬಹುದು ಅಂತ ಇನ್ಸ್ಟಾಗ್ರಾಮ್ ನಲ್ಲೂ ಕೂಡ ಬಹಳಷ್ಟು ಸಮಸ್ಯೆಗಳು ಉಂಟಾಗುತ್ತಿವೆ ಮತ್ತು ಕೆಲವು ಅಕೌಂಟ್ ಹ್ಯಾಕ್ ಸಮಸ್ಯೆಗಳು ಕೂಡ ಇತ್ತೀಚಿಗೆ ಹೆಚ್ಚಾಗಿವೆ ಅಲ್ಲದೆ ನಿಮ್ಮದೇ ಹೆಸರಿನ ಅಕೌಂಟರಿಗೆ ಬೇರೆ ಫೇಕ್ ಅಕೌಂಟ್ ಗಳನ್ನು ಕ್ರಿಯೇಟ್ ಮಾಡಿ ಅದರಿಂದ ತಪ್ಪು ಮಾಹಿತಿಗಳನ್ನು ನೀಡುತ್ತಿರುತ್ತಾರೆ ಅಂತಹ ಶೇಕ್ ಅಕೌಂಟ್ ಇದ್ದರೆ ಆ ಅಕೌಂಟ್ ರಿಪೋರ್ಟ್ ಮಾಡಿ ನೀವು ಡಿಲೀಟ್ ಮಾಡಿಸಬಹುದು ನೀವು ಕೂಡ ಇನ್ಸ್ಟಾಗ್ರಾಮ್ ಅಕೌಂಟ್ ಹೊಂದಿದ್ದರೆ ಈ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯಲು ಲೇಖನವನ್ನು ಪೂರ್ತಿಯಾಗಿ ಓದಿ.
ಇನ್ಸ್ಟಾಗ್ರಾಮ್ ನಲ್ಲಿ ಫೇಕ್ ಅಕೌಂಟ್ ರಿಪೋರ್ಟ್ ಮಾಡಿ ಡಿಲೀಟ್ ಮಾಡಿಸಿ.?
ಈಗಾಗಲೇ ತಿಳಿಸಿದ ಹಾಗೆ ಇನ್ಸ್ಟಾಗ್ರಾಮ್ ಎಂಬುದು ನಮ್ಮ ಭಾರತದಲ್ಲಿ ಅತಿ ಹೆಚ್ಚು ಬಳಕೆದಾರರನ್ನು ಹೊಂದಿದೆ ಅಲ್ಲದೆ ಯಾವುದೇ ವಿಷಯ ಆದರೂ ಕೆಲವೇ ಸಮಯದಲ್ಲಿ ಅತಿ ಹೆಚ್ಚು ಜನರಿಗೆ ರೀಚ್ ಮಾಡುವ ಒಂದು ಸಾಮಾಜಿಕ ಜಾಲತಾಣ ಇನ್ಸ್ಟಾಗ್ರಾಮ್ ಆಗಿದೆ ಹಾಗಾಗಿ ಇನ್ಸ್ಟಾಗ್ರಾಮ್ ನಲ್ಲೂ ಕೂಡ ಬಳಕೆದಾರರಿಗೆ ಕೆಲವು ಹೊಸ ಹೊಸ ಸಮಸ್ಯೆಗಳು ಎದುರಾಗುತ್ತಿದ್ದು ಇನ್ಸ್ಟಾಗ್ರಾಮ್ ಅಕೌಂಟ್ ಗಳನ್ನು ಹಾಕಿ ಮಾಡುವುದು ಅಥವಾ ನಿಮ್ಮದೇ ರೀತಿಯ ಇನ್ಸ್ಟಾಗ್ರಾಮ್ ಅಕೌಂಟನ್ನು ಬೇರೆ ವ್ಯಕ್ತಿ ಮಾಡಿ ಅದರಿಂದ ತಪ್ಪು ಮಾಹಿತಿಗಳನ್ನು ನೀಡುವುದು ಈ ರೀತಿಯ ಅಕೌಂಟ್ ಏನಾದರೂ ಇದ್ದರೆ ಅಂತಹ ಅಕೌಂಟನ್ನು ಕೇವಲ ಎರಡೇ ನಿಮಿಷದಲ್ಲಿ ರಿಪೋರ್ಟ್ ಮಾಡಿ ಆ ಅಕೌಂಟ್ ಅನ್ನು ಸುಲಭವಾಗಿ ಡಿಲೀಟ್ ಮಾಡಿಸಬಹುದು.
ಇನ್ಸ್ಟಾಗ್ರಾಮ್ ಫೇಕ್ ಅಕೌಂಟ್ ರಿಪೋರ್ಟ್ ಮಾಡಿ ಡಿಲೀಟ್ ಮಾಡಿಸುವ ವಿಧಾನ.?
ಇನ್ಸ್ಟಾಗ್ರಾಮ್ ನಲ್ಲಿ ನಿಮ್ಮ ಅಕೌಂಟ್ ಐಡಿ ರೂಪದಲ್ಲಿ ಬೇರೆ ಫೇಕ್ ಅಕೌಂಟ್ ಅನ್ನು ಯಾರಾದರೂ ಬಂದಿದ್ದರೆ ಅಥವಾ ಫೇಕ್ ಅಕೌಂಟ್ ಕ್ರಿಯೇಟ್ ಮಾಡಿ ತಪ್ಪು ಮಾಹಿತಿಗಳನ್ನು ನೀಡುತ್ತಿದ್ದಾರೆ ಅಂತಹ ಖಾತೆಗಳನ್ನು ನೀವೇ ಕೆಲವೇ ನಿಮಿಷದಲ್ಲಿ ರಿಪೋರ್ಟ್ ಮಾಡಿ ಡಿಲೀಟ್ ಮಾಡಿಸಬಹುದು ಅದೇಗೆ ಎಂದರೆ ಇನ್ಸ್ಟಾಗ್ರಾಮ್ ನಲ್ಲಿ Instagram helpಗೆ ಭೇಟಿ ನೀಡಿ ರಿಪೋರ್ಟ್ ಮಾಡಿ ಫೇಕ್ ಅಕೌಂಟ್ ಡಿಲೀಟ್ ಮಾಡಿಸಬಹುದು ಇದರ ವಿಧಾನ.
- ಮೊದಲು ನಿಮ್ಮ ಹೆಸರಿನಲ್ಲಿ ಅಥವಾ ನಿಮ್ಮದೇ ಐಡಿ ರೂಪದಲ್ಲಿ ಯಾವುದಾದರೂ ಫೇಕ್ ಅಕೌಂಟ್ ಇದ್ದರೆ ಅದನ್ನು ಚೆಕ್ ಮಾಡಿಕೊಂಡು
- ನಂತರ ಅಕೌಂಟ್ ಮೇಲೆ ರಿಪೋರ್ಟ್ ಮಾಡಿ ಡಿಲೀಟ್ ಮಾಡಿಸಲು Instagram helpಗೆ ಭೇಟಿ ನೀಡಲು ಲಿಂಕ್ ಮೇಲೆ ಕ್ಲಿಕ್ ಮಾಡಿ.
- ನಂತರ Instagram how can we help ಪೇಜ್ ಓಪನ್ ಆಗುತ್ತದೆ
- ಅದರ ಕೆಳಭಾಗದ Report an Impersonation Account on Instagram ನಲ್ಲಿ ಮೊದಲ ಆಪ್ಷನ್ Someone created an account pretending to be me or a friend ಸೆಲೆಕ್ಟ್ ಮಾಡಿ.
- ನಂತರ ಕೆಳಭಾಗದಲ್ಲಿರುವ Yes, I am the person being impersonated ಆಯ್ಕೆ ಮಾಡಿ ನಂತರ send ಮೇಲೆ ಕ್ಲಿಕ್ ಮಾಡಿ
- ನಂತರ ಅದರಲ್ಲಿ ನಿಮ್ಮ ಹೆಸರು ಮತ್ತು ನಿಮ್ಮ ಇಮೇಲ್ ಐಡಿಯನ್ನು ಭರ್ತಿ ಮಾಡಿ
- ನಂತರ The full name listed on the account that you’re reporting ನಲ್ಲಿ ಫೇಕ್ ಇನ್ಸ್ಟಾಗ್ರಾಮ್ ಅಕೌಂಟ್ ನ ಸಂಪೂರ್ಣ ಹೆಸರನ್ನು ಭರ್ತಿ ಮಾಡಿ
- ತದನಂತರ ಕೆಳಗೆ ಇರುವ ಕಾಲಂನಲ್ಲಿ ಫೇಕ್ ಅಕೌಂಟ್ ಲಿಂಕ್ ಭರ್ತಿ ಮಾಡಿ.
- ಕೊನೆಯದಾಗಿ Upload a photo with your ID ಎಂದು ಇರುತ್ತದೆ ಅಲ್ಲಿ Choose files ಮೇಲೆ ಕ್ಲಿಕ್ ಮಾಡಿ ನಿಮ್ಮ ಆಧಾರ್ ಕಾರ್ಡ್ ಅಥವಾ ವೋಟರ್ ಐಡಿ ಅಥವಾ ಯಾವುದಾದರೂ ಒಂದು ಐಡಿಯೊಂದಿಗೆ ನಿಮ್ಮ ಫೋಟೋವನ್ನು ಅಪ್ಲೋಡ್ ಮಾಡಿ
- ನಂತರ ಕೆಳಗೆ Additional info ಎಂದು ಇರುತ್ತದೆ ಅದರಲ್ಲಿ Someone created a fake Instagram account using my name I request Instagram team to review this page and delete as soon as possible ಎಂದು ಟೈಪ್ ಮಾಡಿ ಸೆಂಡ್ ಮಾಡಿ.
ಇನ್ಸ್ಟಾಗ್ರಾಮ್ ಫೇಕ್ ಅಕೌಂಟ್ ಕ್ರಿಯೇಟ್ ಮಾಡಿದ್ದಾರಾ, ಇನ್ನೊಂದು ಮುಖ್ಯ ಮಾಹಿತಿ.?
ನಿಮ್ಮ instagram ಅಕೌಂಟ್ ರೀತಿಯ ಫೇಕ್ ಅಕೌಂಟ್ ಯಾರಾದರೂ ಅಕೌಂಟ್ ಓಪನ್ ಮಾಡಿದ್ದರೆ ಅಂತಹ ಅಕೌಂಟನ್ನು ಈ ಮೇಲೆ ತಿಳಿಸಲಾಗಿರುವ ರೀತಿ ರಿಪೋರ್ಟ್ ಮಾಡಿ ಅಕೌಂಟ್ ಅನ್ನು ಡಿಲೀಟ್ ಮಾಡಿಸಬಹುದು ಒಂದು ವೇಳೆ ಫೇಕ್ ಅಕೌಂಟ್ ಕ್ರಿಯೇಟ್ ಮಾಡಿದವರ ವಿರುದ್ಧ ಕಾನೂನಾತ್ಮಕವಾಗಿ ಶಿಕ್ಷೆ ಕೊಡಿಸಬೇಕು ಎಂದುಕೊಂಡಿದ್ದಲ್ಲಿ 1930 ನಂಬರ್ಗೆ ಕರೆ ಮಾಡಿ ನಿಮ್ಮ instagram ಅಕೌಂಟ್ ರೀತಿಯ ಫೇಕ್ ಅಕೌಂಟ್ ಕ್ರಿಯೇಟ್ ಮಾಡಿರುವ ಬಗ್ಗೆ ಮಾಹಿತಿ ನೀಡಿ ದೂರು ದಾಖಲಿಸಬಹುದು ಅಥವಾ ಹತ್ತಿರದ ಸೈಬರ್ ಪೊಲೀಸ್ ಸ್ಟೇಷನ್ ಗೆ ಭೇಟಿ ನೀಡಿ ಫೇಕ್ ಅಕೌಂಟ್ ಕ್ರಿಯೇಟ್ ಮಾಡಿರುವ ಮಾಹಿತಿಯನ್ನು ನೀಡಿ ದೂರು ದಾಖಲಿಸಬಹುದು, ಇನ್ನು ಆ ವ್ಯಕ್ತಿಗೆ ಕಾನೂನಿನ ಪ್ರಕಾರ ಎರಡು ಲಕ್ಷ ರೂಪಾಯಿಗಳವರೆಗೆ ದಂಡ ಮತ್ತು ಮೂರು ವರ್ಷಗಳ ಶಿಕ್ಷೆ ನೀಡಲಾಗುತ್ತದೆ ನಿಮ್ಮ ಇನ್ಸ್ಟಾಗ್ರಾಮ್ ಅಕೌಂಟ್ ರೀತಿ ಕೂಡ ಫೇಕ್ ಅಕೌಂಟ್ ಇದ್ದರೆ ಈಗಲೇ ಈ ರೀತಿ ಮಾಡಿ ಧನ್ಯವಾದಗಳು..
Report ಮಾಡುವ Link: https://help.instagram.com/contact/636276399721841