ಪಾಸಾದ ವಿದ್ಯಾರ್ಥಿಗಳಿಗೆ ಸಿಗಲಿದೆ 20,000 ದಿಂದ 35,000 ಪ್ರೈಸ್ ಮನಿ. ಸಮಾಜ ಕಲ್ಯಾಣ ಇಲಾಖೆಯಿಂದ ಪ್ರೋತ್ಸಾಹ ಧನಕ್ಕೆ ಅರ್ಜಿ ಆಹ್ವಾನ.
ರಾಜ್ಯದ ಸಮಾಜ ಕಲ್ಯಾಣ ಇಲಾಖೆ ಯಿಂದ ಪಾಸಾದ ವಿದ್ಯಾರ್ಥಿಗಳಿಗೆ 20,000 ದಿಂದ 35 ಸಾವಿರದವರೆಗೆ ಪ್ರೋತ್ಸಾಹ ಧನ ನೀಡಲು ಅರ್ಜಿಯನ್ನು ಸ್ವೀಕರಿಸಲಾಗುತ್ತಿದೆ ಸದ್ಯ ಪ್ರಸಕ್ತ ಸಾಲಿನಲ್ಲಿ ಪ್ರಥಮ ಪ್ರಯತ್ನದಲ್ಲಿ ಅಂದರೆ ಒಂದೇ ಬಾರಿ ಆಗಿ ಪ್ರಥಮ ಶ್ರೇಣಿಯಲ್ಲಿ ಪಾಸಾದ ವಿದ್ಯಾರ್ಥಿಗಳಿಗೆ ಸಮಾಜ ಕಲ್ಯಾಣ ಇಲಾಖೆಯು ಪ್ರತಿವರ್ಷವು ವಿದ್ಯಾರ್ಥಿಗಳಿಗೆ ಅವರ ವಿದ್ಯಾಭ್ಯಾಸಕ್ಕಾಗಿ ನೀಡುವ ಸಹಾಯಧನವನ್ನು ಈ ಬಾರಿಯೂ ಸಹ ನೀಡಲು ವಿದ್ಯಾರ್ಥಿಗಳಿಂದ ಅರ್ಜಿಗಳನ್ನು ಸ್ವೀಕರಿಸಲು ಆರಂಭಿಸಿದ್ದು. ಈಗಾಗಲೇ ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು ಮತ್ತು ಅರ್ಜಿ ಸಲ್ಲಿಸುವ ಕೊನೆಯ ದಿನಾಂಕದ ಬಗ್ಗೆ ಸ್ಪಷ್ಟವಾಗಿ ಇಲಾಖೆಯು ತಿಳಿಸಿದ್ದು ಅರ್ಜಿ ಸಲ್ಲಿಸುವ ಅರ್ಜಿ ಸಲ್ಲಿಸಲು ಪ್ರಥಮ ಶ್ರೇಣಿಯಲ್ಲಿ ಒಂದೇ ಬಾರಿ ಪಾಸಾಗಿ ಅರ್ಹತೆ ಹೊಂದಿರುವ ಅಭ್ಯರ್ಥಿಗಳು ಈ ಕೂಡಲೇ ಅರ್ಜಿ ಸಲ್ಲಿಸುವುದು ಸೂಕ್ತ ಅಲ್ಲದೆ ಕೊನೆಯ ದಿನಾಂಕದ ಒಳಗಾಗಿ ಅರ್ಜಿ ಸಲ್ಲಿಸಿದ ವಿದ್ಯಾರ್ಥಿಗಳಿಗೆ ಮಾತ್ರ ಈ ಅವಕಾಶ ಸಿಗಲಿದ್ದು ದಿನಾಂಕ ಮುಗಿದ ಮೇಲೆ ಯಾವುದೇ ರೀತಿಯ ಅರ್ಜಿಗಳನ್ನು ಸ್ವೀಕರಿಸುವುದಿಲ್ಲ ಎಂದು ಸ್ಪಷ್ಟವಾಗಿ ಸಮಾಜ ಕಲ್ಯಾಣ ಇಲಾಖೆಯಿಂದ ತಿಳಿಸಲಾಗಿದೆ ಈಗಾಗಲೇ ಅರ್ಜಿ ಬಿಡುಗಡೆ ಮಾಡಿದ್ದು ಈ ಕೊಡಲೇ ಅರ್ಜಿ ಸಲ್ಲಿಸಬಹುದು.
ಇದನ್ನುಓದಿ: SSLC ಪೂರಕ ಪರೀಕ್ಷೆ ಡೇಟ್ ಫಿಕ್ಸ್. ಪೂರಕ ಪರೀಕ್ಷೆಯ ಟೈಮ್ ಟೇಬಲ್ ಬಿಡುಗಡೆ.?
ಸಮಾಜ ಕಲ್ಯಾಣ ಇಲಾಖೆ ಯಿಂದ ಪ್ರೋತ್ಸಾಹ ಧನಕ್ಕೆ ಅರ್ಜಿ ಆಹ್ವಾನ.
ಸದ್ಯ ಈಗಾಗಲೇ ಸಮಾಜ ಕಲ್ಯಾಣ ಇಲಾಖೆ ಪಾಸಾದ ವಿದ್ಯಾರ್ಥಿಗಳಿಗೆ ಅಂದರೆ ಪ್ರಥಮ ಪ್ರಯತ್ನದಲ್ಲೇ ಪ್ರಥಮ ಶ್ರೇಣಿಯಲ್ಲಿ ಪಾಸಾಗಿರುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ. ಈ ಪ್ರೈಸ್ ಮನಿಯು ವಿವ್ಯ ಕೋರ್ಸ್ ಗಳಲ್ಲಿ ಅಧ್ಯಯನ ಮಾಡುತ್ತಿರುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳು ಈ ಪ್ರೋತ್ಸಾಹ ಧನಕ್ಕಾಗಿ ಅರ್ಜಿ ಸಲ್ಲಿಸಬಹುದು ಅಲ್ಲದೆ ಈಗಾಗಲೇ ಕರ್ನಾಟಕ ಸರ್ಕಾರದ ಸಮಾಜ ಕಲ್ಯಾಣ ಇಲಾಖೆಯಿಂದ ಈ ಬಗ್ಗೆ ಸಂಪೂರ್ಣ ಮಾಹಿತಿಗಳನ್ನು ನೀಡಿದ್ದು ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು ಮತ್ತು ಅರ್ಜಿ ಸಲ್ಲಿಸುವ ದಿನಾಂಕದ ಬಗ್ಗೆಯೂ ಸಂಪೂರ್ಣ ಮಾಹಿತಿಯನ್ನು ನೀಡಿದ್ದು. ಈ ಲೇಖನದಲ್ಲಿ ಈ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿಸಿಕೊಡಲಾಗಿದೆ ಲೇಖನವನ್ನು ಪೂರ್ತಿಯಾಗಿ ಓದಿ ಮತ್ತು ಅರ್ಜಿ ಸಲ್ಲಿಸುವ ಲಿಂಕ್ ಮತ್ತು ಅರ್ಜಿ ಸಲ್ಲಿಸುವುದು ಹೇಗೆ ಎಂಬುದನ್ನು ತಿಳಿದುಕೊಳ್ಳಿ.
ಸಮಾಜ ಕಲ್ಯಾಣ ಇಲಾಖೆಯ ಪ್ರೋತ್ಸಾಹ ಧನಕ್ಕೆ ಯಾರೆಲ್ಲಾ ಅರ್ಜಿ ಸಲ್ಲಿಸಬಹುದು
ಕರ್ನಾಟಕ ಸರ್ಕಾರದ ಸಮಾಜ ಕಲ್ಯಾಣ ಇಲಾಖೆಯ ಈ ಪ್ರೋತ್ಸಾಹ ಧನಕ್ಕೆ 2023 ನೇ ಸಾಲಿನ ಪರೀಕ್ಷೆಗಳಲ್ಲಿ ಪ್ರಥಮ ಪ್ರಯತ್ನದಲ್ಲಿ ಪ್ರಥಮ ಶ್ರೇಣಿಯಲ್ಲಿ ಪಾಸಾಗಿರುವ ಯಾವುದೇ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಮೆಟ್ರಿಕ್ ನಂತರದ ಅಂದರೆ ದ್ವಿತೀಯ ಪಿಯುಸಿ ಪಾಸ್ ಆಗಿರುವ ಯಾವುದೇ ಕೋರ್ಸನ ವಿದ್ಯಾರ್ಥಿಗಳಾದರೂ ಸಹ ಈ ಸಮಾಜ ಕಲ್ಯಾಣ ಇಲಾಖೆಯ ಪ್ರೈಸ್ ಮನಿಗೆ ಅರ್ಜಿ ಸಲ್ಲಿಸಬಹುದು ಅರ್ಹತೆ ಹೊಂದಿರುವ ವಿದ್ಯಾರ್ಥಿಗಳಿಗೆ ಇಲಾಖೆಯಿಂದ ಈಗಾಗಲೇ ತಿಳಿಸಿರುವ ಹಾಗೆ 20,000 ದಿಂದ 35 ಸಾವಿರದವರೆಗೆ ಪ್ರೈಸ್ ಮನಿ ಸಿಗಲಿದೆ
ಇಲಾಖೆಯ ಪ್ರೈಸ್ ಮನಿ ಪಡೆಯಲು ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ
ಈಗಾಗಲೇ ಸಮಾಜ ಕಲ್ಯಾಣ ಇಲಾಖೆಯು ವಿದ್ಯಾರ್ಥಿಗಳಿಗೆ ಈ ಬಗ್ಗೆ ಅಧಿಸೂಚನೆ ನೀಡಿತು ಅರ್ಜಿ ಸಲ್ಲಿಸಲು ಲಿಂಕ್ ಬಿಡುಗಡೆ ಮತ್ತು ಬೇಕಾಗುವ ದಾಖಲೆಗಳು ಮತ್ತು ಇನ್ನಿತರ ವಿಷಯಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿಸಿ 2023ನೇ ಸಾಲಿನಲ್ಲಿ ಪ್ರಥಮ ಪ್ರಯತ್ನದಲ್ಲಿ ಪ್ರಥಮ ಶ್ರೇಣಿಯಲ್ಲಿ ಅಂದರೆ ಫಸ್ಟ್ ಕ್ಲಾಸ್ ನಲ್ಲಿ ಪಾಸಾಗಿರುವ ಎಲ್ಲಾ ಕೋರ್ಸ್ ವಿದ್ಯಾರ್ಥಿಗಳು ಸಹ ಅರ್ಜಿ ಸಲ್ಲಿಸಬಹುದು ಅಂತಹ ವಿದ್ಯಾರ್ಥಿಗಳಿಗೆ ಮುಂದಿನ ವಿದ್ಯಾಭ್ಯಾಸಕ್ಕಾಗಿ ಸಮಾಜ ಕಲ್ಯಾಣ ಇಲಾಖೆ ಯಿಂದ ಉಚಿತವಾಗಿ ಪ್ರತಿ ವರ್ಷ 20 ರಿಂದ 35,000 ಹಣ ನೀಡಲಾಗುತ್ತದೆ ಎಂದು ತಿಳಿಸಲಾಗಿದೆ ಅಲ್ಲದೆ ಈ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವನ್ನು ಸಮಾಜ ಕಲ್ಯಾಣ ಇಲಾಖೆ ತಿಳಿಸಿದ್ದು.
ಇದೆ ಆಗಸ್ಟ್ 31ನೇ ದಿನಾಂಕ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಎಂದು ತಿಳಿಸಿದ್ದು ಇದರ ಒಳಗಾಗಿ ಎಲ್ಲ ವಿದ್ಯಾರ್ಥಿಗಳು ಇಲಾಖೆಯಿಂದ ತಿಳಿಸಿರುವ ಎಲ್ಲಾ ದಾಖಲೆಗಳನ್ನು ಹೊಂದಿಸಿ ಅರ್ಜಿ ಸಲ್ಲಿಸಬೇಕಾಗಿ ತಿಳಿಸಿದೆ ಇದರ ನಂತರದಲ್ಲಿ ಯಾವುದೇ ರೀತಿಯ ಅರ್ಜಿ ಸಲ್ಲಿಕೆ ದಿನಾಂಕದಲ್ಲಿ ಮುಂದೂಡಿಕೆ ಮಾಡುವುದಿಲ್ಲ ಈಗಾಗಲೇ ಹೆಚ್ಚಿನ ದಿನಗಳನ್ನು ಅರ್ಜಿ ಸಲ್ಲಿಕೆಗೆ ನೀಡಿದ್ದು ವಿದ್ಯಾರ್ಥಿಗಳು ಈ ದಿನಾಂಕದೊಳಗೆ ಇಲಾಖೆಯಿಂದ ನೀಡಿರುವ ನಿಯಮದಂತೆ ದಾಖಲೆಗಳನ್ನು ಹೊಂದಿಸಿ ಅರ್ಜಿ ಸಲ್ಲಿಸಬೇಕಾಗಿ ತಿಳಿಸಲಾಗಿದೆ ಅರ್ಜಿ ಸಲ್ಲಿಸಲು ಆಗಸ್ಟ್ 31ನೇ ದಿನಾಂಕವೇ ಕಡೆಯ ದಿನ.
ಇದನ್ನುಓದಿ: SSLC ಪೂರಕ ಪರೀಕ್ಷೆ ಡೇಟ್ ಫಿಕ್ಸ್. ಪೂರಕ ಪರೀಕ್ಷೆಯ ಟೈಮ್ ಟೇಬಲ್ ಬಿಡುಗಡೆ.?
ಕರ್ನಾಟಕ ಸರ್ಕಾರದ ಸಮಾಜ ಕಲ್ಯಾಣ ಇಲಾಖೆಯ ಉಚಿತ ಪ್ರೈಸ್ ಮಣಿಗೆ ಅರ್ಜಿ ಸಲ್ಲಿಸುವುದು ಹೇಗೆ.?
ಯ ಸದ್ಯ ಈ ಬಗ್ಗೆ ಈಗಾಗಲೇ ಸಮಾಜ ಕಲ್ಯಾಣ ಇಲಾಖೆಯ ಅಧಿಕೃತ ಮಾಹಿತಿಗಳನ್ನು ನೀಡಿದ್ದು ಸರ್ಕಾರದ ಸಮಾಜ ಕಲ್ಯಾಣ ಇಲಾಖೆಯಿಂದ ನೀಡುವ ಉಚಿತ 20000ದಿಂದ 35,000 ಪ್ರೈಸ್ ಮನಿಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಮತ್ತು ಲಿಂಕ್ ಮತ್ತು ಬೇಕಾಗುವ ದಾಖಲೆಗಳ ಎಲ್ಲಾ ಮಾಹಿತಿಗಳನ್ನು ನೀಡಿದ್ದು ಈ ಯೋಜನೆಗೆ ರಾಜ್ಯದ ಎಲ್ಲಾ ಪ್ರಥಮ ಶ್ರೇಣಿಯಲ್ಲಿ ಪಾಸ್ ಆಗಿರುವ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು ಎಂದು ತಿಳಿಸಲಾಗಿದೆ.
ಅರ್ಜಿ ಸಲ್ಲಿಸುವ ವಿಧಾನ
- 2023ನೇ ಸಾಲಿನಲ್ಲಿ ಪ್ರಥಮ ಶ್ರೇಣಿಯಲ್ಲಿ ಪಾಸ್ ಆಗಿರುವ ವಿದ್ಯಾರ್ಥಿಗಳು ಆನ್ಲೈನ್ ನಲ್ಲಿ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬೇಕು
- ಮೊದಲು ಇಲಾಖೆಯ ಅಧಿಕೃತ ವೆಬ್ಸೈಟ್ sw.kar.nic.in ಗೆ ಭೇಟಿ ನೀಡಿ
- ನಂತರ ಮುಖಪಟದಲ್ಲಿ ಮೆಟ್ರಿಕ್ ನಂತರದ ಪ್ರೋತ್ಸಾಹ ಧನ ಎನ್ನುವ ಲಿಂಕ್ ಮೇಲೆ ಕ್ಲಿಕ್ ಮಾಡಿ
- ಆಗ ನಿಮಗೆ ಮತ್ತೊಂದು ಪುಟ ಓಪನ್ ಆಗುತ್ತದೆ
- ಅಲ್ಲಿ ಆನ್ಲೈನ್ ಅರ್ಜಿ ಲಿಂಕ್ ಮೇಲೆ ಕ್ಲಿಕ್ ಮಾಡಿ
- ನಂತರ ಅಲ್ಲಿ ಕೇಳಲಾಗಿರುವ ಅಗತ್ಯ ದಾಖಲೆಗಳನ್ನು ಎಂಟರ್ ಮಾಡಿ ಮತ್ತು ಅಪ್ಲೋಡ್ ಮಾಡಿ
- ಅಂಕಪಟ್ಟಿ ಆಧಾರ್ ಕಾರ್ಡ್ ಬ್ಯಾಂಕ್ ಪಾಸ್ ಬುಕ್ ಫೋಟೋಸ್ ಇಮೇಲ್ ಐಡಿ ಫೋನ್ ನಂಬರ್ ಆದಾಯ ಮತ್ತು ಜಾತಿ ಪ್ರಮಾಣ ಪತ್ರ ಇನ್ನಿತರ ಕೆಲವು ದಾಖಲೆಗಳನ್ನು ಕೇಳಲಾಗುತ್ತದೆ ಅವುಗಳನ್ನು ಸಹ ಅಪ್ಲೋಡ್ ಮಾಡಿ
- ನಂತರ ಅರ್ಜಿ ಸಲ್ಲಿಕೆ ಆಪ್ಷನ್ ಮೇಲೆ ಕ್ಲಿಕ್ ಮಾಡಿ
- ಎಲ್ಲ ಮುಗಿದ ಮೇಲೆ ನಿಮಗೆ ಅರ್ಜಿ ಸಲ್ಲಿಸಿರುವುದು ಯಶಸ್ವಿಯಾಗಿದೆ ಎಂದು ತೋರುತ್ತದೆ ನಂತರ ಅದನ್ನು ಡೌನ್ಲೋಡ್ ಮಾಡಿಕೊಂಡು ಪ್ರಿಂಟ್ ತೆಗೆದುಕೊಳ್ಳಿ.
ಈ ರೀತಿ ಸಮಾಜ ಕಲ್ಯಾಣ ಇಲಾಖೆಯು ಈಗಾಗಲೇ ಬಿಡುಗಡೆ ಮಾಡಿರುವ ಅಫೀಷಿಯಲ್ ವೆಬ್ಸೈಟ್ sw.kar.nic.in ಗೆ ಭೇಟಿ ನೀಡಿ ನೀಡಲಾಗಿರುವ ಈ ಎಲ್ಲಾ ದಾಖಲೆಗಳನ್ನು ಅಪ್ಲೋಡ್ ಮಾಡಿ ಇದೆ ರೀತಿಯಲ್ಲಿ ಆನ್ಲೈನಲ್ಲಿ ಅರ್ಜಿ ಸಲ್ಲಿಸಬೇಕು.
ಮುಖ್ಯವಾದದ್ದು:
ಇಲಾಖೆ ಯಿಂದ ಮುಖ್ಯವಾದ ಒಂದು ಮಾಹಿತಿ ನೀಡಿದ್ದು ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸುವಾಗ ಕಾಲೇಜಿನ ಹೆಸರು ಇಲ್ಲದೆ ಹೋದಲ್ಲಿ ಕಾಲೇಜಿನ ಹೆಸರನ್ನು ಮತ್ತು ಇನ್ನಿತರ ಯಾವುದೇ ದಾಖಲೆಗಳ ಸೇರ್ಪಡೆ ಮಾಡಬೇಕು ಎಂದರೆ ಸಂಬಂಧಪಟ್ಟ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳ ಕಚೇರಿಗೆ ಅಥವಾ ಜಿಲ್ಲಾ ಪರಿಶಿಷ್ಟ ವರ್ಗದ ಕಲ್ಯಾಣ ಅಧಿಕಾರಿಗಳ ಕಚೇರಿಗೆ ಭೇಟಿ ನೀಡಲು ಸೂಚನೆ ನೀಡಿದೆ.
ಕೋರ್ಸ್ ಅನುಸಾರ ಪ್ರೋತ್ಸಾಹ ಧನದ ವಿವರ.
- ದ್ವಿತೀಯ ಪಿಯುಸಿ ಮತ್ತು ಮೂರು ವರ್ಷದ ಪಾಲಿಟೆಕ್ನಿಕ್ ಡಿಪ್ಲೋಮೋ ವಿದ್ಯಾರ್ಥಿ ಗಳಿಗೆ 20000/- ರೂಪಾಯಿಗಳು
- ಪದವಿ ವಿದ್ಯಾರ್ಥಿಗಳಿಗೆ 25,000/-
- ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ 30000/-
- ಅಗ್ರಿಕಲ್ಚರ್ ಇಂಜಿನಿಯರಿಂಗ್ ವೆಟರ್ನರಿ ಮೆಡಿಸನ್ ವಿದ್ಯಾರ್ಥಿಗಳಿಗೆ 35000/-