ಬಸ್ಸು ಕಾರುಗಳಲ್ಲಿ ಹೋಗುವಾಗ ವಾಂತಿ ಆಗುತ್ತಾ? ಇದಕ್ಕೆ 100% ಪರಿಹಾರವಿದೆ ವಾಂತಿಗೆ ಹೇಳಿ bye | Motion Sickness

ವಾಂತಿಯ ಸಮಸ್ಯೆಗೆ 100% ಪರಿಹಾರ ಇದೆ.ಈ ಸಮಸ್ಯೆಗೆ ಪರಿಹಾರ ಏನು ಎಂದು ಈ ಲೇಖನದಲ್ಲಿ ತಿಳಿಯೋಣ ಬನ್ನಿ!!

ಬಸ್ಸು ಕಾರು ಅಥವಾ ಬೇರೆ ವಾಹನಗಳಲ್ಲಿ ಪ್ರಯಾಣ ಮಾಡುವಾಗ ಅನೇಕರಿಗೆ ವಾಂತಿ ಆಗೋದು ತಲೆ ತಿರುಗುವಂತೆ ಆಗೋದು ಮತ್ತು ಚಡಪಡಿಕೆ ಉಂಟಾಗುತ್ತದೆ. ಅಷ್ಟೇ ಅಲ್ಲ ಕೆಲವರಿಗೆ ವಿಮಾನದಲ್ಲಿ ಹೋಗುವಾಗ, ಹಡಗಿನಲ್ಲಿ ಸಂಚರಿಸುವಾಗ ಕೂಡ ಈ ವಾಂತಿ ಸಮಸ್ಯೆ ಉಂಟಾಗುತ್ತದೆ.ಆ ಸಮಯದಲ್ಲಿ ಅವರಿಗೆ ಬೇರೆಯವರ ಜೊತೆ ಮಾತನಾಡಲು ಆಗುವುದಿಲ್ಲ. ಪ್ರಯಾಣವನ್ನು ಆನಂದಿಸಲು ಅಗುವುದಿಲ್ಲ. ಕೆಲವರಿಗೆ ತಲೆ ನೋವು ಕೂಡ ಪ್ರಾರಂಭವಾಗುತ್ತದೆ. ಇದನ್ನು ನಾವು Motion Sickness ಎಂದು ಕರೆಯುತ್ತೇವೆ. ಈ ಸಮಯದಲ್ಲಿ ಪ್ರಯಾಣ ಮಾಡುವುದು ಬಹಳ ಕಷ್ಟ ಉಂಟುಮಾಡುತ್ತದೆ. ಆದರೆ ಈ ಮೋಶನ್ ಸಿಕ್ನೆಸ್ ಗೆ ಕಾರಣಗಳೇನು? ಇದನ್ನು ತಡೆಯಲು ಮಾರ್ಗಗಳು ಯಾವುವು.

WhatsApp Group Join Now
Telegram Group Join Now

ಇನ್ನೊಂದು ವಿಶೇಷತೆ ಏನಂದ್ರೆ :- 

ಈ ವಾಂತಿ ಸಮಸ್ಯೆ ಇರೋರು ವಾಹನವನ್ನು ಡ್ರೈವ್ ಮಾಡುತ್ತಿದ್ದರೆ ಆಗ ಮಾತ್ರ ವಾಂತಿ ಸಮಸ್ಯೆ ಉಂಟಾಗುವುದಿಲ್ಲ. ಯಾಕೆ ಈ ರೀತಿ ಆಗುತ್ತೆ. ಈ ಸಮಸ್ಯೆಯನ್ನು ತಡೆಯಲು ಸಾಧ್ಯವೇ!

Motion Sickness ಎಂದರೇನು ?

ಮೋಶನ್ ಸಿಕ್ನೆಸ್ಸ್ ಅನ್ನೋದು ಒಂದು ರೋಗ ಅಲ್ಲ. ಇದು ಮನಸ್ಸಿನ ಒಂದು ಸ್ಥಿತಿ, ಇದರಲ್ಲಿ ನಮ್ಮ ಮೆದುಳು, ಕಿವಿ, ಮೂಗು, ಮಾಂಸಖಂಡಗಳು, ಮತ್ತು ಚರ್ಮದಿಂದ ವಿವಿಧ ರೀತಿಯ ಸಂಕೇತಗಳನ್ನು ಪಡೆಯುತ್ತದೆ.

ಉದಾಹರಣೆ :-ನೀವು ಪ್ರಯಾಣ ಮಾಡುತ್ತಿರುವಾಗ ಮೊಬೈಲ್ ನೋಡುತ್ತಿದ್ದೀರಿ ಎಂದು ಭಾವಿಸಿ. ಅಂದರೆ ನಿಮ್ಮ ಕಣ್ಣು ಚಲಿಸದೆ ಇರುವಂತಹ ಒಂದು ವಸ್ತು. ಮೊಬೈಲ್ ಮೇಲೆ ಕೇಂದ್ರೀಕೃತವಾಗಿರುತ್ತದೆ, ಇದೇ ಸಂದೇಶವನ್ನು ಕಿವಿಯು ಮೆದುಳಿಗೆ ಕಳಿಸುತ್ತದೆ. ಆದರೆ ನಮ್ಮ ಕಿವಿ ನಮ್ಮ ದೇಹ ಚಲಿಸದೆ ಇರುವುದನ್ನು ಗ್ರಹಿಸುತ್ತದೆ. ಇದೇ ಸಂದೇಶವನ್ನ ಕಿವಿಯು ಮೆದುಳಿಗೆ ಕಳಿಸುತ್ತದೆ. ಇಂತಹ ಪರಿಸ್ಥಿಯಲ್ಲಿ ನಮ್ಮ ದೇಹವು ಚಲಿಸುತ್ತಿದೆಯಾ ಅಥವಾ ವಿಶ್ರಾಂತಿ ಪಡೆಯುತ್ತಿದೆಯಾ ಅಂತ ನಮ್ಮ ಮನಸ್ಸಿಗೆ ಅರ್ಥ ಆಗುವುದಿಲ್ಲ.

ವಾಂತಿಯ ಸಮಸ್ಯೆಯನ್ನು ತಡೆಯಲು ಸಲಹೆಗಳು :-

* ನಿಂಬೆಹಣ್ಣು, ಶುಂಠಿ, ಪುದೀನ ಸೊಪ್ಪು, ಅಥವಾ ಏಲಕ್ಕಿ, ತಂಪು ಪಾನೀಯ ಇವುಗಳನ್ನು ಅಲ್ಪ ಪ್ರಮಾಣದಲ್ಲಿ ಸೇವಿಸಬಹುದು. ನಿಂಬೆ ಹಣ್ಣು, ಶುಂಠಿ ಪುದೀನ ಸೊಪ್ಪಿನ ವಾಸನೆಯನ್ನು ತೆಗೆದುಕೊಳ್ಳಬಹುದು. ಇದರಿಂದ ನಮ್ಮ ಚಡಪಡಿಕೆ ದೂರ ಆಗುತ್ತದೆ. 

ಶುಂಠಿ ಪುಡಿಯನ್ನು ಪ್ರಯಾಣಿಸುವ ಅರ್ಧ ಗಂಟೆಯ ಮೊದಲೇ ನೀವು ಸೇವಿಸೋದು ಒಳ್ಳೆಯದು.

* ಲವಂಗವನ್ನ ಹುರಿದು ಪುಡಿ ಮಾಡಿ ಇಟ್ಟುಕೊಳ್ಳಿ. ಮತ್ತೆ ನಿಮಗೆ ವಾಂತಿ ಆಗುವ ಮುನ್ಸೂಚನೆ ಸಿಕ್ಕ ತಕ್ಷಣ ಈ ಪುಡಿಗೆ ಒಂದು ಚಿಟಿಕೆ ಸಕ್ಕರೆ ಅಥವಾ ಕಪ್ಪು ಉಪ್ಪು, ಸೇರಿಸಿ ಸೇವನೆ ಮಾಡಿ. ಇದರಿಂದ ವಾಂತಿ ಆಗೋದು ತಡೆಯುತ್ತದೆ.

ಪ್ರಯಾಣಕ್ಕೆ ಮೊದಲು ಹೆಚ್ಚು ಆಹಾರವನ್ನು ಸೇವಿಸಬಾರದು ಪ್ರಯಾಣಕ್ಕೆ ಒಂದು ಗಂಟೆಯ ಮೊದಲು ಆಹಾರವನ್ನು ಸೇವಿಸಿದರೆ ಒಳ್ಳೆಯದು.  

 ಬಸ್ಸಿನಲ್ಲಿ ಪ್ರಯಾಣ ಮಾಡುವಾಗ ಹಿಂದಿನ ಆಸನದಲ್ಲಿ ಕುಳಿತುಕೊಳ್ಳುವುದನ್ನು ಸಾಧ್ಯವಾದಷ್ಟು ನಿಲ್ಲಿಸಿ.

ಪ್ರಯಾಣದ ಸಮಯದಲ್ಲಿ ಕಿಟಕಿಯನ್ನ ಸ್ವಲ್ಪ ತೆರೆದಿಟ್ಟುಕೊಳ್ಳಿ ತಾಜವಾದ ಗಾಳಿಯಲ್ಲಿ ಉಸಿರಾಡುತ್ತಿರಿ. ನಮ್ಮ ಸುತ್ತಾ ಮುತ್ತಾ ಪರಿಸರವನ್ನು ನೋಡುತ್ತಾ ಆನಂದಿಸುತ್ತಿರಿ. ನಿಮ್ಮ ಮನಸನ್ನು ನೈಜ ಸೌಂದರ್ಯದ ಕಡೆಗೆ ಕೇಂದ್ರಿ ಕರಿಸಿ ಇದರಿಂದ ಕೂಡ ವಾಂತಿಯನ್ನು ತಪ್ಪಿಸಬಹುದು .

* ಪ್ರಯಾಣದ ಸಮಯದಲ್ಲಿ ಮೊಬೈಲ್ ನೋಡುವುದನ್ನು ಕಡಿಮೆಮಾಡಿ ಜೊತೆಗೆ ಸಮಾಚರ ಪತ್ರಿಕೆಯನ್ನು ಓದಬೇಡಿ ಇದರಿಂದ ವಾಂತಿಯನ್ನು ತಪ್ಪಿಸಬಹುದು. 

ಲೇಖನವನ್ನು ಪೂರ್ಣವಾಗಿ ಓದಿದಕ್ಕೆ ಧನ್ಯವಾದಗಳು ಸ್ನೇಹಿತರೆ, ಮತ್ತೆ ಸಿಗೋಣ ಮುಂದಿನ ಲೇಖನದೊಂದಿಗೆ.

 

 

 

 

Leave a Comment