ಹಲೋ ಗೆಳೆಯರೇ, ಇಂದಿನ ನಮ್ಮ ಲೇಖನಕ್ಕೆ ನಿಮಗೆಲ್ಲರಿಗೂ ಸುಸ್ವಾಗತ ಇವತ್ತಿನ ಲೇಖನದಲ್ಲಿ ಗೃಹಲಕ್ಷ್ಮಿ ಯೋಜನೆಯ ಬಗ್ಗೆ ಪೂರ್ಣ ಮಾಹಿತಿಯನ್ನು ತಿಳಿಸಿ ಕೊಡುತ್ತಿದ್ದೇವೆ. ಗೃಹಲಕ್ಷ್ಮಿ ಯೋಜನೆಯ ಜೂನ್ 19 ರಿಂದ ನೋಂದಣಿಯನ್ನು ಪ್ರಾರಂಭಿಸಲಾಗಿದೆ. ಗ್ರಹಲಕ್ಷ್ಮಿ ಯೋಜನೆಗೆ ಅಧಿಕೃತವಾಗಿ ಅರ್ಜಿಯನ್ನು ಚಾಲನೆ ಮಾಡಲಾಗಿದೆ. ಈ ಯೋಜನೆಯ ರಾಜ್ಯದಲ್ಲೇ ಬಾರಿ ಕುತೂಹಲವನ್ನು ಈಗಾಗಲೇ ಸೃಷ್ಟಿಸಿದೆ. ತುಂಬಾ ಜನ ಗ್ರಹಿಣಿಯರು, ಗ್ರಹಲಕ್ಷ್ಮಿ ಯೋಜನೆಗೆ ಅರ್ಜಿಯನ್ನು ಸಲ್ಲಿಸಲು ಪ್ರಾರಂಭಿಸಿದ್ದಾರೆ. ನೀವು ಗೃಹಲಕ್ಷ್ಮಿ ಯೋಜನೆಗೆ ಹೆಸರನ್ನು ನೋಂದಾಯಿಸಿಕೊಂಡು, ನೀವು ಕೂಡ ಗ್ರಹಲಕ್ಷ್ಮಿ ಯೋಜನೆಯ ಅಡಿಯಲ್ಲಿ ಪ್ರತಿ ತಿಂಗಳು 2000 ರೂಪಾಯಿ ಹಣವನ್ನುಪಡೆಯಬಹುದಾಗಿದೆ. ನೀವು ಈಗಾಗಲೇ ಅರ್ಜಿಯನ್ನು ಸಲ್ಲಿಸಿದ್ದರೆ ಆಗಸ್ಟ್ 16ನೇ ತಾರೀಕು ಮೊದಲ ಕಂತಿನ ಹಣವನ್ನು ಬಿಡುಗಡೆ ಮಾಡಲಾಗುತ್ತದೆ ಎಂದು ಸರ್ಕಾರವು ಅಧಿಕೃತವಾಗಿ ತಿಳಿಸಿದೆ. ನೀವು ಈಗಲೇ ಆನ್ಲೈನ್ ನ ಮೂಲಕ ಕೇವಲ ಎರಡು ನಿಮಿಷದಲ್ಲಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಗೃಹಲಕ್ಷ್ಮಿ ಯೋಜನೆಗೆ ಅರ್ಜಿಯನ್ನು ಸಲ್ಲಿಸುವುದಕ್ಕಿಂತ ಮೊದಲು ಈ ಒಂದು ವಿಚಾರವನ್ನು ನೀವು ತಿಳಿದುಕೊಂಡಿರಬೇಕು .ಅದರ ಬಗ್ಗೆ ತಿಳಿದುಕೊಳ್ಳಲು ಈ ಲೇಖನವನ್ನು ಪೂರ್ತಿಯಾಗಿ ಓದಿ.
ಹೌದು ಈಗಾಗಲೇ ತಿಳಿಸಿದ ಹಾಗೆ ರಾಜ್ಯ ಸರ್ಕಾರವು ಗೃಹಲಕ್ಷ್ಮಿ ಯೋಜನೆಗೆ ಈ ಕೆಳಗಿನ ಸೂಚನೆಗಳನ್ನು ಅನುಸರಿಸಲು ತಿಳಿಸಿದೆ. ರೇಷನ್ ಕಾರ್ಡಿನಲ್ಲಿ ಈ ಸಣ್ಣ ತಪ್ಪುಗಳಿದ್ದರೂ ಯಾವುದೇ ಕಾರಣಕ್ಕೂ ಗೃಹಲಕ್ಷ್ಮಿ ಯೋಜನೆಯ ಅಡಿಯಲ್ಲಿ ಬರುವಂತಹ ಎರಡು ಸಾವಿರ ರೂಪಾಯಿ ಹಣವನ್ನು ಪಡೆಯಲಾಗುವುದಿಲ್ಲ. ನೀವು ನಿಮ್ಮ ಮೊಬೈಲ್ ನ ಮುಖಾಂತರವೇ ಚೆಕ್ ಮಾಡಿಕೊಳ್ಳಬಹುದು. ಯಾವ ರೀತಿಯಾಗಿ ಚೆಕ್ ಮಾಡಿಕೊಳ್ಳಬೇಕು, ಏನು ಆ ಸಣ್ಣ ತಪ್ಪು ಎನ್ನುವುದರ ಬಗ್ಗೆ ಸಂಪೂರ್ಣವಾಗಿ ತಿಳಿಸಿ ಕೊಡುತ್ತಿದ್ದೇವೆ. ಹಾಗೂ ಇನ್ನು ತುಂಬಾ ಜನರಿಗೆ Income tax ಮತ್ತು GST ಬಗ್ಗೆ ಸ್ವಲ್ಪ ಗೊಂದಲಗಳಿವೆ. ಅದರ ಬಗ್ಗೆ ಕೂಡ ಈ ಲೇಖನದಲ್ಲಿ ತಿಳಿಸಿಕೊಡುತ್ತಿದ್ದೇವೆ. ನೀವು ಗೃಹಲಕ್ಷ್ಮಿ ಯೋಜನೆಗೆ ಯಾವ ರೀತಿಯಾಗಿ ಕೇವಲ ಎರಡು ನಿಮಿಷದಲ್ಲಿ ಆನ್ಲೈನ್ ನ ಮೂಲಕ ಅರ್ಜಿಯನ್ನ ಸಲ್ಲಿಸಬಹುದು ಎನ್ನುವುದರ ಬಗ್ಗೆ ಡೀಟೇಲ್ ಆಗಿ ತಿಳಿಸಿಕೊಡುತ್ತೇವೆ ಲೇಖನವನ್ನು ಕೊನೆಯವರೆಗೂ ಓದಿ.
ಗೃಹಲಕ್ಷ್ಮಿ ಯೋಜನೆಗೆ ಅಗತ್ಯವಿರುವ ದಾಖಲೆ
- ಗ್ರಹಿಣಿಯ ಬ್ಯಾಂಕ್ ವಿವರಗಳು
- ಬಡತನ ರೇಖೆಗಿಂತ ಮೇಲಿರುವ ಕಾರ್ಡ್ (APL) /ಬಡತನ ರೇಖೆಗಿಂತ ಕೆಳಗಿರುವ ಕಾರ್ಡ್ (BPL).
- ಬ್ಯಾಂಕ್ ಲಿಂಕ್ ಮಾಡಿದ ಆಧಾರ್ ಕಾರ್ಡ್
- ಆಧಾರ್ ಲಿಂಕ್ ಮಾಡಿದ ಫೋನ್ ಸಂಖ್ಯೆ
- ಯೋಜನೆಯಡಿ ನೊಂದಣಿ ಪ್ರಕ್ರಿಯೆಯ ಫಲಾನುಭವಿಗಳು ಇವುಗಳನ್ನು ಆನ್ಲೈನ್ ನಲ್ಲ ನೋಂದಾಯಿಸಿಕೊಳ್ಳಬಹುದು.
ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಲು ಇರುವ ಶರತ್ತುಗಳು
- ಅರ್ಜಿದಾರರು ಕರ್ನಾಟಕ ರಾಜ್ಯದ ಮೂಲ ನಿವಾಸಿಯಾಗಿರಬೇಕು.
- ಅರ್ಜಿದಾರರು ವಾರ್ಷಿಕವಾಗಿ ಎರಡು ಲಕ್ಷ ರೂಪಾಯಿಗಿಂತ ಹೆಚ್ಚಿನ ಆದಾಯವನ್ನು ಹೊಂದಿರಬಾರದು.
- ಅರ್ಜಿದಾರರು ಯಾವುದೇ ಸರ್ಕಾರಿ ಉದ್ಯೋಗ ದಲ್ಲಿದ್ದರೆ ಈ ಯೋಜನೆಯನ್ನು ಪಡೆಯಲಾಗುವುದಿಲ್ಲ.
- ಕುಟುಂಬದ ಯಜಮಾನಿಯಷ್ಟೇ ಈ ಯೋಜನೆಯನ್ನು ಪಡೆಯಬಹುದಾಗಿದೆ .
- ಪಡಿತರ ಚೀಟಿಯಲ್ಲಿ ಮನೆಯ ಯಜಮಾನಿಯ ಹೆಸರು ಕಡ್ಡಾಯವಾಗಿರಬೇಕು .
- ಆಧಾರ್ ಮತ್ತು ರೇಷನ್ ಕಾರ್ಡ್ ಗೆ ಫೋನ್ ನಂಬರ್ ಲಿಂಕ್ ಇರಬೇಕು
- INCOMETAX ಮತ್ತು GST ತೆರಿಗೆಯನ್ನು ಪಾವತಿಸುವವರು ಈ ಯೋಜನೆಗೆ ಅರ್ಹರಲ್ಲ .
ಗ್ರಹಲಕ್ಷ್ಮಿ ಯೋಜನೆಗ ಅರ್ಜಿಯನ್ನು ಸಲ್ಲಿಸುವ ವಿಧಾನ
- Sevasindhuservices.karnataka.gov.in ಈ ವೆಬ್ಸೈಟ್ನ ಮೂಲಕ ನೋಂದಣಿಯನ್ನು ಮಾಡಬಹುದು
- ರಾಜ್ಯದ ಯಾವುದೇ ಸಾಮಾನ್ಯ ಸೇವಾಕೇಂದ್ರಗಳಲ್ಲಿ offline ನೋಂದಣಿಯನ್ನು ಮಾಡಬಹುದು .
- ಅಧಿಕೃತ ವೆಬ್ ಸೈಟ್ ಗೆ ಭೇಟಿನೀಡಿ ಪಡಿತರ ಚೀಟಿ ಸಂಖ್ಯೆಯನ್ನು ನಮೂದಿಸಿ ಅರ್ಜಿಯನ್ನು ಸಲ್ಲಿಸಿದ ನಂತರ ಅರ್ಜಿದಾರನು ಯಾವ ಕೇಂದ್ರಗಳಿಗೆ ಭೇಟಿ ನೀಡಬೇಕು ಮತ್ತು ಭೇಟಿ ನೀಡಬೇಕಾದ ದಿನಾಂಕ ಮತ್ತು ಸಮಯದ ವಿವರಗಳನ್ನು ನೀಡಲಾಗುವುದು .
- ಆ ದಿನದಂದು ಸಂಬಂಧಿಸಿದ ಕೇಂದ್ರ, ಕಚೇರಿಗೆ ಭೇಟಿ ನೀಡಿ ಅರ್ಜಿಯನ್ನು ಸಲ್ಲಿಸಬೇಕು .
- ಅಥವಾ ನೀವು ಇನ್ನೊಂದು ವಿಧಾನದ ಮೂಲಕ ನಿಮ್ಮ ಅರ್ಜಿ/ ನೋಂದಣಿಯನ್ನು ಸಲ್ಲಿಕೆಯ ದಿನಾಂಕ, ಸಮಯ ಮತ್ತು ಭೇಟಿ ನೀಡಬೇಕಾದ ಕಚೇರಿಯ ವಿವರಗಳನ್ನು ತಿಳಿಯಲು ಸರ್ಕಾರವು ನೀಡಲಾಗಿರುವ ಸಹಾಯವಾಣಿ ಸಂಖ್ಯೆ8147500500 / 8277000555 ಗೆ ತಮ್ಮ ಪಡಿತರ ಚೀಟಿಯ ಸಂಖ್ಯೆಯನ್ನು SMS ಮಾಡುವುದರ ಮೂಲಕ ಅವುಗಳ ವಿವರವನ್ನು ತಿಳಿಯಬಹುದಾಗಿದೆ.
ಇನ್ಕಮ್ ಟ್ಯಾಕ್ಸ್ ಜಿಎಸ್ಟಿ ತೆರಿಗೆಯನ್ನು ಪಾವತಿಸುವವರಿಗೆ ಈ ಯೋಜನೆಯ ಲಾಭ ಸಿಗುವುದಿಲ್ಲ, ಹೇಗೆಂದರೆ ಮನೆಯ ಯಜಮಾನಿ ಅಥವಾ ಮನೆಯ ಯಜಮಾನ ಯಾವುದೇ ರೀತಿಯ ಇನ್ಕಮ್ ಟ್ಯಾಕ್ಸ್ ಅಥವಾ GST ಅನ್ನು ಪಾವತಿಸುತ್ತಿದ್ದರೆ ಅವರು ಆರ್ಥಿಕವಾಗಿ ಸಬಲರಾಗಿದ್ದಾರೆ ಎಂದು ಅರ್ಥ ಹಾಗಾಗಿ ಈ ಯೋಜನೆಯನ್ನು ಅವರು ಪಡೆಯುವಂತಿಲ್ಲ. ಏಕೆಂದರೆ ಈ ಯೋಚನೆಯನ್ನು ಕೇವಲ ಬಡವರಿಗಾಗಿ ಮಾತ್ರ ಸೀಮಿತಗೊಳಿಸಲಾಗಿದೆ . ಎಲ್ಲಿಯವರೆಗೆ ಓದಿದ್ದಕ್ಕೆ ಧನ್ಯವಾದಗಳು…