ಗೃಹಜ್ಯೋತಿ ಯೋಜನೆಗೆ ಅಧಿಕೃತ ಅರ್ಜಿ ಪ್ರಾರಂಭ! 200 Unit ಉಚಿತ ಕರೆಂಟಿಗೆ ಈಗಲೇ ಅರ್ಜಿ ಸಲ್ಲಿಸಿ!

ಹೌದು ರಾಜ್ಯಾದ್ಯಂತ ಬಹುತೇಕ ಜನ ಗೃಹಜ್ಯೋತಿ ಯೋಜನೆಗಾಗಿ ಕಾದು ಕುಳಿತಿದ್ದು ಈಗಾಗಲೇ ನೂತನ ಸಿಎಂ ಸಿದ್ದರಾಮಯ್ಯ ಜುಲೈ 1 ರಿಂದ ಗ್ರಹ ಜ್ಯೋತಿ ಯೋಜನೆ ಅಡಿಯಲ್ಲಿ 200 ಯೂನಿಟ್ ಉಚಿತ ಕರೆಂಟ್ ಅನ್ನು ಎಲ್ಲರಿಗೂ ನೀಡುವುದಾಗಿ ತಿಳಿಸಿದ್ದಾರೆ ಈ ಯೋಜನೆ ಕುರಿತಾದಂತೆ ಎಲ್ಲರೂ ಕೂಡ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿ ಬಳಿಕವಷ್ಟೇ ಇನ್ನೂರು ಯೂನಿಟ್ ಕರೆಂಟ್ ಅನ್ನು ಉಚಿತವಾಗಿ ಪಡೆದುಕೊಳ್ಳಬಹುದು.

ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸುವವರಿಗೆ ಮಾತ್ರ ಉಚಿತ ವಿದ್ಯುತ್ ಸಿಗಲಿದೆ!

WhatsApp Group Join Now
Telegram Group Join Now

ಹೌದು ಈಗಾಗಲೇ ರಾಜ್ಯ ಸರ್ಕಾರವು ಗೃಹಜೋತಿ ಯೋಜನೆ ಕುರಿತು ಅಧಿಕೃತ ಅರ್ಜಿ ಬಿಡುಗಡೆ ಮಾಡಿದ್ದು ನೀವು ಆನ್ಲೈನ್ ಮೂಲಕ ಅರ್ಜಿ ನೊಂದಣಿ ಮಾಡಿಕೊಳ್ಳಬಹುದು ನಿಮ್ಮ ಬಳಿ ಬಿಪಿಎಲ್ ಎಪಿಎಲ್ ಅಥವಾ  ಅಂತ್ಯೋದಯ ಕಾರ್ಡ್ ಇದ್ರೂ ಕೂಡ ನೀವು  ಗೃಹಜೋತಿ ಯೋಜನೆಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿ ಬಳಿಕ ನೀವು 200 unit ಕರೆಂಟ್ ಅನ್ನು ಪಡೆದುಕೊಳ್ಳಬಹುದು.

ಗೃಹಜ್ಯೋತಿ ಯೋಜನೆ ಅಡಿಯಲ್ಲಿ 200 ಯೂನಿಟ್ ಕರೆಂಟ್ ಅನ್ನು ಸಂಪೂರ್ಣವಾಗಿ ನೀಡುವುದಿಲ್ಲ!

ಹೌದು ಬಹುತೇಕ ಜನ  ಗೃಹಜ್ಯೋತಿ ಯೋಜನೆ ಅಡಿಯಲ್ಲಿ 200 ಯೂನಿಟ್ ಕರೆಂಟ್ ಅನ್ನು  ಸಂಪೂರ್ಣ ಉಚಿತವಾಗಿ ನೀಡುತ್ತಾರೆ ಎಂದು ತಿಳಿದಿದ್ದಾರೆ ಆದರೆ ಗಮನದಲ್ಲಿರಲಿ ನೀವು ಕಳೆದ ವರ್ಷ ಅಂದರೆ 2022 ರಲ್ಲಿ ಬಳಸಿರುವ ಸಂಪೂರ್ಣ ವಿದ್ಯುತ್ ದಾಖಲೆಗಳನ್ನು ಪರಿಶೀಲಿಸಿ ನಿಮಗೆ ಈ ವರ್ಷ ಎಷ್ಟು ಯುನಿಟ್ ಕರೆಂಟ್ ಅನ್ನು ನೀಡಬೇಕೆಂದು ಸರ್ಕಾರ ನಿರ್ಧರಿಸಲಿದೆ.

ಉದಾಹರಣೆ: , ನೀವು 2022 ರಲ್ಲಿ ಪ್ರತಿ ತಿಂಗಳು ಕೂಡ 100 ಯೂನಿಟ್ ಕರೆಂಟ್ ಅನ್ನು 12 ತಿಂಗಳು ಬಳಸಿದ್ದಲ್ಲಿ ನಿಮ್ಮ ಸರಾಸರಿ 12 ತಿಂಗಳ ವಿದ್ಯುತ್ ಬಳಕೆಯನ್ನು ಪರಿಗಣಿಸಿದರೆ ನೂ ರು ಯೂನಿಟ್ ವಿದ್ಯುತ್ ಬಳಕೆ ಬರುತ್ತದೆ ಬಳಿಕ ಅದಕ್ಕೆ 10% ಹೆಚ್ಚುವರಿಯಾಗಿ ಸೇರಿಸಿ 110 ಯೂನಿಟ್ ಕರೆಂಟನ್ನು ಪ್ರತಿ ತಿಂಗಳು ನಿಮಗೆ ಉಚಿತವಾಗಿ ನೀಡಲಾಗುತ್ತದೆ.  ಅದೇ ರೀತಿಯಲ್ಲಿ ನೀವೇನಾದರೂ 110 ಯೂನಿಟ್ ಗಿಂತ ಹೆಚ್ಚಿನ ವಿದ್ಯುತ್ ಬಳಕೆ ಮಾಡಿದ್ದಲ್ಲಿ ಸಂಪೂರ್ಣ ವಿದ್ಯುತ್ನ ಬಿಲ್ ಪಾವತಿ ನೀವೇ ಮಾಡಬೇಕಾಗುತ್ತದೆ.

 ಈಗಾಗಲೇ ವಿದ್ಯುತ್  ಬಿಲ್ ದರ ಹೆಚ್ಚಳ!

ಈಗಾಗಲೇ ರಾಜ್ಯ  ಸರ್ಕಾರವು ಗೃಹಜ್ಯೋತಿ ಯೋಜನೆಯನ್ನು ಜಾರಿಗೆ ತರುವ ಮುನ್ನವೇ ವಿದ್ಯುತ್ ಬಿಲ್ದರವನ್ನು ಏರಿಕೆ ಮಾಡಿದ್ದು ಪ್ರತಿ ಯೂನಿಟ್ ನ ಮೇಲೆ 70 ಪೈಸೆ ವಿದ್ಯುತ್ ಬಿಲ್ಲನ್ನು ಹೆಚ್ಚಳ ಮಾಡಿದೆ ಪ್ರತಿ ತಿಂಗಳ ವಿದ್ಯುತ್ ಬಿಳಿಗಿಂತ ಈ ತಿಂಗಳ ವಿದ್ಯುತ್ ಬಿಲ್ ಅತಿ ಹೆಚ್ಚಿನದಾಗಿ ಬರಲಿದ್ದು.ರಾಜ್ಯದ ಜನತೆಗೆ ಇದುವೇ ತಲೆನೋವಿನ ವಿಷಯವಾಗಿದೆ.

ಆನ್ಲೈನ್ ಮೂಲಕ ಗೃಹಜೋತಿ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ?

 ಹೌದು ನೀವು ಕೂಡ  ಗೃಹಜೋತಿ ಯೋಜನೆಗೆ ಅರ್ಜಿ ಸಲ್ಲಿಸಲು ಮುಂದಾದಲ್ಲಿ  ಈಗಾಗಲೇ ರಾಜ್ಯ ಸರ್ಕಾರವು ಆನ್ಲೈನ್ ನ ಮೂಲಕ ಅರ್ಜಿ ಸಲ್ಲಿಸುವ ಲಿಂಕ್ ಬಿಡುಗಡೆ ಮಾಡಿದೆ.

ಸೇವಾ ಸಿಂಧು ಅಧಿಕೃತ ಪೋರ್ಟಲ್ಲಿ ನೀವು ಗೃಹಜೋತಿ ಯೋಜನೆಗೆ ಅರ್ಜಿ ಸಲ್ಲಿಸಬಹುದು. 

ಸೇವಾ ಸಿಂಧು ಅಧಿಕೃತ ಪೋರ್ಟನಲ್ಲಿ ಗೃಹಜ್ಯೋತಿ ಯೋಜನೆಗೆ ಕುರಿತಾದಂತೆ ಅಧಿಕೃತ ಆಪ್ಷನ್ ಬಿಡುಗಡೆ ಮಾಡಿದ್ದು ನೀವು ಅಗತ್ಯವಿರುವ ಎಲ್ಲಾ ದಾಖಲಾತಿಗಳನ್ನು ನೀಡುವ ಮೂಲಕ ಸೇವಾ ಸಿಂಧು ಅಧಿಕೃತ ಪೋರ್ಟಲ್ ನಲ್ಲಿಯೇ ನಿಮ್ಮ ಮೊಬೈಲ್ ನ ಮೂಲಕವೂ ಕೂಡ ಉಚಿತವಾಗಿ ಅರ್ಜಿ ಸಲ್ಲಿಸಬಹುದು ಈ ಅರ್ಜಿಯನ್ನು ಸರ್ಕಾರವು ಪರಿಗಣಿಸಿ ನಿಮ್ಮ ಅಗತ್ಯ ದಾಖಲಾತಿಗಳನ್ನು ಪರಿಶೀಲಿಸಿ ಬಳಿಕ ನೀವು 2022 ರಲ್ಲಿ ಬಳಕೆ ಮಾಡಿರುವ ವಿದ್ಯುತ್ ದಾಖಲೆಗಳನ್ನು ಪರಿಶೀಲಿಸಿದ ಬಳಿಕವಷ್ಟೇ ನಿಮಗೆ ಈ ವರ್ಷ ಪ್ರತಿ ತಿಂಗಳು ಎಷ್ಟು ಯೂನಿಟ್ ನ ಕರೆಂಟ್ ಅನ್ನು ಉಚಿತವಾಗಿ ನೀಡಬೇಕೆಂದು ನಿರ್ಧರಿಸಲಿದೆ ಹಾಗಾಗಿ ನೀವು ಆನ್ಲೈನ್ ಮೂಲಕ  ಈಗಲೇ ಅರ್ಜಿ ಸಲ್ಲಿಸಿ ಉಚಿತ ವಿದ್ಯುತ್ ಯೋಜನೆಯನ್ನು ಪಡೆದುಕೊಳ್ಳಬಹುದು.

ಲೇಖನವನ್ನು ಇಲ್ಲಿಯವರೆಗೆ ಓದಿದ್ದಕ್ಕೆ ಧನ್ಯವಾದಗಳು ಶುಭದಿನ!

Leave a Comment