ಎಲ್ಲರಿಗೂ ನಮಸ್ಕಾರ..
ಗೃಹಲಕ್ಷ್ಮಿ ಯೋಜನೆಗೆ ಸಂಬಂಧಪಟ್ಟ ಹಾಗೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಇಂದು ಸಭೆ ನಡೆಸಿದ್ದಾರೆ ಇನ್ನು ಈ ಸಭೆಯಲ್ಲಿ ಕರ್ನಾಟಕ ರಾಜ್ಯ ಸರ್ಕಾರದ 5 ಗ್ಯಾರಂಟಿ ಯೋಜನೆಗಳಲ್ಲಿ ಒಂದಾಗಿರುವಂತಹ ಗೃಹಲಕ್ಷ್ಮಿ ಯೋಜನೆಯ ಎರಡು ಕಂತಿನ ಹಣ ಕೆಲವು ಮಹಿಳೆಯರ ಬ್ಯಾಂಕ್ ಖಾತೆಗೆ ಜಮಾ ಆಗಿದ್ದು ಉಳಿದ ಮಹಿಳೆಯರ ಬ್ಯಾಂಕ್ ಖಾತೆಗೆ ಯಾವಾಗ ಜಮಾ ಆಗಲಿದೆ ಎಂಬ ಬಗ್ಗೆ ಈ ಸಭೆಯಲ್ಲಿ ಚರ್ಚೆ ನಡೆಸಲಾಗಿದೆ ಇನ್ನು ಲಕ್ಷ್ಮಿ ಹೆಬ್ಬಾಳ್ಕರ್ ಅವರ ಹೇಳಿಕೆಯ ಪ್ರಕಾರ ಒಟ್ಟು ರಾಜ್ಯದ ಒಂದು ಕೋಟಿ 17 ಲಕ್ಷ ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳಲ್ಲಿ ಈಗಾಗಲೇ ಒಂದು ಕೋಟಿ ಎಂಟು ಲಕ್ಷ ಮಹಿಳೆಯರಿಗೆ ಹಣ ತಲುಪಿದೆ ಇನ್ನುಳಿದ ಮಹಿಳೆಯರಿಗೆ ಹಣ ತಲುಪುವಲ್ಲಿ ತಾಂತ್ರಿಕ ಸಮಸ್ಯೆ ಉಂಟಾಗಿದೆ ಅಂತಹ ಮಹಿಳೆಯರಿಗೂ ಕೂಡ ಇನ್ನು ಕೆಲವೇ ದಿನಗಳಲ್ಲಿ ಹಣ ಜಮಾ ಮಾಡುವುದಾಗಿ ಭರವಸೆ ನೀಡಿದ್ದಾರೆ.
ಲಕ್ಷ್ಮಿ ಹೆಬ್ಬಳ್ಕರ್ ಅವರು ಈಗಾಗಲೇ ಬಿಡುಗಡೆಯಾಗಿರುವ ಎರಡು ಕಂತಿನ ಹಣ ಯಾವೆಲ್ಲ ಮಹಿಳೆಯರ ಬ್ಯಾಂಕ ಖಾತೆಗೆ ಅಂದರೆ ಯಾವೆಲ್ಲ ಫಲಾನುಭವಿಗಳಿಗೆ ಇನ್ನೂ ಕೂಡ ಹಣ ಸಿಕ್ಕಿಲ್ಲ ಅಂತಹ ಮಹಿಳೆಯರಿಗೆ ಕೆಲವೇ ದಿನಗಳಲ್ಲಿ ಹಣ ನೀಡುವ ಭರವಸೆಯನ್ನು ಇವತ್ತಿನ ಸಭೆಯಲ್ಲಿ ನೀಡಿದ್ದಾರೆ ಹಾಗಾದ್ರೆ ಹಿಂದು ನಡೆದ ಸಭೆಯಲ್ಲಿ ಏನಿಲ್ಲ ಚರ್ಚೆಯಾಗಿದೆ ಮಹಿಳೆಯರಿಗೆ ಯಾವಾಗ ಹಣ ಸಿಗಲಿದೆ ಎಂಬ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿಯಲು ಲೇಖನವನ್ನು ಪೂರ್ತಿಯಾಗಿ ಓದಿ. ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಲಕ್ಷ್ಮಿ ಹೆಬ್ಬಾಳ್ಕರ್ ಅವರಿಂದ ಇಂದು ಗೃಹಲಕ್ಷ್ಮಿ ಯೋಜನೆಯ ಪ್ರಗತಿ ಪರಿಶೀಲನ ಸಭೆ.!
ಕರ್ನಾಟಕ ರಾಜ್ಯ ಸರ್ಕಾರದ 5 ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ನಾಲ್ಕನೇ ಗೃಹಲಕ್ಷ್ಮಿ ಯೋಜನೆಗೆ ಸರ್ಕಾರ ಈಗಾಗಲೇ ಚಾಲನೆ ನೀಡಿದ್ದು ಸದ್ಯ ರಾಜ್ಯದ ಹಲವು ಮಹಿಳೆಯರಿಗೆ ಎರಡು ಕಂತಿನ ಹಣ ಈಗಾಗಲೇ ಬಿಡುಗಡೆ ಆಗಿದೆ ಇನ್ನುಳಿದ ಕೆಲವು ಮಹಿಳೆಯರಿಗೆ ಹಣ ಜಮಾ ಆಗದ ವಿಷಯವಾಗಿ ಇಂದು ಬೆಂಗಳೂರಿನ ವಿಧಾನಸೌಧದ ಕಚೇರಿಯಲ್ಲಿ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಗೃಹಲಕ್ಷ್ಮಿ ಯೋಜನೆಯ ಪ್ರಗತಿ ಪರಿಶೀಲನ ಸಭೆಯನ್ನು ಕೈಗೊಂಡಿದ್ದಾರೆ.
ಇನ್ನು ಯೋಜನೆಯ ಸಮರ್ಪಕ ಅನುಷ್ಠಾನಕ್ಕಾಗಿ ಅಗತ್ಯವಿರುವ ಸಲಹೆ ಸೂಚನೆಗಳನ್ನು ನೀಡಲಾಗಿದ್ದು ಕೆಲವು ನ್ಯೂನತೆಗಳನ್ನು ಸರಿಪಡಿಸಿ ಎಲ್ಲಾ ಫಲಾನುಭವಿಗಳ ಖಾತೆಗೆ ಪಡಿತಗತಿಯಲ್ಲಿ ಹಣ ಸಂದಾಯ ಮಾಡಬೇಕೆಂದು ಅಧಿಕಾರಿಗಳಿಗೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಸೂಚನೆ ನೀಡಿದ್ದಾರೆ. ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಹಾಗಾದ್ರೆ ಹಣ ಸಿಗದ ಮಹಿಳೆಯರಿಗೆ ಯಾವಾಗ ಸಿಗಲಿದೆ.?
ಲಕ್ಷ್ಮಿ ಹೆಬ್ಬಳ್ಕರ್ ಅವರು ಈ ಬಗ್ಗೆ ಸ್ಪಷ್ಟನೆ ನೀಡಿದ್ದು ಈಗಾಗಲೇ 85ರಿಂದ 90ರಷ್ಟು ಫಲಾನುಭವಿಗಳಿಗೆ ಹಣ ತಲುಪಿದೆ, ಇನ್ನುಳಿದ ಮಹಿಳೆಯರಿಗೆ ಹಣ ತಲುಪಿಸುವ ನಿಟ್ಟಿನಲ್ಲಿ ಸರ್ಕಾರ ಕಾರ್ಯ ನಿರ್ವಹಿಸುತ್ತಿದೆ ಎಲ್ಲಾ ಮಹಿಳೆಯರಿಗೂ ಕೂಡ ಗೃಹಲಕ್ಷ್ಮಿ ಯೋಜನೆಯ ಎರಡು ಸಾವಿರ ಹಣ ಕಡ್ಡಾಯವಾಗಿ ಸಿಗಲಿದೆ ಇನ್ನು ಕೆಲವು ನ್ಯೂನತೆಗಳು ಇದ್ದು ಆ ನ್ಯೂನ್ಯತೆಗಳನ್ನು ಸರಿಪಡಿಸಿ ಕೆಲವೇ ದಿನಗಳಲ್ಲಿ ಹಣ ಜಮಾ ಮಾಡುವುದಾಗಿ ತಿಳಿಸಿದ್ದಾರೆ.
ಗೃಹಲಕ್ಷ್ಮಿ ಯೋಜನೆಯ ನ್ಯೂನ್ಯತೆಯಿಂದ ಒಂದು ವೇಳೆ ಹಣ ಬಂದಿಲ್ಲದಿದ್ದರೆ ಅಂತಹ ಮಹಿಳೆಯರನ್ನು ಅಂಗನವಾಡಿ ಕಾರ್ಯಕರ್ತರಿಂದ ಭೇಟಿ ಮಾಡಿಸಿ ಅವರ ನ್ಯೂನ್ಯತೆಗೆ ಕಾರಣ ಏನು ಮತ್ತು ಹಣ ಪಡೆಯಲು ಮಾಡಬೇಕಾದ ಕೆಲಸ ಏನು ಎಂಬ ಬಗ್ಗೆ ವಿವರಿಸಿ ಒಂದು ವೇಳೆ ಹಣ ಜಮಾ ಆಗಲು ಬ್ಯಾಂಕ್ ಸಮಸ್ಯೆ ಇದ್ದರೆ ಅಂತಹ ಮಹಿಳೆಯರಿಗೆ ಶೀಘ್ರದಲ್ಲಿ ಪೋಸ್ಟ್ ಆಫೀಸ್ ನಲ್ಲಿ ಖಾತೆ ಓಪನ್ ಮಾಡಿ ಆ ಖಾತೆಗೆ ಹಣ ಜಮಾ ಮಾಡುವುದಾಗಿ ಅಧಿಕಾರಿಗಳಿಂದ ಮಾಹಿತಿ ಪಡೆದು ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಹಾಗಾದ್ರೆ ಈಗಾಗಲೇ ಬಿಡುಗಡೆಯಾಗಿರುವ ಮೊದಲ ಮತ್ತು ಎರಡನೇ ಕಂತಿನ ಹಣದ ಗತಿ ಏನು.?
ಸದ್ಯ ಲಕ್ಷ್ಮಿ ಹೆಬ್ಬಳ್ಕರ್ ಅವರು ಇಂದು ನಡೆಸಿರುವ ಸಭೆಯಲ್ಲಿ ಕೇವಲ ಹಣ ಇವರಿಗೂ ಜಮಾ ಆಗದ ಮಹಿಳೆಯರ ಸಮಸ್ಯೆಯನ್ನು ಪರಿಹರಿಸಲು ಮಾತ್ರ ಚರ್ಚೆಯನ್ನು ನಡೆಸಲಾಗಿದೆ ಅಲ್ಲದೆ ಸಂಬಂಧಪಟ್ಟ ಅಧಿಕಾರಿಗಳಿಂದ ಮುಂದಿನ ಹಣ ಮಹಿಳೆಯರ ಬ್ಯಾಂಕ್ ಖಾತೆಗೆ ಜಮಾ ಮಾಡುವ ಬಗ್ಗೆ ಮಾತ್ರ ಮಾಹಿತಿ ತಿಳಿದು ಬಂದಿದೆ ಆದರೆ ಹಿಂದಿನ ಮೊದಲನೇ ಕಂತಿನ ಮತ್ತು ಎರಡನೇ ಕಂತಿನ ಹಣದ ಬಗ್ಗೆ ಯಾವುದೇ ಮಾಹಿತಿ ಬಂದಿರುವುದಿಲ್ಲ ಈ ಬಗ್ಗೆ ಮೂರನೇ ಕಂತಿನ ಹಣ ಬಿಡುಗಡೆಯ ಸಮಯದಲ್ಲಿ ಮಾಹಿತಿ ತಿಳಿಯಬೇಕಾಗಿದೆ ಧನ್ಯವಾದಗಳು..ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ