ಎಲ್ಲರಿಗೂ ನಮಸ್ಕಾರ…
ಗೃಹಲಕ್ಷ್ಮಿ ಯೋಜನೆಯ ಮೊದಲನೇ ಮತ್ತು ಎರಡನೇ ಕಂತಿನ ಹಣಕ್ಕಾಗಿ ಕಾಯುತ್ತಿದಂತಹ ಮಹಿಳೆಯರಿಗೆ ಸರ್ಕಾರದಿಂದ ಒಂದು ಹೊಸ ಅಪ್ಡೇಟ್ ಬಂದಿದೆ. ಹೌದು ಕರ್ನಾಟಕ ರಾಜ್ಯ ಸರ್ಕಾರದ 5 ಗ್ಯಾರಂಟಿ ಯೋಜನೆಗಲ್ಲಿ ಒಂದಾದ ಅಂದರೆ ನಾಲ್ಕನೇ ಗ್ಯಾರಂಟಿ ಯೋಜನೆ ಆದ ಗೃಹಲಕ್ಷ್ಮಿ ಯೋಜನೆಗೆ ಈಗಾಗಲೇ ಚಾಲನೆಯನ್ನು ನೀಡಿದ್ದು ಸದ್ಯ ಈಗಾಗಲೇ ರಾಜ್ಯದಲ್ಲಿ ಒಂದು ಕೋಟಿ 28 ಲಕ್ಷ ಮಹಿಳೆಯರಿಗೆ ಗೃಹಲಕ್ಷ್ಮಿ ಯೋಜನೆಯ ಹಣ ಸಿಗಲಿದ್ದು ಈಗಾಗಲೇ ಬಹಳಷ್ಟು ಮಹಿಳೆಯರಿಗೆ ಆಗಸ್ಟ್ ತಿಂಗಳ 2000 ಹಣ ಅಂದರೆ ಮೊದಲನೇ ಕಂತಿನ ಹಣ ಬ್ಯಾಂಕ್ ಖಾತೆಗೆ ಜಮಾ ಆಗಿದೆ ಇನ್ನು ಕೆಲವರಿಗೆ ಮೊದಲನೇ ಕಂತಿನ ಹಣ ಬಂದಿಲ್ಲ ಈಗಾಗಲೇ ಸರ್ಕಾರ ಎರಡನೇ ಕಂತಿನ ಅಂದರೆ ಸೆಪ್ಟೆಂಬರ್ ತಿಂಗಳ 2000 ಹಣ ಜಮಾ ಮಾಡಲು ಮುಂದಾಗಿದೆ ಹಾಗಾದರೆ ಇನ್ನೂ ಮೊದಲನೇ ಕಂತಿನ ಹಣ ಪಡೆಯದೆ ಇರುವ ಮಹಿಳೆಯರ ಸ್ಥಿತಿ ಏನು? ಎಂಬ ಬಗ್ಗೆ ಸರ್ಕಾರ ಒಂದು ಮಾಹಿತಿಯನ್ನು ನೀಡಿದ ಈ ಬಗ್ಗೆ ತಿಳಿಯಲು ಸಂಪೂರ್ಣವಾಗಿ ಲೇಖನವನ್ನು ಓದಿ.
ಇದೆ ರೀತಿಯ ಹೊಸ ಮಾಹಿತಿ ಗಳಿಗಾಗಿ ನಮ್ಮ WhatsApp ಗ್ರೂಪ್ ಗೆ ಜಾಯಿನ್ ಆಗಿ. ಇಲ್ಲಿ ಕ್ಲಿಕ್ ಮಾಡಿ ಜಾಯಿನ್ ಆಗಿ
ಗೃಹಲಕ್ಷ್ಮಿ ಯೋಜನೆಯ ಎರಡನೇ ಕಂತಿನ ಹಣ ಬಂತು .!
ರಾಜ್ಯ ಸರ್ಕಾರದ ನಾಲ್ಕನೇ ಗ್ಯಾರಂಟಿ ಯೋಜನೆ ಆದ ಗೃಹಲಕ್ಷ್ಮಿ ಯೋಜನೆಗೆ ರಾಜ್ಯದಲ್ಲಿ ಒಂದು ಕೋಟಿ 30 ಲಕ್ಷಕ್ಕೂ ಹೆಚ್ಚು ಮಹಿಳೆಯರು ಅರ್ಜಿಯನ್ನು ಸಲ್ಲಿಸಿದ್ದು ಇದರಲ್ಲಿ ಒಂದು ಕೋಟಿ 28 ಲಕ್ಷ ಮಹಿಳೆಯರಿಗೆ ಯೋಜನೆಯ ಹಣ ಸಿಗಲಿದ್ದು ಈಗಾಗಲೇ ಸರ್ಕಾರ ಮೊದಲ ಕಂತಿನ ಹಣವನ್ನು ಮಹಿಳೆಯರ ಬ್ಯಾಂಕ್ ಖಾತೆಗೆ ಜಮಾ ಮಾಡಿದೆ ಇದರಲ್ಲಿ ಸುಮಾರು 60 ರಿಂದ 70ರಷ್ಟು ಮಹಿಳೆಯರಿಗೆ ಮಾತ್ರ ಹಣ ಸಿಕ್ಕಿದ್ದು ಇನ್ನೂ ಉಳಿದ ಮಹಿಳೆಯರಿಗೆ ಸರ್ಕಾರದ ಕೆಲವು ನಿಯಮಗಳ ಪಾಲನೆಯ ಮೇಲೆ ಮುಂದಿನ ತಿಂಗಳು ಒಂದೇ ಬಾರಿ ಬ್ಯಾಂಕ್ ಖಾತೆಗೆ ಜಮಾ ಮಾಡುವುದಾಗಿ ಸರ್ಕಾರದಿಂದ ತಿಳಿಸಲಾಗಿತ್ತು ಇದೀಗ ಎರಡನೇ ಕಂತಿನ ಹಣವನ್ನು ಬ್ಯಾಂಕ್ ಖಾತೆಗೆ ಜಮಾ ಮಾಡಲು ಸರ್ಕಾರ ಮುಂದಾಗಿದೆ.
ಈಗಾಗಲೇ ಆಗಸ್ಟ್ ತಿಂಗಳ ಮೊದಲ ಕಂತಿನ ಹಣವನ್ನು ನೇರವಾಗಿ ಬ್ಯಾಂಕ್ ಖಾತೆಗೆ ಪಡೆದುಕೊಂಡಿರುವಂತಹ ಮಹಿಳೆಯರಿಗೆ ಸರ್ಕಾರದಿಂದ ಗೃಹಲಕ್ಷ್ಮಿ ಯೋಜನೆಯ ಎರಡನೇ ಕಂತಿನ 2000 ಜಮಾ ಮಾಡಲು ಮುಂದಾಗಿದೆ. ಅದು ಇದೇ ತಿಂಗಳು ಮೊದಲನೇ ಕಂತಿನ ಹಣವನ್ನು ಪಡೆದಿರುವ ಮಹಿಳೆಯರಿಗೆ ಇದೇ ಅಕ್ಟೋಬರ್ 15ನೇ ದಿನಾಂಕದೊಳಗೆ ಎರಡನೇ ಕಂತಿನ ಹಣವನ್ನು ಕೂಡ ಜಮಾ ಮಾಡಲಿದೆ ಈಗಾಗಲೇ ಕೆಲವು ಜಿಲ್ಲೆಗಳ ಮಹಿಳೆಯರಿಗೆ ಹಣ ಜಮಾ ಆಗಿದ್ದು ಸುಮಾರು 20 ಲಕ್ಷಕ್ಕೂ ಹೆಚ್ಚು ಮಹಿಳೆಯರಿಗೆ ಈಗಾಗಲೇ ಎರಡನೇ ಕಂತಿನ ಹಣ ಜಮಾ ಆಗಿದೆ ಇನ್ನು ಉಳಿದ ಮಹಿಳೆಯರಿಗೆ ಅಕ್ಟೋಬರ್ 15 ರ ಒಳಗಾಗಿ ಜಮಗುವ ಸಾಧ್ಯತೆ ಇದೆ.ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಇದೆ ರೀತಿಯ ಹೊಸ ಮಾಹಿತಿ ಗಳಿಗಾಗಿ ನಮ್ಮ WhatsApp ಗ್ರೂಪ್ ಗೆ ಜಾಯಿನ್ ಆಗಿ. ಇಲ್ಲಿ ಕ್ಲಿಕ್ ಮಾಡಿ ಜಾಯಿನ್ ಆಗಿ
ಹಾಗಾದ್ರೆ ಮೊದಲನೇ ಕಂತಿನ ಹಣ ಬಂದಿಲ್ಲದ ಮಹಿಳೆಯರ ಸ್ಥಿತಿ ಏನು.?
ಈ ಹಿಂದೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಈ ಬಗ್ಗೆ ಮಹಿಳೆಯರಿಗೆ ಸೂಚನೆಯನ್ನು ನೀಡಲಾಗಿತ್ತು. ಮೊದಲನೇ ಕಂತಿನ ಹಣ ಒಂದು ವೇಳೆ ಮಹಿಳೆಯರಿಗೆ ಬಂದಿಲ್ಲದಿದ್ದರೆ ಅವರು ಸರ್ಕಾರದ ಈ ಕೆಲವು ಸೂಚನೆಗಳನ್ನು ಪಾಲಿಸಬೇಕಾಗುತ್ತದೆ ಆ ಸೂಚನೆಗಳನ್ನು ಪಾಲಿಸಿದ್ದೆ ಹಾದಲ್ಲಿ ಅಂತಹ ಮಹಿಳೆಯರಿಗೆ ಮುಂದಿನ ದಿನಗಳಲ್ಲಿ ಗೃಹಲಕ್ಷ್ಮಿ ಯೋಜನೆಯ ಎರಡು ಸಾವಿರ ಹಣವನ್ನು ನೀಡಲಾಗುತ್ತದೆ ಎಂದು ತಿಳಿಸಲಾಗಿತ್ತು.
. ಆ ಸೂಚನೆಗಳಂತೆ ಗೃಹಲಕ್ಷ್ಮಿ ಯೋಜನೆಗೆ ಮಹಿಳೆ ಅರ್ಜಿ ಸಲ್ಲಿಸಿದ್ದು ಅವರಿಗೆ ಇನ್ನೂ ಕೂಡ ಮೊದಲನೇ ಕಂತಿನ ಹಣ ಬಂದಿಲ್ಲದಿದ್ದರೆ ಅಂತಹ ಮಹಿಳೆಯರು ಯೋಚಿಸುವ ಅಗತ್ಯವಿಲ್ಲ ಆದರೆ ಕೆಲವು ಸೂಚನೆಗಳನ್ನು ಪಾಲಿಸಬೇಕಾಗುತ್ತದೆ ಎಂದು ಸರ್ಕಾರದಿಂದ ತಿಳಿಸಲಾಗಿತ್ತು
- ಮೊದಲನೆಯದಾಗಿ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿರುವ ಮಹಿಳೆಯ ಹೆಸರು ಫಲಾನುಭವಿ ಲಿಸ್ಟ್ ನಲ್ಲಿ ಇದೆ ಎಂಬ ಸ್ಟೇಟಸ್ ಅನ್ನು ಚೆಕ್ ಮಾಡಿಕೊಳ್ಳಬೇಕು.
- ನಂತರ ಎರಡನೆಯದಾಗಿ ಫಲಾನುಭವಿ ಲಿಸ್ಟ್ ನಲ್ಲಿ ಮಹಿಳೆಯ ಹೆಸರು ಇದ್ದು ಇನ್ನೂ ಕೂಡ ಹಣ ಬಂದಿಲ್ಲದಿದ್ದರೆ DBT ಲಿಂಕ್ ಆಗಿದೆಯೇ, ಅಂದರೆ ನಿಮ್ಮ ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ ಲಿಂಕ್ ಆಗಿದೆಯೇ ಎಂಬುದನ್ನು ಚೆಕ್ ಮಾಡಿಕೊಳ್ಳಬೇಕು
- ನಂತರ ಮೂರನೇದಾಗಿ ಮನೆಯಲ್ಲಿ ಅರ್ಜಿ ಸಲ್ಲಿಸಿರುವ ಮಹಿಳೆಯ ಹೆಸರಿನಲ್ಲಿ ಮನೆಯ ರೇಷನ್ ಕಾರ್ಡ್ ಇರಬೇಕು, ಅಂದರೆ ಅರ್ಜಿ ಸಲ್ಲಿಸಿರುವ ಮಹಿಳೆಯ ಹೆಸರು ಯಜಮಾನಿಯ ಸ್ಥಳದಲ್ಲಿ ಇರಬೇಕು. ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
- ಹಾಗೆ ಕೊನೆಯದಾಗಿ ಈಗಾಗಲೇ ನಿಮಗೆ ರೇಷನ್ ಕಾರ್ಡ್ ನ ಅಕ್ಕಿ ಹಣ ಬ್ಯಾಂಕ್ ಖಾತೆಗೆ ಜಮಾಹಾಗಿದ್ದು ಗೃಹಲಕ್ಷ್ಮಿ ಯೋಜನೆಯ ಹಣ ಮಾತ್ರ ಬಂದಿಲ್ಲ ಎಂದರೆ ಖಂಡಿತವಾಗಿ ಮೊದಲನೇ ಮತ್ತು ಎರಡನೇ ಕಂತಿನ ಹಣವನ್ನ ಒಂದೇ ಬಾರಿ ಜಮಾ ಮಾಡಲಾಗುತ್ತದೆ.
ಇನ್ನು ಮೊದಲನೇ ಕಂತಿನ ಹಣ ಬಂದಿಲ್ಲದವರಿಗೆ ಈ ಎರಡು ಕಂತಿನ ಹಣ ಬರುವುದು ಯಾವಾಗ.?
ಸರ್ಕಾರದ ಈ ಹೊಸ ಮಾಹಿತಿಯ ಪ್ರಕಾರ ಗೃಹಲಕ್ಷ್ಮಿ ಯೋಜನೆಯ ಎರಡನೇ ಕಂತಿನ ಹಣವನ್ನು ಇದೆ ಅಕ್ಟೋಬರ್ 15 ನೇ ದಿನಾಂಕದ ಒಳಗಾಗಿ ಮಹಿಳೆಯರ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತಿದೆ ಇನ್ನು ಮೊದಲನೇ ಕಂತಿನ ಹಣ ಬಂದಿಲ್ಲದವರಿಗೆ ಸರಕಾರ ತಿಳಿಸಿರುವ ಸೂಚನೆಗಳನ್ನು ಈಗಾಗಲೇ ಪಾಲಿಸಿದ್ದೆ ಹಾದಲ್ಲಿ ಅಕ್ಟೋಬರ್ 15ನೇ ದಿನಾಂಕದ ಒಳಗಾಗಿ ಮೊದಲನೇ ಕಂತಿನ 2,000 ಹಾಗೆ 2ನೇ ಕಂತಿನ 2000 ಒಟ್ಟಾರೆ ನಾಲ್ಕು ಸಾವಿರ ಒಂದೇ ಬಾರಿ ಬ್ಯಾಂಕ್ ಖಾತೆಗೆ ಜಮಾ ಆಗಲಿದೆ ಎಂದು ಸರ್ಕಾರದಿಂದ ಒಂದು ಹೊಸ ಸೂಚನೆಯನ್ನು ನೀಡಿದೆ.ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಈಗಾಗಲೇ ಗೃಹಲಕ್ಷ್ಮಿ ಯೋಜನೆಯ ಹಣವನ್ನು ಮಹಿಳೆಯರ ಬ್ಯಾಂಕ್ ಖಾತೆಗೆ ಜಮಾ ಮಾಡಲು ಸರ್ಕಾರ ಮುಂದಾಗಿದೆ ಒಂದು ವೇಳೆ ನಿಮಗೆ ಮೊದಲನೇ ಕಂತಿನ ಹಣ ಬಂದಿದ್ದರೆ ಎರಡನೇ ಕಂತಿನ ಹಣ ಜಮಾ ಆಗಿರಬಹುದು ಹಾಗೆ ಮೊದಲನೇ ಕಂತಿನ ಹಣ ಬಂದಿಲ್ಲದವರಿಗೆ ಒಂದೇ ಬಾರಿ ಎರಡು ಕಂತಿನ ಹಣ ಬಂದಿರಬಹುದು ಹಾಗಾಗಿ ದಿನಕ್ಕೆ ಒಂದೆರಡು ಬಾರಿ ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಚೆಕ್ ಮಾಡಿಕೊಳ್ಳುವುದು ಸೂಕ್ತ ಧನ್ಯವಾದಗಳು..
ಇದೆ ರೀತಿಯ ಹೊಸ ಮಾಹಿತಿ ಗಳಿಗಾಗಿ ನಮ್ಮ WhatsApp ಗ್ರೂಪ್ ಗೆ ಜಾಯಿನ್ ಆಗಿ. ಇಲ್ಲಿ ಕ್ಲಿಕ್ ಮಾಡಿ ಜಾಯಿನ್ ಆಗಿ