ಗೃಹ ಜ್ಯೋತಿ ಯೋಜನೆಗೆ 7 ದಿನಗಳಲ್ಲಿ  51 ಲಕ್ಷ ದಾಟಿದ  ನೋಂದಣಿಗಳು. ಗೃಹಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಇದೀಗ ಮತ್ತಷ್ಟು ಸುಲಭ.!

ಕರ್ನಾಟಕ ರಾಜ್ಯ ಸರ್ಕಾರ ಪ್ರತಿ ತಿಂಗಳು 200 ಯೂನಿಟ್ ವರೆಗೆ ವಿದ್ಯುತ್ ಉಚಿತವಾಗಿ ನೀಡುವ ಬಗ್ಗೆ ಜೂನ್ ಎರಡನೇ ದಿನಾಂಕ ಎಲ್ಲ ಮಾಧ್ಯಮಗಳ ಮುಂದೆ ಅಧಿಕೃತ ಘೋಷಣೆ ಹೊರಡಿಸಿತು ಈಗಾಗಲೇ ಜೂನ್ 18ನೇ ದಿನಾಂಕದಿಂದ   ಗೃಹಜೋತಿ ಯೋಜನೆಗೆ  ಅರ್ಜಿಗಳನ್ನು ಆಹ್ವಾನಿಸಿದೆ. ಈಗಾಗಲೇ ರಾಜ್ಯ ಸರ್ಕಾರ ಪ್ರತಿಮನೆಗೆ 200 ಯೂನಿಟ್ ವರೆಗೆ ವಿದ್ಯುತ್ ಉಚಿತ ಪಡೆಯುವ ಗೃಹಜೋತಿ ಯೋಜನೆಗೆ ಅಭೂತಪೂರ್ವ ಜನಸ್ಪಂದನೆ ವ್ಯಕ್ತವಾಗಿದೆ ಜೂನ್ 18ರಂದು ಗೃಹಜ್ಯೋತಿ ಯೋಜನೆಗೆ ಫಲಾನುಭವಿಗಳಾಗಲು ನೋಂದಣಿ ಪ್ರಕ್ರಿಯೆ ಆರಂಭವಾಗಿದ್ದು ಇದೀಗ ಕೇವಲ ಏಳೇ ದಿನಗಳಲ್ಲಿ ಸುಮಾರು ಐವತ್ತೊಂದು ಲಕ್ಷಕ್ಕೂ ಹೆಚ್ಚು ಜನರು ಈ ಯೋಜನೆಗೆ ನೋಂದಣಿ ಮಾಡಿಕೊಂಡಿದ್ದಾರೆ.

WhatsApp Group Join Now
Telegram Group Join Now

ಗೃಹ ಜ್ಯೋತಿ ಯೋಜನೆಗೆ 7 ದಿನಗಳಲ್ಲಿ  51 ಲಕ್ಷ ದಾಟಿದ  ನೋಂದಣಿಗಳು.

ಸದ್ಯ ರಾಜ್ಯದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಅಧಿಕಾರಕ್ಕೆ ಬಂದ ಬೆನ್ನೆಲೆ ಚುನಾವಣೆ ಸಮಯದಲ್ಲಿ ಜನರಿಗೆ ನೀಡಿದ್ದ ಗ್ಯಾರಂಟಿಗಳನ್ನು ಈಡೇರಿಸುವ ಬಗ್ಗೆ ಅಧಿಕೃತ ಘೋಷಣೆಯನ್ನು ಮಾಡಿದ್ದು ಜೂನ್ 11ನೇ ದಿನಾಂಕ ಮಹಿಳೆಯರ ಉಚಿತ ಬಸ್ ಪ್ರಯಾಣಕ್ಕೆ ಅವಕಾಶವನ್ನು ನೀಡಿದೆ ಅಂದರೆ ಜೂನ್ 11ರಿಂದ ಉಚಿತ ಬಸ್ ಪ್ರಯಾಣದ ಶಕ್ತಿ ಯೋಜನೆಯನ್ನು ಜಾರಿ ಮಾಡಿದ್ದು ಇದೀಗ ಇದೇ ರಾಜ್ಯ ಸರ್ಕಾರ ಜೂನ್ 15 ನೇ ದಿನಾಂಕದಿಂದ ಗೃಹಲಕ್ಷ್ಮಿ ಯೋಜನೆಗೂ ಅರ್ಜಿ ಸಲ್ಲಿಸಲು ಅವಕಾಶ ನೀಡಿದ್ದು ಇದೀಗ ಈ ಯೋಜನೆಯ ಅರ್ಜಿ ಸಲ್ಲಿಕೆಗೆ ದಿನಾಂಕ ಮುಂದೂಡಿಕೆಯಾಗಿದೆ ಆದರೆ ಗೃಹಜೋತಿ ಯೋಜನೆಯ ಅರ್ಜಿ ಸಲ್ಲಿಕೆಗೆ ಜೂನ್ 18 ನೇ ದಿನಾಂಕದಿಂದ ರಾಜ್ಯ ಸರ್ಕಾರ ಅನುಮತಿ ನೀಡಿದ್ದು ಈಗಾಗಲೇ ಕಳೆದ ಏಳು ದಿನಗಳಲ್ಲೇ ಅಂದರೆ ಜೂನ್ 25ರಂದು ಸಂಜೆ ವೇಳೆಗೆ ರಾಜ್ಯಾದ್ಯಂತ ಗೃಹಜ್ಯೋತಿ ಯೋಜನೆಗೆ ನೋಂದಣಿ ಮಾಡಿಕೊಂಡ ಗ್ರಹಕರ ಸಂಖ್ಯೆ ಸುಮಾರು ಐವತ್ತೊಂದು ಲಕ್ಷ ದಾಟಿದೆ ಎಂಬ ಬಗ್ಗೆ ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರು ತಿಳಿಸಿದ್ದಾರೆ. 

ಗೃಹಜೋತಿ ಯೋಜನೆಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಇದೀಗ ಮತ್ತಷ್ಟು ಸುಲಭ.

 ಈಗಾಗಲೇ ಗೃಹಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಸಲು ದಿನಾಂಕ ಆರಂಭವಾಗಿದ್ದು ಜೂನ್ 18ನೇ ದಿನಾಂಕದಿಂದ ಗೃಹಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಸಲು ರಾಜ್ಯ ಸರ್ಕಾರ ಅನುಮತಿ ನೀಡಿದೆ ಅಲ್ಲದೆ ಮೊದಲ ದಿನಗಳಲ್ಲಿ ಈ ಯೋಜನೆಗೆ ಅರ್ಜಿ ಸಲ್ಲಿಸಲು ಸರಿಯಾದ ಸರ್ವರ್ ಸಿಗದ ಕಾರಣ ಜನರು ಬಹಳಷ್ಟು ತೊಂದರೆ ಅನುಭವಿಸಬೇಕಾಗಿತ್ತು. ನಂತರ ಮುಂದಿನ ದಿನಗಳಲ್ಲಿ ಇದೇ ರೀತಿಯ ಸಮಸ್ಯೆಗಳು ಎದುರಾಗಿದ್ದು ಇದೀಗ ಈ ಯೋಜನೆಗೆ ಅರ್ಜಿ ಸಲ್ಲಿಸುವ  ದಿನಾಂಕವು ಏಳು ದಿನಗಳು ಆಗುತ್ತಾ ಬಂದಿದೆ ಇದೀಗ ಕಳೆದ ಏಳು ದಿನಗಳಲ್ಲಿ ಸರ್ವರ್ ಸಮಸ್ಯೆಗಳು ಇದ್ದರು ಜನರು ಗೃಹಜೋತಿ ಯೋಜನೆಗೆ  ಅರ್ಜಿ ಸಲ್ಲಿಸುವರು ಇರುವವರ ಸಂಖ್ಯೆ ಸುಮಾರು 51 ಲಕ್ಷ  ದಾಟಿದೆ.  ನಂತರ ಇಲಾಖೆ ಹಲವು ಸುಧಾರಣೆಗಳನ್ನು ತಂದಿದ್ದು ಈಗ ನೋಂದಣಿ ಪ್ರಕ್ರಿಯೆ ಮತ್ತಷ್ಟು ಸುಲಭವಾಗಿದೆ.

ಹೌದು ಗೃಹಜೋತಿ ಯೋಜನೆಗೆ ಅರ್ಜಿ ಸಲ್ಲಿಸಲು ರಾಜ್ಯ ಸರ್ಕಾರ ಅವಕಾಶ ನೀಡಿದ ದಿನದಿಂದಲೇ ಅಧಿಕ ಪ್ರಮಾಣದಲ್ಲಿ ಗ್ರಾಹಕರು  ನೋಂದಣಿ ಪ್ರಕ್ರಿಯೆ ಮಾಡಿಕೊಳ್ಳಲು ಮುಂದಾದ ಕಾರಣ ಅರ್ಜಿ ಸಲ್ಲಿಕೆಯಲ್ಲಿ ಸರ್ವ ಸಮಸ್ಯೆ ಉಂಟಾಗಿದ್ದು ಇದೀಗ ಇಲಾಖೆ ಕೆಲವು ಸುಧಾರಣೆಗಳನ್ನು ಇದರಲ್ಲಿ ತಂದಿದ್ದು ಅರ್ಜಿ ಸಲ್ಲಿಕೆಗೆ ಜನರಿಗೆ ಸ್ವಲ್ಪಮಟ್ಟಿನ ಸುಧಾರಣೆಯನ್ನು ತಂದಿದೆ ಅಲ್ಲದೆ ಮಹಿಳೆಯರ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಲು ಸರ್ಕಾರ ಬೇರೆ ಆಪ್ ಮೊರೆ ಹೋದ ಕಾರಣ ಅಂದರೆ ಹೊಸ ಆಪ್ ರೆಡಿ ಮಾಡುತ್ತಿರುವ ಕಾರಣ ಇದೀಗ ಕೇವಲ  ಗೃಹಜೋತಿ ಯೋಜನೆಗೆ ಅರ್ಜಿ ಸಲ್ಲಿಸಲು ಸುಲಭವಾಗಿದೆ.

 

 ನಕಲಿ ಲಿಂಕ್ ಗಳ ಬಗ್ಗೆ ಎಚ್ಚರ ವಹಿಸಲು ಇಲಾಖೆಯಿಂದ ಮನವಿ.

 ಸದ್ಯ ಈಗಾಗಲೇ ರಾಜ್ಯದಲ್ಲಿ ಗೃಹಜೋತಿ ಮತ್ತು ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಲು ರಾಜ್ಯ ಸರ್ಕಾರ ಅವಕಾಶ ನೀಡಿದ್ದು ಈ ಯೋಜನೆಯ ಅವಕಾಶವನ್ನು ಸೋಶಿಯಲ್ ಮೀಡಿಯಾದಲ್ಲಿ ದುರುಪಯೋಗ  ಪಡಿಸಿಕೊಳ್ಳಲು ಕೆಲವರು  ನಕಲಿ ಲಿಂಕ್ ಗಳನ್ನು ಬಿಡುಗಡೆ ಮಾಡಿದ್ದು ಈ ಲಿಂಕ್ ಗಳಲ್ಲಿ ಅರ್ಜಿ ಸಲ್ಲಿಸಲು ತಿಳಿಸಿದ್ದು ನಿಮ್ಮ ಎಲ್ಲಾ ದಾಖಲೆಗಳನ್ನು ಅಂದರೆ ನಿಮ್ಮ ಡಾಟಾ ಗಳನ್ನು ಈ ಮೂಲಕ ಪಡೆದುಕೊಳ್ಳುತ್ತಾರೆ ಇದರಿಂದ ನಿಮ್ಮ ನಿಗೂಢತೆಗಳನ್ನು  ಬೇರೆಯವರು ಕಳವು ಮಾಡಬಹುದು ಆದ್ದರಿಂದ ಕೇವಲ ಸರ್ಕಾರದ ಈ ಅಧಿಕೃತ ಲಿಂಕ್ನಲ್ಲಿ ಮಾತ್ರ ಅರ್ಜಿ ಸಲ್ಲಿಸಬೇಕು ಬೇರೆ ಲಿಂಕ್ ಗಳನ್ನು ಚೆಕ್ ಮಾಡಿಕೊಳ್ಳಿ ಇಲಾಖೆಯಿಂದ ಮನವಿ ಮಾಡಲಾಗಿದೆ.

 ಗೃಹಜೋತಿ ಮಾತ್ರವಲ್ಲದೆ  ಗೃಹಲಕ್ಷ್ಮಿ ಯುವ ನಿಧಿ ಯೋಜನೆ ಹೆಸರಿನಲ್ಲಿ ಕೂಡ ಹಲವು ಅಪ್ಲಿಕೇಶನ್ ಮತ್ತು ನಕಲಿ ಲಿಂಕನ್ನು ಹಂಚಿಕೊಳ್ಳಲಾಗುತ್ತಿದೆ ಎಚ್ಚರಿಕೆ ವಹಿಸಲು ಕೋರಿದೆ ಗೃಹಲಕ್ಷ್ಮಿ  ಯುವ ನಿಧಿ ಯೋಜನೆಯಲ್ಲಿ ಹಣ ಪಡೆಯಲು ಫಲಾನುಭವಿಗಳು ಬ್ಯಾಂಕ್ ಖಾತೆ ಮಾಹಿತಿ ಕೂಡ ನಮೂದಿಸಬೇಕಾಗಿದ್ದು ನಕಲಿ ಲಿಂಕ್ಗಳಲ್ಲಿ ಈ ಮಾಹಿತಿಯನ್ನು ಹಂಚಿಕೊಂಡರೆ ನಿಮ್ಮ ಬ್ಯಾಂಕ್ ಖಾತೆಗೆ ಕನ್ನ ಬೀಳುವ ಅಪಾಯ ಇದೆ ಆದ್ದರಿಂದ ಸರ್ಕಾರ ನೀಡುವ ಅಧಿಕೃತ ಲಿಂಕನ್ನು ಬಳಸಿಕೊಂಡು ನೋಂದಣಿ ಮಾಡಿಕೊಳ್ಳಲು ತಿಳಿಸಿದೆ.

ಗೃಹಲಕ್ಷ್ಮಿ ಗೃಹಜೋತಿ ಮತ್ತು ಯುವ ನಿಧಿ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ.

 ಈಗಾಗಲೇ ಗೃಹಜೋತಿ ಯೋಜನೆಗೆ ಅರ್ಜಿ ಸಲ್ಲಿಸಲು ಸರ್ಕಾರದ ಅಧಿಕೃತ ವೆಬ್ಸೈಟ್ ಸೇವಾ ಸಿಂಧು  ಪೋರ್ಟಲ್ ನಲ್ಲಿ ಅರ್ಜಿ ಸಲ್ಲಿಸಲು ಅವಕಾಶ ನೀಡಿದ್ದು. ಇದಲ್ಲದೆ ಗ್ರಾಮವನ್,  ಕರ್ನಾಟಕ ವನ್, ಬೆಂಗಳೂರು ಒನ್  ವಿದ್ಯುತ್ ಇಲಾಖೆ ಕಚೇರಿಗಳಲ್ಲಿ ಕೂಡ ನೋಂದಣಿ ಮಾಡಲಾಗುತ್ತಿದೆ ಇದಕ್ಕೆ ಯಾವುದೇ ಶುಲ್ಕ ಕೂಡ ವಿಧಿಸುತ್ತಿಲ್ಲ ಉಚಿತವಾಗಿ ನೋಂದಣಿ ಪ್ರಕ್ರಿಯೆ  ನಡೆಯುತ್ತಿದೆ.  ಬಾಡಿಗೆ ಮನೆಗಳಲ್ಲಿ ವಾಸಿಸುತ್ತಿರುವವರು ಯಾವುದೇ ಬಾಡಿಗೆ ಕರಾರು ಪತ್ರವನ್ನು ನೀಡುವಂತಿಲ್ಲ ಎಂದು ಸ್ಪಷ್ಟನೆ ನೀಡಲಾಗಿದೆ.

 ನೋಂದಣಿ ಪ್ರಕ್ರಿಯೆ ಸರಳವಾಗಿದ್ದು ವಿದ್ಯುತ್  ಬಿಲ್ ನಲ್ಲಿ ಇರುವ ಖಾತೆ ಸಂಖ್ಯೆ ಗ್ರಾಹಕರ ಆಧಾರ್ ಸಂಖ್ಯೆ ಹಾಗೂ ಮೊಬೈಲ್ ನಂಬರ್ ಬಳಸಿಕೊಂಡು ನೋಂದಣಿ ಮಾಡಿಕೊಳ್ಳಬಹುದಾಗಿದೆ ಅಥವಾ ಸರ್ಕಾರದ ವೆಬ್ ಸೈಟ್ ಲಿಂಕ್ ಮೂಲಕ ನೇರವಾಗಿ ನಿಮ್ಮ ಮೊಬೈಲ್ ನಲ್ಲಿ ಅರ್ಜಿ ಸಲ್ಲಿಸಬಹುದು ಅರ್ಜಿ ಸಲ್ಲಿಸಲು ಈ ಲಿಂಕ್ ನಲ್ಲಿ  www.sevasindhugs.karnataka.gov.in  ಅರ್ಜಿ ಸಲ್ಲಿಸಿ.

Leave a Comment