ಹೌದು ನಿಮಗೂ ಕೂಡ ರಾಜ್ಯ ಸರ್ಕಾರದ ಗೃಹಲಕ್ಷ್ಮಿ ಯೋಜನೆಯಡಿಯಲ್ಲಿ 2000 ಹಣ ಬಂದಿಲ್ಲವೆಂದರೆ ನೀವು ಕಡ್ಡಾಯವಾಗಿ ಈ ಕೆಲಸಗಳನ್ನು ಮಾಡಿ, ರಾಜ್ಯ ಸರ್ಕಾರ ತಿಳಿಸಿರುವ ಹಾಗೆ ಈ ಕೆಲಸಗಳನ್ನು ನೀವು ಮಾಡಿದ್ದಲ್ಲಿ ನಿಮಗೆ ಗೃಹಲಕ್ಷ್ಮಿ ಯೋಜನೆಯ 2000 ನೇರವಾಗಿ ನಿಮ್ಮ ಬ್ಯಾಂಕ್ ಖಾತೆಗೆ ತಲುಪುತ್ತದೆ.
ಹಾಗಾದರೆ ನೀವು ಮಾಡಬೇಕಾದ ಮುಖ್ಯ ಕೆಲಸಗಳೇನು ಮತ್ತು ನಿಮಗೆ ಗೃಹಲಕ್ಷ್ಮಿ ಯೋಜನೆಯ ಹಣ ಯಾವಾಗ ಬರಲಿದೆ ಎಂಬ ಕುರಿತು ಈ ಲೇಖನದಲ್ಲಿ ಸಂಪೂರ್ಣ ಮಾಹಿತಿಯನ್ನು ತಿಳಿಸಿ ಕೊಡಲಿದ್ದೇವೆ. ಹಾಗಾಗಿ ಲೇಖನವನ್ನು ಕೊನೆಯವರೆಗೂ ಓದಿ!ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಗೃಹಲಕ್ಷ್ಮಿ ಯೋಜನೆಯ ಹಣ ಬಂದಿಲ್ಲ ಅಂದ್ರೆ ಎಲ್ಲರೂ ಈ ಕೆಲಸ ಮಾಡಿ!
- ನಿಮಗೆ ಏನಾದರೂ ಗೃಹಲಕ್ಷ್ಮಿ ಯೋಜನೆಯ ಮೊದಲ ಕಂತಿನ ಹಣ ಬಂದಿಲ್ಲವೆಂದರೆ ಮೊದಲು ನೀವು ನಿಮ್ಮ ಅರ್ಜಿಯ ಸ್ಥಿತಿಯನ್ನು ಪರೀಕ್ಷಿಸಿಕೊಳ್ಳಬೇಕಾಗುತ್ತದೆ. ಇದನ್ನು ನೀವು ಪರೀಕ್ಷಿಸಿಕೊಳ್ಳಲು 8147500500 ನಂಬರ್ ಗೆ ಿಮ್ಮ ರೇಷನ್ ಕಾರ್ಡ್ ನ ಆರ್ಸಿ ನಂಬರ್ ಅನ್ನು ಮೆಸೇಜ್ ಮಾಡಿ ಬಳಿಕ ನಿಮ್ಮ ಗೃಹಲಕ್ಷ್ಮಿ ಯೋಜನೆಯ ಅರ್ಜಿ ಯಶಸ್ವಿಯಾಗಿದ್ದಲ್ಲಿ ನಿಮ್ಮ ಗ್ರಹಲಕ್ಷ್ಮಿ ಯೋಜನೆಯ ಅರ್ಜಿ ಯಶಸ್ವಿಯಾಗಿದೆ ಎಂದು ಮೆಸೇಜ್ ಬರಲಿದೆ ಒಂದು ವೇಳೆ ಯಶಸ್ವಿ ಆಗಿಲ್ಲದಿದ್ದಲ್ಲಿ ನಿಮ್ಮ ಅರ್ಜಿ ರಿಜೆಕ್ಟ್ ಆಗಿದೆ ಎಂದರ್ಥ.
- ಎರಡನೆಯದಾಗಿ ನೀವು ನಿಮ್ಮ ಗ್ರಹಲಕ್ಷ್ಮಿ ಯೋಜನೆಯ ಅರ್ಜಿಗೆ ನೀಡಿರುವ ಆಧಾರ್ ಕಾರ್ಡಿಗೆ ಕಡ್ಡಾಯವಾಗಿ ಬ್ಯಾಂಕ್ ಖಾತೆ ಲಿಂಕ್ ಆಗಿದೆಯಾ ಇಲ್ಲವ ಎಂದು ಪರೀಕ್ಷಿಸಿಕೊಳ್ಳಿ. ಆಧಾರ್ ಕಾರ್ಡಿಗೆ ಬ್ಯಾಂಕ್ ಖಾತೆ ಅಂದರೆ ಡಿ ಬಿ ಟಿ ಲಿಂಕ್ ಆಗಿರುವುದು ಕಡ್ಡಾಯವಾಗಿದೆ ಸರ್ಕಾರದ ಕಡೆಯಿಂದ ಬರುವ ಯಾವುದೇ ಹಣವು ನೇರವಾಗಿ ಡಿ ಬಿ ಟಿ ಅಂದರೆ ಡೈರೆಕ್ಟ್ ಬೆನಿಫಿಟ್ ಟ್ರಾನ್ಸ್ಫರ್ ನ ಮೂಲಕ ವರ್ಗಾವಣೆ ಆಗುತ್ತದೆ ಈಗಾಗಲೇ ಪಿಎಮ್ ಕಿಸಾನ್ ಯೋಜನೆ ಅಡಿಯಲ್ಲಿ ರೈತರ ಬ್ಯಾಂಕ್ ಖಾತೆಗೆ ಯಾವ ರೀತಿ ಹಣವನ್ನು ವರ್ಗಾವಣೆ ಮಾಡಲಾಗುತ್ತಿದೆ ಅದೇ ಮಾದರಿಯಲ್ಲಿ ಗೃಹಲಕ್ಷ್ಮಿ ಯೋಜನೆ ಹಣವನ್ನು ಕೂಡ ವರ್ಗಾವಣೆ ಮಾಡಲಾಗುತ್ತದೆ.
- ಆದ ಕಾರಣ ನೀವು ನಿಮ್ಮ ಆಧಾರ್ ಕಾರ್ಡಿಗೆ ಬ್ಯಾಂಕ್ ಖಾತೆ ಲಿಂಕ್ ಆಗಿದೆಯಾ ಇಲ್ಲವಾ ಎಂದು ಪರೀಕ್ಷಿಸಿಕೊಳ್ಳಬೇಕು ಇದಕ್ಕಾಗಿ ನೀವು ಆಧಾರ್ ಕಾರ್ಡ್ ನ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ ಬಳಿಕ ನೀವು ನಿಮ್ಮ ಆಧಾರ್ ನಂಬರ್ ಸೇರಿದಂತೆ ಕ್ಯಾಪ್ಚರ್ ಎಂಟರ್ ಮಾಡಿ ಆಧಾರ್ ಕಾರ್ಡಿನ ರಿಜಿಸ್ಟರ್ ನಂಬರ್ ಗೆ ಬರುವ ಓಟಿಪಿಯನ್ನು ನಮೂದಿಸಿ ನಿಮ್ಮ ಆಧಾರ್ ಕಾರ್ಡಿಗೆ ಬ್ಯಾಂಕ್ ಮ್ಯಾಪಿಂಗ್ ಆಗಿದೆಯಾ ಎಂದು ಪರೀಕ್ಷಿಸಿಕೊಳ್ಳಿ ಇದನ್ನು ನೀವು ಮೊಬೈಲ್ ಮೂಲಕವೇ ಮಾಡಬಹುದು.
- ನಿಮ್ಮ ಆಧಾರ್ ಕಾರ್ಡಿಗೆ ಬ್ಯಾಂಕ್ ಮ್ಯಾಪಿಂಗ್ ಆಗಿದ್ದಲ್ಲಿ ಈ ರೀತಿಯಾಗಿ ಬರೆಲಿದಿದೆ ಹಾಗೂ ಯಾವ ದಿನಾಂಕದಂದು ಲಿಂಕ್ ಆಗಿದೆ ಹಾಗೂ ನಿಮ್ಮ ಬ್ಯಾಂಕಿನ ಸ್ಟೇಟಸ್ ಆಕ್ಟಿವ್ ಇದೆಯಾ ಎಂದು ಬರಲಿದೆ ಹಾಗಾಗಿ ಅಲ್ಲಿ ಆಕ್ಟಿವ್ ಎಂದು ಇದ್ದಲ್ಲಿ ನಿಮ್ಮ ಬ್ಯಾಂಕ್ ಖಾತೆಗೆ ಹಣ ಬರಲಿದೆ ಎಂದರ್ಥ ಒಂದು ವೇಳೆ ಇಂಡಕ್ಟಿವ್ ಆಗಿದ್ದಲ್ಲಿ ನೀವು ಅದನ್ನು ನಿಮ್ಮ ಬ್ಯಾಂಕಿಗೆ ಭೇಟಿ ನೀಡಿದ ಮೂಲಕ ಆಕ್ಟಿವ್ ಮಾಡಿಸಿಕೊಳ್ಳಬೇಕು. ಒಂದು ವೇಳೆ ಯಾವುದೇ ಬ್ಯಾಂಕ್ ಖಾತೆ ಲಿಂಕ್ ಆಗಿಲ್ಲದಿದ್ದಲ್ಲಿ ನೋ ಡೇಟಾ ಫೌಂಡ್ ಎಂದು ಬರಲಿದೆ ಆಗ ನೀವು ನಿಮ್ಮ ಹತ್ತಿರದ ಯಾವುದೇ ಬ್ಯಾಂಕ್ ಶಾಖೆಗೆ ಭೇಟಿ ನೀಡಿದ ಮೂಲಕ ಟಿಬಿಟಿ ಫಾರಂ ಭರ್ತಿ ಮಾಡಿ ನಿಮ್ಮ ಬ್ಯಾಂಕಿಗೆ ಸಲ್ಲಿಸಿದಲ್ಲಿ ನಿಮಗೆ ಗೃಹಲಕ್ಷ್ಮಿ ಯೋಜನೆಯ ಹಣ ಅದೇ ಬ್ಯಾಂಕ್ ಖಾತೆಗೆ ನೇರವಾಗಿ ವರ್ಗಾವಣೆ ಆಗುವಂತದ್ದು. ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
- ಹಾಗೂ ನಿಮ್ಮ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ನೀವು ನೀಡಿರುವ ಆಧಾರ್ ಕಾರ್ಡ್ ಹಾಗೂ ರೇಷನ್ ಕಾರ್ಡ್ ಹಾಗೂ ಬ್ಯಾಂಕ್ ಖಾತೆಯಲ್ಲಿ ಒಂದೇ ಹೆಸರು ಇರಬೇಕು ಒಂದು ವೇಳೆ ಹೆಸರು ಬೇರೆ ಬೇರೆ ಇದ್ದಲ್ಲಿ ನಿಮಗೆ ಗೃಹಲಕ್ಷ್ಮಿ ಯೋಜನೆಯ ಹಣ ಸಿಗುವುದಿಲ್ಲ
- ಹಾಗೂ ನೀವು ಆಗಸ್ಟ್ 15 ರ ಒಳಗಾಗಿ ಮಹಾಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿದ್ದಲ್ಲಿ ಮಾತ್ರವಷ್ಟೇ ನಿಮಗೆ ಗೃಹಲಕ್ಷ್ಮಿ ಯೋಜನೆಯ ಮೊದಲ ಕಂತಿರ ಹಣ ಬರಲಿದೆ ಒಂದು ವೇಳೆ ಆಗಸ್ಟ್ 15ರ ಬಳಿಕ ನೀವು ಅರ್ಜಿ ಸಲ್ಲಿಸಿದ್ದಲ್ಲಿ ನಿಮಗೆ ನೇರವಾಗಿ ಎರಡನೇ ಕಂತಿನ ಹಣ ಜಮಾ ಆಗುವಂತದ್ದು. ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಇಷ್ಟು ಮುಖ್ಯ ಮಾಹಿತಿಗಳನ್ನು ನೀವು ಸರಿಯಾಗಿ ಪಾಲಿಸಿದಲ್ಲಿ ಮತ್ತು ಎಲ್ಲಾ ದಾಖಲೆಗಳು ಸರಿಯಾಗಿದ್ದಲ್ಲಿ ನಿಮಗೆ ಗೃಹಲಕ್ಷ್ಮಿ ಯೋಜನೆಯ ಹಣ ನೇರವಾಗಿ ನಿಮ್ಮ ಬ್ಯಾಂಕ್ ಖಾತೆಗೆ ವರ್ಗಾವಣೆ ಆಗುತ್ತದೆ ಸದ್ಯಕ್ಕೆಲ್ಲ ತಾಂತ್ರಿಕ ಕಾರಣಗಳಿಂದ ಗೃಹಲಕ್ಷ್ಮಿ ಯೋಜನೆಯ ಹಣವನ್ನು ವರ್ಗಾವಣೆ ಮಾಡಲು ಸಾಧ್ಯವಾಗುತ್ತಿಲ್ಲವೆಂದು ಸರ್ಕಾರ ತಿಳಿಸಿದ್ದು ಮುಂದಿನ ಕೆಲ ದಿನಗಳಲ್ಲಿ ನಿಮಗೂ ಕೂಡ ಗೃಹಲಕ್ಷ್ಮಿ ಯೋಜನೆಯ ಹಣ ನೇರವಾಗಿ ನಿಮ್ಮ ಬ್ಯಾಂಕ್ ಖಾತೆಗೆ ತಲುಪುವಂತೆದ್ದು.ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ದಯವಿಟ್ಟು ಗಮನಿಸಿ: ಗೃಹಲಕ್ಷ್ಮಿ ಯೋಜನೆಯ ಹಣ ನಿಮ್ಮ ಬ್ಯಾಂಕ್ ಖಾತೆಗೆ ಬಂದರೂ ಕೂಡ ಕೆಲ ತಾಂತ್ರಿಕ ಕಾರಣಗಳಿಂದ ನಿಮಗೆ ಮೆಸೇಜು ಬರುವುದು ತಡವಾಗಬಹುದು ಅಥವಾ ಬಾರದೆಯೂ ಇರಬಹುದು ಆದ ಕಾರಣ ನೀವು ನಿಮ್ಮ ಬ್ಯಾಂಕ್ ಖಾತೆಗಳನ್ನು ಪರಿಶೀಲಿಸಿಕೊಳ್ಳುವುದು ಸೂಕ್ತ
ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ