ಎಲ್ಲರಿಗೂ ನಮಸ್ಕಾರ..
ಹೊಸ BPL ಕಾರ್ಡ್ ಅರ್ಜಿ: ಕರ್ನಾಟಕ ರಾಜ್ಯ ಸರ್ಕಾರವು ಹೊಸ ಬಿಪಿಎಲ್ ಕಾರ್ಡ್ ಗೆ ಅರ್ಜಿ ಸಲ್ಲಿಸುವವರಿಗೆ ಮತ್ತೊಂದು ಅವಕಾಶ ನೀಡಿದೆ ಸದ್ಯ 2024ನೇ ಸಾಲಿನಲ್ಲಿ ಈಗಾಗಲೇ ಕೆಲವು ಬಾರಿ ಬಿಟಿಎಲ್ ಕಾರ್ಡ್ ತಿದ್ದುಪಡಿ ಮತ್ತು ಹೊಸ ಅರ್ಜಿಗೆ ಸರ್ಕಾರದಿಂದ ಅವಕಾಶವನ್ನು ನೀಡಿದ್ದು ಇದೀಗ ಕೆಲವು ಬಿಪಿಎಲ್ ಕಾರ್ಡ್ ಹೊಸ ಅರ್ಜಿಗಾಗಿ ಕಾಯುತ್ತಿರುವವರಿಗೆ ಮತ್ತೊಂದು ಅವಕಾಶವನ್ನು ನೀಡಲಾಗಿದೆ.
ಈಗಾಗಲೇ ರಾಜ್ಯದಲ್ಲಿ ಸುಮಾರು 4,38,000 ಬಿಪಿಎಲ್ ಕಾರ್ಡ್ ಗಳಿಂದ ಜನರು ಸರ್ಕಾರದ ಸೌಲಭ್ಯಗಳನ್ನು ಪಡೆಯುತ್ತಿದ್ದು ಸುಮಾರು ರಾಜ್ಯದಲ್ಲಿ ಒಂದು ಕೋಟಿ 27 ಲಕ್ಷ ಜನರು ಬಿಪಿಎಲ್ ಕಾರ್ಡ್ ನಿಂದ ಸರ್ಕಾರದ ಸೌಲಭ್ಯಗಳನ್ನು ಪಡೆಯುತ್ತಿದ್ದಾರೆ ಇದೀಗ ರಾಜ್ಯದಲ್ಲಿ ಮತ್ತಷ್ಟು ಹೊಸ ಬಿಪಿಎಲ್ ಕಾರ್ಡಿಗೆ ಅರ್ಜಿ ಸಲ್ಲಿಸಲು ದಿನಾಂಕವನ್ನು ಕಾಯುತ್ತಿದ್ದು ಸರ್ಕಾರ ಅಂತವರಿಗೆ ಮತ್ತೊಂದು ಅವಕಾಶವನ್ನು ನೀಡಿದೆ. ನೀವು ಕೂಡ ಹೊಸ ಬಿಪಿಎಲ್ ಕಾರ್ಡಿಗೆ ಅರ್ಜಿ ಸಲ್ಲಿಸಬೇಕು ಎಂದುಕೊಂಡಿದ್ದಲ್ಲಿ ಅಥವಾ ಬಿಪಿಎಲ್ ಕಾರ್ಡನ್ನು ತಿದ್ದುಪಡಿ ಮಾಡಿಸಬೇಕು ಎಂದುಕೊಂಡಿದ್ದಲ್ಲಿ ಈ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿಯಲು ಲೇಖನವನ್ನು ಪೂರ್ತಿಯಾಗಿ ಓದಿ.
ರಾಜ್ಯ ಸರ್ಕಾರದಿಂದ ಹೊಸ BPL ಕಾರ್ಡ್ ಅರ್ಜಿಗೆ ಆಹ್ವಾನ ನೀಡಲಾಗಿದೆ.?
ನಮ್ಮ ಕರ್ನಾಟಕ ರಾಜ್ಯದಲ್ಲಿ ಸುಮಾರು 4,38,000 ಬಿಪಿಎಲ್ ಕಾರ್ಡ್ ಗಳು ಇದ್ದು ಇದರಲ್ಲಿ ಸುಮಾರು ಒಂದು ಕೋಟಿ 27 ಲಕ್ಷ ಜನರು ಬಿಪಿಎಲ್ ಕಾರ್ಡ್ ಸೌಲಭ್ಯಗಳನ್ನು ಪಡೆದುಕೊಳ್ಳುತ್ತಿದ್ದಾರೆ ಅದರಲ್ಲೂ ಪ್ರತಿ ವರ್ಷ ಹೊಸ ಬಿಪಿಎಲ್ ಕಾರ್ಡ್ ಅರ್ಜಿಗೆ ಬಹಳಷ್ಟು ಜನ ಅರ್ಜಿಯನ್ನು ಸಲ್ಲಿಸುತ್ತಿದ್ದಾರೆ ಈಗಾಗಲೇ 2024ನೇ ಸಾಲಿನಲ್ಲಿ ಕೆಲವು ಬಾರಿ ಹೊಸ ಬಿಪಿಎಲ್ ಕಾರ್ಡ್ ಅರ್ಜಿಗೆ ಸರ್ಕಾರದಿಂದ ಅವಕಾಶವನ್ನು ನೀಡಲಾಗಿದೆ ತಿದ್ದುಪಡಿಗೂ ಅವಕಾಶವನ್ನು ನೀಡಲಾಗಿದೆ ಇದೀಗ ಕಳೆದ ಅರ್ಜಿ ಮತ್ತು ತಿದ್ದುಪಡಿ ಅವಕಾಶದ ಸಮಯದಲ್ಲಿ ತಾಂತ್ರಿಕ ಸಮಸ್ಯೆಗಳು ಉಂಟಾದ ಕಾರಣ ಇದೀಗ ಮತ್ತೊಮ್ಮೆ ಅರ್ಜಿ ಸಲ್ಲಿಸುವವರಿಗೆ ಮತ್ತು ತಿದ್ದುಪಡಿ ಮಾಡಿಸುವವರಿಗೆ ಸರ್ಕಾರ ಮತ್ತೊಂದು ಅವಕಾಶವನ್ನು ನೀಡಿದೆ.
ಹೊಸ ಬಿಪಿಎಲ್ ಕಾರ್ಡಿಗೆ ಅರ್ಜಿ ಸಲ್ಲಿಸುವ ದಿನಾಂಕ ಮತ್ತು ಅರ್ಹತೆ.!
ಈಗಾಗಲೇ ಪ್ರತಿಯೊಬ್ಬರಿಗೂ ತಿಳಿದಿರುವ ಹಾಗೆ ಬಿಪಿಎಲ್ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಸರ್ಕಾರದಿಂದ ಕೆಲವು ನಿಯಮಗಳನ್ನು ತಿಳಿಸಿದೆ ಅದನ್ನು ಒಳಗೊಂಡವರು ಬಿಪಿಎಲ್ ಕಾರ್ಡ್ ಗೆ ಅರ್ಜಿ ಸಲ್ಲಿಸಬಹುದು ಮತ್ತು ಬಿಪಿಎಲ್ ಕಾರ್ಡ್ ದಾರರವಾಗಬಹುದು, ಸದ್ಯ ಈಗಾಗಲೇ ರಾಜ್ಯ ಸರ್ಕಾರದಿಂದ ಹೊಸ ಅರ್ಜಿ ಸಲ್ಲಿಕೆಗೆ ಅವಕಾಶವನ್ನು ಆನ್ಲೈನಲ್ಲಿ ನೀಡಲಾಗಿದ್ದು ಇದರೊಂದಿಗೆ ಬಿಪಿಎಲ್ ಕಾರ್ಡ್ ತಿದ್ದುಪಡಿಗೂ ಅವಕಾಶವನ್ನು ಕಲ್ಪಿಸಿದೆ ಮರಣ ಹೊಂದಿದವರ ಹೆಸರನ್ನು ತೆಗೆಸಲು ಮತ್ತು ಹೊಸ ಹೆಸರನ್ನು ಸೇರ್ಪಡೆ ಮಾಡಿಸಲು ಹಾಗೂ ಹೊಸದಾಗಿ ಬಿಪಿಎಲ್ ಕಾಡಿಗೆ ಅರ್ಜಿ ಸಲ್ಲಿಸಲು ಈ ವರ್ಷದ ಕೊನೆಯ ಅವಕಾಶ ಇದಾಗಿರುತ್ತದೆ.
ಇನ್ನು ಈಗಾಗಲೇ ರಾಜ್ಯದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಹೊಸ ಬಿಪಿಎಲ್ ಕಾರ್ಡ್ ಅರ್ಜಿ ಸಲ್ಲಿಕೆ ಮತ್ತು ತಿದ್ದುಪಡಿಗೆ ದಿನಾಂಕವನ್ನು ತಿಳಿಸಿದ್ದು ಇದೇ ಜುಲೈ 3 ನೇ ದಿನಾಂಕದಿಂದ ಹೊಸ ಬಿಪಿಎಲ್ ಕಾರ್ಡ್ ಅರ್ಜಿ ಸಲ್ಲಿಕೆ ಮತ್ತು ತಿದ್ದುಪಡಿಗೆ ಅವಕಾಶವನ್ನು ನೀಡಲಾಗಿದೆ ಇನ್ನು ಜುಲೈ 30 ನೇ ದಿನಾಂಕದವರೆಗೂ ಅರ್ಜಿ ಸಲ್ಲಿಸಲು ಅವಕಾಶವನ್ನು ನೀಡಬಹುದೆಂದು ತಿಳಿಸಲಾಗಿದೆ.
ಹೊಸ ಬಿಪಿಎಲ್ ಕಾರ್ಡ್ ಅರ್ಜಿ ಸಲ್ಲಿಸುವುದು ಹೇಗೆ.
ಕರ್ನಾಟಕ ರಾಜ್ಯ ಸರ್ಕಾರವು ರಾಜ್ಯದ ಜನರಿಗೆ ಹೊಸ ಬಿಪಿಎಲ್ ಕಾರ್ಡಿಗೆ ಅರ್ಜಿ ಸಲ್ಲಿಸಲು ಮತ್ತು ತಿದ್ದುಪಡಿಗೆ ಈಗಾಗಲೇ ಅವಕಾಶವನ್ನು ನೀಡಿದೆ ಇನ್ನು ಹೊಸ ಬಿಪಿಎಲ್ ಕಾರ್ಡಿಗೆ ಅರ್ಜಿ ಸಲ್ಲಿಸುವವರು ಆಹಾರ ಇಲಾಖೆಯ ಅಧಿಕೃತ ವೆಬ್ಸೈಟ್ https://ahara.kar.nic.in/Home/ ನಲ್ಲಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ ಹಾಗೂ ಅರ್ಜಿ ಸಲ್ಲಿಸಲು ಹತ್ತಿರದ ಗ್ರಾಮವನ್ನು ಕೇಂದ್ರ ಅಥವಾ ಬಾಪೂಜಿ ಕೇಂದ್ರ, ಬೆಂಗಳೂರು ಒನ್ ಕೇಂದ್ರಕ್ಕೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು ಎಂದು ತಿಳಿಸಲಾಗಿದೆ ಧನ್ಯವಾದಗಳು..