ರಾಜ್ಯದಲ್ಲಿ ಅನ್ನಭಾಗ್ಯ ಯೋಜನೆಗೆ ಬಂತು ಕುತ್ತು.! ಇನ್ನು ಮುಂದೆ ಅನ್ನ ಭಾಗ್ಯದ ಅಕ್ಕಿ ಸಿಗುವುದೇ ಡೌಟ್.?

ಎಲ್ಲರಿಗೂ ನಮಸ್ಕಾರ.  ಕರ್ನಾಟಕ ರಾಜ್ಯ ಸರ್ಕಾರವು ಅನ್ನಭಾಗ್ಯ ಯೋಜನೆಯಲ್ಲಿ ಈಗಾಗಲೇ ಬಹಳಷ್ಟು ಬದಲಾವಣೆಗಳನ್ನು ತಂದಿದೆ.  ಹೌದು ಸರ್ಕಾರದ 5 ಗ್ಯಾರಂಟಿ ಯೋಜನೆಗಳಲ್ಲಿ ಅನ್ನಭಾಗ್ಯ ಯೋಜನೆಯು ಕೂಡ ಒಂದು ಈ ಯೋಜನೆಯಲ್ಲಿ ಸರ್ಕಾರವು ಕೆಲವು ಬದಲಾವಣೆಗಳನ್ನು  ತಂದಿದ್ದು ಪ್ರತಿ ಸದಸ್ಯರಿಗೆ 10 ಕೆಜಿ ಅಕ್ಕಿ ನೀಡುವುದಾಗಿ ಸರ್ಕಾರ ತಿಳಿಸಿತ್ತು ಆದರೆ  ಅಕ್ಕಿಯ ಕೊರತೆಯಿಂದ ರಾಜ್ಯದ ಬಿಪಿಎಲ್ ಕಾರ್ಡ್ ನ ಸದಸ್ಯರಿಗೆ 5 ಕೆಜಿ ಅಕ್ಕಿ ಹಾಗೂ ಐದು ಕೆಜಿಗೆ ಹಣವನ್ನು ನೀಡುವುದಾಗಿ ಸರ್ಕಾರ ಘೋಷಣೆ ಮಾಡಿತು ಇದರಂತೆ ಈಗಾಗಲೇ ಕಳೆದ ಮೂರು ತಿಂಗಳಿನಿಂದ ಪ್ರತಿ ಬಿಪಿಎಲ್ ಕಾರ್ಡ್ ಸದಸ್ಯನಿಗೆ 5 ಕೆಜಿ ಅಕ್ಕಿ ಹಾಗೂ 5 ಕೆಜಿಗೆ ಹಣವನ್ನು ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತಿದೆ.

ಸದ್ಯ ಇದೀಗ ಇದರಲ್ಲೂ ಕೂಡ ಮತ್ತೆ ಬಹುದೊಡ್ಡ ಬದಲಾವಣೆ ಆಗಲಿದೆ, ಈಗಾಗಲೇ ತಿಳಿಸಿದ ಹಾಗೆ ರಾಜ್ಯದಲ್ಲಿ ಅಕ್ಕಿಯ ಕೊರತೆಯಿಂದ ಎಲ್ಲರಿಗೂ ಕೂಡ ಅಕ್ಕಿ ವಿತರಣೆ ಮಾಡಲು ಸಾಧ್ಯವಾಗದ ಕಾರಣ ಅನ್ನಭಾಗ್ಯ ಯೋಜನೆಯ ಅಕ್ಕಿ ವಿತರಣೆಗೆ  ಕುತ್ತು ಬರಲಿದೆ ಎಂದು ಮಾಹಿತಿ ತಿಳಿದು ಬಂದಿದೆ ಇದರಿಂದ ರೇಷನ್ ಕಾರ್ಡ್ ದಾರರಿಗೆ ಮುಂದಿನ ದಿನಗಳಲ್ಲಿ ಅಕ್ಕಿ  ವಿತರಣೆಯಲ್ಲಿ ಸಮಸ್ಯೆ ಉಂಟಾಗಲಿದೆ.  ನೀವು ಕೂಡ ರೇಷನ್ ಕಾರ್ಡ್ದಾರರಾಗಿದ್ದಲ್ಲಿ ಈ ಮಾಹಿತಿ ಬಗ್ಗೆ ತಿಳಿಯಲು ಲೇಖನವನ್ನು ಪೂರ್ತಿಯಾಗಿ ಓದಿ. ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್  ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

WhatsApp Group Join Now
Telegram Group Join Now

ಇದನ್ನು ಓದಿ:  ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್.!  ನವೆಂಬರ್ 23ರಿಂದ ಮಧ್ಯಾಹ್ನದ ಊಟದಲ್ಲಿ ಬಾರಿ ಬದಲಾವಣೆ.?

ರಾಜ್ಯದಲ್ಲಿ ಅನ್ನಭಾಗ್ಯ ಯೋಜನೆಗೆ ಬಂತು ಕುತ್ತು.! 

ನಮ್ಮ ಕರ್ನಾಟಕ ರಾಜ್ಯದಲ್ಲಿ ಸುಮಾರು ಒಂದು ಕೋಟಿ ಇಪ್ಪತ್ತು ಲಕ್ಷಕ್ಕೂ ಹೆಚ್ಚು ಬಿಪಿಎಲ್ ಕಾರ್ಡುಗಳು ಇದ್ದು ಇದರಲ್ಲಿ ಸದ್ಯ ರಾಜ್ಯ ಸರ್ಕಾರವು ಅಕ್ರಮವಾಗಿ ಪಡೆದುಕೊಂಡಿರುವಂತಹ ರೇಷನ್ ಕಾರ್ಡ್ ಗಳನ್ನು ರದ್ದು ಮಾಡುವ ಪ್ರಕ್ರಿಯೆ ಆರಂಭಿಸಿದೆ ಈಗಾಗಲೇ ಕಳೆದ ಮೂರು ತಿಂಗಳಿನಿಂದ ಸರ್ಕಾರವು ಮಾಹಿತಿ ತಪ್ಪಾಗಿರುವ ಮತ್ತು ಅಕ್ರಮವಾಗಿ ರೇಷನ್ ಕಾರ್ಡ್ ಪಡೆದುಕೊಂಡಿರುವಂತಹ ಮತ್ತು ಸರ್ಕಾರಿ ಉದ್ಯೋಗದಲ್ಲಿದ್ದು ರೇಷನ್ ಕಾರ್ಡ್ ಹೊಂದಿರುವಂತಹ ಹಲವು ಬಿಪಿಎಲ್ ರೇಷನ್ ಕಾರ್ಡ್ ಗಳನ್ನು ರದ್ದು ಮಾಡಿದೆ ಇದರಲ್ಲಿ ಸುಮಾರು 8 ರಿಂದ 10 ಲಕ್ಷದಷ್ಟು ಬಿಪಿಎಲ್ ಕಾರ್ಡ್ಗಳನ್ನು ಸದ್ಯ ಸರ್ಕಾರದಿಂದ ರದ್ದು ಮಾಡಲಾಗಿದ್ದು ಇನ್ನು ಉಳಿದ ರೇಷನ್ ಕಾರ್ಡ್ದಾರರಿಗೂ ಕೂಡ ಸರ್ಕಾರ ಎಚ್ಚರಿಕೆ ನೀಡಿದ್ದು ಎಲ್ಲಾ ಬಿಪಿಎಲ್ ಕಾರ್ಡ್ ಗಳಿಗೂ ಕಡ್ಡಾಯವಾಗಿ e-kyc  ಮಾಡಿಸಿರಬೇಕು ಅಂದರೆ ಆಧಾರ್ ಕಾರ್ಡ್ ಕಡ್ಡಾಯವಾಗಿ ಲಿಂಕ್ ಆಗಿರಬೇಕು ಎಂದು ಸೂಚನೆ ನೀಡಿದೆ.

ಅಲ್ಲದೆ ಇದೆಲ್ಲದರ ಬಳಿಕ ಸರ್ಕಾರದಿಂದ ಹೊಸ ರೇಷನ್ ಕಾರ್ಡಿಗೆ ಅರ್ಜಿ ಸಲ್ಲಿಸುವವರಿಗೆ ಮತ್ತು ತಿದ್ದುಪಡಿ ಮಾಡಿಸುವವರಿಗೆ ಈಗಾಗಲೇ ಮೂರು ಬಾರಿ ಕಾಲಾವಕಾಶವನ್ನು ನೀಡಿದ್ದು ಇದೀಗ ಸದ್ಯ ಅಕ್ಟೋಬರ್ ತಿಂಗಳಿನಲ್ಲಿ ಮೂರು ಲಕ್ಷಕ್ಕೂ ಹೆಚ್ಚು ರೇಷನ್ ಕಾರ್ಡ್ ಗಳನ್ನು ರದ್ದು ಮಾಡಿದೆ.  ಆದರೆ ಎಲ್ಲರಿಗೂ ಇರುವಂತಹ ದೊಡ್ಡ ಸಮಸ್ಯೆ ಏನೆಂದರೆ, ಸರ್ಕಾರದಿಂದ ಈಗಾಗಲೇ ರೇಷನ್ ಕಾರ್ಡ್ದಾರರಿಗೆ ನೀಡುತ್ತಿರುವ ಪಡಿತರವನ್ನು ಅಂದರೆ ಅಕ್ಕಿಯನ್ನು ಇನ್ನು ಮುಂದೆ ನೀಡುವುದಿಲ್ಲ ಎಂಬುದೇ ದೊಡ್ಡ ಸಮಸ್ಯೆಯಾಗಿದೆ. ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್  ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

ಇದನ್ನು ಓದಿ:  ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್.!  ನವೆಂಬರ್ 23ರಿಂದ ಮಧ್ಯಾಹ್ನದ ಊಟದಲ್ಲಿ ಬಾರಿ ಬದಲಾವಣೆ.?

ಇನ್ನು ಮುಂದೆ ಅನ್ನ ಭಾಗ್ಯದ ಅಕ್ಕಿ ಸಿಗುವುದೇ ಡೌಟ್.?

ರಾಜ್ಯ ಸರ್ಕಾರವು ರೇಷನ್ ಕಾರ್ಡ್ ದಾರಿಗೆ ಸದ್ಯ 5 ಕೆಜಿ ಅಕ್ಕಿ ಮತ್ತು 5 ಕೆಜಿ ಅಕ್ಕಿ ಬದಲಾಗಿ ಹಣವನ್ನು ಬ್ಯಾಂಕ್ ಖಾತೆಗೆ ಜಮಾ ಮಾಡುತ್ತಿದೆ ಇನ್ನು ಸರಿಯಾದ ಮಾಹಿತಿ ಇಲ್ಲದ ರೇಷನ್ ಕಾರ್ಡ್ದಾರರಿಗೆ ಮತ್ತು ಆಧಾರ್ ಕಾರ್ಡ್ ಲಿಂಕ್ ಆಗದ ರೇಷನ್ ಕಾರ್ಡ್ದಾರರಿಗೆ ಸೂಚನೆ ನೀಡಿ ಆಧಾರ್ ಕಾರ್ಡ್ ಲಿಂಕ್ ಮಾಡಿಸಿ ಸದ್ಯ 5 ಕೆಜಿಯ ಅಕ್ಕಿ ಹಣವನ್ನು ಬಿಡುಗಡೆ ಮಾಡುತ್ತಿದೆ ಆದರೆ ಈಗ ಬಂದ ಮಾಹಿತಿಯ ಪ್ರಕಾರ ರಾಜ್ಯದಲ್ಲಿ  ಅಕ್ಕಿಯ ಸಮಸ್ಯೆ ಹೆಚ್ಚಾಗಿದ್ದು ಮತ್ತು  ಬೇರೆ ರಾಜ್ಯಗಳಿಂದ ಆಮದು ಮಾಡಿಕೊಳ್ಳಲು ಕೂಡ ಸಾಧ್ಯವಾಗುತ್ತಿಲ್ಲ ಹಾಗೆ ಎಲ್ಲೆಡೆ ಅಕ್ಕಿ ಬೆಲೆ ಕೂಡ ಹೆಚ್ಚಳ ಆಗಿರುವುದರಿಂದ ದೇಶದಾದ್ಯಂತ ಅಕ್ಕಿ ಸಮಸ್ಯೆ ಉಂಟಾಗಿದೆ ಆದ್ದರಿಂದ ಸರ್ಕಾರವು ಈಗಾಗಲೇ ನೀಡುತ್ತಿರುವ 5 ಕೆಜಿ ಅಕ್ಕಿಯನ್ನು ಇನ್ನು ಮುಂದೆ ನೀಡುವುದು ಡೌಟ್ ಎಂದು ತಿಳಿದುಬಂದಿದೆ.

 ಹೌದು ಈಗಾಗಲೇ ರಾಜ್ಯ ಸರ್ಕಾರವು ರಾಜ್ಯದ ಕೆಲವು ನ್ಯಾಯಬೆಲೆ ಅಂಗಡಿಗಳನ್ನು ಬಂದ್ ಮಾಡಲು ಸೂಚನೆ ನೀಡಿದೆ ಅಲ್ಲದೆ ನ್ಯಾಯಬೆಲೆ ಅಂಗಡಿಗಳ ಲೈಸೆನ್ಸ್ ಕೂಡ ರದ್ದು ಮಾಡುತ್ತಿದ್ದು ಇದರಿಂದ ರೇಷನ್ ಕಾರ್ಡ್ ನಿಂದ ಅಕ್ಕಿ ಪಡೆಯುತ್ತಿದ್ದಂತಹ ಎಲ್ಲರಿಗೂ ಕೂಡ ಶಾಕ್ ನೀಡಿದಂತಾಗಿದೆ ಏಕೆಂದರೆ ನ್ಯಾಯಬೆಲೆ ಬಂದ್ ಆದರೆ ಅಕ್ಕಿ ಸಿಗುವುದು ಡೌಟ್ ಅಂತಹ ಎಲ್ಲಾ ರೇಷನ್ ಕಾರ್ಡ್ ದಾರಿಗೂ ಇನ್ಮುಂದೆ ಹತ್ತು ಕೆಜಿ 34 ರೂಪಾಯಿಯಂತೆ ಪ್ರತಿ ಕೆಜಿಗೆ ಹಣವನ್ನು ಬ್ಯಾಂಕು ಖಾತೆಗೆ ಜಮಾ ಮಾಡಲಾಗುತ್ತದೆ ಇದರಿಂದ ಇನ್ನು ಮುಂದೆ ರೇಷನ್ ಕಾರ್ಡ್ ಹೊಂದಿರುವವರಿಗೆ ಯಾವುದೇ ಅಕ್ಕಿ ಸರ್ಕಾರದಿಂದ ಸಿಗುವುದಿಲ್ಲ ಇನ್ನು ಈ ಬಗ್ಗೆ ಸರ್ಕಾರದಿಂದ ಅಧಿಕೃತ ಮಾಹಿತಿ ಬರಬೇಕಾಗಿದೆ ಎಲ್ಲರೂ ಕೂಡ ಇನ್ನು ಕೆಲವು ದಿನಗಳ ಕಾಲ ಕಾದು ನೋಡಬೇಕಾಗಿದೆ ಧನ್ಯವಾದಗಳು.. ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್  ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

ಇದನ್ನು ಓದಿ:  ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್.!  ನವೆಂಬರ್ 23ರಿಂದ ಮಧ್ಯಾಹ್ನದ ಊಟದಲ್ಲಿ ಬಾರಿ ಬದಲಾವಣೆ.?

Leave a Comment