ರೇಷನ್ ಕಾರ್ಡ್ ಬಳಕೆದಾರರಿಗೆ ಸರ್ಕಾರದಿಂದ ಮತ್ತೊಂದು ಸೂಚನೆ.! 2024ರಲ್ಲಿ ಕಾರ್ಡಿಗೆ ಹೊಸ ಸದಸ್ಯರ ಸೇರ್ಪಡೆಗೆ ಸರ್ಕಾರದಿಂದ ಅನುಮತಿ.?

ಎಲ್ಲರಿಗೂ ನಮಸ್ಕಾರ. ರೇಷನ್ ಕಾರ್ಡ್ ಹೊಂದಿರುವವರಿಗೆ ರಾಜ್ಯ ಸರ್ಕಾರ ಇದೀಗ ಹೊಸ ಆದೇಶ  ನೀಡಿದೆ, ಹೌದು ರೇಷನ್ ಕಾರ್ಡ್ ಒಂದು ಸರ್ಕಾರದಿಂದ ನೀಡಲಾಗಿರುವ ಅತ್ಯಗತ್ಯ ದಾಖಲೆಗಳಲ್ಲಿ ಒಂದಾಗಿದ್ದು ಇದನ್ನು ಬಡತನ ರೇಖೆಗಿಂತ ಕೆಳಗಿರುವ ಕುಟುಂಬದವರಿಗೆ ನೀಡಲಾಗುತ್ತಿದ್ದು ಇದರಿಂದ ಬಡ ಕುಟುಂಬಗಳಿಗೆ ಸರ್ಕಾರದಿಂದ ಸಿಗಬೇಕಾದ ಸೌಲಭ್ಯಗಳನ್ನು ಪಡೆಯಲು ಅನುಕೂಲ ಆಗಲಿದೆ. 

ಸದ್ಯ ಈಗಾಗಲೇ ಕರ್ನಾಟಕ ರಾಜ್ಯ ಸರ್ಕಾರದಿಂದ ಹೊಸ ರೇಷನ್ ಕಾರ್ಡ್ ವಿತರಣೆಗೆ ಅರ್ಜಿಯನ್ನು ಸ್ವೀಕರಿಸಲು ಹಲವು ಬಾರಿ ಮುಂದಾಗಿದ್ದು ಜೊತೆಗೆ ರೇಷನ್ ಕಾರ್ಡ್ ತಿದ್ದುಪಡಿ ಮತ್ತು ಕೆವೈಸಿ ಅಪ್ಡೇಟ್ ಕೂಡ ಮಾಡಲಾಗಿದ್ದು ಇದೀಗ ರೇಷನ್ ಕಾರ್ಡ್ ಗೆ ಹೊಸ ಸದಸ್ಯರ ಸೇರ್ಪಡೆಗೆ ಸರ್ಕಾರದಿಂದ ಅನುಮತಿ ನೀಡಲಾಗಿದೆ ನೀವು ಕೂಡ ರೇಷನ್ ಕಾರ್ಡ್ ಹೊಂದಿದ್ದು ನಿಮ್ಮ ರೇಷನ್ ಕಾರ್ಡ್ ನಲ್ಲಿ ಹೊಸ ಸದಸ್ಯರ ಸೇರ್ಪಡೆ ಅಥವಾ ಸದಸ್ಯರನ್ನು ತೆಗೆದು ಹಾಕುವುದಿದ್ದರೆ ಸರ್ಕಾರದ ಈ ಹೊಸ ಮಾಹಿತಿಯ ಬಗ್ಗೆ ತಿಳಿಯಲು ಲೇಖನವನ್ನು ಪೂರ್ತಿಯಾಗಿ ಓದಿ. ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್  ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

WhatsApp Group Join Now
Telegram Group Join Now

ರೇಷನ್ ಕಾರ್ಡ್ ಬಳಕೆದಾರರಿಗೆ ಸರ್ಕಾರದಿಂದ ಮತ್ತೊಂದು ಸೂಚನೆ.! 

ರೇಷನ್ ಕಾರ್ಡ್ ಬಳಕೆದಾರರಿಗೆ ಈಗಾಗಲೇ ಕರ್ನಾಟಕ ರಾಜ್ಯ ಸರ್ಕಾರದಿಂದ 3-4 ಬಾರಿ ಹೊಸ ರೇಷನ್ ಕಾರ್ಡಿಗೆ ಅರ್ಜಿ ಸಲ್ಲಿಸಲು ಅವಕಾಶವನ್ನು ಕಲ್ಪಿಸಲಾಗಿದೆ ಆದರೆ ಪ್ರತಿ ಬಾರಿಯೂ ಆಹಾರ ಇಲಾಖೆಯ ಅಧಿಕೃತ ವೆಬ್ಸೈಟ್ನಲ್ಲಿ ತಾಂತ್ರಿಕ ದೋಷದಿಂದ ಅರ್ಜಿ ಸಲ್ಲಿಕೆಗೆ ಸಮಸ್ಯೆ ಉಂಟಾಗಿದೆ ಹಾಗಾಗಿ ಕಳೆದ ಡಿಸೆಂಬರ್ ತಿಂಗಳಿನಲ್ಲಿ ನಿರ್ದಿಷ್ಟ ದಿನದಲ್ಲಿ ಮಾತ್ರ ಕೆಲವು  ಜಿಲ್ಲೆಗಳಲ್ಲಿ ಅರ್ಜಿ ಸಲ್ಲಿಕೆಗೆ ಅವಕಾಶವನ್ನು ಕಲ್ಪಿಸಿ ಅರ್ಜಿಯನ್ನು ಸ್ವೀಕರಿಸಲಾಗಿದ್ದು ಇದರ ಜೊತೆಗೆ ಹಳೆಯ ರೇಷನ್ ಕಾರ್ಡ್ ತಿದ್ದುಪಡಿ ಮತ್ತು ಕೆ ವೈ ಸಿ ಕಂಪ್ಲೀಟ್ ಮಾಡಲು ಕೂಡ ಅವಕಾಶವನ್ನು ನೀಡಲಾಗಿತ್ತು ಒಂದು ವೇಳೆ ಕೆವೈಸಿ ಕಂಪ್ಲೀಟ್ ಮಾಡದೆ ಇದ್ದರೆ ಅಂತಹ ರೇಷನ್ ಕಾರ್ಡ್ ರದ್ದು  ಮಾಡುವುದಾಗಿ ಎಚ್ಚರಿಕೆ ಕೂಡ ನೀಡಲಾಗಿತ್ತು.

. ಇದೀಗ ಮತ್ತೊಮ್ಮೆ ಕರ್ನಾಟಕ ರಾಜ್ಯ ಸರ್ಕಾರದಿಂದ ರೇಷನ್ ಕಾರ್ಡ್ ಹೊಂದಿರುವವರಿಗೆ ಹೊಸ ವರ್ಷದ ಅಂಗವಾಗಿ ಹೊಸ ಆದೇಶ ನೀಡಿದೆ ಹೌದು ರೇಷನ್ ಕಾರ್ಡ್ ಹೊಂದಿರುವವರಿಗೆ ಕಾರ್ಡಿಗೆ ಹೊಸ ಸದಸ್ಯರನ್ನು ಸೇರ್ಪಡೆ ಮಾಡಲು ಮತ್ತು ಸದಸ್ಯರನ್ನು ರೇಷನ್ ಕಾರ್ಡ್ ನಿಂದ ತೆಗೆದು ಹಾಕಲು ಅನುಮತಿ ನೀಡಿದೆ. ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್  ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

2024ರಲ್ಲಿ ರೇಷನ್ ಕಾರ್ಡಿಗೆ ಹೊಸ ಸದಸ್ಯರ ಸೇರ್ಪಡೆಗೆ ಸರ್ಕಾರದಿಂದ ಅನುಮತಿ.?

ಹೌದು ರಾಜ್ಯ ಸರ್ಕಾರದಿಂದ ರೇಷನ್ ಕಾರ್ಡ್ ಹೊಂದಿರುವವರಿಗೆ ಹೊಸ ಸದಸ್ಯರ ಸೇರ್ಪಡೆಗೆ ಅವಕಾಶ ನೀಡಲಾಗಿದೆ ಅಂದರೆ ರೇಷನ್ ಕಾರ್ಡಿಗೆ ಕುಟುಂಬದಲ್ಲಿ ಮದುವೆಯಾಗಿ ಹೊಸ ಸದಸ್ಯರು ಬಂದಿದ್ದರೆ ಅಥವಾ  ಕುಟುಂಬದಲ್ಲಿ ಯಾವುದಾದರೂ ಮಗು ಜನಿಸಿದ್ದರೆ ಅಂತಹ ಹೆಸರುಗಳನ್ನು ರೇಷನ್ ಕಾರ್ಡಿಗೆ ಸೇರಿಸಲು ಸರ್ಕಾರ ಅವಕಾಶ ನೀಡಿದೆ ಈಗಾಗಲೇ ಮರಣ ಹೊಂದಿದವರ ಹೆಸರನ್ನು ರೇಷನ್ ಕಾರ್ಡ್ ನಿಂದ ತೆಗೆದುಹಾಕಲು ಅವಕಾಶವನ್ನು ನೀಡಲಾಗಿತ್ತು ಹಾಗೆ ರೇಷನ್ ಕಾರ್ಡ್ ನಲ್ಲಿ ಹೆಸರುಗಳ ತಿದ್ದುಪಡಿ ಮತ್ತು ಸದಸ್ಯರ ತಿದ್ದುಪಡಿಗೂ ಕೂಡ ಅವಕಾಶವನ್ನು ನೀಡಲಾಗಿತ್ತು ಆದರೆ ಇದೀಗ ಹೊಸ ಸದಸ್ಯರ ಸೇರ್ಪಡೆಗೆ ಸರ್ಕಾರ ಅನುಮತಿಯನ್ನು ನೀಡಿದ್ದು ಹೊಸದಾಗಿ ಮದುವೆಯಾಗಿರುವವರು ಮತ್ತು ಮಗುವನ್ನು ಹೊಂದಿರುವವರು ರೇಷನ್ ಕಾರ್ಡ್ ಗೆ ಹೆಸರನ್ನು ಸೇರಿಸಬಹುದು. ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್  ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

ರೇಷನ್ ಕಾರ್ಡ್ ಗೆ ಹೊಸ ಸದಸ್ಯರ ಸೇರ್ಪಡೆಯ ವಿಧಾನ.

ಹೊಸದಾಗಿ ಮದುವೆ ಆಗಿದ್ದು ರೇಷನ್ ಕಾರ್ಡಿಗೆ ಹೆಂಡತಿ ಹೆಸರನ್ನು ಸೇರಿಸಬೇಕಾದಲ್ಲಿ ಮೊದಲು ಆ ಹುಡುಗಿಯ ಆಧಾರ್ ಕಾರ್ಡ್ ತಿದ್ದುಪಡಿ ಮಾಡಿಸಬೇಕಾಗುತ್ತದೆ ಅದರಲ್ಲಿ ಹುಡುಗಿಯ ತಂದೆ ಹೆಸರಿನ ಬದಲಾಗಿ ಗಂಡನ ಹೆಸರು ಮತ್ತು ಗಂಡನ ವಿಳಾಸವನ್ನು ಬದಲಿಸಬೇಕಾಗುತ್ತದೆ ನಂತರ ಆಹಾರ ಇಲಾಖೆಯ ಅಧಿಕೃತ ವೆಬ್ಸೈಟ್ ಮೂಲಕ ರೇಷನ್ ಕಾರ್ಡಿಗೆ ಹೊಸ ಸೇರ್ಪಡೆಗೆ ಅರ್ಜಿಯನ್ನು ಹತ್ತಿರದ ಸೈಬರ್ ಸೆಂಟರ್ನಲ್ಲಿ ಅಥವಾ ಆಹಾರ ಇಲಾಖೆಗೆ ಭೇಟಿ ನೀಡಿ ಅರ್ಜಿ ಸಲ್ಲಿಸಿ.

ಇನ್ನು ಮಗುವಿನ ಹೆಸರನ್ನು ರೇಷನ್ ಕಾರ್ಡಿಗೆ ಸೇರ್ಪಡೆ ಮಾಡಿಸಲು ಮಗುವಿನ ಜನನ ಪ್ರಮಾಣ ಪತ್ರ ಅಥವಾ ದತ್ತು ಪಡೆದಿದ್ದಾರೆ ಅದರ ಪ್ರಮಾಣ  ಪತ್ರದೊಂದಿಗೆ ಬದಲು ಆಧಾರ್ ಕಾರ್ಡ್ ಮಾಡಿಸಬೇಕಾಗುತ್ತದೆ ನಂತರ ಆಧಾರ್ ಕಾರ್ಡ್ ನೊಂದಿಗೆ ಸೈಬರ್ ಸೆಂಟರ್ನಲ್ಲಿ ಅಥವಾ ನಿಮ್ಮ ಹತ್ತಿರದ ಆಹಾರ ಇಲಾಖೆಗೆ ಭೇಟಿ ನೀಡಿ ರೇಷನ್ ಕಾರ್ಡ್ ನಲ್ಲಿ ಹೊಸ ಹೆಸರಿನ ಸೇರ್ಪಡೆಗೆ ಅರ್ಜಿಯನ್ನು ಸಲ್ಲಿಸಬಹುದಾಗಿರುತ್ತದೆ ಧನ್ಯವಾದಗಳು.. ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್  ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

Leave a Comment