BPL ಕಾರ್ಡ್ ಹೊಂದಿರುವವರಿಗೆ ಹೊಸ 6 ಟಫ್ ರೂಲ್ಸ್ ಜಾರಿ.  ಬರೋಬ್ಬರಿ 4.59 ಲಕ್ಷ ರೇಷನ್ ಕಾರ್ಡ್ ಬಂದ್.! ನಿಮ್ಮ BPL ಕಾರ್ಡ್ ಬಂದ್ ಆಗಿದೆಯಾ ಈಗಲೇ ಚೆಕ್ ಮಾಡಿ.?

ಎಲ್ಲರಿಗೂ ನಮಸ್ಕಾರ,  ಹೌದು ಬಿಪಿಎಲ್ ರೇಷನ್ ಕಾರ್ಡ್ ಹೊಂದಿರುವವರಿಗೆ ಹೊಸ ರೂಲ್ಸ್ ಒಂದನ್ನು ರಾಜ್ಯ ಸರ್ಕಾರದಿಂದ ಮಾಡಲಾಗಿದೆ ಸದ್ಯ ಗೃಹತ್ ಜ್ಯೋತಿ ಯೋಜನೆ ಮತ್ತು ಗೃಹಲಕ್ಷ್ಮಿ ಯೋಜನೆ ಈ ರೀತಿ ಸರ್ಕಾರದ ಯೋಜನೆಯನ್ನು ಪಡೆದುಕೊಳ್ಳುವುದರಲ್ಲಿ ನಿರತರಾಗಿರುವ ನಮ್ಮ  ಜನರಿಗೆ ಇದೀಗ ರಾಜ್ಯ ಸರ್ಕಾರ ಮತ್ತೊಂದು ಬಿಗ್ ಶಾಕಿಂಗ್ ಸುದ್ದಿ ಒಂದನ್ನು ನೀಡಿದೆ. ಅದೇನೆಂದರೆ ರಾಜ್ಯದಲ್ಲಿ ಇವರಿಗೆ ಸುಮಾರು 1.27 ಕೋಟಿ ಬಿಪಿಎಲ್ ಕಾರ್ಡ್ ಹೊಂದಿರುವವರು ಇದ್ದು ಇದರಲ್ಲಿ ಬಹಳಷ್ಟು ಜನರು ಎಲ್ಲಾ ಸೌಕರ್ಯಗಳನ್ನು ಹೊಂದಿದ್ದು ಬಡತನ ರೇಖೆಗಿಂತ ಕಡಿಮೆ ಇದ್ದು ಬಿಪಿಎಲ್ ಕಾರ್ಡ್ ಬಳಸಿ ಸರ್ಕಾರದ ಯೋಜನೆಗಳನ್ನು ಮೋಸದಿಂದ ಪಡೆಯುತ್ತಿದ್ದಾರೆ ಆದ್ದರಿಂದ ರಾಜ್ಯ ಸರ್ಕಾರ ಇವನ್ನೆಲ್ಲ ತಡೆಗಟ್ಟುವ ಸಲುವಾಗಿ ಇದೀಗ ಮತ್ತಷ್ಟು ಕೆಲವು ಕಠಿಣ ನಿಯಮಗಳನ್ನು ಜಾರಿಗೆ ತಂದಿದೆ. 

WhatsApp Group Join Now
Telegram Group Join Now

 ಅಲ್ಲದೆ ಈಗಾಗಲೇ ತುಂಬಾ ಜನರ ರೇಷನ್ ಕಾರ್ಡ್ ರದ್ದಾಗಿವೆ ಹಾಗೂ ಇನ್ನೂ ಕೆಲವು  ರೇಷನ್ ಕಾರ್ಡ್ ಗಳು ರದ್ದಾಗುವ ಸಾಧ್ಯತೆ ಇವೆ.  ಹಾಗಾದರೆ ಯಾವೆಲ್ಲ ರೇಷನ್ ಕಾರ್ಡ್ಗಳನ್ನು ರದ್ದುಗೊಳಿಸಲಾಗುತ್ತಿದೆ ಎಂದು ಈ ಲೇಖನದಲ್ಲಿ ನಿಮಗೆ ತಿಳಿಸಿಕೊಡುತ್ತೇವೆ ಲೇಖನವನ್ನು ಪೂರ್ತಿಯಾಗಿ ಓದಿ ಮಾಹಿತಿಯನ್ನು ಸಂಪೂರ್ಣವಾಗಿ ತಿಳಿದುಕೊಳ್ಳಿ. 

 ಬಿಪಿಎಲ್ ಕಾರ್ಡ್ ಹೊಂದಿರುವವರಿಗೆ ಬಿಗ್ ಶಾಕ್ ನೀಡಿದ ರಾಜ್ಯ ಸರ್ಕಾರ.

 ಹೌದು ರಾಜ್ಯದಲ್ಲಿ ಈಗಾಗಲೇ ಹೊಸ ಸರ್ಕಾರ ಚುನಾವಣೆ ಸಮಯದಲ್ಲಿ ನೀಡಿದ ಗ್ಯಾರಂಟಿಗಳನ್ನು ಈಡೇರಿಸಲು ಮುಂದಾಗಿದ್ದು ಈಗಾಗಲೇ ಅದರ ಪ್ರಕ್ರಿಯೆಗಳು ರಾಜ್ಯ ಸರ್ಕಾರ 2022 ರಲ್ಲಿ ಸುಮಾರು 4 ಲಕ್ಷಕ್ಕಿಂತ ಹೆಚ್ಚು ಬಿಪಿಎಲ್ ಕಾರ್ಡ್ಗಳನ್ನು ರದ್ದು ಮಾಡಿದ್ದು ಇದೀಗ ಈ ವರ್ಷವೂ ಅನೇಕ ಅಕ್ರಮವಾಗಿ ತೆಗೆದುಕೊಂಡಿರುವ ಬಿಪಿಎಲ್ ಕಾರ್ಡ್ಗಳನ್ನು ರದ್ದುಗೊಳಿಸುವ ಸಲುವಾಗಿ ರಾಜ್ಯ ಸರ್ಕಾರ ಮತ್ತಷ್ಟು ಕೆಲವು ಕಠಿಣ ನಿಯಮಗಳನ್ನು ಜಾರಿ ಮಾಡಿದೆ ಇದರ ಪ್ರಕಾರ ಈಗಾಗಲೇ ಬಹಳಷ್ಟು ಬಿಪಿಎಲ್ ಕಾರ್ಡ್ ಗಳು ರದ್ದಾಗಿದ್ದು ಇನ್ನೂ ಕೆಲವು ಬಿಪಿಎಲ್ ಕಾರ್ಡ್ ಗಳು ಮುಂದಿನ ದಿನಗಳಲ್ಲಿ  ರದ್ದಾಗುವ ಸಾಧ್ಯತೆ ಇದೆ . 

ಸದ್ಯ ಇದೀಗ ರಾಜ್ಯದಲ್ಲಿ 1.2 ಕೋಟಿ ಹೆಚ್ಚು ಬಿಪಿಎಲ್ ಕಾರ್ಡ್ ಗಳಿದ್ದು ಇದರಲ್ಲಿ  4.36 ಕೋಟಿ ಜನರಿಗೆ ಅನುಕೂಲವಾಗಿದೆ ಆದರೆ ಬಿಪಿಎಲ್ ಕಾರ್ಡ್ಗೆ ಅರ್ಹರಲ್ಲದ ಫಲಾನುಭವಿಗಳು ಉಚಿತ ಆಹಾರ ಧಾನ್ಯ ಪಡೆಯುತ್ತಿದ್ದಾರೆ ಎಂಬ ದೂರಿನ ಅನ್ವಯ ಬಿಪಿಎಲ್ ಕಾರ್ಡಿಗೆ ಅರ್ಹರಲ್ಲದ ಫಲಾನುಭವಿಗಳ ಸೂಕ್ತ ದಾಖಲೆಗಳನ್ನು ಪಡೆದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಬರೋಬರಿ 4.59 ಲಕ್ಷ ಬಿಪಿಎಲ್ ಕಾರ್ಡ್ಗಳನ್ನು ರದ್ದು ಮಾಡಿದೆ ಅಲ್ಲದೆ ಇನ್ನು ಕೆಲವು ಡಿಪಿಎಲ್ ಕಾರ್ಡ್ಗಳನ್ನು ರದ್ದು  ಮಾಡುವ ನಿರೀಕ್ಷೆ ಇದೆ. 

ರಾಜ್ಯ ಸರ್ಕಾರದಿಂದ ಹೊಸದಾಗಿ ಮತ್ತೆ ಬಿಪಿಎಲ್ ಕಾರ್ಡ್ ರದ್ದು ಮಾಡಲು ಕಾರಣ ಏನು.

 ಸದ್ಯ ಈಗಾಗಲೇ ತಿಳಿಸಿರುವ ಹಾಗೆ ರಾಜ್ಯದಲ್ಲಿ ಅತಿ ಹೆಚ್ಚು ಜನರು ಬಿಪಿಎಲ್ ಕಾಡಿಗೆ ಅರ್ಹರಲ್ಲದ ಫಲಾನುಭವಿಗಳು ಸಹ ಉಚಿತ ಆಹಾರ ಧಾನ್ಯ ಪಡೆಯುತ್ತಿದ್ದಾರೆ ಇದರಿಂದ ಬಡತನದಲ್ಲಿರುವ ಜನರಿಗೆ ಅನಾನುಕೂಲಗಳು ಆಗುತ್ತಿದ್ದು ಇದನ್ನು ತಡೆಗಟ್ಟುವ ಸಲುವಾಗಿ ಈಗಾಗಲೇ 2022 ರಲ್ಲಿ ಅಂದರೆ ಕಳೆದ ವರ್ಷ ರಾಜ್ಯದಲ್ಲಿ ಬರೋಬರಿ ನಾಲ್ಕು ಲಕ್ಷ ರೇಷನ್ ಕಾರ್ಡ್ ಗಳನ್ನು ರದ್ದು ಮಾಡಿ ಸುಮಾರು 13 ಕೋಟಿ ವಸೂಲಿ ಮಾಡಿದ್ದಾರೆ ಅದರ ಪ್ರಕಾರವೇ ಈ ವರ್ಷವೂ ಸಹ ಚುರುಕಿದ ಕಾರ್ಯಾಚರಣೆ ಮೂಲಕ ಬಿಪಿಎಲ್ ಕಾಡಿಗೆ ಅರ್ಹರಲ್ಲದ ರೇಷನ್ ಕಾರ್ಡ್ ಗಳನ್ನು ರದ್ದು ಮಾಡುವ ಮೂಲಕ ಅರ್ಹ ಫಲಾನುಭವಿಗಳಿಗೆ ಹೆಚ್ಚಿನ ಸೌಲಭ್ಯಗಳ ಲಾಭ ಆಗುವಂತೆ ನೋಡಿಕೊಳ್ಳುವ ಭರವಸೆಯನ್ನು ಇಲಾಖೆ ಹೊಂದಿದೆ.

ರಾಜ್ಯ ಸರ್ಕಾರದಿಂದ BPL ಕಾರ್ಡ್ ಹೊಂದಿರುವವರಿಗೆ ಹೊಸ 6 ಟಫ್ ರೂಲ್ಸ್ ಜಾರಿ. 

ಇದೀಗ ರಾಜ್ಯ ಸರ್ಕಾರ ಅಕ್ರಮ ಬಿಪಿಎಲ್ ಕಾರ್ಡ್ಗಳ ತೆರವಿಗೆ ಮುಂದಾಗಿದ್ದು ಈಗಾಗಲೇ ಕೆಲವು ಬಿಪಿಎಲ್ ಕಾರ್ಡ್ಗಳನ್ನು ರದ್ದು ಮಾಡಿದ್ದೆ ಅಲ್ಲದೆ ಇನ್ನು ಕೆಲವು ದಿನಗಳಲ್ಲಿ ಮತ್ತಷ್ಟು ಡಿಪಿಎಲ್ ಕಾರ್ಡ್ಗಳನ್ನು ರದ್ದು  ಮಾಡುವುದಾಗಿ ತಿಳಿಸಿದ್ದು,  ಈ ಹೊಸ ನಿಯಮಗಳ ಅನ್ವಯ ಯಾವೆಲ್ಲ ಬಿಪಿಎಲ್ ಕಾರ್ಡ್ಗಳನ್ನು ತೆಗೆದು ಹಾಕಬಹುದು ಅಂತಹ ಎಲ್ಲಾ ಬಿಪಿಎಲ್ ಕಾರ್ಡ್ಗಳನ್ನು ಕೆಲವೇ ದಿನಗಳಲ್ಲಿ ರದ್ದು ಮಾಡುವುದಾಗಿ ಸರ್ಕಾರದಿಂದ ತಿಳಿಸಲಾಗಿದೆ. 

  1.  1.2  ಲಕ್ಷ ಅಥವಾ ಅದಕ್ಕಿಂತ ಕಡಿಮೆ ವಾರ್ಷಿಕ ಆದಾಯ ಇರುವವರಿಗೆ ಮಾತ್ರ ಬಿಪಿಎಲ್ ಕಾರ್ಡ್ ನೀಡಲಾಗುತ್ತದೆ.
  2.  ಬಿಪಿಎಲ್ ಕಾರ್ಡ್ ಪಡೆಯುವ ರೈತ ನ ಹತ್ತಿರ ಮೂರು ಎಕ್ಟರ್ ಗಿಂತ ಹೆಚ್ಚು ಭೂಮಿ ಇರಬಾರದು.
  3.  ವೈಯಕ್ತಿಕವಾಗಿ ವೈಟ್ ಬೋರ್ಡ್ ಸ್ವಂತ ಕಾರು ಇರುವವರಿಗೆ ಬಿಪಿಎಲ್ ಕಾರ್ಡ್ ಸಿಗುವುದಿಲ್ಲ.
  4.  ಸಿಟಿಯಲ್ಲಿ ವಾಸ ಮಾಡುವವರು ಸಾವಿರ ಅಡಿಗಿಂತ ದೊಡ್ಡ ಮನೆ ಹೊಂದಿದ್ದರೆ ರೇಷನ್ ಕಾರ್ಡ್ ಸಿಗುವುದಿಲ್ಲ.
  5.  ಸರ್ಕಾರಿ ಕೆಲಸ ಮಾಡುತ್ತಿರುವವರಿಗೆ ರೇಷನ್ ಕಾರ್ಡ್ ಸೌಲಭ್ಯ ಸಿಗುವುದಿಲ್ಲ.
  6.  ತೆರಿಗೆ ಪಾವತಿ ಮಾಡುತ್ತಿರುವವರಿಗೆ ಬಿಪಿಎಲ್ ರೇಷನ್ ಕಾರ್ಡ್ ಸಿಗುವುದಿಲ್ಲ.

ಬರೋಬರಿ 4.59 ಲಕ್ಷ ರೇಷನ್ ಕಾರ್ಡ್ ಗಳು ರದ್ದು. ನಿಮ್ಮ ರೇಷನ್ ಕಾರ್ಡ್ ಸ್ಟೇಟಸ್ ಈಗಲೇ ಚೆಕ್ ಮಾಡಿ.!

ರದ್ದಾಗಿರುವ ರೇಷನ್ ಕಾರ್ಡ್ ಪಟ್ಟಿಯನ್ನು ನೋಡುವ ವಿಧಾನ.? 

ಹಂತ ಒಂದು:  ಮೊದಲನೆಯದಾಗಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಜಾಲತಾಣಕ್ಕೆ ತೆರಳಲು ಇಲ್ಲಿ ಕ್ಲಿಕ್ ಮಾಡಿ.  ನಂತರ ಮುಖಪುಟದ ಎಡಭಾಗದಲ್ಲಿರುವ ಮೂರು ಗೆರೆಗಳ ಮೇಲೆ ಕ್ಲಿಕ್ ಮಾಡಿ ಅದರಲ್ಲಿ ಈ ಸ್ಟೇಟಸ್ ಎಂಬ ಆಯ್ಕೆಯನ್ನು ಒತ್ತಿ ನಂತರ ಡಿ ಬಿ ಟಿ ಸ್ಟೇಟಸ್ ಮೇಲೆ ಕ್ಲಿಕ್ ಮಾಡಿ.  

https://ahara.kar.nic.in/Home/EServices

 ಹಂತ ಎರಡು:  ನಂತರ ನಿಮ್ಮ ಜಿಲ್ಲೆಯ ಮೇಲಿನ ಲಿಂಕ್ ಕ್ಲಿಕ್ ಮಾಡಿ.

 

 ಹಂತ ಮೂರು: ನಂತರ ಕೆಳಗಿನ ಭಾಗದಲ್ಲಿರುವ ಡಿ ಬಿ ಟಿ  ಸ್ಟೇಟಸ್ ಮೇಲೆ ಕ್ಲಿಕ್ ಮಾಡಿ.

 ಹಂತ ನಾಲ್ಕು:  ಮುಂದುವರೆದು ನಿಮ್ಮ ರೇಷನ್ ಕಾರ್ಡ್ ನಂಬರ್ ನಮೂದಿಸಿ ನಂತರ ಗೋ ಎಂಬ ಆಯ್ಕೆಯ ಮೇಲೆ ಕ್ಲಿಕ್  ಮಾಡಿದರೆ ಜಮಾ ಆಗಿದೆ ಎಂಬುದರ ಮಾಹಿತಿಯನ್ನು ನೀವು ನೋಡಬಹುದು

Leave a Comment