Govt Loan scheme: ರಾಜ್ಯದ ಸ್ವಸಹಾಯ ಸಂಘದ ಮಹಿಳೆಯರಿಗೆ 25,000 ಸಾಲ ಮತ್ತು ಸಬ್ಸಿಡಿ ಸೌಲಭ್ಯ.!

ಎಲ್ಲರಿಗೂ ನಮಸ್ಕಾರ. ಸರ್ಕಾರ್ದಿಂದ ಮಹಿಳೆಯರಿಗೆ 2023 24 ನೇ ಸಾಲಿನ ಸಾಲ ಮತ್ತು ಸಬ್ಸಿಡಿ  ಸೌಲಭ್ಯಕ್ಕೆ ಅರ್ಜಿಯನ್ನು ಸ್ವೀಕರಿಸಲು ಮುಂದಾಗಿದೆ,  ಹೌದು ಕರ್ನಾಟಕ ರಾಜ್ಯ ಸರ್ಕಾರವು ಆರ್ಥಿಕ ಅಭಿವೃದ್ಧಿಗಾಗಿ ಕಲ್ಯಾಣ ಇಲಾಖೆಯಿಂದ 2023 24 ನೇ ಸಾಲಿನ ಮೆಟ್ರೋ ಕ್ರೆಡಿಟ್ ಪ್ರಯಾಣ ಯೋಜನೆಯ ಅಡಿ ಮಹಿಳೆಯರಿಗೆ ಸಾಲ ಸೌಲಭ್ಯ ಮತ್ತು ಸಬ್ಸಿಡಿ ವಿತರಣೆಗೆ ಅರ್ಜಿ ಆಹ್ವಾನಿಸಲಾಗಿದೆ,  ಈ ಯೋಜನೆಗೆ ಯಾರೆಲ್ಲ ಅರ್ಜಿ ಸಲ್ಲಿಸಬಹುದು ಸರ್ಕಾರದಿಂದ ಯೋಜನೆ ಅಡಿ ಎಷ್ಟು ಸಾಲ ಸೌಲಭ್ಯ ಸಿಗಲಿದೆ ಇದರಲ್ಲಿ ಎಷ್ಟು ಸಬ್ಸಿಡಿ ಹಣ ಸಿಗಲಿದೆ ಅರ್ಜಿಯನ್ನು ಎಲ್ಲಿ ಸಲ್ಲಿಸುವುದು ಹೇಗೆ ಸಲ್ಲಿಸುವುದು ಎಂಬ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿಯಲು ಲೇಖನವನ್ನು ಪೂರ್ತಿಯಾಗಿ ಓದಿ . ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್  ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

WhatsApp Group Join Now
Telegram Group Join Now

ರಾಜ್ಯದ ಮಹಿಳೆಯರಿಗೆ 25,000 ಸಾಲ ಮತ್ತು ಸಬ್ಸಿಡಿ ಸೌಲಭ್ಯ.! 

ಮಹಿಳೆಯರಿಗೆ ( ಮೆಟ್ರೋ ಕ್ರೆಡಿಟ್)  ಪ್ರೇರಣಾ ಯೋಜನೆಯಡಿ 25,000 ಸಾಲ ಸೌಲಭ್ಯ ಮತ್ತು ಸಬ್ಸಿಡಿ ಸೌಲಭ್ಯವನ್ನು ನೀಡಲಾಗುತ್ತಿದೆ,  ಮಹಿಳೆಯರು ರಚಿಸಿಕೊಂಡಿರುವ ನೋಂದಾಯಿತ ಸ್ವಸಹಾಯ ಸಂಘದ ಸದಸ್ಯರುಗಳ ಉತ್ತಮ ಆದಾಯವನ್ನು ಗಳಿಸಿ ಆರ್ಥಿಕ ಸ್ವಾಬಲಂಬನೆಯನ್ನು ಒಂದು ಮತ್ತು ಸಬಲೀಕರಣ ಉದ್ದೇಶಕ್ಕಾಗಿ ಪ್ರೇರಣಾ ಯೋಜನೆಯನ್ನು ಪ್ರಾರಂಭ ಮಾಡಲಾಗಿದೆ.

 ಇದರ ವಿಶೇಷತೆ ಹಾಗೂ ಪ್ರಯೋಜನಗಳು ಏನೆಂದರೆ ಕನಿಷ್ಠ 10 ಮಹಿಳಾ ಸದಸ್ಯರನ್ನು ಹೊಂದಿರುವ ನೋಂದಾಯಿತ ಸ್ವಸಹಾಯ ಸಂಘಕ್ಕೆ ಪ್ರತಿ ಸದಸ್ಯರಿಗೆ 15000 ಸಾಲ ಮತ್ತು 10,000 ಸಹಾಯಧನ ಅಂದರೆ ಸಬ್ಸಿಡಿ ಒಟ್ಟು 25,000ಗಳಂತೆ ಒಂದು ಸಂಘಕ್ಕೆ ಗರಿಷ್ಠ 2.5 ಲಕ್ಷ ಅನುದಾನವನ್ನು ನಿಗಮದಿಂದ ನೀಡಲಾಗುತ್ತದೆ ಹಾಗೂ ಪಡೆದುಕೊಂಡ ಈ ಸಲಕ್ಕೆ ವಾರ್ಷಿಕವಾಗಿ ಶೇಕಡ ನಾಲ್ಕರಷ್ಟು ಬಡ್ಡಿ ದರದಲ್ಲಿ ಸಾಲವನ್ನು ನೀಡಲಾಗುತ್ತದೆ ಮತ್ತು 30 ಸಾಮಾನ್ಯ ವಾಗಿ ಕಂತುಗಳಲ್ಲಿ ಸಾಲವನ್ನು ನಿಗಮಕ್ಕೆ ಮರುಪಾವತಿ ಮಾಡಬೇಕಾಗುತ್ತದೆ ಇದು ಪ್ರೇರಣಾ ಯೋಜನೆಯ ವಿಶೇಷತೆಗಳಾಗಿದ್ದು ಇದರಿಂದ 25000 ಸಾಲ ಮತ್ತು ಸಬ್ಸಿಡಿ ಪಡೆಯಲು ಮಹಿಳೆಯರು ಅರ್ಜಿ ಸಲ್ಲಿಸಬಹುದಾಗಿದೆ.ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್  ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

 ಪ್ರೇರಣಾ ಯೋಜನೆಗೆ ಅರ್ಜಿ ಸಲ್ಲಿಸಲು ಅರ್ಹತೆ ಮತ್ತು ದಾಖಲೆಗಳು.?

 ಪ್ರೇರಣಾ ಯೋಜನೆಗೆ ಅರ್ಜಿ ಸಲ್ಲಿಸಲು ಈಗಾಗಲೇ ತಿಳಿಸಿದ ಹಾಗೆ 10 ಮಹಿಳಾ ಸದಸ್ಯರಿರುವ ನೋಂದಾಯಿತ ಸ್ವಸಹಾಯ  ಸಂಘ ಅರ್ಜಿ ಸಲ್ಲಿಸಬಹುದಾಗಿರುತ್ತದೆ ಆದರೆ ಪರಿಶಿಷ್ಟ ಪಂಗಡದ ಮಹಿಳಾ ಸದಸ್ಯರಿಗೆ ಮಾತ್ರ ಈ ಯೋಜನೆಯ ಹಣ ಸಿಗಲಿದೆ ಈ ಯೋಜನೆಯ SC & ST  ಮಹಿಳಾ ಸದಸ್ಯರ  ಹಾರ್ದಿಕ ಸ್ವಾವಲಂಬನೆ ಮತ್ತು ಸಬಲೀಕರಣದ ಉದ್ದೇಶಕ್ಕಾಗಿ ನೀಡಲಾಗುತ್ತದೆ ಇದರಲ್ಲಿ ಕೇವಲ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಭ್ಯರ್ಥಿಗಳು ಮಾತ್ರ ಈ ಯೋಜನೆಯ ಸಾಲ ಮತ್ತು ಸಬ್ಸಿಡಿ ಹಣವನ್ನು ಪಡೆದುಕೊಳ್ಳಬಹುದು.

 ಇನ್ನು ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳೆಂದರೆ.

  • ಅರ್ಜಿ ಸಲ್ಲಿಸುವವರ ಭಾವಚಿತ್ರ
  •  ಜಾತಿ ಪ್ರಮಾಣ ಪತ್ರ ಮತ್ತು ಆದಾಯ ಪ್ರಮಾಣ ಪತ್ರ
  •  ಆಧಾರ್ ಕಾರ್ಡ್ ಪ್ರತಿ
  •  ಮಹಿಳೆಯ ಬ್ಯಾಂಕ್ ಪಾಸ್ ಬುಕ್ ಅಂದರೆ ಖಾತೆಯ ವಿವರ
  •  ಹಾಗೂ ಸ್ವಸಹಾಯ ಸಂಘದ ನೋಂದಣಿ ಪ್ರಮಾಣ ಪತ್ರ

ಪ್ರೇರಣಾ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ ಮತ್ತು ಎಲ್ಲಿ.?

 ಪ್ರೇರಣ ಯೋಜನೆಗೆ ಎಸ್ಸಿ ಮತ್ತು ಎಸ್ ಟಿ ಮಹಿಳಾ  ಸ್ವಸಹಾಯ ಸಂಘದ ಸದಸ್ಯರು ಅರ್ಜಿ ಸಲ್ಲಿಸಬಹುದಾಗಿದ್ದು ಅರ್ಜಿ ಸಲ್ಲಿಸಲು,

  • ಡಾಕ್ಟರ್ ಬಿ ಆರ್ ಅಂಬೇಡ್ಕರ್ ಅಭಿವೃದ್ಧಿ ನಿಗಮ
  •  ಕರ್ನಾಟಕ  ಭೋವಿ ಅಭಿವೃದ್ಧಿ ನಿಗಮ
  •  ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮ
  •  ಕರ್ನಾಟಕ   ಆದಿಜಾಂಬವ ಅಭಿವೃದ್ಧಿ ನಿಗಮ
  •  ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಲೆಮಾರಿ ಅಭಿವೃದ್ಧಿ ನಿಗಮಗಳಲ್ಲಿ ಅರ್ಜಿ ಸಲ್ಲಿಸಬಹುದು
  •  ಹಾಗೂ ಅರ್ಹ ಅಭ್ಯರ್ಥಿಗಳು ಅಗತ್ಯ ದಾಖಲೆಗಳೊಂದಿಗೆ ಸೇವಾ ಸಿಂಧು ಪೋರ್ಟಲ್ ಮೂಲಕ ಆನ್ಲೈನ್ ನಲ್ಲಿ ಕೂಡ ಸಲ್ಲಿಸಬಹುದಾಗಿದೆ.

ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್  ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

Leave a Comment