ಎಲ್ಲರಿಗೂ ನಮಸ್ಕಾರ. ಕರ್ನಾಟಕ ರಾಜ್ಯ ಸರ್ಕಾರದಿಂದ ಅಕ್ರಮ ರೇಷನ್ ಕಾರ್ಡ್ ಗಳನ್ನು ರದ್ದು ಮಾಡುವ ಕಾರ್ಯಕ್ರಮವನ್ನು ನಡೆಸಲಾಗುತ್ತದೆ ಈಗಾಗಲೇ ರಾಜ್ಯ ಸರ್ಕಾರದಿಂದ ಹಲವು ರೇಷನ್ ಕಾರ್ಡ್ ಗಳನ್ನು ರದ್ದು ಮಾಡಲಾಗಿದ್ದು ಇದೀಗ 2023 ನೇ ಸಾಲಿನ ಕೊನೆಯ ರದ್ದು ಪ್ರಕ್ರಿಯೆಯಲ್ಲಿ ಮತ್ತಷ್ಟು ರೇಷನ್ ಕಾರ್ಡ್ ಗಳನ್ನು ಆಹಾರ ಇಲಾಖೆಯಿಂದ ತೆಗೆದು ಹಾಕಲಾಗಿದೆ. ಹೌದು ಸರ್ಕಾರದ ಯೋಜನೆಗಳು ರೇಷನ್ ಕಾರ್ಡ್ ಹೊಂದಿರುವವರಿಗಾಗಿ ತರಲಾಗುತ್ತಿದೆ ಏಕೆಂದರೆ ಎಲ್ಲ ಯೋಜನೆಗಳು ಕೂಡ ಬಡತನ ರೇಖೆಗಿಂತ ಕೆಳಗಿರುವವರಿಗೆ ಸಿಗಬೇಕೆಂಬ ದೃಷ್ಟಿಯಿಂದ ಆದರೆ ಅಕ್ರಮ ಬಿಪಿಎಲ್ ಕಾರ್ಡ್ಗಳನ್ನು ಪಡೆದು ಯೋಜನೆಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದು ಅಂತಹ ರೇಷನ್ ಕಾರ್ಡ್ ಗಳನ್ನು ತೆಗೆದು ಹಾಕಲು ಸರ್ಕಾರ ಮುಂದಾಗಿದ್ದು ಇದೀಗ ಕೊನೆಯ ರದ್ದು ಪ್ರಕ್ರಿಯೆಯಲ್ಲಿ ಮತ್ತಷ್ಟು ರೇಷನ್ ಕಾರ್ಡ್ ಗಳು ರದ್ದಾಗಿವೆ. ಇದರಲ್ಲಿ ನಿಮ್ಮ ರೇಷನ್ ಕಾರ್ಡ್ ಕೂಡ ಇದೆಯೇ ಎಂದು ಚೆಕ್ ಮಾಡಿಕೊಳ್ಳಲು ಲೇಖನವನ್ನು ಪೂರ್ತಿಯಾಗಿ ಓದಿ.
ರಾಜ್ಯದಲ್ಲಿ ಡಿಸೆಂಬರ್ ತಿಂಗಳಲ್ಲೂ ಹಲವು ರೇಷನ್ ಕಾರ್ಡ್ Cancelled.
ರೇಷನ್ ಕಾರ್ಡ್ ಒಂದು ಮುಖ್ಯ ದಾಖಲೆ ಆಗಿದ್ದು ಇದರಿಂದ ಬಡತನ ರೇಖೆಗಿಂತ ಕೆಳಗಿರುವ ಜನರಿಗೆ ಸರ್ಕಾರದಿಂದ ಕೆಲವು ಸೌಲಭ್ಯಗಳನ್ನು ನೀಡಲಾಗುತ್ತದೆ ಹಾಗೆ ರೇಷನ್ ಕಾರ್ಡ್ ನಿಂದ ಕೆಲವು ಹೊಸ ಯೋಜನೆಗಳನ್ನು ಬಡವರಿಗಾಗಿ ಜಾರಿ ಮಾಡಲಾಗುತ್ತದೆ ಆದರೆ ಆ ಯೋಜನೆಗಳನ್ನು ಮತ್ತು ಸೌಲಭ್ಯಗಳನ್ನು ಅಕ್ರಮ ರೇಷನ್ ಕಾರ್ಡ್ ಹೊಂದಿರುವವರು ದುರುಪಯೋಗ ಪಡಿಸಿಕೊಳ್ಳುತ್ತಿದ್ದು ಅದನ್ನು ತಡೆಯಲು ಸರ್ಕಾರ ಅಕ್ರಮ ಬಿಪಿಎಲ್ ರೇಷನ್ ಕಾರ್ಡ್ ರದ್ದು ಮಾಡಲು ನಿರ್ಧರಿಸಿದ್ದು ಈಗಾಗಲೇ ಅಧಿಕಾರಕ್ಕೆ ಬಂದ ಪ್ರತಿ ತಿಂಗಳು ಕೂಡ ಹಲವು ಬಿಪಿಎಲ್ ಕಾರ್ಡ್ಗಳನ್ನು ರದ್ದು ಮಾಡಿದ್ದು ರದ್ದು ಪ್ರಕ್ರಿಯೆಯಲ್ಲಿ ರೇಷನ್ ಕಾರ್ಡ್ ಉಳಿಸಿಕೊಳ್ಳಲು ಕೆವೈಸಿ ಅಪ್ಡೇಟ್ ಮಾಡಿಸಲು ಕೂಡ ಸರ್ಕಾರ ಅವಕಾಶ ನೀಡಿದೆ ಮತ್ತು ತಿದ್ದುಪಡಿ ಹಾಗೂ ಹೊಸ ರೇಷನ್ ಕಾರ್ಡ್ ಅರ್ಜಿಗೂ ಕೂಡ ಅವಕಾಶ ನೀಡಿರುತ್ತದೆ ಇದಲ್ಲದರ ನಡುವೆ 2023ರ ಕೊನೆಯ ಡಿಸೆಂಬರ್ ತಿಂಗಳಿನಲ್ಲಿ ಕೆವೈಸಿ ಆಗದೆ ಅಕ್ರಮ ರೇಷನ್ ಕಾರ್ಡ್ ಗಳು ಎಂದು ಆಹಾರ ಇಲಾಖೆಯ ಗಮನಕ್ಕೆ ಬಂದ ಹಲವು ರೇಷನ್ ಕಾರ್ಡ್ ಗಳನ್ನು ಇದೀಗ ಸರ್ಕಾರ ಮತ್ತೆ ರದ್ದು ಮಾಡಿದೆ ಅಲ್ಲದೆ ಅದರ ಲಿಸ್ಟ್ ಕೂಡ ಬಿಡುಗಡೆ ಮಾಡಿದೆ.
ರೇಷನ್ ಕಾರ್ಡ್ ಕ್ಯಾನ್ಸಲ್ ಆದರೆ ಗೃಹಲಕ್ಷ್ಮಿ ಹಣ ಸಿಗುವುದು ಡೌಟ್.
ಹೌದು ಗೃಹಲಕ್ಷ್ಮಿ ಯೋಜನೆಯ ಹಣ ಕೊಡ ರೇಷನ್ ಕಾರ್ಡ್ ಬಳಕೆದಾರರಿಗೆ ಸಿಗುವಂತಹ ಒಂದು ಯೋಜನೆಯಾಗಿದೆ ಹಾಗಾಗಿ ಸರ್ಕಾರದಿಂದ ರೇಷನ್ ಕಾರ್ಡ್ ರದ್ದು ಮಾಡಲಾಗಿರುವ ಮಹಿಳೆಯರಿಗೆ ಗೃಹಲಕ್ಷ್ಮಿ ಯೋಜನೆಯ ಹಣವನ್ನು ನೀಡುವುದು ಮಾಹಿತಿ ತಿಳಿದು ಬಂದಿದೆ ಈಗಾಗಲೇ ಗೃಹಲಕ್ಷ್ಮಿ ಯೋಜನೆಯ ಸಾಧನೆ ಐದಾರು ತಿಂಗಳು ಕಳೆದಿದೆ ಆದರೆ ಕೇವಲ ಮೂರರಿಂದ ನಾಲ್ಕು ತಿಂಗಳ ಹಣ ಮಾತ್ರ ಮಹಿಳೆಯರ ಬ್ಯಾಂಕ್ ಖಾತೆಗೆ ಜಮಾ ಆಗಿದೆ ಇನ್ನು ಇದರ ಬೆನ್ನಲ್ಲೇ ಡಿಸೆಂಬರ್ ತಿಂಗಳಲ್ಲಿ ಹಲವು ರೇಷನ್ ಕಾರ್ಡ್ ಗಳು ರದ್ದಾಗಿದ್ದು ರೇಷನ್ ಕಾರ್ಡ್ ರದ್ದಾಗಿರುವ ಮಹಿಳೆಯರ ಬ್ಯಾಂಕ್ ಖಾತೆಗೆ ಗೃಹಲಕ್ಷ್ಮಿ ಹಣ ಸಿಗುವುದು ಡೌಟ್.
ಕ್ಯಾನ್ಸಲ್ ಆಗಿರುವ ರೇಷನ್ ಕಾರ್ಡ್ ಲಿಸ್ಟ್ ಅನ್ನು ಮೊಬೈಲ್ ನಲ್ಲಿ ಚೆಕ್ ಮಾಡುವುದು ಹೇಗೆ.?
ನಿಮ್ಮ ಮೊಬೈಲ್ ನಲ್ಲಿ ನೀವು ಸುಲಭವಾಗಿ ಸರ್ಕಾರದಿಂದ ಕ್ಯಾನ್ಸಲ್ ಮಾಡಿರುವ ರೇಷನ್ ಕಾರ್ಡ್ ಗಳನ್ನು ಚೆಕ್ ಮಾಡಿಕೊಳ್ಳಬಹುದು. ಮೊದಲು ನೀವು ರೇಷನ್ ಕಾರ್ಡ್ ಕ್ಯಾನ್ಸಲ್ಟ್ ಲಿಸ್ಟ್ ಚೆಕ್ ಮಾಡಲು ಆಹಾರ ಇಲಾಖೆಯ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಬೇಕಾಗುತ್ತದೆ, ವೆಬ್ಸೈಟ್ಗೆ ಭೇಟಿ ನೀಡಲು https://ahara.kar.nic.in/Home/EServices ಲಿಂಕ್ ಮೇಲೆ ಕ್ಲಿಕ್ ಮಾಡಿ ನಂತರ ಆಹಾರ ಇಲಾಖೆಯ ಪೇಜ್ ಓಪನ್ ಆಗುತ್ತದೆ ಅದರಲ್ಲಿ ಎಡಭಾಗದಲ್ಲಿ ಕಾಣುವ ಮೂರು ಡಾಟ್ಗಳ ಮೇಲೆ ಕ್ಲಿಕ್ ಮಾಡಿ ನಂತರ ಎರಡನೇ ಆಪ್ಷನ್ ನಲ್ಲಿ ಇರುವ ಈ ಪಡಿತರ ಚೀಟಿ ಮೇಲೆ ಕ್ಲಿಕ್ ಮಾಡಿ, ನಂತರ ಕೆಳಗೆ ರದ್ದುಗೊಳಿಸಲಾದ/ ತಡೆಹಿಡಿಯಲಾದ ಪಟ್ಟಿ ಎಂಬ ಆಪ್ಷನ್ ಇರುತ್ತದೆ ಅದರ ಮೇಲೆ ಕ್ಲಿಕ್ ಮಾಡಿ ನಂತರ ಹೊಸ ಪೇಜ್ ಓಪನ್ ಆಗುತ್ತದೆ ಅದರಲ್ಲಿ ನಿಮ್ಮ ಜಿಲ್ಲೆ ನಿಮ್ಮ ತಾಲೂಕು ಮತ್ತು ವರ್ಷ ತಿಂಗಳನ್ನು ಆಯ್ಕೆ ಮಾಡಿ ಗೋ ಮೇಲೆ ಕ್ಲಿಕ್ ಮಾಡಿ.
ಕೊನೆಯದಾಗಿ ನಿಮಗೆ ನಿಮ್ಮ ಜಿಲ್ಲೆಯಲ್ಲಿ ಹಾಗೂ ನಿಮ್ಮ ತಾಲೂಕಿನಲ್ಲಿ ಸರ್ಕಾರದಿಂದ ರದ್ದಾಗಿರುವ ರೇಷನ್ ಕಾರ್ಡ್ ಗಳ ಪಟ್ಟಿ ತೆರೆಯುತ್ತದೆ ಆರ್ ರೇಷನ್ ಕಾರ್ಡ್ ರದ್ದು ಪಟ್ಟಿಯಲ್ಲಿ ನಿಮ್ಮ ಹೆಸರು ಇದೆ ಎಂದು ಚೆಕ್ ಮಾಡಿಕೊಳ್ಳಿ ಹಾಗೆ ಅದರಲ್ಲಿ ತಿಂಗಳುಗಳ ಆಯ್ಕೆಯನ್ನು ಬದಲಿಸಿ ಎಲ್ಲಾ ತಿಂಗಳುಗಳ ಲಿಸ್ಟ್ ಚೆಕ್ ಮಾಡಿ ಅದರಲ್ಲಿ ಯಾವುದೇ ತಿಂಗಳಿನಲ್ಲಿ ನಿಮ್ಮ ರೇಷನ್ ಕಾರ್ಡ್ ನ ಹೆಸರು ಇಲ್ಲದಿದ್ದರೆ ಅಥವಾ ರೇಷನ್ ಕಾರ್ಡ್ ನಂಬರ್ ಇಲ್ಲದಿದ್ದರೆ ನಿಮ್ಮ ರೇಷನ್ ಕಾರ್ಡ್ ಚಾಲ್ತಿಯಲ್ಲಿದೆ ಎಂದು ಅರ್ಥ ಒಂದು ವೇಳೆ ನಿಮ್ಮ ರೇಷನ್ ಕಾರ್ಡ್ ನಂಬರ್ ಅದರಲ್ಲಿ ಇದ್ದರೆ ನಿಮ್ಮ ರೇಷನ್ ಕಾರ್ಡ್ ರದ್ದಾಗಿದೆ ಎಂದರ್ಥ ಒಂದು ವೇಳೆ ನಿಮ್ಮ ರೇಷನ್ ಕಾರ್ಡ್ ರದ್ದಾದರೆ ನಿಮಗೆ ಹೊಸ ರೇಷನ್ ಕಾರ್ಡ್ ಸಿಗುವುದು ಕಷ್ಟ ಆಗಲಿದೆ ಜೊತೆಗೆ ರೇಷನ್ ಕಾರ್ಡ್ ಸದಸ್ಯ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿ, ಫಲಾನುಭವಿ ಆಗಿದ್ದರೆ ಇದರ ಹಣ ಕೂಡ ಸಿಗುವುದು ಹೇಳಬಹುದಾಗಿದೆ ಧನ್ಯವಾದಗಳು..