ಎಲ್ಲರಿಗೂ ನಮಸ್ಕಾರ..
Crop insurance 2023:- ಕೇಂದ್ರ ಸರ್ಕಾರದಿಂದ ಎಲ್ಲಾ ರೈತಾಪಿ ಬಂಧುಗಳಿಗೆ ಸಿಹಿ ಸುದ್ದಿ ನೀಡಿದೆ 2023 24ನೇ ಸಾಲಿನ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯ ಹಿಂಗಾರು ಬೆಳೆ ವಿಮೆ ತುಂಬಲು ರೈತರಿಗೆ ಸರ್ಕಾರವು ಅರ್ಜಿ ಸಲ್ಲಿಸಲು ಅವಕಾಶ ಮಾಡಿಕೊಡಲಾಗಿದೆ, ಈ ಬೆಳೆ ವಿಮೆಯನ್ನು ಹೇಗೆ ತುಂಬಬೇಕು ಹಾಗೂ ಯಾವ ಯಾವ ಬೆಳೆಗಳಿಗೆ ಎಷ್ಟು ಹಣವನ್ನು ತುಂಬಬೇಕು.? ಇದರಿಂದ ಒಂದು ವೇಳೆ ರೈತನ ಬೆಳೆ ಹಾನಿ ಆದರೆ ಸರ್ಕಾರದಿಂದ ಅದಕ್ಕೆ ಪರಿಹಾರ ಎಷ್ಟು ಸಿಗಲಿದೆ ಎಂಬ ಎಲ್ಲಾ ಸಂಪೂರ್ಣ ಮಾಹಿತಿಯನ್ನು ತಿಳಿಯಲು ಲೇಖನವನ್ನು ಪೂರ್ತಿಯಾಗಿ ಓದಿ. ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಹಿಂಗಾರು ಬೆಳೆ ವಿಮೆಗೆ ಎಲ್ಲ ರೈತರಿಂದ ಅರ್ಜಿ ಆಹ್ವಾನ.!
ಕೇಂದ್ರ ಸರ್ಕಾರದಿಂದ ರೈತರಿಗೆ ಅನುಕೂಲವಾಗುವಂತೆ ಬಹಳಷ್ಟು ಯೋಜನೆಗಳನ್ನು ಜಾರಿಗೆ ತಂದಿರುವುದು ನಿಮಗೆಲ್ಲ ತಿಳಿದೇ ಇದೆ ಅದರಲ್ಲಿ ಈ ಯೋಜನೆ ಕೂಡ ಒಂದು ಅದೇ ಫಸಲ್ ಭೀಮಾ ಯೋಜನೆ ಈ ಯೋಜನೆ ಅಡಿಯಲ್ಲಿ ರೈತರು ಪ್ರತಿ ವರ್ಷವೂ ಮುಂಗಾರು ಅಥವಾ ಮುಂಗಾರು ಬೆಳೆಯಲ್ಲಿ ರೈತ ಬೆಳೆಯುತ್ತಿರುವ ಬೆಳೆಯ ಮೇಲೆ ವಿಮೆ ಮಾಡಿಸಬೇಕು ಇದರಿಂದ ಒಂದು ವೇಳೆ ರೈತನಿಗೆ ಪ್ರಕೃತಿ ವಿಕೋಪಕೊಳಗಾಗಿ ಅಥವಾ ಇನ್ನಾವುದಾದರೂ ತೊಂದರೆಯಿಂದ ಅಂದರೆ ಹೆಚ್ಚಿನ ಮಳೆ, ಬಿರುಗಾಳಿ, ಬರಗಾಲ, ಅಥವಾ ಕಳ್ಳತನ ಈ ರೀತಿಯ ಯಾವುದಾದರೂ ಕಾರಣದಿಂದ ರೈತರ ಬೆಳೆ ನಾಶ ಆದರೆ ಅಂತಹ ರೈತರಿಗೆ ಈ ವಿಮೆಯ ಕಡೆಯಿಂದ ಬೆಳೆಯ ನಾಶ ಪರಿಹಾರ ಹಣ ಸಿಗಲಿದೆ.
ಹೌದು ಅದೇ ಕಾರಣದಿಂದ ಕೇಂದ್ರ ಸರ್ಕಾರದಿಂದ ಈ ಫಸಲ್ ಭೀಮಾ ಯೋಜನೆಯನ್ನು ರೈತರಿಗಾಗಿ ಜಾರಿ ಮಾಡಿದ್ದು ಈಗ ಹಿಂಗಾರು ಬೆಳೆಗಳಿಗೆ ವಿಮೆ ಮಾಡಿಸಲು ಅರ್ಜಿಗಳನ್ನು ಸ್ವೀಕರಿಸಲಾಗುತ್ತಿದೆ ಏಕೆಂದರೆ ಈಗಾಗಲೇ ಮಳೆ ಇಲ್ಲದೆ ನೀರಿನ ಸಮಸ್ಯೆ ಉಂಟಾಗಿದೆ ಹಾಗೂ ಕೆಲವು ರಾಜ್ಯಗಳಲ್ಲಿ ಹೆಚ್ಚಿನ ಮಳೆಯಿಂದಾಗಿ ಪ್ರವಾಹ ಬಂದು ಬೆಳೆ ಬೆಳೆಯ ಬಂದಾಗಿದೆ ಹಾಗಾಗಿ ರೈತ ಒಂದು ವೇಳೆ ಬೆಳೆಯಲು ನಿರ್ಧರಿಸಿದ್ದು ಆ ಬೆಳೆ ಜವಾಬ್ದಾರಿ ಅಥವಾ ಬೆಳೆಯ ಖರ್ಚಿನ ಜವಾಬ್ದಾರಿಯನ್ನು ರೈತನೊಬ್ಬನೇ ಹೊರಲು ಸಾಧ್ಯವಾಗದಿರುವ ಕಾರಣ ಸರ್ಕಾರದಿಂದ ರೈತನು ಪರಿಹಾರ ಪಡೆಯಲು ಹಿಂಗಾರು ಬೆಳೆವಿಮೆ ಮಾಡಿಸುವುದು ಸೂಕ್ತ ಎಂದು ತಿಳಿಸಲಾಗಿದೆ. ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಯಾವ ಬೆಳೆಗೆ ಎಷ್ಟು ಬೆಳೆ ವಿಮೆಯ ಹಣ ಸಿಗಲಿದೆ.!
ಸರ್ಕಾರವು ರೈತರಿಗಾಗಿ ರೈತರ ಕಷ್ಟದ ಸಮಯದ ನೆರವಿಗಾಗಿ ಜಾರಿ ಮಾಡಿರುವ ಯೋಜನೆಯೇ ಈ ಫಸಲ್ ಭೀಮಾ ಯೋಜನೆ ಈ ಯೋಜನೆ ಅಡಿಯಲ್ಲಿ ರೈತರು ಮುಂಗಾರು ಅಥವಾ ಹಿಂಗಾರು ಬೆಳೆ ಬೆಳೆಯುವ ಸಮಯದಲ್ಲಿ ಬೆಳೆಯ ಮೇಲೆ ವಿಮೆ ಮಾಡಿಸುವುದು ಉತ್ತಮ ಎಂದು ತಿಳಿಸಲಾಗಿದೆ.
ಇನ್ನು ಯಾವ ಬೆಳೆಗೆ ಎಷ್ಟು ವಿಮೆ ತುಂಬಬೇಕು ಎಂಬ ಬಗ್ಗೆ ಕೇಳುವುದಾದರೆ ಸರ್ಕಾರವು ಕಡಲೆ 201 ರೂಪಾಯಿ ಪ್ರತಿ ಎಕರೆಗೆ ಬೆಳೆವಿಮೆ ಮಾಡಿಸಲು ನೀಡಬೇಕು, ಜೋಳ ಪ್ರತಿ ಎಕರೆಗೆ 275 ಗೋಧಿ 190 ರೂಪಾಯಿ ಗೋವಿನ ಜೋಳ 392 ರೂಪಾಯಿ ಪ್ರತಿ ಎಕ್ಕರೆಗೆ ಸೂರ್ಯಕಾಂತಿ 296 ರೂಪಾಯಿ ಪ್ರತೀ ಎಕ್ಕರೆಗೆ ಈ ರೀತಿ ಪ್ರತಿಯೊಂದು ಬೆಳೆಗೂ ಒಂದೊಂದು ರೀತಿಯ ದರವನ್ನು ನಿಗದಿ ಮಾಡಲಾಗಿದೆ. ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಹಿಂಗಾರು ಬೆಳೆ ವಿಮೆಗೆ ಅರ್ಜಿ ಸಲ್ಲಿಸುವುದು ಹೇಗೆ ಮತ್ತು ಎಲ್ಲಿ.?
ನಿಮಗೆಲ್ಲ ಈಗಾಗಲೇ ತಿಳಿದಿರಬಹುದು ಈ ಬಾರಿ ರಾಜ್ಯದಲ್ಲಿ ಹೆಚ್ಚಿನ ಮಳೆ ಆಗದ ಕಾರಣ ಬರಗಾಲ ಬಂದಿದೆ ಈಗಾಗಲೇ ರಾಜ್ಯ ಸರ್ಕಾರದಿಂದ ಕೆಲವು ತಾಲೂಕುಗಳಿಗೆ ಬರ ಪರಿಹಾರ ನೀಡಲು ಆದೇಶ ನೀಡಿದ್ದು ಇನ್ನು ಮುಂದಿನ ವರ್ಷ ನೀರಿನ ಸಮಸ್ಯೆ ಇದಕ್ಕಿಂತ ಹೆಚ್ಚು ಉಂಟಾಗುವ ಸಾಧ್ಯತೆ ಇದೆ ಇದರಿಂದ ರೈತರಿಗೂ ಕೂಡ ಸದ್ಯದಲ್ಲಿ ನೀರು ಇದು ಮುಂದಿನ ದಿನಗಳಲ್ಲಿ ಬೆಳೆ ಕೈ ಸೇರುವಲ್ಲಿ ಸಮಸ್ಯೆ ಉಂಟಾಗಬಹುದು ಇದರಿಂದ ಪ್ರತಿಯೊಬ್ಬರಿಗೂ ಕೂಡ ಹಿಂಗಾರು ಬೆಳೆಯ ವಿಮೆಯಿಂದ ಸಿಗುವ ಸಾಧ್ಯತೆ ಇದೆ ಹಾಗಾಗಿ ಪ್ರತಿಯೊಬ್ಬ ರೈತನು ಕೂಡ ತಮ್ಮ ಜಮೀನಿನಲ್ಲಿ ಬೆಳೆದಿರುವ ಬೆಳೆಯ ಮೇಲೆ ಬೆಳೆವಿಮೆ ಮಾಡಿಸುವುದು ಸೂಕ್ತ.
ಇನ್ನೂ ಹಿಂಗಾರು ಬೆಳೆ ವಿಮೆ ಯನ್ನು ಮಾಡಿಸಲು ನಿಮ್ಮ ಸಮೀಪದ ಗ್ರಾಮ 1 ಕೇಂದ್ರಕ್ಕೆ ಭೇಟಿ ನೀಡಿ ಅಥವಾ ಹತ್ತಿರದ ಭೇಟಿ ನೀಡಿ ಹಿಂಗಾರು ಬೆಳೆವಿಮೆ ಮಾಡಿಸಿಕೊಳ್ಳಬಹುದು, ಹಾಗೆ ಒಂದು ವೇಳೆ ನೀವು ಮುಂದೆ ನಿಮ್ಮ ಬೆಳೆಗಳ ಪರಿಹಾರವನ್ನು ಸರ್ಕಾರದಿಂದ ಪಡೆಯಬೇಕು ಎಂದರೆ ಈ ಬೆಳೆ ವಿಮೆಯನ್ನು ತುಂಬುವುದು ಅವಶ್ಯಕವಾಗಿದೆ ಇನ್ನು ಬೆಳೆ ವಿಮೆ ಮಾಡಿಸಲು ಕೊನೆಯ ದಿನಾಂಕ ಡಿಸೆಂಬರ್ 15 ಕೊನೆಯ ದಿನಾಂಕವಾಗಿದೆ ಆದರೆ ಕೆಲವು ಬೆಳೆಗಳ ವಿಮೆ ಮಾಡಿಸಲು ಡಿಸೆಂಬರ್ 1 ಕೊನೆಯ ದಿನಾಂಕ. ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಬೆಳೆ ವಿಮೆ ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು.?
ಮುಖ್ಯವಾಗಿ ಬೆಳೆ ವಿಮೆ ಅರ್ಜಿ ಸಲ್ಲಿಸಲು ನಾಲ್ಕು ದಾಖಲೆಗಳನ್ನು ಮಾತ್ರ ಕೇಳಲಾಗುತ್ತದೆ
- ರೈತನ ಆಧಾರ್ ಕಾರ್ಡ್
- ರೈತನು ಬೆಳೆದಿರುವ ಬೆಳೆಯ ಜಮೀನಿನ ಪಹಣಿ ಪತ್ರ
- ಬೆಳೆ ವಿಮೆ ತುಂಬುವ ಅರ್ಜಿ
- ರೈತರ ಮೊಬೈಲ್ ಸಂಖ್ಯೆ ಮತ್ತು ಆಧಾರ್ ಕಾರ್ಡ್ ಗೆ ಲಿಂಕ್ ಆಗಿರುವ ಬ್ಯಾಂಕ್ ಅಕೌಂಟ್ ನಂಬರ್
- ಇಷ್ಟು ಮಾಹಿತಿಗಳಿಂದ ನೀವು ಹಿಂಗಾರು ಬೆಳೆಗೆ ಅರ್ಜಿಯನ್ನು ಸಲ್ಲಿಸಬಹುದು ಧನ್ಯವಾದಗಳು
- ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ