ಎಲ್ಲರಿಗೂ ನಮಸ್ಕಾರ.
ಸರ್ಕಾರದಿಂದ ಅನ್ನಭಾಗ್ಯ ಯೋಜನೆಯ ಅಕ್ಕಿ ಹಣವನ್ನು ಈಗಾಗಲೇ ಎಲ್ಲರ ಬ್ಯಾಂಕ್ ಖಾತೆಗೆ ಜಮಾ ಮಾಡುತ್ತಿದ್ದು ಇನ್ನೂ ಕೂಡ ನಿಮಗೆ ಅನ್ನ ಭಾಗ್ಯ ಯೋಜನೆಯ ಅಕ್ಕಿ ಹಣ ಬಂದಿಲ್ಲದಿದ್ದರೆ, ಈ ಲೇಖನದಲ್ಲಿ ಅನ್ನಭಾಗ್ಯ ಯೋಜನೆಯ ಫಲಾನುಭವಿಗಳ ಲಿಸ್ಟ್ ನಲ್ಲಿ ಹೆಸರು ಇದೆಯಾ ಎಂದು ಚೆಕ್ ಮಾಡುವುದು ಹೇಗೆ. ಮತ್ತು ಯಾರಿಗೆ ಎಷ್ಟು ತಿಂಗಳ ಹಣ ಬಂದಿದೆ, ಅದು ಯಾರ ಬ್ಯಾಂಕ್ ಖಾತೆಗೆ ಬಂದಿದೆ ಎಂಬ ಸಂಪೂರ್ಣ ಮಾಹಿತಿಯನ್ನು ಲೇಖನದಲ್ಲಿ ತಿಳಿಯೋಣ. ಆದ್ದರಿಂದ ಲೇಖನವನ್ನು ಪೂರ್ತಿಯಾಗಿ ಓದಿ ಮಾಹಿತಿಯ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಳ್ಳಿ. ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಅನ್ನ ಭಾಗ್ಯ ಯೋಜನೆಯ ಅಕ್ಕಿ ಹಣ ನಿಮಗೆ ಇನ್ನೂ ಕೂಡ ಬಂದಿಲ್ವಾ.!
ಅನ್ನಭಾಗ್ಯ ಯೋಜನೆ ರಾಜ್ಯ ಸರ್ಕಾರದ 5 ಗ್ಯಾರಂಟಿ ಯೋಜನೆಗಳಲ್ಲಿ ಒಂದಾಗಿದ್ದು ಈಗಾಗಲೇ ಯೋಜನೆಗೆ ಸರ್ಕಾರದಿಂದ ಚಾಲನೆ ನೀಡಿದೆ ಆದರೆ ಈ ಯೋಜನೆಯಲ್ಲಿ ಕೆಲವು ಸಮಸ್ಯೆಗಳು ಎದುರಾಗಿದ್ದು ಈ ಸಮಸ್ಯೆಗಳಿಂದ ಸರ್ಕಾರ ರೇಷನ್ ಕಾರ್ಡ್ದಾರರಿಗೆ ಅಕ್ಕಿ ಬದಲಾಗಿ ಹಣ ನೀಡಲು ಮುಂದಾಗಿದೆ ಈಗಾಗಲೇ ಕಳೆದ ಮೂರು ತಿಂಗಳಿನಿಂದ ಎಲ್ಲಾ ರೇಷನ್ ಕಾರ್ಡ್ದಾರರಿಗೂ ಹಣವನ್ನು ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತಿದ್ದು ಕೆಲವರಿಗೆ ಹಣ ಜಮಾ ಆಗಿದೆ ಆದರೆ ಕೆಲವರಿಗೆ ಇನ್ನೂ ಕೂಡ ಅಕ್ಕಿ ಹಣ ಬಂದೇ ಇಲ್ಲ. ಇದನ್ನೆಲ್ಲಾ ಗಮನಿಸಿದ ಆಹಾರ ಇಲಾಖೆಯು ಹಣ ಜಮಾ ಆಗಲಿರುವ ಫಲಾನುಭವಿಗಳ ಲಿಸ್ಟ್ ಒಂದನ್ನು ಇದೀಗ ಬಿಡುಗಡೆ ಮಾಡಿದೆ ಈ ಲಿಸ್ಟ್ ನಲ್ಲಿ ಇರುವ ಹೆಸರಿನ ರೇಷನ್ ಕಾರ್ಡ್ ದಾರಿಗೆ ಮಾತ್ರ ಇನ್ನೂ ಪ್ರತಿ ತಿಂಗಳು ಅನ್ನಭಾಗ್ಯ ಯೋಜನೆಯ ಅಕ್ಕಿಹಣ ಸಿಗಲಿದೆ.
ಅನ್ನಭಾಗ್ಯ ಯೋಜನೆಯ ಅಕ್ಕಿ ಬದಲು ಹಣ ಹಾಕಲಾಗುತ್ತಿದ್ದು ನಿಮ್ಮ ಬ್ಯಾಂಕ್ ಖಾತೆಗೆ ಹಣ ಬರುತ್ತಿದೆಯೇ.? ಇಷ್ಟು ಹಣ ಜಮೆ ಆಗುತ್ತಿದೆ. ಯಾರ ಬ್ಯಾಂಕ್ ಖಾತೆಗೆ ಜಮ್ಮೆ ಆಗುತ್ತದೆ. ಎಂಬ ಇತ್ಯಾದಿ ಮಾಹಿತಿ ತಿಳಿಯುವ ನಿಟ್ಟಿನಲ್ಲಿ ಆಹಾರ ಇಲಾಖೆಯು ಒಂದು ಹೊಸ ಲಿಂಕ್ ಬಿಡುಗಡೆ ಮಾಡಿದೆ. ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಮೊದಲು ಅನ್ನ ಭಾಗ್ಯ ಯೋಜನೆಯ ಹಣ ಯಾರಿಗೆ ಎಷ್ಟು ಸಿಗಲಿದೆ.?
ಈಗಾಗಲೇ ತಿಳಿಸಿದ ಹಾಗೆ ಅನ್ನಭಾಗ್ಯ ಯೋಜನೆಯು ಐದು ಗ್ಯಾರಂಟಿ ಯೋಜನೆಗಲ್ಲಿ ಒಂದಾಗಿದ್ದು ಈಗಾಗಲೇ ಈ ಯೋಜನೆಗೆ ಚಾಲನೆ ನೀಡಲಾಗಿತ್ತು. ಆದರೆ ದಾಸ್ತಾನು ಅಕ್ಕಿ ಕೊರತೆಯಿಂದಾಗಿ ಸರ್ಕಾರವು ಅಕ್ಕಿ ಬದಲಾಗಿ ಪ್ರತಿ ಕೆಜಿಗೆ 34 ರೂಪಾಯಿಯಂತೆ ಹಣ ನೀಡಲು ನಿರ್ಧರಿಸಿ ಇದೀಗ ಎಲ್ಲ ರೇಷನ್ ಕಾರ್ಡ್ ದರರಿಗೂ ಅಕ್ಕಿ ಬದಲಾಗಿ ಹಣ ನೀಡುತ್ತಿದೆ ಇನ್ನು ಈ ಅಕ್ಕಿಯನ್ನು ಯಾರಿಗೆ ಎಷ್ಟು ಸಿಗಲಿದೆ ಎಂಬ ಮಾಹಿತಿ ಹೀಗಿದೆ.
- ಪ್ರತಿ ಕೆಜಿಗೆ 34 ರೂಪಾಯಿಯಂತೆ 5 ಕೆಜಿಗೆ ಒಬ್ಬರಿಗೆ 170
- ರೇಷನ್ ಕಾರ್ಡ್ ನಲ್ಲಿ ಇಬ್ಬರು ಸದಸ್ಯರಿದ್ದಾರೆ 340 ರೂಪಾಯಿ
- ಹಾಗೆ ರೇಷನ್ ಕಾರ್ಡ್ ನಲ್ಲಿ ಮೂರು ಸದಸ್ಯರಿದ್ದಾರೆ 510 ರೂಪಾಯಿ
- ನಾಲ್ಕು ಜನ ಸದಸ್ಯರಿದ್ದರೆ 680 ರೂಪಾಯಿ
- 5 ಸದಸ್ಯರಿದ್ದರೆ 850 ರೂಪಾಯಿ ಈ ರೀತಿ ಪ್ರತಿ ಸದಸ್ಯನಿಗೆ 174 ರೂಪಾಯಿಯಂತೆ ಪ್ರತಿ ತಿಂಗಳು ರೇಷನ್ ಕಾರ್ಡ್ ಹೊಂದಿರುವವರ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತಿದೆ.
ಒಂದು ವೇಳೆ ನಿಮಗೆ ಈ ಹಣ ಕಳೆದ ಮೂರು ತಿಂಗಳಿನಿಂದ ಬಂದೇ ಇಲ್ಲ ಎಂದರೆ ನಿಮ್ಮ ಊರಿನ ಫಲಾನುಭವಿಗಳ ಲಿಸ್ಟ್ ನಲ್ಲಿ ನಿಮ್ಮ ಹೆಸರು ಇದೆಯಾ ಎಂದು ಮೊದಲು ಚೆಕ್ ಮಾಡಿಕೊಳ್ಳಬೇಕು. ಈ ಸ್ಟೇಟಸ್ ಅನ್ನು ಚೆಕ್ ಮಾಡಿಕೊಳ್ಳುವ ಸಲುವಾಗಿ ಆಹಾರ ಇಲಾಖೆಯಿಂದ ಎಲ್ಲಾ ರೇಷನ್ ಕಾರ್ಡ್ದಾರರಿಗೂ ಕೂಡ ಒಂದು ಲಿಂಕ್ ಬಿಡುಗಡೆ ಮಾಡಿದೆ ಮತ್ತು ಚೆಕ್ ಮಾಡುವ ಅವಕಾಶ ಕಲ್ಪಿಸಿದೆ. ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಅನ್ನ ಭಾಗ್ಯ ಫಲಾನುಭವಿಗಳ ಲಿಸ್ಟ್ ನಲ್ಲಿ ಹೆಸರನ್ನು ಚೆಕ್ ಮಾಡುವುದು ಹೇಗೆ.?
ಹಂತ 1: ಕೆಳಗಿನ ಡೈರೆಕ್ಟ್ ಲಿಂಕ್ ಮೇಲೆ ಕ್ಲಿಕ್ ಮಾಡಿ,ಫಲಾನುಭವಿಗಳ ಪಟ್ಚಿಯಲ್ಲಿ ನಿಮ್ಮ ಹೆಸರು ಚೆಕ್ ಮಾಡಿ https://ahara.kar.nic.in/Home/EServices
ನಂತರ ಮುಖಪುಟದ ಎಡಭಾಗದಲ್ಲಿರುವ 3 ಗೆರೆಗಳ ಮೇಲೆ ಕ್ಲಿಕ್ ಮಾಡಿ, ನಂತರ ಕೆಳಗಡೆ e-Ration Card ಮೇಲೆ ಕ್ಲಿಕ್ ಮಾಡಿ. ನಂತರ ಕೆಳಗಡೆ show village list ಮೇಲೆ ಕ್ಲಿಕ್ ಮಾಡಿ
ಹಂತ 2: ನಿಮ್ಮ ಜಿಲ್ಲೆ,ತಾಲೂಕು,ಗ್ರಾಮ ಪಂಚಾಯತಿ,ಗ್ರಾಮ select ಮಾಡಿ,Go ಮೇಲೆ ಕ್ಲಿಕ್ ಮಾಡಿ.
ಹಂತ 3: ನಿಮ್ಮ ಗ್ರಾಮದಲ್ಲಿರುವ ರೇಷನ್ ಕಾರ್ಡ್ ಹೊಂದಿರುವವರ ರೇಷನ್ ಕಾರ್ಡ್ ನಂಬರ್, ಹೆಸರು,ವಿಳಾಸ,ಕಾರ್ಡ್ ನ ವಿಧ ಹಾಗೂ ಕುಟುಂಬದ ಸದಸ್ಯರ ಸಂಖ್ಯೆ ತೋರಿಸುತ್ತದೆ,ಅದರಲ್ಲಿ ನಿಮ್ಮ ಹೆಸರು ಚೆಕ್ ಮಾಡಿ
ಅನ್ನಭಾಗ್ಯ ಯೋಜನೆಯ ಹಣ ಪಡೆಯಲು 3 ಕೆಲಸವನ್ನು ಕಡ್ಡಾಯವಾಗಿ ಮಾಡಬೇಕು?
- ಪಡಿತರ ಚೀಟಿಯಲ್ಲಿ ಇರುವ ಮುಕ್ಯಸ್ತನ ಹೆಸರಲ್ಲಿ ಒಂದು ಅಕೌಂಟ್ ಇರಬೇಕು
- ನಿಮ್ಮ ರೇಷನ್ ಕಾರ್ಡ್ ಗೆ ಆಧಾರ್ ಕಾರ್ಡ್ ನ್ನೂ ಲಿಂಕ್ ಮಾಡಿರಬೇಕು
- ನಿಮ್ಮ ಅಕೌಂಟ್ ಗೆ ಆಧಾರ್ ಕಾರ್ಡ್ ನ್ನೂ ಲಿಂಕ್ ಮಾಡಿರಬೇಕು ( NPCI map ಆಗಿರಬೇಕು)
- ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ