ಎಲ್ಲರಿಗೂ ನಮಸ್ಕಾರ. ಸಾಮಾನ್ಯವಾಗಿ ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರಿಗೂ ಕೂಡ ವಾಹನಗಳನ್ನು ಚಲಾಯಿಸಬೇಕು ಅಂದರೆ ಡ್ರೈವಿಂಗ್ ಕಲಿಯಬೇಕು ಎಂದು ಆಸೆ ಇದ್ದೇ ಇರುತ್ತದೆ, ಏಕೆಂದರೆ ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರೂ ಕೂಡ ಕಾರು ಖರೀದಿಸಬೇಕು ಹಾಗೂ ಕಾರನ್ನು ಡ್ರೈವು ಮಾಡಬೇಕು ಎಂದು ಯೋಚಿಸುತ್ತಿರುತ್ತಾರೆ ಆದರೆ ಕೆಲವರಿಗೆ ಡ್ರೈವಿಂಗ್ ಕಲಿಯಲು ವಾಹನ ಸಿಗದೇ ಮತ್ತು ಯಾವುದೇ ತರಬೇತಿ ಇಲ್ಲದೆ ಡ್ರೈವಿಂಗ್ ಕಲಿತಿರುವುದಿಲ್ಲ ಹಾಗಾಗಿ ಸರ್ಕಾರದಿಂದ ಅಂತಹ ಅಭ್ಯರ್ಥಿಗಳಿಗೆ ಉಚಿತವಾಗಿ ಡ್ರೈವಿಂಗ್ ತರಬೇತಿ ನೀಡಲು ಯೋಜನೆಯನ್ನು ಮಾಡಿದೆ ಸದ್ಯ ಇದೀಗ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯಿಂದ ಉಚಿತವಾಗಿ ಡ್ರೈವಿಂಗ್ ತರಬೇತಿಯನ್ನು ನೀಡಲಾಗುತ್ತಿದ್ದು ಅರ್ಹ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಿದೆ ಅರ್ಜಿ ಸಲ್ಲಿಸುವವರು ಅರ್ಜಿಯನ್ನು ಸಲ್ಲಿಸಬಹುದಾಗಿದೆ ಇದರ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ನಮ್ಮ ಲೇಖನವನ್ನು ಪೂರ್ತಿಯಾಗಿ ಓದಿ.ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಡ್ರೈವಿಂಗ್ ಕಲಿಯಬೇಕು ಎಂದು ಕೊಂಡಿರುವವರಿಗೆ ಭರ್ಜರಿ ಸಿಹಿ ಸುದ್ದಿ.!
ಈಗಾಗಲೇ ತಿಳಿಸಿದ ಹಾಗೆ ಎಲ್ಲರಿಗೂ ಕೂಡ ಡ್ರೈವಿಂಗ್ ಮಾಡಬೇಕು ಎಂಬ ಆಸೆ ಇದ್ದೇ ಇರುತ್ತದೆ ಆದರೆ ಕೆಲವರಿಗೆ ಡ್ರೈವಿಂಗ್ ನಲ್ಲಿ ಯಾವುದೇ ಅನುಭವ ಮತ್ತು ತರಬೇತಿ ಇಲ್ಲದೆ ಡ್ರೈವಿಂಗ್ ಕಲಿತಿರುವುದಿಲ್ಲ ಹಾಗೆ ಡ್ರೈವಿಂಗ್ ಕಲಿಯಲು ಡ್ರೈವಿಂಗ್ ತರಗತಿಗಳಿಗೆ ಸೇರಲು ಹಣ ಕೂಡ ಇರುವುದಿಲ್ಲ ಅಂತಹವರಿಗಾಗಿ ಸರ್ಕಾರದಿಂದ ಉಚಿತ ಡ್ರೈವಿಂಗ್ ತರಬೇತಿ ಯೋಜನೆ ಒಂದನ್ನು ಪರಿಚಯಿಸಲಾಗಿದೆ ಈ ಯೋಜನೆ ಅಡಿಯಲ್ಲಿ ಪ್ರತಿ ವರ್ಷವೂ ಡ್ರೈವಿಂಗ್ ತರಬೇತಿ ಇಲ್ಲದ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಿ ಅಂತಹ ಅಭ್ಯರ್ಥಿಗಳಿಗೆ ಉಚಿತವಾಗಿ ಡ್ರೈವಿಂಗ್ ತರಬೇತಿಯನ್ನು ನೀಡಲಾಗುತ್ತದೆ ಈಗಾಗಲೇ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (KSRTC) ಅಲ್ಲಿ ಅರ್ಜಿಯನ್ನು ಸ್ವೀಕರಿಸಿ ತರಬೇತಿಯನ್ನು ನೀಡಲಾಗಿದ್ದು ಇದೀಗ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಬಿಎಂಟಿಸಿ ಕಡೆಯಿಂದ ಉಚಿತ ಡ್ರೈವಿಂಗ್ ತರಬೇತಿಗೆ ಅರ್ಜಿಯನ್ನು ಸ್ವೀಕರಿಸಲಾಗುತ್ತದೆ. ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
BMTC ವತಿಯಿಂದ ಉಚಿತ ಡ್ರೈವಿಂಗ್ ತರಬೇತಿ.!
ಸರ್ಕಾರದಿಂದ ಡ್ರೈವಿಂಗ್ ನಲ್ಲಿ ಆಸಕ್ತಿ ಇದು ಡ್ರೈವಿಂಗ್ ಬರದೇ ಇರುವ ಅಭ್ಯರ್ಥಿಗಳಿಂದ ಅರ್ಜಿಯನ್ನು ಸ್ವೀಕರಿಸಿ ಪ್ರತಿ ವರ್ಷವೂ ಹಲವು ಅಭ್ಯರ್ಥಿಗಳಿಗೆ ಉಚಿತವಾಗಿ ಡ್ರೈವಿಂಗ್ ಗೆ ತರಬೇತಿಯನ್ನು ನೀಡುತ್ತಿದೆ ಇದೀಗ 2023 24 ನೇ ಸಾಲಿನ ಉಚಿತ ಡ್ರೈವಿಂಗ್ ತರಬೇತಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಅರ್ಜಿಯನ್ನು ಆಹ್ಹನಿಸಲಾಗಿದೆ. ಹೌದು ಬಿಎಂಟಿಸಿ ಸಾರಿಗೆ ಸಂಸ್ಥೆಯಿಂದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ ಉಚಿತವಾಗಿ ಲಘು ವಾಹನ ಮತ್ತು ಬಾರಿ ವಾಹನ ಚಾಲನಾ ತರಬೇತಿ ನೀಡಿ ಸಾಯಿಗೆ ಕಚೇರಿಯಿಂದ ಚಾಲನ ಅನುಜ್ಞಾ ಪತ್ರ ಮತ್ತು ಬ್ಯಾಡ್ಜ್ ನೀಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿರುತ್ತದೆ ಹಾಗಾಗಿ ಉಚಿತ ಕಲಿಯಲು ಆಸಕ್ತಿ ಇದ್ದವರು ಅರ್ಜಿಯನ್ನು ಸಲ್ಲಿಸಬಹುದು.
ಉಚಿತ ಚಾಲನ ತರಬೇತಿಗೆ ಅರ್ಜಿ ಸಲ್ಲಿಸಲು ಬೇಕಾಗುವ ದಾಖಲಾತಿಗಳು.!
ಬಿಎಂಟಿಸಿ ಸಾರಿಗೆ ಸಂಸ್ಥೆಯಿಂದ ಉಚಿತವಾಗಿ ಡ್ರೈವಿಂಗ್ ತರಬೇತಿಯನ್ನು ನೀಡಲಾಗುತ್ತಿದ್ದು ಇದರಲ್ಲಿ ಎರಡು ರೀತಿಯ ತರಬೇತಿಯನ್ನು ನೀಡಲಾಗುತ್ತದೆ ಮೊದಲನೆಯದಾಗಿ ಲಘು ವಾಹನ ಮತ್ತು ಬಾರಿ ವಾಹನ ತರಬೇತಿಯನ್ನು ನೀಡಲಾಗುತ್ತಿದ್ದು ಲಘುವಹನ ತರಬೇತಿಯಲ್ಲಿ ಕಾರ್ ಮತ್ತು ಜೀಪ್ ವಾಹನಗಳ ತರಬೇತಿ ನೀಡಲಿದ್ದು ಇದಕ್ಕೆ ಅರ್ಜಿ ಸಲ್ಲಿಸಲು ಕನಿಷ್ಠ 18 ವರ್ಷ ವಯೋಮಿತಿ ತುಂಬಿರಬೇಕು ಹಾಗೂ ಗರಿಷ್ಠ 45 ವರ್ಷ ಮೀರಿರಬಾರದು.
ಇನ್ನು ಬಾರಿ ವಾಹನ ಚಾಲನ ತರಬೇತಿಯಲ್ಲಿ ಬಸ್ ಡ್ರೈವಿಂಗ್ ತರಬೇತಿ ನೀಡಲಿದ್ದು ಇದಕ್ಕೆ ಅರ್ಜಿ ಸಲ್ಲಿಸಲು ಕನಿಷ್ಠ 20 ವರ್ಷ ಮತ್ತು ಗರಿಷ್ಠ 45 ವರ್ಷ ಇರಬೇಕು ಹಾಗೂ ಲಘು ವಾಹನದ ಲೈಸೆನ್ಸ್ ಪಡೆದು ಕನಿಷ್ಠ ಒಂದು ವರ್ಷ ಆಗಿರಬೇಕು. ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳು ಎಂದರೆ.
- ಅಭ್ಯರ್ಥಿಯ ಆಧಾರ್ ಕಾರ್ಡ್
- ಜಾತಿ ಮತ್ತು ಆದಾಯ ಪ್ರಮಾಣ ಪತ್ರ
- ಎಸ್ ಎಸ್ ಎಲ್ ಸಿ ಅಂಕಪಟ್ಟಿ
- ಜನನ ಪ್ರಮಾಣ ಪತ್ರ
- ಲಘು ವಾಹನಕ್ಕೆ ಶಾಲಾ ವರ್ಗಾವಣೆ ಪ್ರಮಾಣ ಪತ್ರ
- ಬಾರಿ ವಾಹನಕ್ಕೆ ಕನಿಷ್ಠ ಒಂದು ವರ್ಷ ಆಗಿರುವ ಲೈಸೆನ್ಸ್
ಉಚಿತ ಚಾಲನ ತರಬೇತಿಗೆ ಅರ್ಜಿ ಸಲ್ಲಿಸುವುದು ಹೇಗೆ.?
ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯಿಂದ ನೀಡಲಾಗುತ್ತಿರುವ ಉಚಿತ ಡ್ರೈವಿಂಗ್ ತರಬೇತಿಗೆ ಅರ್ಜಿಯನ್ನು ಆನ್ಲೈನ್ ಮೂಲಕ ಸಲ್ಲಿಸಬಹುದು ಅರ್ಜಿ ಸಲ್ಲಿಸಲು ಜನವರಿ 31 ಕೊನೆಯ ದಿನಾಂಕ ಆಗಿರುತ್ತದೆ ಅರ್ಜಿ ಸಲ್ಲಿಸಲು ಬಿಎಂಟಿಸಿ ಸಾರಿಗೆ ಸಂಸ್ಥೆಯ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ https://mybmtc.karnataka.gov.in ಅರ್ಜಿಯನ್ನು ಸಲ್ಲಿಸಬಹುದು ಧನ್ಯವಾದಗಳು.. ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ