ಹಲೋ ಗೆಳೆಯರೇ,
ಭಾರತದ ಬಹು ದಿನಗಲ ಕನಸು ಈಡೇರುವ ದಿನಗಳು ಸಮೀಪದಲ್ಲಿದೆ . ಚಂದ್ರನತ್ತ ಭಾರತ ೩ ನೇ ಹೆಜ್ಜೆ. isro ದ ಚಂದ್ರಯಾನ ಭಾರತಕ್ಕೆ ಯಾಕೆ ಎಷ್ಟೊಂದು ಮಹತ್ವವಾಗಿದೆ . ಈಗಾಗಲೇ ೨ ಬಾರಿ ಚಂದ್ರಯಾನವನ್ನು ಭಾರತವು ಪೂರ್ಣಗೊಳಿಸಿದೆ . ಭಾರತದ ಹೆಮ್ಮೆಯ ಶಂಶೋಧನಾ ಸಂಸ್ಥೆ ಇಸ್ರೋ ೩ನೇ ಬಾರಿ ತನ್ನ ಯಾನವನ್ನು ಪೂರ್ಣಗೊಳಿಸುವಲ್ಲಿ ದಾಪುಗಾಲಿಡುತ್ತಲಿದೆ .
ಚಂದ್ರಯಾನ-೩
ಮಿಷನ್ ಹೆಸರು – ಚಂದ್ರಯಾನ-೩
ಉಡಾವಣೆ ದಿನಾಂಕ – ಜೂಲೈ ೧೪ ಶುಕ್ರವಾರ
ಉಡಾವಣೆ ಸಮಯ – ಮದ್ಯಾಹ್ನ ೨:೩೫
ಲ್ಯಾಂಡಿಂಗ್ ದಿನಾಂಕ – ಆಗಸ್ಟ ೨೩ & ೨೪
ಉಡಾವಣೆ ಸ್ಥಳ – ಶ್ರೀ ಹರಿಕೋಟಾ
ಯೋಜನಾ ವೆಚ್ಚ – ೬೧೫
ರಾಕೆಟನ ಹೆಸರು – GSLV-Mk೩
ಇದರಲಿ ಇಸ್ರೋದ ಪರಿಶ್ರಮ ಸತತವಾಗಿದೆ . ಈ ಯಾನಕ್ಕೆ ಪೂರ್ಣ ಬೆಂಬಲ ನೀಡಿದ ನಮ್ಮ ವಿಜ್ಞಾನಿಗಳಿಗೆ ಧನ್ಯವಾದಗಳನ್ನು ಅರ್ಪಿಸಲೇಬೇಕು . ಅಲ್ಲದೆ ಈ ಚಂದ್ರಯಾನಕ್ಕ್ಕೆ ಯಾಕೆ ಎಲ್ಲ ದೇಶಗಳು ಅಷ್ಟು ಮಹತ್ವವನ್ನು ನೀಡಿವೆ . ಯಾಕೆ ಅಂದರೆ ಅಷ್ಟು ಸುಲಭದ ಹಾದಿಯನ್ನು ಹೊಂದಿಲ್ಲ . ಈ ಹಿಂದೆ ಬಹಳ ದೇಶಗಳು ಚಂದ್ರಯಾನವನ್ನು ಕೈಗೊಂಡು ವಿಫಲವಾಗಿದ್ದವು . ನಮ್ಮ ದೇಶವು ಒಳ್ಳೆಯ ವಿಜ್ಞಾನಿಗಳ ತಂಡವನ್ನು ಹೊಂದಿದೆ . ಸರ್ಕಾರವು ಈ ಮಹತ್ವ ಕಾರ್ಯಕ್ಕೆ ಒಳ್ಳೆಯ ಒತ್ತನ್ನು ನೀಡಿದೆ . ಈ ಚಂದ್ರಯಾನ ೩ ಎನ್ನುವುದು ಚಂದ್ರಯಾನ ೨ ರ ಮುಂದುವರಿದ ಭಾಗವಾಗಿದೆ . ೨೦೧೯ ರಲ್ಲಿ ಚಂದ್ರಯಾನ ೨ ತಾಂತ್ರಿಕ ದೋಶದಿಂದಾಗಿ ವಿಫಲಗೊಂಡಿತ್ತು. ಮತ್ತೆ ಈಗ ಯಶಸ್ವಿಯಾಗುವಲ್ಲಿ ಕೆಲವೇ ಕೆಲವುದಿನ ಉಳಿದಿವಿ . ಅಲ್ಲದೆ ಚಂದ್ರ ಯಾನದಲ್ಲಿ ಚಂದ್ರನ ದಕ್ಷಿಣ ದ್ರುವಕ್ಕೆ ಬಹಳ ಪ್ರಾಮುಖ್ಯತೆಯನ್ನು ನೀಡಲಾಗಿದೆ .
ಸ್ನೇಹಿತರ ನಾವು ಚಂದ್ರನ ಮೇಲೆ ಎಸ್ಟೇ ಉಪಗ್ರಹ ಕಳಿಸಿದರು ಎಷ್ಟೇ ಸಂಶೋಧನೆ ನೆಡೆಸಿದರು ದಕ್ಷಿಣ ದ್ರುವ ಅನ್ನೋದು ಇನ್ನು ನಿಗೂಢ ವಾಗಿದೆ . ಚಂದ್ರನ ಮೇಲೆ ಎಷ್ಟೋ ದೇಶಗಳು ಉಪಗ್ರಹವನ್ನು ಕಳಿಸಿದ್ದರು ನೀರಿನ ಇರುವಿಕೆಯು ಭಾರತಕ್ಕೆ ಮಾತ್ರ ಪತ್ತೆಯಾಗಿದೆ . ದಕ್ಷಿಣ ಧ್ರುವವು ಹೆಚ್ಚಿನ ನಿರಿನ ಅಂಶವನ್ನು ಹೊಂದಿದೆ . ಚಂದ್ರನಲ್ಲಿ ನೀರು ಸಿಕ್ಕಿದರೆ ನಮಗೆ ವಾಸಯೋಗ್ಯ ಗ್ರಹವು ಆಗುತ್ತದೆ . ನಾವು ಭೂಮಿಯ ಹುಟ್ಟಿನ ಬಗ್ಗೆ ತಿಳಿಯಬೇಕೆಂದರೆ ಚಂದ್ರನ ಮೇಲೆ ನಮ್ಮ ಶಂಶೋಧನೆ ಆಗಲೇ ಬೇಕಾಗಿದೆ . ೪. ೮ಬಿಲಿಯನ್ ವಷಗಳ ಹಿಂದೆ ಭೂಮಿ ಮತ್ತು ಮಂಗಳನ ಗಾತ್ರದ ತಿಯ ಆ ಎನ್ನುವ ಗ್ರಹವೊಂದು ಡಿಕ್ಕಿ ಹೊಡೆದ ಪರಿಣಾಮ ಚಂದ್ರ ಹುಟ್ಟಿದ ಎಂದು ಹೇಳಲಾಗುತ್ತದೆ . ಹೀಗಾಗಿ ಚಂದ್ರನ , ಭೂಮಿಯ ಮತ್ತು ಬೇರೆರೆ ಗ್ರಹಗಳ ಹುಟ್ಟಿಗೆ ಉತ್ತರ ಸಿಗಬಹುದು ಎನ್ನುವ ಕುತೂಹಲ ವಿಜ್ಞಾನಿಗಳಿಗೆ ಮೂಡಿದೆ . ಈಗಾಗಲೇ ನಮ್ಮ ಯೋಜನೆ ಇನ್ನು ಕೆಲವೇ ದಿನಗಲ್ಲಿ ಸಂಪೂರ್ಣ ಗೊಳ್ಳಲಿದೆ . ಒಟ್ಟಾರೆ ಇದರ ವೆಚ್ಚ ೬೧೪ ಕೋಟಿ ರೂಪಾಯಿಗಳು ಮತ್ತು ಇದರ ತೂಕ ೩೯೨೬ ಕೆಜಿಗಳಷ್ಟು ತೂಕವನ್ನು ಹೊಂದಿದೆ . ಅಲ್ಲದೆ ಈ ಯೋಜನೆಯನ್ನು ನಮ್ಮ ಭಾರತ ಸರ್ಕಾರವು ಬಹಳ ಕಡಿಮೆ ವೆಚ್ಚದಲ್ಲಿ ಮಾಡಿದೆ .
ಚಂದ್ರಯಾನ-೩ ರಿಂದ ಭಾರಕ್ಕಿರುವ ಲಾಭಗಳು
- ಬೇರೆ ಬೇರೆ ದೇಶಗಳಿಂದ ಇಸ್ರೋದ ಬಾಹ್ಯಾಕಾಶ ಯೋಜನೆಗಳಿಗೆ ಬೇಡಿಕೆ
- ಬಾಹ್ಯಾಕಾಶದಲ್ಲಿ ಖಾಸಗಿ ಹೂಡಿಕೆಗೆ ಭಾರತಕ್ಕೆ ಅವಕಾಶವಿದೆ
- ಇದಲ್ಲದೆ ೩ ರಾಷ್ಟ್ರಗಳು ಚಂದ್ರಯಾನ ಮಾಡಿದರು ಕೆಲವು ಪ್ರಶ್ನೆಗಳಿಗೆ ಇನ್ನು ಉತ್ತರ ಸಿಕ್ಕಿಲ್ಲ
- ಚಂದ್ರನ ಮೇಲೆ ನೀರಿದೆ ಎಂದು ಹೇಳಿದ್ದೆ ಭಾರತದ ವಿಜ್ಞಾನಿಗಳು
- ಚಂದ್ರನ ಮೇಲೆ ಏರುವಂತ ಖನಿಜಅಂಶಗಳ ಪತ್ತೆಗೆ ಅವಕಾಶ
- ಚಂದ್ರನ ಮೇಲೆ ಮನುಷ್ಯ ಬದುಕಲು ಯೋಗ್ಯ ಪರಿಸ್ಥಿತಿ ಇದೆಯಾ ಎಂದು ಪರೀಕ್ಷಿಸಬಹುದು
- ಚಂದ್ರನ ದಕ್ಷಿಣ ದ್ರುವದಲ್ಲಿ ಏನಿದೆ ಎಂದು ಅನ್ವೇಷಿಸಿದ ಹೆಗ್ಗಳಿಕೆ ಭಾರತಲ್ಲೇ ಸಲ್ಲುತ್ತದೆ .
1963 ಅಮೆರಿಕಾದ ಅಪ್ಪೋಲೋ 11 ಚಂದ್ರನ ತಲುಪಿದ್ದು ನಾಲ್ಕು ದಿನ ಆರು ಗಂಟೆಯಲ್ಲಿ, 2013 ಚೀನಾದ ಚಾಂಗ್ ೩ ಚಂದ್ರನ ತಲುಪಿದ್ದು 13 ದಿನದಲ್ಲಿ, 2023 ಭಾರತದ ಚಂದ್ರಯಾನ- 3 ಚಂದ್ರನನ್ನು ತಲುಪಲು 40 ದಿನ ತೆಗೆದುಕೊಳ್ಳುತ್ತದೆ. ಏಕೆಂದರೆ ನಮಗೆ ಚಂದ್ರನನ್ನು ತಲುಪಲು ಇಷ್ಟುಏಕೆ ಸಮಯ ತೆಗೆದುಕೊಳ್ಳುತ್ತದೆ ಎಂಬ ಕುತೂಹಲಗಳು ನಮಗೆಲ್ಲರಿಗೂ ಸಹಜವಾಗಿ ಮೂಡುತ್ತದೆ. ನಮ್ಮಲ್ಲಿ ಅಷ್ಟು ಅತ್ಯಧುನಿಕ ಮಟ್ಟದ ತಂತ್ರಜ್ಞಾನವನ್ನು ಹೊಂದಿರುವುದಿಲ್ಲ, ಚೀನಾ, ಅಮೇರಿಕಾ, ರಷ್ಯಾ ದೇಶಗಳಿಗೆ ಹೋಲಿಸಿದರೆ ಭಾರತವು ಅತಿ ಕಡಿಮೆ ಖರ್ಚಿನಲ್ಲಿ ಪ್ರಗತಿಯನ್ನು ಸಾಧಿಸುತ್ತಿದೆ. ಇತರ ದೇಶಗಳು ತಮ್ಮ ಆದಾಯದಲ್ಲಿ ದೊಡ್ಡ ಮೊತ್ತವನ್ನು ಈ ಕಾರ್ಯಕ್ಕಾಗಿ ಉಪಯೋಗಿಸುತ್ತಿದೆ, ಆದರೆ ಭಾರತವು ಕಡಿಮೆ ಖರ್ಚಿನಲ್ಲಿ ಈ ಚಂದ್ರಯಾನವನ್ನು ಯಶಸ್ವಿಗೊಳಿಸಲು ದಾಪುಗಾಲು ಇಟ್ಟಿದೆ. ನಮ್ಮ ಚಂದ್ರಯಾನ-3 ಯಶಸ್ವಿಯಾಗಲಿ ಎಂದು ಹಾರೈಸೋಣ. ನಮ್ಮ ದೇಶದ ಕೀರ್ತಿಯನ್ನು ಈ ಚಂದ್ರಯಾನವು ಇನ್ನು ಎತ್ತರಕ್ಕೆ ತೆಗೆದುಕೊಂಡು ಹೋಗುತ್ತದೆ, ಇಲ್ಲಿಯವರೆಗೆ ಈ ಲೇಖನವನ್ನು ಓದಿದ್ದಕ್ಕೆ ಧನ್ಯವಾದಗಳು .