ಎಲ್ಲರಿಗೂ ನಮಸ್ಕಾರ,
ಸಾಮಾನ್ಯವಾಗಿ ಮಳೆಗಾಲದಲ್ಲಿ ಅತಿ ಹೆಚ್ಚು ತಂಡಿ ಜ್ವರ ಶೀತದಂತ ಕಾಯಿಲೆಗಳು ಸಾಮಾನ್ಯವಾಗಿ ಜನರಿಗೆ ಬರುತ್ತಿತ್ತು. ಇದರಿಂದಜನರು ಆಸ್ಪತ್ರೆಗಳ ಮರೆಹೋಗುತ್ತಿದ್ದರು. ಆದರೆ ಚಳಿಗಾಲದಲ್ಲಿ ಕಾಣಿಸಿಕೊಳ್ಳುತ್ತಿದ್ದ ಕಾಯಿಲೆಯೊಂದು ಮಳೆಗಾಲದಲ್ಲಿ ಶುರುವಾಗಿದ್ದು ಈ ಕಾಯಿಲೆಯಿಂದ ಕಣ್ಣನ್ನು ಕಳೆದುಕೊಳ್ಳುವ ಸಾಧ್ಯತೆ ಹೆಚ್ಚಾಗಿದೆ. ಅದರ ಬಗ್ಗೆ ತಿಳಿದುಕೊಳ್ಳಲು ಈ ಲೇಖನವನ್ನು ಪೂರ್ತಿಯಾಗಿ ಓದಿ. ಸಾಮಾನ್ಯವಾಗಿ ಚಳಿಗಾಲದಲ್ಲಿ ಕಾಣಿಸಿಕೊಳ್ಳುತ್ತಿದ್ದ ಕಾಣಿಸಿಕೊಳ್ಳುತ್ತಿದ್ದ ಮದ್ರಾಸ್ ಐ ಈ ಬಾರಿ ಮಳೆಗಾಲದಲ್ಲಿ ಆರಂಭವಾಗಿದ್ದು ರಾಜ್ಯದ ಜನರ ಕಣ್ಣು ಕೆಂಪಗಾಗಿಸುತ್ತಿದೆ. ಮುಖ್ಯವಾಗಿ ಶಾಲಾ ಕಾಲೇಜುಗಳ ಹಾಗೂ ಹಾಸ್ಟೆಲ್ ವಿದ್ಯಾರ್ಥಿಗಳಲ್ಲಿ ಮದ್ರಾಸ್ ಐ ವೈರಾಣು ಅತಿ ವೇಗವಾಗಿ ಹರಡುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಕಂಜಕ್ಟಿ ವೈಟಿಸ್ ಎಂದು ಕರೆಯಲಾಗುವ ಮದ್ರಾಸ ಐ ಅಥವಾ ಕಣ್ಣು ವೈರಾಣಗಳಿಂದ ಹರಡುವ ಕಣ್ಣಿನ ಸಮಸ್ಯೆ. ವಾತಾವರಣದಲ್ಲಿ ತೇವಾಂಶ ಹೆಚ್ಚದಾಗ ಅಥವಾ ಚಳಿ ವಾತಾವರಣದಲ್ಲಿ ಹುಟ್ಟಿಕೊಳ್ಳುವ ವೈರಾಣುಗಳು ನೇರವಾಗಿ ಕಣ್ಣಿನ ಮೇಲೆ ಪರಿಣಾಮ ಉಂಟುಮಾಡುತ್ತದೆ. ಜುಲೈ ಆರಂಭದಿಂದಲೂ ರಾಜ್ಯಾದ್ಯಂತ ಮಳೆ ಸುರಿಯುತ್ತಿದ್ದು ಸೂರ್ಯನ ಕಿರಣಗಳ ದರ್ಶನ ಅಪರೂಪವಾಗಿದೆ. ಇದರ ಪರಿಣಾಮ ವಾತಾವರಣದಲ್ಲಿ ತೇವಾಂಶ ಹೆಚ್ಚಾಗಿ, ಅವಧಿಗೂ ಮೊದಲೇ ಮದ್ರಾಸ್ ಐ ವೈರಾಣು ದಾಂಗುಡಿ ಇಡುತ್ತಿದೆ. ತಮಿಳುನಾಡಿನಲ್ಲಿ ಈ ಸಮಸ್ಯೆ ವ್ಯಾಪಕವಾಗಿದ್ದು, ರಾಜ್ಯದಲ್ಲೂ ಬಾಧಿತರ ಸಂಖ್ಯೆ ಹೆಚ್ಚುಯುತ್ತಿದೆ .
ಸೋಂಕಿತರ ಸಂಖ್ಯೆ ಏರಿಕೆ
ಮಧ್ಯ ಕರ್ನಾಟಕ, ಮಲೆನಾಡು ಭಾಗದಲ್ಲಿ ಕಳೆದ 12 ದಿನಗಳಿಂದ ಪ್ರಕರಣಗಳು ಪತ್ತೆಯಾಗುತ್ತಿದ್ದು, ಮೂರು ದಿನಗಳಿಂದ ಈಚೆಗೆ ವೈರಾಣು ಸೋಂಕಿತರ ಸಂಖ್ಯೆ ವೃದ್ಧಿಸುತ್ತಿದೆ . ದಾವಣಗೆರೆಯ ಚಿಗಟೇರಿ ಜಿಲ್ಲಾಸ್ಪತ್ರೆ ಕಣ್ಣಿನ ವಿಭಾಗಕ್ಕೆ ನಿತ್ಯ ಮದ್ರಾಸ್ ಐ ಸಮಸ್ಯೆ ಹೊಂದಿರುವ 60ರಿಂದ 80 ರೋಗಿಗಳು ಬರುತ್ತಿದ್ದಾರೆ. ಉಳಿದಂತೆ ಖಾಸಗಿ ಐ ಕ್ಲಿನಿಕ್ ಗಳಲ್ಲೂ ಸೋಂಕಿತರೆ ತುಂಬಿದ್ದಾರೆ.
ಪರಿಹಾರ ಏನು?
- ಸಮಸ್ಯೆ ಇದ್ದವರು ಇತರರಿಂದ ದೂರ ಇರಬೇಕು
- ವೈದ್ಯರ ಬಳಿ ತೋರಿಸಿ ಐ ಡ್ರಾಪ್ಸ್ ಮಾತ್ರ ಹಾಕಿಸಿಕೊಳ್ಳಬೇಕು.
- ಸಮಸ್ಯೆ ಕಡಿಮೆ ಆಗುವವರೆಗೆ ಗಾಳಿಗೆ ಹೋಗಬಾರದು.
- ದ್ವಿಚಕ್ರ ವಾಹನ ಓಡಿಸಬಾರದು.
- , ಸ್ಕ್ರೀನ್ ಟೈಮ್ ಕಡಿಮೆ ಮಾಡಿ ಕಣ್ಣಿಗೆ ವಿಶ್ರಾಂತಿ ಕೊಡಬೇಕು.
ಮಕ್ಕಳೇ ಟಾರ್ಗೆಟ್
ಈ ಬಾರಿ ಮಕ್ಕಳು ಮದ್ರಾಸ್ ಐ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಜಿಲ್ಲೆಯ ಶಾಲೆ,, ಕಾಲೇಜುಗಳಲ್ಲಿ ಮದ್ರಾಸ್ ಐ ಹೊಂದಿರುವಮಕ್ಕಳ ಸಂಖ್ಯೆ ಹೆಚ್ಚಾಗಿದೆ. ಕೆಲ ಶಾಲೆಗಳಲ್ಲಿ ಕಣ್ಣಿನ ಸಮಸ್ಯೆ ಇರುವ ಮಕ್ಕಳನ್ನು ಮನೆಗೆ ಕಳುಹಿಸುತ್ತಿದ್ದಾರೆ. ಶಾಲೆ ಮಾತ್ರವಲ್ಲದೆ ವಸತಿಯುತ ಶಾಲೆ,, ಕಾಲೇಜುಗಳಹಾಸ್ಟೆಲ್ಗಳಲ್ಲಿ ಈ ಸಮಸ್ಯೆ ತೀವ್ರವಾಗಿದೆ. ಶಾಲಾ ಕಾಲೇಜು ಹಾಗು ಹಾಸ್ಟೆಲ್ ಗಳಲ್ಲಿ ವಿದ್ಯಾರ್ಥಿಗಳು ಒಟ್ಟಿಗೆ ಇರುವುದು, ಪೆನ್ನು ಮತ್ತು ಪುಸ್ತಕ ಮತ್ತಿತರ ವಸ್ತುಗಳನ್ನು ಶೇರ್ ಮಾಡುವುದು, ಊಟವನ್ನು ಶೇರ್ ಮಾಡುವುದು ರಿಂದ ವ್ಯಾಪಕವಾಗಿದೆ. ಆದಷ್ಟು ಸೋಂಕಿತ ವ್ಯಕ್ತಿಯಿಂದ ದೂರ ಇರುವುದು ಒಳ್ಳೆಯದು.
ಮದ್ರಾಸ ಐ ಗೆ ಕಾರಣವಾಗುವ ವೈರಸ್ ಗಳು ವೇಗವಾಗಿ ಹರಡುತ್ತವೆ. ಶಾಲೆ ಹಾಸ್ಟೆಲ್ ಗಳಲ್ಲಿ ಮಕ್ಕಳು ಗುಂಪು ಸೇರುವದರಿಂದ ಹರಡುವಿಕೆ ವೇಗ ತೀವ್ರವಾಗುತ್ತದೆ. ಹಾಗಂತ ಈ ವೈರಸ್ ಗಳು ಗಾಳಿ ಮೂಲಕ ಹರಡುವುದಿಲ್ಲ. ಸೋಂಕಿತ ವ್ಯಕ್ತಿ ಕಣ್ಣುಗಳನ್ನು ದ್ವಿತಿಸಿ ನೋಡಿದರೆ ಮದ್ರಾಸ ಐ ಬರುವುದಿಲ್ಲ. ನೀರು ಈ ವೈರಸ್ ಹರಡು, ಜೊತೆಗೆ ವಸ್ತುಗಳನ್ನು ಶೇರ್ ಮಾಡುವುದು, ಹೆಚ್ಚು ಜನರ ಭೇಟಿ, ಸಂಪರ್ಕದಿಂದ ಬೇಗ ವ್ಯಾಪಿಸುತ್ತದೆ. ವೈರಲ್ ಸಮಸ್ಯೆ ಆಗಿರುವ ಕಾರಣ ನಿರ್ದಿಷ್ಟ ಚಿಕಿತ್ಸೆ ಇಲ್ಲ. ಮುನ್ನೆಚ್ಚರಿಕೆ ಮದ್ದು, ಮನೆ ಮದ್ದುಮೊರೆ ಹೋಗದೆ ವೈದ್ಯರ ಬಳಿ ತೋರಿಸಿ, ಸೂಕ್ತ ಚಿಕಿತ್ಸೆಯನ್ನು ಪಡೆದುಕೊಳ್ಳಿ, ಇಲ್ಲಿಯವರೆಗೆ ಲೇಖನವನ್ನು ಓದಿದ್ದಕ್ಕೆ ಧನ್ಯವಾದಗಳು.