ಎಲ್ಲರಿಗೂ ನಮಸ್ಕಾರ..
ಕಾಲೇಜ್ ವಿದ್ಯಾರ್ಥಿಗಳಿಗೆ ಇದೀಗ ವಿಶ್ವವಿದ್ಯಾನಿಲಯದಿಂದ ಒಂದು ಹೊಸ ಅಪ್ಡೇಟ್ ನೀಡಿದೆ. ಈಗಾಗಲೇ ಶಾಲಾ ಕಾಲೇಜುಗಳು ಅರ್ಧ ವರ್ಷ ಮುಗಿಯಲು ಬಂದಿದ್ದು ಅಂದರೆ ಅರ್ಧ ವಾರ್ಷಿಕ ಪರೀಕ್ಷೆಯನ್ನು ಶಾಲೆಗಳಲ್ಲಿ ನೀಡಲಾಗುತ್ತಿದೆ ಅದೇ ರೀತಿ ಪದವಿ ವಿದ್ಯಾರ್ಥಿಗಳಿಗೆ ಸೆಮಿಸ್ಟರ್ ಪರೀಕ್ಷೆಗಳನ್ನು ನೀಡಲಾಗುತ್ತದೆ ಈ ಮಧ್ಯೆ ವಿಶ್ವವಿದ್ಯಾನಿಲಯದಿಂದ ಪದವಿ ವಿದ್ಯಾರ್ಥಿಗಳಿಗೆ ಒಂದು ಹೊಸ ಸೂಚನೆಯನ್ನು ನೀಡಿದೆ ಈ ಸೂಚನೆಯಿಂದ ವಿದ್ಯಾರ್ಥಿಗಳಿಗೆ ಮತ್ತಷ್ಟು ಭಾರ ಕಡಿಮೆ ಹಾಗಿದ್ದು ವಿದ್ಯಾರ್ಥಿಗಳಿಗೆ ಸಂತೋಷವನ್ನು ಉಂಟುಮಾಡಲಿದೆ, ಅಲ್ಲದೆ ಇದರಿಂದ ಫೇಲ್ ಆಗಿರುವ ವಿದ್ಯಾರ್ಥಿಗಳಿಗೆ ಮತ್ತೊಂದು ಅವಕಾಶ ಸಿಗಲಿದೆ ನೀವು ಕೂಡ ಪದವಿ ವಿದ್ಯಾರ್ಥಿಗಳು ಆಗಿದ್ದಲ್ಲಿ ಅಥವಾ ಮುಂದಿನ ವರ್ಷ ಪದವಿಗೆ ಸೇರುವುದಾದಲ್ಲಿ ಲೇಖನವನ್ನು ಪೂರ್ತಿಯಾಗಿ ಓದಿ ವಿಶ್ವವಿದ್ಯಾನಿಲಯದ ಈ ಹೊಸ ಅಪ್ಡೇಟ್ ನ ಬಗ್ಗೆ ಮಾಹಿತಿ ತಿಳಿದುಕೊಳ್ಳಿ.
ಪದವಿ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾನಿಲಯದಿಂದ ಒಂದು ಗುಡ್ ನ್ಯೂಸ್.!
ಪದವಿ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾನಿಲಯವು ಒಂದು ಹೊಸ ಅಪ್ಡೇಟ್ ನೀಡಿದ್ದು ಇವರಿಂದ ಬಹಳಷ್ಟು ವಿದ್ಯಾರ್ಥಿಗಳಿಗೆ ಅನುಕೂಲ ಆಗಲಿದೆ ಸದ್ಯ ಈಗಾಗಲೇ ರಾಜ್ಯ ಸರ್ಕಾರ ವಿದ್ಯಾರ್ಥಿಗಳಿಗಾಗಿ ಒಂದು ಗ್ಯಾರಂಟಿ ಯೋಜನೆಯನ್ನು ಕೂಡ ಜಾರಿ ಮಾಡಿದ್ದು ಇನ್ನು ಚಾಲನೆ ನೀಡುವುದು ಮಾತ್ರ ಬಾಕಿ ಉಳಿದಿದ್ದೆ ಅಲ್ಲದೆ ಈಗಾಗಲೇ ಶಾಲಾ ವಿದ್ಯಾರ್ಥಿಗಳ ಅರ್ಧ ವಾರ್ಷಿಕ ಪರೀಕ್ಷೆ ಹಾಗೂ ಕಾಲೇಜು ವಿದ್ಯಾರ್ಥಿಗಳ ಸೆಮಿಸ್ಟರ್ ಪರೀಕ್ಷೆಗಳು ಹತ್ತಿರ ಬಂದಿದ್ದು ಇನ್ನು ಕೆಲವೇ ದಿನಗಳು ಮಾತ್ರ ಬಾಕಿ ಉಳಿದಿದೆ ಈ ಮಧ್ಯೆ ರಾಜ್ಯದ ವಿಶ್ವವಿದ್ಯಾನಿಲಯವು ಪದವಿ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಒಂದು ಹೊಸ ಅಪ್ಡೇಟ್ ನೀಡಿದ್ದು ಇದರಿಂದ ಬಹಳಷ್ಟು ವಿದ್ಯಾರ್ಥಿಗಳಿಗೆ ಅನುಕೂಲ ಆಗಲಿದೆ.
ಹೌದು ಪದವಿ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾನಿಲಯದಿಂದ 5 ಮತ್ತು 6ನೇ ಸೆಮಿಸ್ಟರ್ ಫೇಲಾದರೆ ಅಂತಹ ವಿದ್ಯಾರ್ಥಿಗಳಿಗೆ ಪೂರಕ ಪರೀಕ್ಷೆ ನೀಡುವ ಬಗ್ಗೆ ಒಂದು ಹೊಸ ಅಪ್ಡೇಟ್ ಒಂದನ್ನು ವಿಶ್ವವಿದ್ಯಾನಿಲಯವು ವಿದ್ಯಾರ್ಥಿಗಳಿಗೆ ನೀಡಿದೆ ಹಾಗಾದ್ರೆ ಯಾವೆಲ್ಲ ಯುನಿವರ್ಸಿಟಿಯಲ್ಲಿ ಈ ನಿಯಮ ಜಾರಿಯಾಗಲಿದೆ ಹಾಗೆ ಯಾವ ವರ್ಷದಿಂದ ಈ ಹೊಸ ನಿಯಮವನ್ನು ಚಾಲನೆ ನೀಡಲಿದ್ದಾರೆ ಎಂದು ತಿಳಿಯೋಣ..
ಇದೆ ರೀತಿಯ ಹೊಸ ಮಾಹಿತಿ ಗಳಿಗಾಗಿ ನಮ್ಮ WhatsApp ಗ್ರೂಪ್ ಗೆ ಜಾಯಿನ್ ಆಗಿ. ಇಲ್ಲಿ ಕ್ಲಿಕ್ ಮಾಡಿ ಜಾಯಿನ್ ಆಗಿ
ವಿಶ್ವವಿದ್ಯಾನಿಲಯದ ಹೊಸ ಅಪ್ಡೇಟ್ ಆದರೂ ಏನು.?
ಈಗಾಗಲೇ ತಿಳಿಸಿದಾಗೆ ಪದವಿ ವಿದ್ಯಾರ್ಥಿಗಳಿಗೆ 5 ಮತ್ತು 6ನೇ ಸೆಮಿಸ್ಟರ್ ಪರೀಕ್ಷೆಯಲ್ಲಿ ಒಂದು ವೇಳೆ ಫೇಲಾದರೆ ಅಂತಹ ವಿದ್ಯಾರ್ಥಿಗಳಿಗೆ ಆ ಪರೀಕ್ಷೆಯನ್ನು ಮರು ಪರೀಕ್ಷೆ ಬರೆಯಲು ಅಂದರೆ ಪೂರಕ ಪರೀಕ್ಷೆ ಬರೆಯಲು ಮತ್ತೊಂದು ಅವಕಾಶವನ್ನು ಕೇವಲ ಒಂದೇ ತಿಂಗಳಿನಲ್ಲಿ ನೀಡಲಾಗುತ್ತದೆ ಎಂದು ವಿಶ್ವವಿದ್ಯಾನಿಲಯವು ಒಂದು ಹೊಸ ಅಪ್ಡೇಟ್ ನೀಡಿದೆ ಇದರಿಂದ ಈ ಹಿಂದೆ ಒಂದು ವಿಷಯ ಫೇಲ್ ಆದರೆ ಆ ವಿಷಯದ ಪರೀಕ್ಷೆ ಬರೆಯಲು ಒಂದು ವರ್ಷ ಕಾಯಬೇಕಾಗಿತ್ತು ಆದರೆ ಇನ್ನು ಮುಂದೆ ಕೇವಲ ಫೇಲಾದ ವಿಷಯದ ಪರೀಕ್ಷೆಯನ್ನು ಒಂದೇ ತಿಂಗಳಿನಲ್ಲಿ ಮರು ಪರೀಕ್ಷೆ ಬರೆಯಬಹುದು.
ಹೌದು ಇನ್ನು ಮುಂದೆ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳು ಫೇಲಾದ ಸಮಯದಲ್ಲಿ ಮರು ಪರೀಕ್ಷೆಯನ್ನು ಒಂದೇ ತಿಂಗಳಿಗೆ ನೀಡುವ ರೀತಿಯೇ ಪದವಿ ವಿದ್ಯಾರ್ಥಿಗಳಿಗೂ ಸಹ ಒಂದೇ ತಿಂಗಳಿನಲ್ಲಿ ಪರೀಕ್ಷೆಯನ್ನು ನೀಡಲಾಗುತ್ತದೆ ಇದರಿಂದ ಒಂದು ವರ್ಷ ಪರೀಕ್ಷೆ ಬರೆಯಲು ಕಾಯುವ ಅವಶ್ಯಕತೆ ಇರುವುದಿಲ್ಲ ಇದರಿಂದ ಬಹಳಷ್ಟು ವಿದ್ಯಾರ್ಥಿಗಳಿಗೆ ಅನುಕೂಲ ಆಗಲಿದೆ.
ಇದೆ ರೀತಿಯ ಹೊಸ ಮಾಹಿತಿ ಗಳಿಗಾಗಿ ನಮ್ಮ WhatsApp ಗ್ರೂಪ್ ಗೆ ಜಾಯಿನ್ ಆಗಿ. ಇಲ್ಲಿ ಕ್ಲಿಕ್ ಮಾಡಿ ಜಾಯಿನ್ ಆಗಿ
ಹಾಗಾದ್ರೆ ಈ ಹೊಸ ನಿಯಮ ಶುರು ಆಗೋದು ಯಾವಾಗ.?
ರಾಜ್ಯದಲ್ಲಿ ಇದೀಗ ಬೆಂಗಳೂರು ವಿಶ್ವವಿದ್ಯಾನಿಲಯದಲ್ಲಿ ಮಾತ್ರ ಈ ಹೊಸ ಅಪ್ಡೇಟ್ ಬಗ್ಗೆ ಮಾಹಿತಿಯನ್ನು ನೀಡಲಾಗಿದೆ ಸದ್ಯ ಪದವಿ ವಿದ್ಯಾರ್ಥಿಗಳಿಗೆ ಪೂರಕ ಪರೀಕ್ಷೆ ನೀಡುವ ಈ ಹೊಸ ನಿಯಮವನ್ನು ಇದೇ ವರ್ಷದಿಂದ ಅಂದರೆ 2023 24ನೇ ಸಾಲಿನ ಪರೀಕ್ಷೆಗಳಲ್ಲಿ ಈ ನಿಯಮ ಅನ್ವಯ ಆಗುವುದಾಗಿ ಬೆಂಗಳೂರು ವಿಶ್ವವಿದ್ಯಾನಿಲಯ ಸೂಚನೆಯನ್ನು ನೀಡಿದೆ.
ಇನ್ನು ಈ ಪದವಿ ಪೂರಕ ಪರೀಕ್ಷೆ ಕೇವಲ ಐದು ಮತ್ತು ಆರನೇ ಸೆಮಿಸ್ಟರ್ ನಲ್ಲಿ ಫೇಲಾದ ಪರೀಕ್ಷೆಗಳಿಗೆ ಮಾತ್ರ ಇರುತ್ತದೆ ಈ ಹಿಂದಿನ ಯಾವುದೇ ನಾಲ್ಕು ಸೆಮಿಸ್ಟರ್ ಪರೀಕ್ಷೆಗಳಿಗೆ ಈ ಪೂರಕ ಪರೀಕ್ಷೆ ಅನ್ವಯಿಸುವುದಿಲ್ಲ ಇದರಿಂದ ಕೊನೆಯ ವರ್ಷದಲ್ಲಿ ಒಂದು ವೇಳೆ ಒಂದು ವಿಷಯದಲ್ಲಿ ಫೇಲಾದರೆ ಒಂದು ವರ್ಷ ಕಾದು ಪರೀಕ್ಷೆಯನ್ನು ಬರೆಯಬೇಕಾಗಿತ್ತು. ಈ ಸಮಯದಲ್ಲಿ ಅವರ ಒಂದು ವರ್ಷದ ಸಮಯ ವ್ಯರ್ಥ ಆಗುತ್ತಿತ್ತು ಎಂಬ ವಿಷಯವನ್ನು ಹರಿತ ಬೆಂಗಳೂರು ವಿಶ್ವವಿದ್ಯಾನಿಲಯ ರಾಜ್ಯದಲ್ಲೇ ಮೊಟ್ಟಮೊದಲ ಬಾರಿಗೆ ಈ ಹೊಸ ನಿಯಮವನ್ನು ಪದವಿ ವಿದ್ಯಾರ್ಥಿಗಳಿಗಾಗಿ ತಂದಿರುವಂಥದ್ದು. ಇನ್ನು ಕೆಲವು ದಿನಗಳ ಬಳಿಕ ರಾಜ್ಯದ ಮತ್ತಷ್ಟು ವಿಶ್ವವಿದ್ಯಾನಿಲಯಗಳು ಈ ಬಗ್ಗೆ ಚರ್ಚೆ ನಡೆಸಿ ವಿಷಯವನ್ನು ತಿಳಿಸಬೇಕಾಗಿದೆ ಒಂದು ವೇಳೆ ನೀವು ಯಾವ ವಿಶ್ವವಿದ್ಯಾನಿಲಯದಲ್ಲಿ ಓದುತ್ತಿದ್ದೀರೋ ಆ ವಿಶ್ವವಿದ್ಯಾನಿಲಯದಲ್ಲಿ ಬರುವ ವರ್ಷದಿಂದ ಈ ನಿಯಮ ಚಾಲನೆ ಗೊಳ್ಳಬಹುದು ಸದ್ಯಕ್ಕೆ ಬೆಂಗಳೂರು ವಿಶ್ವವಿದ್ಯಾನಿಲಯದಲ್ಲಿ ಈ ವರ್ಷದಿಂದ ಚಾಲನೆಗೊಳ್ಳಲಿದೆ ಧನ್ಯವಾದಗಳು…
ಇದೆ ರೀತಿಯ ಹೊಸ ಮಾಹಿತಿ ಗಳಿಗಾಗಿ ನಮ್ಮ WhatsApp ಗ್ರೂಪ್ ಗೆ ಜಾಯಿನ್ ಆಗಿ. ಇಲ್ಲಿ ಕ್ಲಿಕ್ ಮಾಡಿ ಜಾಯಿನ್ ಆಗಿ