ಬೆಂಗಳೂರು ರೂರಲ್ ಡಿಸ್ಟ್ರಿಕ್ಟ್ ಕೋರ್ಟ್ ನಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ.! ಕೇವಲ SSLC ಪಾಸ್ ಆಗಿದ್ದರೆ ಸಾಕು.?

ಎಲ್ಲರಿಗೂ ನಮಸ್ಕಾರ..

ಬೆಂಗಳೂರು:  ಕರ್ನಾಟಕ ರಾಜ್ಯ ಸರ್ಕಾರಿ ಉದ್ಯೋಗ ಅವಕಾಶಕ್ಕಾಗಿ ಕಾಯುತ್ತಿರುವ ಅಭ್ಯರ್ಥಿಗಳಿಗೆ ಇದೀಗ ಬೆಂಗಳೂರು ರೂರಲ್ ಡಿಸ್ಟ್ರಿಕ್ಟ್ ಕೋರ್ಟ್ ನಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿಗೆ ಅಧಿಸೂಚನೆಯನ್ನು ಹೊರಡಿಸಲಾಗಿದೆ.  ಬೆಂಗಳೂರಿನ ರೂರಲ್ ಕೋರ್ಟ್ ನಲ್ಲಿ ಸುಮಾರು 58 ಹುದ್ದೆಗಳು ಕಾಲಿ ಇದ್ದು ಹುದ್ದೆಗಳ ಬರ್ತಿಗಾಗಿ ಎಸ್ಎಸ್ಎಲ್ಸಿ ಪಾಸ್  ಆಗಿರುವ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ, ನೀವು ಕೂಡ ಎಸ್ ಎಸ್ ಎಲ್ ಸಿ ಪಾಸ್ ಆಗಿದ್ದು ಸರ್ಕಾರಿ ಉದ್ಯೋಗಕ್ಕಾಗಿ ಕಾಯುತ್ತಿದ್ದರೆ  ಈ ಹುದ್ದೆಗೆ ಅರ್ಜಿ ಸಲ್ಲಿಸಲು ಇದರ ಸಂಪೂರ್ಣ ಮಾಹಿತಿಯ ಬಗ್ಗೆ ತಿಳಿಯಲು ಲೇಖನವನ್ನು ಪೂರ್ತಿಯಾಗಿ ಓದಿ. 

WhatsApp Group Join Now
Telegram Group Join Now

ಬೆಂಗಳೂರು ರೂರಲ್ ಡಿಸ್ಟ್ರಿಕ್ಟ್   ಕೋರ್ಟ್ ನಲ್ಲಿ 58 ಖಾಲಿ ಹುದ್ದೆಗಳು. 

 ಕರ್ನಾಟಕ ರಾಜಧಾನಿ ಬೆಂಗಳೂರು ರೂರಲ್ ಡಿಸ್ಟ್ರಿಕ್ಟ್ ಕೋರ್ಟ್ ನಲ್ಲಿ ಖಾಲಿ ಇರುವ 58 ಹುದ್ದೆಗಳ ನೇಮಕಾತಿಗೆ ಇದೀಗ ಸರ್ಕಾರದಿಂದ ಅಧಿಸೂಚನೆಯನ್ನು ನೀಡಲಾಗಿದೆ ಒಟ್ಟು 58  ಅರ್ಜಿಯನ್ನು ಆಹ್ವಾನಿಸಿದ್ದು ಇದರಲ್ಲಿ 29 ಹುದ್ದೆಗಳು ಟೈಪಿಸ್ಟ್ ಹುದ್ದೆಗಳಾಗಿದ್ದು ಇನ್ನುಳಿದ 29 ಹುದ್ದೆಗಳು ಪಿಯೋನ್ ಹುದ್ದೆಗಳು ಆಗಿವೆ. ಈ ಎರಡು ಹುದ್ದೆಗಳಿಗೂ ಅರ್ಜಿ ಸಲ್ಲಿಸಲು ಸರ್ಕಾರದಿಂದ ಅವಕಾಶವನ್ನು ನೀಡಲಾಗಿದ್ದು ಇದೀಗ ಅಭ್ಯರ್ಥಿಗಳಿಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ತಿಳಿಸಲಾಗಿದೆ ಆಸಕ್ತ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. 

ಬೆಂಗಳೂರು ರೂರಲ್ ಕೋರ್ಟ್ ನಲ್ಲಿ ಖಾಲಿ ಇರುವ ಹುದ್ದೆಗೆ ಅರ್ಜಿ ಸಲ್ಲಿಸಲು ವಿದ್ಯಾರ್ಹತೆ ಮತ್ತು ವಯೋಮಿತಿ.!

ಬೆಂಗಳೂರು ರೂರಲ್ ಕೋರ್ಟ್ ನಲ್ಲಿ ಖಾಲಿ ಇರುವ 29 ಟೈಪಿಸ್ಟ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಕೇವಲ ಎಸ್ ಎಸ್ ಎಲ್ ಸಿ ಪಾಸ್ ಆಗಿದ್ದರೆ ಸಾಕು ಅರ್ಜಿಯನ್ನು ಸಲ್ಲಿಸಬಹುದು ಆದರೆ ಅಭ್ಯರ್ಥಿಗೆ ಟೈಪಿಂಗ್ ತರಬೇತಿಯು ಆಗಿರಬೇಕಾಗುತ್ತದೆ ಜೊತೆಗೆ ಟೈಪಿಂಗ್ ತರಬೇತಿಗೆ ಸಂಬಂಧಿಸಿದಂತೆ ಪ್ರಮಾಣ ಪತ್ರವನ್ನು ಹೊಂದಿರಬೇಕಾಗುತ್ತದೆ ಇನ್ನು 29 ಪಿಯೋನ್ ಹುದ್ದೆಗಳಿಗೂ ಕೇವಲ ಎಸ್ ಎಸ್ ಎಲ್ ಸಿ ಪಾಸ್ ಆಗಿದ್ದರೆ ಸಾಕು, ಅರ್ಜಿಯನ್ನು ಸಲ್ಲಿಸಬಹುದಾಗಿರುತ್ತದೆ. 

 ಇನ್ನು ಈ ಹುದ್ದೆಗಳಿಗೆ ಎಸ್ ಎಸ್ ಎಲ್ ಸಿ ಪಾಸ್ ಆಗಿರುವ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಲು ಕನಿಷ್ಠ 18 ವರ್ಷ ಮೇಲ್ಪಟ್ಟ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿರುತ್ತದೆ,

ವಯೋಮಿತಿ  ಜನರಲ್ ಅಭ್ಯರ್ಥಿಗಳಿಗೆ:  35 ವರ್ಷ

 2A, 2B, 3A, 3B ಅಭ್ಯರ್ಥಿಗಳಿಗೆ 38 ವರ್ಷ ವೈಯೋಗಿತಿ

 ಹಾಗೂ ಎಸ್ಸಿ ಎಸ್ಟಿ ಅಭ್ಯರ್ಥಿಗಳಿಗೆ 40 ವರ್ಷ ವಯೋಮಿತಿ ನೀಡಲಾಗಿದೆ.

ಬೆಂಗಳೂರು ಕೋರ್ಟ್ ನಲ್ಲಿ ಖಾಲಿ ಇರುವ ಹುದ್ದೆಗಳ ವೇತನ ಮತ್ತು ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ.?

ಈ ಮೇಲೆ ತಿಳಿಸಿದ ಹಾಗೆ ಬೆಂಗಳೂರು ರೂರಲ್ ಕೋರ್ಟ್ ನಲ್ಲಿ ಸುಮಾರು 58 ಹುದ್ದೆಗಳು ಖಾಲಿ ಇದ್ದು ಇದರಲ್ಲಿ 29 ಹುದ್ದೆಗಳು ಟೈಪಿಸ್ಟ್ ಹುದ್ದೆಗಳು ಆಗಿರುತ್ತವೆ ಮತ್ತು 29 ಹುದ್ದೆಗಳು ಹುದ್ದೆಗಳು ಆಗಿರುತ್ತದೆ ಈ ಎರಡು ಹುದ್ದೆಗಳಿಗೂ ಎಸ್ ಎಸ್ ಎಲ್ ಸಿ ಪಾಸ್ ಆಗಿರುವ ಯಾವುದೇ ಅಭ್ಯರ್ಥಿಯು ಅರ್ಜಿಯನ್ನು ಸಲ್ಲಿಸಬಹುದಾಗಿರುತ್ತದೆ,  ಇನ್ನು ಈ ಹುದ್ದೆಗೆ ಸುಮಾರು 21,400 ಗಳಿಂದ 42,000 ವರೆಗೆ ವೇತನ ಸಿಗಲಿದೆ.

ಇನ್ನು ಈ ಹುದ್ದೆಗೆ ಅರ್ಜಿಯನ್ನು ಆನ್ಲೈನ್ ಮೂಲಕ ಸಲ್ಲಿಸಬಹುದಾಗಿತ್ತು ಅರ್ಜಿ ಸಲ್ಲಿಸಲು 16/02/2024 ರಿಂದ 20/03/2024  ನೇ ದಿನಾಂಕದವರೆಗೆ ಅರ್ಜಿ ಸಲ್ಲಿಸಲು ಅವಕಾಶವನ್ನು ನೀಡಲಾಗಿದೆ ಹಾಗೂ ಮಾರ್ಚ್ 20ನೇ ದಿನಾಂಕ ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ ಆಗಿರುತ್ತದೆ.

 

ಅರ್ಜಿ ಸಲ್ಲಿಸುವ ವಿಧಾನ ಮತ್ತು ಅರ್ಜಿ ಶುಲ್ಕ.?

 ಅರ್ಜಿಯನ್ನು ಆನ್ಲೈನ್ ಮೂಲಕ ಸಲ್ಲಿಸಬಹುದಾಗಿತ್ತು ಅರ್ಜಿ ಸಲ್ಲಿಸಲು  ಹತ್ತಿರದ ಸೈಬರ್ ಸೆಂಟರ್ಗೆ ಭೇಟಿ ನೀಡಿ ಅರ್ಜಿಯನ್ನು ಸಲ್ಲಿಸಬಹುದು ಅಥವಾ  https://bengalururural.dcourts.gov.in  ವೆಬ್ಸೈಟ್ಗೆ ಭೇಟಿ ನೀಡಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ.   ಅರ್ಜಿ ಸಲ್ಲಿಸುವ ಜನರಲ್ ಅಭ್ಯರ್ಥಿಗಳಿಗೆ  200 ರೂಪಾಯಿಗಳ ಅರ್ಜಿ ಶುಲ್ಕ ಇರುತ್ತದೆ ಇನ್ನು 2A, 2B, 3A, 3B ಅಭ್ಯರ್ಥಿಗಳಿಗೆ 100 ರೂಪಾಯಿ ಅರ್ಜಿ ಶುಲ್ಕ ಇರುತ್ತದೆ ಇನ್ನುಳಿದ ಅಭ್ಯರ್ಥಿಗಳಿಗೆ ಯಾವುದೇ ಶುಲ್ಕ ಇರುವುದಿಲ್ಲ ಅರ್ಜಿ ಸಲ್ಲಿಸುವ ಆಸಕ್ತಿ ಮತ್ತು ಅರ್ಹತೆ ಇರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು ಧನ್ಯವಾದಗಳು.. 

Leave a Comment