ಎಲ್ಲರಿಗೂ ನಮಸ್ಕಾರ..
ಬೆಂಗಳೂರು: ಕರ್ನಾಟಕ ರಾಜ್ಯ ಸರ್ಕಾರವು ರಾಜ್ಯದಲ್ಲಿ ಇರುವ ನಿರುದ್ಯೋಗಿಗಳಿಗಾಗಿ ಒಂದು ಬೃಹತ್ ಉದ್ಯೋಗ ಮೇಳವನ್ನು ಆಯೋಜಿಸಿದೆ ಈ ಉದ್ಯೋಗ ಮೇಳಕ್ಕೆ ಸುಮಾರು 500ಕ್ಕಿಂತ ಹೆಚ್ಚು ಕಂಪನಿಗಳು ಭಾಗವಹಿಸಲಿದ್ದು ಸಾವಿರಾರು ಹುದ್ದೆಗಳನ್ನು ನಿರುದ್ಯೋಗಿಗಳಿಗೆ ನೀಡಲಿವೆ. ಹೌದು ಕರ್ನಾಟಕ ರಾಜ್ಯ ಸರ್ಕಾರವು ರಾಜ್ಯದಲ್ಲಿ ಕಾಲಿರುವ ನಿರುದ್ಯೋಗಿಗಳಿಗೂ ಕೂಡ ಉದ್ಯೋಗ ಅವಕಾಶವನ್ನು ಕಲ್ಪಿಸಲು ಬೃಹತ್ ಉದ್ಯೋಗ ಮೇಳವನ್ನು ಆಯೋಜಿಸಿದೆ ಈಗಾಗಲೇ ನಿರುದ್ಯೋಗಿಗಳಿಗಾಗಿ ಒಂದು ಹೊಸ ಗ್ಯಾರಂಟಿ ಯೋಜನೆಯನ್ನು ಕೂಡ ಜಾರಿ ಮಾಡಲಾಗಿದ್ದು ಈ ಯೋಜನೆಯಲ್ಲಿ ಪದವಿ ಮತ್ತು ಡಿಪ್ಲೋಮೋ ಹೊಂದಿರುವ ವಿದ್ಯಾರ್ಥಿಗಳಿಗೆ ಪ್ರತಿ ತಿಂಗಳು 3000 ಮತ್ತು 1500 ರೂಪಾಯಿಗಳನ್ನು ನಿರುದ್ಯೋಗ ಭತ್ಯೆಯಾಗಿ ನೀಡುತ್ತಿದೆ ಹಾಗಾಗಿ ಇದೀಗ ಅಂತಹ ನಿರುದ್ಯೋಗಿಗಳಿಗೆ ಅನುಕೂಲವಾಗುವಂತೆ ಬೆಂಗಳೂರಿನಲ್ಲಿ ಉದ್ಯೋಗ ಮೇಳವನ್ನು ಆಯೋಜಿಸಿದೆ ನೀವು ಕೂಡ ಉದ್ಯೋಗಾವಕಾಶಕ್ಕಾಗಿ ಕಾಯುತ್ತಿದ್ದರೆ ನಿಮ್ಮ ವಿದ್ಯಾರ್ಥಿಗೆ ತಕ್ಕಂತೆ ಉದ್ಯೋಗವನ್ನು ಪಡೆಯಲು ಈ ಉದ್ಯೋಗ ಮೇಳಕ್ಕೆ ಭೇಟಿ ನೀಡಬಹುದಾಗಿದೆ ಈ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯಲು ಲೇಖನವನ್ನು ಪೂರ್ತಿಯಾಗಿ ಓದಿ.
ನಿರುದ್ಯೋಗಿಗಳಿಗೆ ರಾಜ್ಯ ಸರ್ಕಾರದಿಂದ ಬೃಹತ್ ಉದ್ಯೋಗ ಮೇಳ.!
ರಾಜ್ಯ ಸರ್ಕಾರದಿಂದ ರಾಜ್ಯ ಮಟ್ಟದಲ್ಲಿ ನಿರುದ್ಯೋಗಿಗಳಿಗೆ ಉದ್ಯೋಗಾಕಾಂಕ್ಷಿಗಳಿಗೆ ಉದ್ಯೋಗಾವಕಾಶ ಎಂಬ ಬೃಹತ್ ಉದ್ಯೋಗ ಮೇಳವನ್ನು ಆಯೋಜಿಸಲಾಗುತ್ತಿದೆ ಇದು 2024ರಲ್ಲಿ ಸರ್ಕಾರದಿಂದ ನಡೆಸಲಾಗುತ್ತಿರುವ ಮೊದಲ ಉದ್ಯೋಗ ಮೇಳವಾಗಿದ್ದು ಇದರಲ್ಲಿ ಸುಮಾರು 500 ಕ್ಕಿಂತ ಹೆಚ್ಚು ಕಂಪನಿಗಳು ಭಾಗವಹಿಸಲಿವೆ ಹಾಗೂ ಈ ಉದ್ಯೋಗ ಮೇಳದಲ್ಲಿ ಸಾವಿರಾರು ಉದ್ಯೋಗಗಳು ಸಿಗಲಿದೆ ಎಂದು ತಿಳಿಸಲಾಗಿದೆ, ಸದ್ಯ ರಾಜ್ಯದಲ್ಲಿ ಬಹಳಷ್ಟು ನಿರುದ್ಯೋಗಿಗಳಿದ್ದು ಈಗಾಗಲೇ ವಿದ್ಯಾಭ್ಯಾಸ ಮುಗಿಸಿ ಅರ್ಹತೆಗೆ ತಕ್ಕ ಉದ್ಯೋಗ ಸಿಗದೇ ಉದ್ಯೋಗ ಅವಕಾಶಕ್ಕಾಗಿ ಕಾಯುತ್ತಿದ್ದಾರೆ ಇದೀಗ ಸರ್ಕಾರದಿಂದಲೇ ಆಯೋಜಿಸಲಾಗಿರುವ ಈ ಉದ್ಯೋಗ ಮೇಳದಲ್ಲಿ ಎಲ್ಲಾ ಯುವಕ ಯುವತಿಯರು ಕೂಡ ಭಾಗವಹಿಸಿ ನಿಮ್ಮ ವಿದ್ಯಾರ್ಹತೆ ಮತ್ತು ಅರ್ಹತೆಗೆ ತಕ್ಕಂತೆ ಹುದ್ದೆಯನ್ನು ನೀವೇ ಆಯ್ಕೆ ಮಾಡಿಕೊಳ್ಳಬಹುದಾಗಿರುತ್ತದೆ.
ಬೃಹತ್ ಉದ್ಯೋಗ ಮೇಳಕ್ಕೆ 500 ಕ್ಕಿಂತ ಹೆಚ್ಚು ಕಂಪನಿಗಳ ಆಗಮನ.?
ಈಗಾಗಲೇ ತಿಳಿಸಿದ ಹಾಗೆ ಬೆಂಗಳೂರಿನಲ್ಲಿ ನಡೆಯಲಿರುವ 2024ನೇ ಸಾಲಿನ ರಾಜ್ಯ ಮಟ್ಟದ ಬೃಹತ್ ಉದ್ಯೋಗ ಮೇಳಕ್ಕೆ ಸುಮಾರು 500ಕ್ಕಿಂತ ಹೆಚ್ಚು ಕಂಪನಿಗಳು ಭಾಗವಹಿಸಲಿವೆ ಎಂದು ತಿಳಿಸಲಾಗಿದೆ ಅಲ್ಲದೆ ಈ ಉದ್ಯೋಗ ಮೇಳದಲ್ಲಿ ಸಾವಿರಾರು ಹುದ್ದೆಗಳು ನಿರುದ್ಯೋಗಿಗಳಿಗೆ ಸಿಗಲಿದೆ ಎಂದು ತಿಳಿಸಲಾಗಿದ್ದು ಈ ಮೇಳವು ದಿನಾಂಕ 26 ಮತ್ತು 27ನೇ ಫೆಬ್ರವರಿ 2024 ರಂದು ಅರಮನೆ ಮೈದಾನ ಬೆಂಗಳೂರಿನಲ್ಲಿ ನಡೆಯಲಿದ್ದು ಎಲ್ಲ ಉದ್ಯೋಗ ಅಕಾಂಶಗಳಿಗೆ ಸ್ವಾಗತವನ್ನು ಕೋರಲಾಗಿದೆ. ಹಾಗೂ ಉದ್ಯೋಗ ಅವಕಾಶಕ್ಕೆ ಬರಲಿರುವ ಅಭ್ಯರ್ಥಿಗಳಿಗೆ ಆನ್ಲೈನ್ ಮೂಲಕ ನೋಂದಣಿ ಮಾಡಿಕೊಂಡು ಬರಲು ಸೂಚನೆ ಕೂಡ ನೀಡಲಾಗಿದೆ ಎಲ್ಲಾ ಅಭ್ಯರ್ಥಿಗಳು ಕೂಡ ಆನ್ಲೈನ್ ನಲ್ಲಿ ನೋಂದಣಿ ಪಡೆದು ಉದ್ಯೋಗ ಮೇಳಕ್ಕೆ ಪ್ರವೇಶಿಸಬೇಕು.
ಉದ್ಯೋಗ ಮೇಳಕ್ಕೆ ಆನ್ಲೈನ್ ನಲ್ಲಿ ನೋಂದಣಿ ಪಡೆಯುವುದು ಹೇಗೆ.?
ಈಗಾಗಲೇ ರಾಜ್ಯ ಸರ್ಕಾರದಿಂದ ಉದ್ಯೋಗ ಮೇಳ ನಡೆಯಲಿರುವ ದಿನಾಂಕ ಮತ್ತು ಸ್ಥಳವನ್ನು ತಿಳಿಸಿದೆ ಜೊತೆಗೆ ಉದ್ಯೋಗ ಮೇಳಕ್ಕೆ ಭೇಟಿ ನೀಡುವ ಅಭ್ಯರ್ಥಿಗಳು ಕಡ್ಡಾಯವಾಗಿ ಆನ್ಲೈನ್ ಮೂಲಕ ನೊಂದಣಿ ಪಡೆದು ಪ್ರವೇಶಿಸಬೇಕು ಎಂಬ ನಿಯಮವನ್ನು ಕೂಡ ತಿಳಿಸಿದೆ ಈ ಉದ್ಯೋಗ ಮೇಳಕ್ಕೆ ಆನ್ಲೈನ್ ನಲ್ಲಿ ನೋಂದಣಿ ಮಾಡಿಕೊಂಡು ಪ್ರವೇಶ ಪಡೆಯಲು.
- ಮೊದಲನೆಯದಾಗಿ https://skillconnect.kaushalkar.com ವೆಬ್ ಸೈಟ್ ಗೆ ಭೇಟಿ ನೀಡಿ
- ನಂತರ ರಿಜಿಸ್ಟರ್ ಮೇಲೆ ಕ್ಲಿಕ್ ಮಾಡಿ
- ಮೂರನೆಯದಾಗಿ ಉದ್ಯೋಗ ಮೇಳ ಮೇಲೆ ಕ್ಲಿಕ್ ಮಾಡಿ
- ನಂತರ ಅಭ್ಯರ್ಥಿ ನೋಂದಣಿ ಮೇಲೆ ಕ್ಲಿಕ್ ಮಾಡಿ
- ಕೊನೆಯದಾಗಿ ಅರ್ಜಿಯನ್ನು ಭರ್ತಿ ಮಾಡಿ ಸಲ್ಲಿಸಿ
- ಈ ರೀತಿ ಉದ್ಯೋಗ ಮೇಳಕ್ಕೆ ನೋಂದಣಿ ಪಡೆದು ಮೇಲಕ್ಕೆ ಭೇಟಿ ನೀಡಬೇಕೆಂದು ಸರ್ಕಾರದಿಂದ ಸೂಚನೆ ನೀಡಲಾಗಿದೆ ಧನ್ಯವಾದಗಳು..