ಎಲ್ಲರಿಗೂ ನಮಸ್ಕಾರ…
ಕನ್ನಡದ ರಿಯಾಲಿಟಿ ಶೋಗಳಲ್ಲಿ ಅತಿ ಹೆಚ್ಚು ವೀಕ್ಷಕರನ್ನು ಮತ್ತು ಅತಿ ಹೆಚ್ಚು ಜನಪ್ರಿಯವಾಗಿರುವಂತಹ ರಿಯಾಲಿಟಿ ಶೋ ಎಂದರೆ ಅದು ಬಿಗ್ ಬಾಸ್ ಎಂದು ಹೇಳಬಹುದು. ಹೌದು ಇದೀಗ ಸತತ ಒಂಬತ್ತು ಸೀಸನ್ ಗಳನ್ನು ಯಶಸ್ವಿಯಾಗಿ ಮುಗಿಸಿರುವ ಬಿಗ್ ಬಾಸ್ ರಿಯಾಲಿಟಿ ಶೋ ಇದೀಗ ಹತ್ತನೇ ಸೀಸನ್ಗೆ ಕಾಲಿಡಲಿದೆ, ಈಗಾಗಲೇ ಬಿಗ್ ಬಾಸ್ ರಿಯಾಲಿಟಿ ಶೋ ಪ್ರಿಯರು ಈಗಾಗಲೇ ಬಿಗ್ ಬಾಸ್ ಸೀಸನ್ ಹತ್ತರ ಪ್ರೊಮೋ ಯಾವಾಗ ಬಿಡುಗಡೆಯಾಗಲಿದೆ ಬಿಗ್ ಬಾಸ್ ಸೀಸನ್ 10 ಯಾವಾಗ ಆರಂಭವಾಗಲಿದೆ ಗ್ರಾಂಡ್ ಓಪನಿಂಗ್ ದಿನಾಂಕ ಯಾವಾಗ ಮತ್ತು ಯಾವೆಲ್ಲ ಸ್ಪರ್ಧಿಗಳು ಈ ಬಾರಿ ದೊಡ್ಡ ಮನೆಗೆ ಬರಲಿದ್ದಾರೆ ಎಂದು ಕಾಯುತ್ತಿದ್ದಾರೆ ಇದೀಗ ಈ ಬಗ್ಗೆ ಎಲ್ಲಾ ಮಾಹಿತಿಗಳು ಹೊರಬಂದಿದ್ದು ಈ ಲೇಖನದಲ್ಲಿ ಸಂಪೂರ್ಣವಾಗಿ ತಿಳಿಸಲಾಗಿದೆ ಲೇಖನವನ್ನು ಪೂರ್ತಿಯಾಗಿ ಓದಿ.
Bigg Boss season 10ರ ಪ್ರೊಮೋ ಬಿಡುಗಡೆ.!
ಬಿಗ್ ಬಾಸ್ ರಿಯಾಲಿಟಿ ಶೋ ನಾ ಎಲ್ಲಾ ಪ್ರಿಯರು ಬಿಗ್ ಬಾಸ್ ಸೀಸನ್ 10 ಯಾವಾಗ ಶುರುವಾಗಲಿದೆ ಆರಂಭದ ದಿನಾಂಕ ಯಾವಾಗ ಪ್ರೊಮೋ ಯಾವಾಗ ಬಿಡುಗಡೆಯಾಗಲಿದೆ ಎಂಬ ಎಲ್ಲಾ ಯೋಚನೆಗಳಿಗೂ ಇಲ್ಲಿದೆ ಉತ್ತರ. ಹೌದು ಸೀಸನ್ ಹತ್ತರ ಪ್ರೋಮೊ ಶೂಟಿಂಗ್ ಕಳೆದ ವಾರದಿಂದಲೇ ನಡೆಯುತ್ತಿದ್ದು ಇದೀಗ ಶೂಟಿಂಗ್ ಅಂತ್ಯಗೊಂಡಿದೆ ಆದರೆ ಸೀಸನ್ ಹತ್ತರ ಹೊಸ ಪ್ರೊಮೋವನ್ನು ಬಿಗ್ ಬಾಸ್ ತಂಡದ ಕಡೆಯಿಂದ ಇನ್ನು ಕೆಲವೇ ದಿನಗಳಲ್ಲಿ ಅಂದರೆ ಇದೆ ಸೆಪ್ಟೆಂಬರ್ 10ನೇ ದಿನಾಂಕ ಬಿಡುಗಡೆ ಮಾಡುವುದಾಗಿ ಮಾಹಿತಿ ಸಿಕ್ಕಿದ್ದು ಇನ್ನು ನಮ್ಮ ಕಿಚ್ಚ ಸುದೀಪ್ ಅವರು ಸೆಪ್ಟೆಂಬರ್ 15ನೇ ದಿನಾಂಕ ಸೀಸನ್ ಹತ್ತರ ಬಗ್ಗೆ ಮಾಹಿತಿ ನೀಡಲು ಪ್ರೆಸ್ ಮೀಟ್ ನೀಡುವುದಾಗಿ ತಿಳಿಸಿರುವುದು ಹೊರಬಂದಿದೆ ಇನ್ನು ಬಿಗ್ ಬಾಸ್ ಪ್ರಿಯರಿಗೆ ಇನ್ನು ಕೆಲವೇ ದಿನಗಳಲ್ಲಿ ಬಿಗ್ ಬಾಸ್ ಆರಂಭವಾಗಲಿದ್ದು ಪ್ರೋಮೋ ಕೂಡ ಬಿಡುಗಡೆಯಾಗಲಿದೆ.
ಬಿಗ್ ಬಾಸ್ ಸೀಸನ್ 10 ರ ಆರಂಭಕ್ಕೆ ಡೇಟ್ ಫಿಕ್ಸ್.?
ನಿಮಗೆಲ್ಲ ಈಗಾಗಲೇ ತಿಳಿದಿರುವ ಹಾಗೆ ಬಿಗ್ ಬಾಸ್ ರಿಯಾಲಿಟಿ ಶೋ ಸೀಸನ್ ಹತ್ತರ ಪ್ರೊಮೋ ಇದೆ ಸೆಪ್ಟೆಂಬರ್ 10ನೇ ದಿನಾಂಕ ಬಿಡುಗಡೆಯಾಗಲಿದ್ದು. ಈ ಬಾರಿ ಯಾವುದೇ ಓ ಟಿ ಟಿ ಸೀಸನ್ ಇಲ್ಲದೆ ಇರುವ ಕಾರಣ ಶೀಘ್ರದಲ್ಲಿ ಅಂದರೆ ಸೆಪ್ಟೆಂಬರ್ ನ ಕೊನೆಯ ವಾರದಲ್ಲಿ ಬಿಗ್ ಬಾಸ್ ಸೀಸನ್ ಹತ್ತರ ಗ್ರಾಂಡ್ ಓಪನಿಂಗ್ ನಡೆಸಲಾಗುತ್ತಿದೆ. ಅಲ್ಲದೆ ಈಗಾಗಲೇ ಸೀಸನ್ ಹತ್ತರ ರಿಯಾಲಿಟಿ ಶೋ ಅನ್ನು ಯಶಸ್ವಿಯಾಗಿನಡೆಸುವ ಸಲುವಾಗಿ ಬಿಗ್ ಬಾಸ್ ಈ ಹಿಂದೆ ನಡೆದ ಒಂಬತ್ತು ಸೀಸನ್ಗಳ ಮನೆಯನ್ನು ಇದೀಗ ಬೇರೆ ಕಡೆಗೆ ಸ್ಥಳಾಂತರ ಮಾಡಲಾಗಿದೆ ಅಲ್ಲದೆ ಈ ಬಾರಿ ಸೀಸನ್ ಹತ್ತಕ್ಕೆ ಹೊಸ ಲುಕ್ ನಲ್ಲಿ ಮತ್ತು ಹೊಸ ಸ್ಥಳದಲ್ಲಿ ಬಿಗ್ ಬಾಸ್ ಮನೆ ಸಿದ್ದವಾಗಿದ್ದು ಇನ್ನು ಕೆಲವೇ ದಿನಗಳು ಮಾತ್ರ ಉಳಿದಿದೆ.
ಬಿಗ್ ಬಾಸ್ ಸೀಸನ್ ಹತ್ತಕ್ಕೆ ಸ್ಪರ್ಧಿಗಳು ಯಾರೆಲ್ಲಾ ಬರಲಿದ್ದಾರೆ.?
ಇನ್ನು ಬಿಗ್ ಬಾಸ್ ಸೀಸನ್ ಹತ್ತಕ್ಕೆ ಯಾವೆಲ್ಲ ಸ್ಪರ್ಧಿಗಳು ಬರಲಿದ್ದಾರೆ ಎಂಬ ವಿಷಯಕ್ಕೆ ಬಂದರೆ ಈಗಾಗಲೇ ಬಿಗ್ ಬಾಸ್ ತಂಡದ ಕಡೆಯಿಂದ ಸೀಸನ್ ಹತ್ತರ ಸ್ಪರ್ಧಿಗಳನ್ನು ಆಯ್ಕೆ ಮಾಡಿದ್ದು ಈ ಬಾರಿ ಕಳೆದ ಒಂಬತ್ತನೇ ಸೀಸನ್ ರೀತಿ ಯಾವುದೇ ಸೀನಿಯರ್ ಸ್ಪರ್ಧಿಗಳನ್ನು ಕರೆಸದೆ ಈ ಬಾರಿ ಎಲ್ಲಾ ಹೊಸ ಕಂಟೆಸ್ಟೆಂಟ್ಗಳೆ ಬರಲಿದ್ದಾರೆ ಇನ್ನು ಯಾವೆಲ್ಲ ಸ್ಪರ್ಧಿಗಳು ಬರಲಿದ್ದಾರೆ ಎಂಬ ವಿಚಾರಕ್ಕೆ ಬಂದರೆ ಈಗಾಗಲೇ ಸೋಶಿಯಲ್ ಮೀಡಿಯಾ ಗಳಲ್ಲಿ ಇವರು ಬರಲಿದ್ದಾರೆ ಅವರು ಬರಲಿದ್ದಾರೆ ಎಂಬ ಸುಳ್ಳು ಸುದ್ದಿಗಳನ್ನು ಹಬ್ಬಿಸುತ್ತಿದ್ದು ಇನ್ನೂ ಸಹ ಬಿಗ್ ಬಾಸ್ ತಂಡದ ಕಡೆಯಿಂದ ಮತ್ತು ವಾಹಿನಿ ಕಡೆಯಿಂದ ಈ ಬಗ್ಗೆ ಮಾಹಿತಿ ಹೊರಬಂದಿಲ್ಲ ಇನ್ನು ಕೆಲವೇ ದಿನಗಳಲ್ಲಿ ಅಂದರೆ ಪ್ರೋಮೋ ಬಿಡುಗಡೆಯಾದ ನಂತರದಲ್ಲಿ ಬಿಗ್ ಬಾಸ್ ಮನೆಗೆ ಅವೆಲ್ಲ ಕಂಟೆಸ್ಟೆಂಟ್ಗಳು ಬರಲಿದ್ದಾರೆ ಎಂದು ಕಾದು ನೋಡಬೇಕಾಗಿದೆ.
ಇದೇ ರೀತಿಯ ಹೆಚ್ಚಿನ ಮಾಹಿತಿಗಳಿಗಾಗಿ ನಮ್ಮ Educare Kannada ವನ್ನು ಫಾಲೋ ಮಾಡಿ ಧನ್ಯವಾದಗಳು..