ಎಲ್ಲರಿಗೂ ನಮಸ್ಕಾರ..
ಉಚಿತ ಗ್ಯಾಸ್ ಸಂಪರ್ಕ: ಕೇಂದ್ರ ಸರ್ಕಾರದಿಂದ ಮಹಿಳೆಯರಿಗಾಗಿ ಹಲವು ಯೋಜನೆಗಳನ್ನು ಜಾರಿಗೆ ತರಲಾಗಿದೆ ಅದರಲ್ಲಿ ಉಚಿತ ಗ್ಯಾಸ್ ಸಂಪರ್ಕ ಯೋಜನೆ ಕೂಡ ಒಂದು ಈ ಯೋಜನೆ ಅಡಿಯಲ್ಲಿ ದೇಶದ ಬಡ ಮಹಿಳೆಯರಿಗೆ ಅಡುಗೆ ಮಾಡಲು ಅನುಕೂಲ ಆಗಲಿ ಎಂದು ಕೇಂದ್ರದಿಂದ ಉಚಿತವಾಗಿ ಗ್ಯಾಸ ಸಂಪರ್ಕವನ್ನು ನೀಡಲಾಗುತ್ತದೆ ಮತ್ತು ಪ್ರತಿವರ್ಷಕ್ಕೆ 12 ಗ್ಯಾಸ್ ಸಿಲಿಂಡರ್ ಗಳನ್ನು ಸಬ್ಸಿಡಿ ಮೂಲಕ ನೀಡಲಾಗುತ್ತದೆ ಅಂದರೆ ಕಡಿಮೆ ಬೆಲೆಯಲ್ಲಿ ಸಿಲಿಂಡರ್ ಗಳನ್ನು ಒದಗಿಸಲಾಗುತ್ತದೆ ಇದೀಗ ಕೇಂದ್ರ ಸರ್ಕಾರದಿಂದ 2024ನೇ ಸಾಲಿನಲ್ಲಿ ಮತ್ತಷ್ಟು ಕೆಲವು ಬಡ ಮಹಿಳೆಯರಿಂದ ಅರ್ಜಿಯನ್ನು ಸ್ವೀಕರಿಸಿ ಅರ್ಹ ಮಹಿಳೆಯರಿಗೆ ಉಚಿತ ಗ್ಯಾಸ್ ಸಂಪರ್ಕವನ್ನು ಒದಗಿಸಲಿದೆ ನೀವು ಕೂಡ ಸರ್ಕಾರದ ಉಚಿತ ಗ್ಯಾಸ್ ಸಂಪರ್ಕವನ್ನು ಪಡೆಯಲು ಯೋಚಿಸುತ್ತಿದ್ದರೆ ಅರ್ಜಿ ಸಲ್ಲಿಸಿ ಉಚಿತ ಗ್ಯಾಸ್ ಸಂಪರ್ಕವನ್ನು ಪಡೆಯಬಹುದು ಈ ಬಗ್ಗೆ ಹೆಚ್ಚಿನ ಮಾಹಿತಿಗೆ ಲೇಖನವನ್ನು ಪೂರ್ತಿಯಾಗಿ ಓದಿ.ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಮಹಿಳೆಯರಿಗೆ ಉಚಿತ ಗ್ಯಾಸ್ ಸಿಲಿಂಡರ್ ಮತ್ತು ಗ್ಯಾಸ್ ಒಲೆ ವಿತರಣೆಗೆ ಅರ್ಜಿ ಆಹ್ವಾನ.?
ಕೇಂದ್ರ ಸರ್ಕಾರದಿಂದ ದೇಶದ ಬಡ ಮಹಿಳೆಯರ ಕಷ್ಟವನ್ನು ದೂರ ಮಾಡಲು ಉಚಿತ ಗ್ಯಾಸ್ ವಿತರಣ ಯೋಜನೆಯನ್ನು ಜಾರಿಗೆ ತಂದಿದೆ ಈ ಯೋಜನೆಯು ಹೆಚ್ಚಾಗಿ ಮಹಿಳೆಯರು ಪ್ರತಿದಿನ ದಿನಗೂಲಿ ಕೆಲಸಕ್ಕೆ ಹೋಗಿ ಕಟ್ಟಿಗೆಯಿಂದ ಬೆಂಕಿ ಹತ್ತಿಸಿ, ಅಡುಗೆ ಮಾಡಲು ಕಷ್ಟ ಪಡುತ್ತಿದ್ದ ಮಹಿಳೆಯರಿಗಾಗಿ ಮತ್ತು ಕಟ್ಟಿಗೆ ಒಲೆಯಿಂದ ಅಡುಗೆ ಮಾಡಲು ಹೋಗಿ ಅವರಿಗೆ ಉಂಟಾಗುತ್ತಿದ್ದ ಅನಾರೋಗ್ಯವನ್ನು ಕಡಿಮೆ ಮಾಡುವ ದೃಷ್ಟಿಯಿಂದ ಕೇಂದ್ರ ಸರ್ಕಾರವು ಈ ಯೋಜನೆಯನ್ನು ಜಾರಿಗೆ ತರುತ್ತದೆ ಸದ್ಯ ಈ ಯೋಜನೆಗೆ ಪ್ರಧಾನ ಮಂತ್ರಿ ಉಜ್ವಲ ಯೋಜನೆ ಎಂಬ ಹೆಸರನ್ನು ಇಡಲಾಗಿದ್ದು ಈ ಯೋಜನೆ ಮೂಲಕ ಪ್ರತಿ ವರ್ಷ ಲಕ್ಷಾಂತರ ಬಡ ಮಹಿಳೆಯರಿಗೆ ಉಚಿತವಾಗಿ ಗ್ಯಾಸ್ ಸಂಪರ್ಕವನ್ನು ನೀಡಲಾಗುತ್ತಿದೆ, ಈಗ 2024ನೇ ಸಾಲಿನ ಉಚಿತ ಗ್ಯಾಸ್ ಸಂಪರ್ಕಕ್ಕೆ ಅರ್ಹ ಮಹಿಳೆಯರಿಂದ ಅರ್ಜಿಯನ್ನು ಆಹ್ವಾನಿಸಲು ಮುಂದಾಗಿದ್ದು ಈ ಯೋಜನೆಗೆ ಯಾರೆಲ್ಲ ಅರ್ಜಿ ಸಲ್ಲಿಸಬಹುದು ಹೇಗೆ ಅರ್ಜಿ ಸಲ್ಲಿಸಬೇಕು, ಏನೆಲ್ಲ ದಾಖಲೆಗಳು ಅರ್ಜಿ ಸಲ್ಲಿಸಲು ಬೇಕಾಗುತ್ತದೆ ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿಯೋಣ ಬನ್ನಿ.ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಪ್ರಧಾನ ಮಂತ್ರಿ ಉಜ್ವಲ ಯೋಜನೆಗೆ ಅರ್ಹರಿಂದ ಅರ್ಜಿ ಅಹ್ಹಾನ.?
ಈಗಾಗಲೇ ತಿಳಿಸಿದ ಹಾಗೆ ಪ್ರಧಾನ ಮಂತ್ರಿ ಉಜ್ವಲ ಯೋಜನೆಯು ಮುಖ್ಯವಾಗಿ ಬಡ ಕುಟುಂಬದಲ್ಲಿ ವಾಸಿಸುತ್ತಿರುವ ಹೆಣ್ಣು ಮಕ್ಕಳಿಗಾಗಿಯೇ ಈ ಯೋಜನೆಯನ್ನು ತರಲಾಗಿದೆ, ಏಕೆಂದರೆ ಬಡ ಕುಟುಂಬಗಳಲ್ಲಿ ದಿನದ ಮೂರು ಹೊತ್ತು ಕಟ್ಟಿಗೆ ಒಲೆಯಲ್ಲಿ ಅಡುಗೆ ಮಾಡಲು ಮಹಿಳೆಯರು ಪಡುತ್ತಿದ್ದ ಕಷ್ಟವನ್ನು ಕಡಿಮೆಗೊಳಿಸಲು ಕೇಂದ್ರ ಸರ್ಕಾರದಿಂದ ಉಚಿತ ಗ್ಯಾಸ್ ಸಂಪರ್ಕ ಅಂದರೆ ಉಚಿತ ಗ್ಯಾಸ್ ಸಿಲಿಂಡರ್ ಮತ್ತು ಗ್ಯಾಸ್ ಒಲೆಯನ್ನು ವಿತರಣೆ ಮಾಡಲು ಮುಂದಾಗಿದೆ ಜೊತೆಗೆ ಯೋಜನೆಯ ಫಲಾನುಭವಿಗಳಿಗೆ ಪ್ರತಿ ವರ್ಷ 12 ಗ್ಯಾಸ್ ಸಿಲಿಂಡರ್ ಗಳನ್ನು ಸಬ್ಸಿಡಿ ನೀಡುವ ಮೂಲಕ ವಿತರಣೆ ಮಾಡಲಾಗುತ್ತದೆ ಎಂದರೆ ಸಾಮಾನ್ಯವಾಗಿ 900 ಗ್ಯಾಸ್ ಸಿಲಿಂಡರ್ ಬೆಲೆ ಇದ್ದರೆ ಅದಕ್ಕೆ 300 ರೂಪಾಯಿಗಳ ಸಬ್ಸಿಡಿಯನ್ನು ಯೋಜನೆಯ ಫಲಾನುಭವಿಗಳಿಗೆ ನೀಡುವ ಮೂಲಕ ಮಹಿಳೆಯರಿಗೆ ಯೋಜನೆಯು ಸಹಾಯ ಮಾಡಲಿದೆ.ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಪ್ರಧಾನ ಮಂತ್ರಿ ಉಜ್ವಲ ಯೋಜನೆಯ ಉಚಿತ ಗ್ಯಾಸ್ ಕರೆಕ್ಷನ್ ಗೆ ಯಾರು ಅರ್ಹರು.
- ಕೇಂದ್ರ ಸರ್ಕಾರದ ಈ ಉಚಿತ ಗ್ಯಾಸ್ ಕರೆಕ್ಷನ್ ಯೋಜನೆಗೆ 18 ವರ್ಷ ಮೀರಿದ ಮಹಿಳೆಯರು ಉಚಿತ ಗ್ಯಾಸ್ ಕನೆಕ್ಷನ್ ಗೆ ಅರ್ಜಿಯನ್ನು ಸಲ್ಲಿಸಬಹುದು. ಇನ್ನು ಈಗಾಗಲೇ ಮನೆಯಲ್ಲಿ ಗ್ಯಾಸ್ ಕಲೆಕ್ಷನ್ ಇದ್ದರೆ ಅರ್ಜಿ ಸಲ್ಲಿಸುವ ಅಧಿಕಾರ ಇರುವುದಿಲ್ಲ
- ನೀವು ಉಚಿತ ಗ್ಯಾಸ್ ಕರೆಕ್ಷನ್ ಅನ್ನು ಕೇವಲ ಮಹಿಳೆಯರ ಹೆಸರಿಗೆ ಮಾತ್ರ ನೀಡಲಾಗುತ್ತದೆ ಆದರೆ ಮಹಿಳೆಯು ಹೊಂದಿರುವ ರೇಷನ್ ಕಾರ್ಡ್ ನಲ್ಲಿ ಯಾವುದೇ ಸದಸ್ಯರು ಗ್ಯಾಸ್ ಕನೆಕ್ಷನ್ ಹೊಂದಿರುವಂತಿಲ್ಲ.
- ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡಕ್ಕೆ ಸೇರಿದವರು ಹಿಂದುಳಿದ ವರ್ಗದವರು ಬುಡಕಟ್ಟು ಜನಾಂಗ ಮೊದಲಾದ ಬಡತನ ರೇಖೆಗಿಂತ ಕೆಳಗಿರುವ ಕುಟುಂಬದ ಮಹಿಳಾ ಸದಸ್ಯರು ಅರ್ಜಿಯನ್ನು ಸಲ್ಲಿಸಬಹುದು ಅಂದರೆ ಪಡಿತರ ಚೀಟಿ ಹೊಂದಿರುವ ಯಾವುದೇ ಮಹಿಳೆಯಾದರು ಯೋಜನೆಗೆ ಅರ್ಜಿಯನ್ನು ಸಲ್ಲಿಸಬಹುದು
ಉಚಿತ ಗ್ಯಾಸ್ ಕಲೆಕ್ಷನ್ ಯೋಜನೆಗೆ ಬೇಕಾದ ದಾಖಲೆಗಳು ಮತ್ತು ಅರ್ಜಿ ಸಲ್ಲಿಸುವ ವಿಧಾನ.
ಈ ಯೋಜನೆಗೆ ಕೇವಲ ಮಹಿಳೆಯರು ಮಾತ್ರ ಅರ್ಜಿಯನ್ನು . ಸಲ್ಲಿಸಬಹುದಾಗಿದ್ದು,
- ಮಹಿಳೆಯ ಆಧಾರ್ ಕಾರ್ಡ್
- ವಿಳಾಸ ಪುರಾವೆ
- ಬಿಪಿಎಲ್ ಕಾರ್ಡ್
- ಮೊಬೈಲ್ ಸಂಖ್ಯೆ ಮತ್ತು ಬ್ಯಾಂಕ್ ಖಾತೆಯ ವಿವರ
- ಪಾಸ್ ಪೋರ್ಟ್ ಅಳತೆಯ ಫೋಟೋ ಈ ದಾಖಲೆಗಳು
ಇನ್ನು ಈ ಯೋಜನೆಗೆ ಅರ್ಜಿ ಸಲ್ಲಿಸಲು https://www.pmuy.gov.in/ujjwala2.html ಈ ಲಿಂಕ್ ನಲ್ಲಿ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬೇಕಾಗುತ್ತದೆ ಅರ್ಜಿ ಸಲ್ಲಿಸಲು ಹತ್ತಿರದ ಸೈಬರ್ ಸೆಂಟರ್ಗೆ ಭೇಟಿ ನೀಡಿ ಅಥವಾ ಗ್ರಾಮ ಒನ್ ಕೇಂದ್ರ ಬೆಂಗಳೂರು ಒನ್ ಕೇಂದ್ರಕ್ಕೆ ಭೇಟಿ ನೀಡಿ ಅರ್ಜಿಯನ್ನು ಸಲ್ಲಿಸಬಹುದು ಧನ್ಯವಾದಗಳು.ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ