Ration card application: ರೇಷನ್ ಕಾರ್ಡಿಗೆ ಹೊಸ ಹೆಸರು ಸೇರ್ಪಡೆ ಮತ್ತು ತಿದ್ದುಪಡಿಗೆ ಅರ್ಜಿ ಸಲ್ಲಿಸಲು ಅವಕಾಶ.!

ಎಲ್ಲರಿಗೂ ನಮಸ್ಕಾರ..

  ಕರ್ನಾಟಕ ರಾಜ್ಯದ ಆಹಾರ ಇಲಾಖೆಯಿಂದ ರಾಜ್ಯದ ಎಲ್ಲಾ ಪಡಿತರ ಚೀಟಿದಾರರಿಗೆ ಒಂದು ಹೊಸ ಅಪ್ಡೇಟ್ ನೀಡಲಾಗಿದೆ, ಆಹಾರ ಇಲಾಖೆಯಿಂದ ರಾಜ್ಯದ ನಾಗರಿಕರಿಗೆ  ಅಧಿಕೃತವಾಗಿ  ನೀಡಲಾಗಿರುವ ಪಡಿತರ ಚೀಟಿಗೆ ಹೊಸ ಸದಸ್ಯರನ್ನು ಸೇರಿಸಲು ಮತ್ತು ಪಡಿತರ ಚೀಟಿಯನ್ನು ತಿದ್ದುಪಡಿ ಮಾಡಿಸಲು ಅರ್ಜಿ ಸಲ್ಲಿಸಲು ಅವಕಾಶವನ್ನು ನೀಡಲಾಗಿದೆ ಈ ಹಿಂದೆ ಹಲವು ಬಾರಿ ಹೊಸ ಪಡಿತರ ಚೀಟಿಗೆ ಅರ್ಜಿ ಸಲ್ಲಿಸಲು ಮತ್ತು ತಿದ್ದುಪಡಿಗೆ ಅವಕಾಶವನ್ನು ನೀಡಿದ್ದು ಜನರು ಆ ಸಮಯದಲ್ಲಿ ಸರ್ವರ್ ನಿಂದ ಸಮಸ್ಯೆಯನ್ನು ಎದುರಿಸಿದ್ದು ಇದೀಗ  ಆಹಾರ ಇಲಾಖೆಯಿಂದ ಅರ್ಹ ಸಾರ್ವಜನಿಕರಿಗೆ ಅನುಕೂಲ ಆಗಲಿ ಎಂದು ಪುನಃ ತಿದ್ದುಪಡಿ ಮತ್ತು ಸೇರ್ಪಡೆಗೆ ಅರ್ಜಿ ಸಲ್ಲಿಸಲು ಅವಕಾಶ ಮಾಡಿಕೊಡಲಾಗಿದೆ ನೀವು ಕೂಡ ಪಡಿತರ ಚೀಟಿಯನ್ನು ಹೊಂದಿದ್ದು ತಿದ್ದುಪಡಿ ಅಥವಾ ಹೊಸ ಹೆಸರಿನ ಸೇರ್ಪಡೆಯನ್ನು ಮಾಡಿಸಬೇಕು ಎಂದುಕೊಂಡಿದ್ದಲ್ಲಿ ಹೇಗೆ ಅರ್ಜಿಯನ್ನು ಸಲ್ಲಿಸುವುದು ಕೊನೆಯ ದಿನಾಂಕ ಯಾವಾಗ ಎಂಬ ಸಂಪೂರ್ಣ ಮಾಹಿತಿಯ ಬಗ್ಗೆ ತಿಳಿಯಲು ಲೇಖನವನ್ನು ಪೂರ್ತಿಯಾಗಿ ಓದಿ. ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್  ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

WhatsApp Group Join Now
Telegram Group Join Now

 

ರೇಷನ್ ಕಾರ್ಡಿಗೆ ಹೊಸ ಹೆಸರು ಸೇರ್ಪಡೆ ಮತ್ತು ತಿದ್ದುಪಡಿಗೆ ಅರ್ಜಿ ಸಲ್ಲಿಸಲು ಅವಕಾಶ.!

ಆಹಾರ ಇಲಾಖೆಯಿಂದ  ಪಡಿತರ ಚೀಟಿದಾರರ ಸಮಸ್ಯೆಯನ್ನು ಪರಿಹರಿಸಲು  ಈ ಹಿಂದೆ ಹಲವು ಬಾರಿ ಪಡಿತರ ಚೀಟಿಯ ತಿದ್ದುಪಡಿ ಮತ್ತು ಹೊಸ ಹೆಸರಿನ ಸೇರ್ಪಡೆ ಮತ್ತು ಹೊಸ ರೇಷನ್ ಕಾರ್ಡಿಗೆ ಅರ್ಜಿಯನ್ನು ಕೂಡ ಸ್ವೀಕರಿಸಿದ ಆದರೆ ಆ ಸಮಯದಲ್ಲಿ ಇಲಾಖೆಯ ಅಧಿಕೃತ ವೆಬ್ಸೈಟ್ನಲ್ಲಿ ತಾಂತ್ರಿಕ ದೋಷಗಳು ಅಂದರೆ ಸರ್ವ ಸಮಸ್ಯೆಗಳು ಉಂಟಾಗಿದ್ದು ಪಡಿತರ ಚೀಟಿದಾರರಿಗೆ ಸಮಸ್ಯೆ ಉಂಟಾಗಿದೆ ಅಲ್ಲದೆ ಈ ಸಮಸ್ಯೆಯಿಂದ ಹಲವು ಅರ್ಜಿದಾರರ ಅರ್ಜಿಗಳು ಬಾಕಿ ಉಳಿದಿದ್ದು ಇದೀಗ ಇಲಾಖೆಯು ಅಂಥವರ ತಿದ್ದುಪಡಿಗೆ ಮತ್ತೊಂದು ಅವಕಾಶವನ್ನು ನೀಡಿದ್ದು ಪಡಿತರ ಚೀಟಿಯ ತಿದ್ದುಪಡಿ ಮತ್ತು ಹೊಸ ಹೆಸರಿನ ಸೇರ್ಪಡೆಗೆ ಅವಕಾಶ ಕಲ್ಪಿಸಿದೆ. ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್  ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

ಯಾರಿಗೆಲ್ಲ ತಿದ್ದುಪಡಿಗೆ ಅರ್ಜಿ ಸಲ್ಲಿಸಲು ಅವಕಾಶವನ್ನು ನೀಡಲಾಗಿದೆ.?

  • ಈಗಾಗಲೇ ರೇಷನ್ ಕಾರ್ಡ್ ಹೊಂದಿರುವವರು  ಕಾರ್ಡಿಗೆ ಹೊಸ ಹೆಸರನ್ನು ಸೇರ್ಪಡೆ ಮಾಡಿಸಲು ಅವಕಾಶವನ್ನು ನೀಡಲಾಗಿದೆ.
  •  ಹಳೆಯ ರೇಷನ್  ಕಾಡಿನಲ್ಲಿ ಇರುವ ವಿಳಾಸದ ಬದಲಾವಣೆಗೂ ಕೂಡ ಅವಕಾಶ ನೀಡಲಾಗಿದೆ
  •  ರೇಷನ್ ಕಾರ್ಡ್ ನಲ್ಲಿ ಮರಣ ಹೊಂದಿದವರ ಹೆಸರು ಇದ್ದು ಆ ಹೆಸರನ್ನು ರೇಷನ್ ಕಾರ್ಡ್ ನಿಂದ ತೆಗೆದುಹಾಕಲು ಕೂಡ ಅರ್ಜಿಯನ್ನು ಸಲ್ಲಿಸಬಹುದು
  •  ಇನ್ನು ರೇಷನ್ ಕಾರ್ಡ್ ನಲ್ಲಿ ಎಲ್ಲಾ ಸದಸ್ಯರಿದ್ದು ಸದಸ್ಯರ ಹೆಸರು ತಪ್ಪಿದಲ್ಲಿ ಮತ್ತು ಬೇರೆ ಮಾಹಿತಿ ತಪ್ಪಿದ್ದಲ್ಲಿ ಅದನ್ನು ಸರಿಪಡಿಸಿಕೊಳ್ಳಲು ಅವಕಾಶವನ್ನು ನೀಡಲಾಗಿದೆ. ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್  ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು.

1) ಈಗಾಗಲೇ ಇರುವ ರೇಷನ್ ಕಾರ್ಡಿಗೆ ಹೊಸ ಹೆಸರನ್ನು ಸೇರ್ಪಡೆ ಮಾಡಿಸಲು.

  • ಹೊಸ ಸದಸ್ಯರ ಆಧಾರ್ ಕಾರ್ಡ್
  •  ಜನನ ಪ್ರಮಾಣ ಪತ್ರ
  •  ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಇದ್ರೆ ಸಾಕು

2) ರೇಷನ್ ಕಾರ್ಡ್ ನಲ್ಲಿರುವ ವಿಳಾಸ ಬದಲಾವಣೆ ಮಾಡಲು ಅವಕಾಶ.

  • ಈಗಾಗಲೇ ಇರುವ ರೇಷನ್ ಕಾರ್ಡ್ ನಲ್ಲಿ ವಿಳಾಸವನ್ನು ಬದಲಿಸಬೇಕೆಂದರೆ ಪ್ರಸ್ತುತ ವಾಸವಿರುವ ಸ್ಥಳದ  ವಿಳಾಸ ಪುರಾವೆ ಪತ್ರವನ್ನು ನೀಡಬೇಕು ಮತ್ತು ಮನೆಯ ವಿದ್ಯುತ್ ಬಿಲ್ ನೀಡಬೇಕು.

3) ರೇಷನ್ ಕಾರ್ಡ್ ನಲ್ಲಿ ಮರಣ ಹೊಂದಿದವರ ಹೆಸರನ್ನು ಕಾಡಿನಿಂದ ತೆಗೆದುಹಾಕಲು ಅರ್ಜಿ.

  • ರೇಷನ್ ಕಾರ್ಡ್ ನಲ್ಲಿ ಮರಣ ಹೊಂದಿರುವವರ ಹೆಸರನ್ನು ತೆಗೆದುಹಾಕಲು ಅವರ ಮರಣ ಪತ್ರವನ್ನು ನೀಡಬೇಕಾಗುತ್ತದೆ.

ರೇಷನ್ ಕಾರ್ಡ್ ತಿದ್ದುಪಡಿಗೆ ಅರ್ಜಿ ಸಲ್ಲಿಸುವುದು ಎಲ್ಲಿ.?

ಈಗಾಗಲೇ ತಿಳಿಸಿದ ಹಾಗೆ ರೇಷನ್ ಕಾರ್ಡ್ ನ ಹೆಸರು ಬದಲಾವಣೆ ಮತ್ತು ತಿದ್ದುಪಡಿಗೆ ಇಲಾಖೆಯಿಂದ ಅವಕಾಶವನ್ನು ನೀಡಲಾಗಿದೆ ಇನ್ನು ತಿದ್ದುಪಡಿಗೆ ಈ ಮೇಲೆ ತಿಳಿಸಲಾದ ಅಗತ್ಯ ದಾಖಲೆಗಳನ್ನು ಸಿದ್ಧಪಡಿಸಿಕೊಂಡು ಹತ್ತಿರದ ಗ್ರಾಮ 1 ಕೇಂದ್ರ, ಬೆಂಗಳೂರು ಒನ್ ಕೇಂದ್ರ ಅಥವಾ ಕರ್ನಾಟಕ ಒನ್ ಕೇಂದ್ರಕ್ಕೆ ಭೇಟಿ ನೀಡಿ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು ಧನ್ಯವಾದಗಳು.. ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್  ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

Leave a Comment