ಎಲ್ಲರಿಗೂ ನಮಸ್ಕಾರ..
PAN card: ಈಗಾಗಲೇ ಪ್ಯಾನ್ ಕಾರ್ಡ್ ದೇಶದಲ್ಲಿ ಬಹಳ ಮುಖ್ಯವಾದ ಪಾತ್ರವಹಿಸಿದ್ದು ಈಗಾಗಲೇ ಕೇಂದ್ರ ಸರ್ಕಾರದಿಂದ ಮತ್ತು ಆದಾಯ ತೆರಿಗೆ ಇಲಾಖೆಯಿಂದ ಪಾನ್ ಕಾರ್ಡ್ ವಿಚಾರದಲ್ಲಿ ಕೆಲವು ಹೊಸ ಹೊಸ ನಿಯಮಗಳನ್ನು ಜಾರಿಗೆ ತಂದಿದೆ ಈಗಷ್ಟೇ ಕೆಲವು ದಿನಗಳ ಹಿಂದೆ ದೇಶದ ಪ್ರತಿಯೊಬ್ಬರು ಪ್ಯಾನ್ ಕಾರ್ಡ್ ಕಡ್ಡಾಯವಾಗಿ ಹೊಂದಿರಲೇಬೇಕು ಅಲ್ಲದೆ ಆ ಪಾನ್ ಕಾರ್ಡ್ಗೆ ಕಡ್ಡಾಯವಾಗಿ ಆಧಾರ್ ಕಾರ್ಡ್ ಲಿಂಕ್ ಆಗಿರಬೇಕು ಎಂಬ ಹೊಸ ಆದೇಶವನ್ನು ಹೊರಡಿಸಿದೆ, ಅಲ್ಲದೆ ಲಿಂಕ್ ಆಗದೆ ಇರುವ ಪ್ಯಾನ್ ಕಾರ್ಡ್ ಗಳಿಗೆ ಲಿಂಕ್ ಮಾಡಿಸಲು ಸಾವಿರಾರು ರೂಪಾಯಿ ಶುಲ್ಕ ವಿಧಿಸಿ ಲಿಂಕ್ ಮಾಡಿಸಿಕೊಳ್ಳಲು ಅವಕಾಶವನ್ನು ಕೂಡ ನೀಡಿದ್ದು ಇದೀಗ ಅದೇ ಪಾನ್ ಕಾರ್ಡ್ ವಿಚಾರದಲ್ಲಿ ಮಕ್ಕಳಿಗೂ ಕೂಡ ಹೊಸ ನಿಯಮವನ್ನು ಜಾರಿ ಮಾಡಲಾಗಿದೆ ಏನಿದು ಮಕ್ಕಳ ಪಾನ್ ಕಾರ್ಡ್ ಆದೇಶ ಎಂಬ ಬಗ್ಗೆ ತಿಳಿಯಲು ಲೇಖನವನ್ನು ಪೂರ್ತಿಯಾಗಿ ಓದಿ.
ಇದನ್ನು ಓದಿ: ಕಳೆದ ತಿಂಗಳ ಅನ್ನಭಾಗ್ಯ ಯೋಜನೆ ಹಣ ನಿಮ್ಮ ಬ್ಯಾಂಕ್ ಖಾತೆಗೆ ಜಮಾ ಆಗಿದೆಯಾ.! ಒಂದೇ ಕ್ಲಿಕ್ ನಲ್ಲಿ ಚೆಕ್ ಮಾಡಿ.?
ಕೇಂದ್ರದಿಂದ ಹೊಸ ಆದೇಶ ಮಕ್ಕಳಿಗೂ ಪ್ಯಾನ್ ಕಾರ್ಡ್ ಕಡ್ಡಾಯಗೊಳಿಸಿದ ಸರ್ಕಾರ.!
ಹೌದು ಕೇಂದ್ರ ಸರ್ಕಾರದಿಂದ ಇದೀಗ ಮಕ್ಕಳಿಗೂ ಕೂಡ ಪಾನ್ ಕಾರ್ಡ್ ಮಾಡಿಸುವುದು ಹೊಸ ಆದೇಶವನ್ನು ಹೊರಡಿಸಿದೆ, ಈಗಾಗಲೇ ನಿಮಗೆಲ್ಲ ತಿಳಿದಿರುವ ಹಾಗೆ ಪ್ರತಿಯೊಬ್ಬರು ಬ್ಯಾಂಕುಗಳಲ್ಲಿ ವ್ಯವಹಾರ ಮಾಡಲು ಅಥವಾ ಬ್ಯಾಂಕ್ ಖಾತೆ ಹೊಂದಿರಲು ಪ್ಯಾನ್ ಕಾರ್ಡ್ ಕಡ್ಡಾಯಗೊಳಿಸಲಾಗಿದೆ ಅಲ್ಲದೆ ಆ ಪಾನ್ ಕಾರ್ಡ್ ಗೆ ಆಧಾರ್ ಕಾರ್ಡ್ ಕಡ್ಡಾಯವಾಗಿ ಲಿಂಕ್ ಆಗಿರಬೇಕು ಎಂಬ ಹೊಸ ನಿಯಮವನ್ನು ಕೂಡ ಜಾರಿ ಮಾಡಲಾಗಿದ್ದು ಇದೀಗ ಮಕ್ಕಳಿಗೂ ಕೂಡ ಪಾನ್ ಕಾರ್ಡ್ ಮಾಡಿಸಬೇಕು ಎಂಬ ಹೊಸ ನಿಯಮವನ್ನು ತಂದಿದೆ.
ಮಕ್ಕಳಿಗೂ ಕೂಡ ಪಾನ್ ಕಾರ್ಡ್ ಮಾಡಿಸಲು ಸರ್ಕಾರದಿಂದ ಆದೇಶ, ಹೌದು ಮಕ್ಕಳ ಹೆಸರಿನಲ್ಲಿ ಬ್ಯಾಂಕ್ ಅಕೌಂಟ್ ಮಾಡಿಸಬೇಕು ಎಂದರೆ ಈ ಹಿಂದೆ ಪೋಷಕರ ಜಂಟಿ ಬ್ಯಾಂಕ್ ಖಾತೆಯನ್ನು ತೆರೆಯಲಾಗುತ್ತಿತ್ತು ಆದರೆ ಇನ್ನು ಮುಂದೆ ಮಕ್ಕಳ ಹೆಸರಿನಲ್ಲಿ ಪ್ಯಾನ್ ಕಾರ್ಡ್ ಮಾಡಿಸಿ ಮಕ್ಕಳ ಹೆಸರಿನಲ್ಲಿ ಬ್ಯಾಂಕ್ ಖಾತೆ ತೆರೆಯಲು ಸೂಚನೆ ನೀಡಲಾಗಿದೆ.
ಇದೆ ರೀತಿಯ ಹೊಸ ಮಾಹಿತಿ ಗಳಿಗಾಗಿ ನಮ್ಮ WhatsApp ಗ್ರೂಪ್ ಗೆ ಜಾಯಿನ್ ಆಗಿ. ಇಲ್ಲಿ ಕ್ಲಿಕ್ ಮಾಡಿ ಜಾಯಿನ್ ಆಗಿ
ಮಕ್ಕಳ ಪಾನ್ ಕಾರ್ಡ್ ಮಾಡಿಸಲು ಕಾರಣ ಏನು.?
ಪ್ರತಿಯೊಂದು ಮಕ್ಕಳ ಪಾನ್ ಕಾರ್ಡ್ ಮಾಡಿಸುವ ಅಗತ್ಯ ಇಲ್ಲ ಈ ನಿಯಮಗಳಿಗೆ ಬದ್ಧರಾದ ಮಕ್ಕಳಿಗೆ ಮಾತ್ರ ಪಾನ್ ಕಾರ್ಡ್ ಮಾಡಿಸಬೇಕು ಎಂಬ ಆದೇಶವನ್ನು ಸರ್ಕಾರದಿಂದ ಮಾಡಿರುವಂತದ್ದು. . ಹೌದು ಒಂದುವೇಳೆ ಮನೆಯಲ್ಲಿ ಮಕ್ಕಳ ಹೆಸರಿನಲ್ಲಿ ಹಣವನ್ನು ಹೂಡಿಕೆ ಮಾಡಿದ್ದರೆ ಅಂದರೆ ಫಿಕ್ಸೆಡ್ ಡೆಪಾಸಿಟ್ ಮಾಡಿದ್ದರೆ ಅಂತಹ ಮಕ್ಕಳ ಹೆಸರಿನಲ್ಲಿ ಕಡ್ಡಾಯವಾಗಿ ಪಾನ್ ಕಾರ್ಡ್ ಮಾಡಿಸಲೇಬೇಕು ಹಾಗೂ ಹಣದ ಹೂಡಿಕೆಯಿಂದ ಪ್ರತಿ ತಿಂಗಳು ಬಡ್ಡಿ ಪಡೆಯುತ್ತಿದ್ದರೆ ಆ ಹಣವು ಮಗುವಿನ ಸ್ವಂತ ಬ್ಯಾಂಕ್ ಖಾತೆಗೆ ಜಮಾ ಆಗಬೇಕು ಹಾಗಾಗಿ ಆ ಮಗುವಿನ ಸ್ವಂತ ಬ್ಯಾಂಕ್ ಅಕೌಂಟ್ ತೆರೆಯಬೇಕು ಅದರಿಂದ ಪಾನ್ ಕಾರ್ಡ್ ಇದಕ್ಕೆ ಕಡ್ಡಾಯವಾಗಿರುತ್ತದೆ ಈಗಾಗಲೇ ತಿಳಿಸಿದ ಹಾಗೆ ಈ ಹಿಂದೆ ಪೋಷಕರ ಪಾನ್ ಕಾರ್ಡ್ ನೀಡಿ ಮಗುವಿನ ಜಂಟಿ ಬ್ಯಾಂಕ್ ಖಾತೆ ತೆರೆಯಲಾಗುತ್ತಿತ್ತು ಆದರೆ ಇನ್ನು ಮುಂದೆ ವಿದ್ಯಾರ್ಥಿಯ ಸ್ಕಾಲರ್ಶಿಪ್ ಅಥವಾ ಯಾವುದೇ ಹಣ ಪಡೆಯಲು ಮಗುವಿನ ಹೆಸರಿನಲ್ಲಿ ಬ್ಯಾಂಕ್ ಖಾತೆ ಹೊಂದಿರಬೇಕಾಗಿದೆ.
ಇದನ್ನು ಓದಿ: ಕಳೆದ ತಿಂಗಳ ಅನ್ನಭಾಗ್ಯ ಯೋಜನೆ ಹಣ ನಿಮ್ಮ ಬ್ಯಾಂಕ್ ಖಾತೆಗೆ ಜಮಾ ಆಗಿದೆಯಾ.! ಒಂದೇ ಕ್ಲಿಕ್ ನಲ್ಲಿ ಚೆಕ್ ಮಾಡಿ.?
ಮಕ್ಕಳ ಪಾನ್ ಕಾರ್ಡ್ ಮಾಡಿಸುವುದು ಹೇಗೆ ಮತ್ತು ಎಲ್ಲಿ.?
ಮಕ್ಕಳ ಪಾನ್ ಕಾರ್ಡ್ ಮಾಡಿಸಲು ಮೊದಲು NSDL ವೆಬ್ಸೈಟ್ಗೆ ಪ್ರವೇಶ ಮಾಡಿ. ಅಲ್ಲಿ ಫಾರಂ 49A ಅನ್ನು ಸರಿಯಾದ ಮಾಹಿತಿಯನ್ನು ನೀಡಿ ಭರ್ತಿ ಮಾಡಬೇಕು ನಮೂದಿಸಲಾಗಿರುವ ಸೂಚನೆಯನ್ನು ಸರಿಯಾಗಿ ಗಮನಿಸಿ,
ನಿಮ್ಮ ಮಗುವಿನ ಜನನ ಪ್ರಮಾಣ ಪತ್ರ ಮಗುವಿನ ಜೊತೆಗಿನ ಪೋಷಕರ ಫೋಟೋ ಮೊದಲಾದವುಗಳನ್ನು ಕೊಡಬೇಕು ಜೊತೆಗೆ ಪೋಷಕರ ಸಹಿಯನ್ನು ಕೂಡ ಅಪ್ಲೋಡ್ ಮಾಡಬೇಕಾಗುತ್ತದೆ ಈ ಪ್ರಕ್ರಿಯೆ ಮುಗಿದ ನಂತರ ಅರ್ಜಿ ಶುಲ್ಕವಾಗಿ 107 ರೂಪಾಯಿಗಳನ್ನು ಪಾವತಿ ಮಾಡಬೇಕು. ನಂತರ ಸಬ್ಮಿಟ್ ಎನ್ನುವ ಬಟನ್ ಕ್ಲಿಕ್ ಮಾಡಿ ನಿಮಗೆ ಹತ್ತು ಡಿಜಿಟಲ್ ಇರುವ ರಿಜಿಸ್ಟರ್ ನಂಬರ್ ಕೊಡಲಾಗುತ್ತದೆ ಈ ಮೂಲಕ ನೀವು ನಿಮ್ಮ ಪ್ಯಾನ್ ಕಾರ್ಡ್ ಸ್ಟೇಟಸ್ ಚೆಕ್ ಮಾಡಬಹುದು ಅರ್ಜಿ ಸಲ್ಲಿಸಿದ 15 ದಿನಗಳ ಒಳಗೆ ಪ್ಯಾನ್ ಕಾರ್ಡ್ ಬರುತ್ತದೆ.
ಈ ರೀತಿ ಇನ್ನು ಮುಂದೆ ಮಕ್ಕಳ ಹೆಸರಿನಲ್ಲಿ ತಾನ್ ಕಾರ್ಡ್ ಪಡೆದುಕೊಂಡು ಮಕ್ಕಳ ಹೆಸರಿನಲ್ಲಿ ಹಣ ಹೂಡಿಕೆ ಅಥವಾ ಸ್ವಂತ ಬ್ಯಾಂಕ್ ಅಕೌಂಟ್ ಗಳನ್ನು ತೆರೆಯಬಹುದಾಗಿದೆ ಒಂದು ವೇಳೆ ಪಾನ್ ಕಾರ್ಡ್ ಇಲ್ಲದೆ ಇದ್ದರೆ ಅಂತಹ ಮಕ್ಕಳ ಹೆಸರಿನಲ್ಲಿ ಇನ್ನು ಮುಂದೆ ಬ್ಯಾಂಕ್ ನಲ್ಲಿ ಮಕ್ಕಳ ಹೆಸರಿನಲ್ಲಿ ಹಣ ಹೂಡಿಕೆ ಮಾಡಲು ಸಾಧ್ಯವಿಲ್ಲ ಒಂದು ವೇಳೆ ಹಣ ಹೂಡಿಕೆ ಮಾಡಿದರು ಪ್ಯಾನ್ ಕಾರ್ಡ್ ನೀಡದಿದ್ದರೆ ಹೂಡಿಕೆ ಹಣವನ್ನು ಮರುಪಾವತಿ ಪಡೆಯಲು ಸಾಧ್ಯವಿಲ್ಲ ಧನ್ಯವಾದಗಳು…
ಇದೆ ರೀತಿಯ ಹೊಸ ಮಾಹಿತಿ ಗಳಿಗಾಗಿ ನಮ್ಮ WhatsApp ಗ್ರೂಪ್ ಗೆ ಜಾಯಿನ್ ಆಗಿ. ಇಲ್ಲಿ ಕ್ಲಿಕ್ ಮಾಡಿ ಜಾಯಿನ್ ಆಗಿ
ಇದನ್ನು ಓದಿ: ಕಳೆದ ತಿಂಗಳ ಅನ್ನಭಾಗ್ಯ ಯೋಜನೆ ಹಣ ನಿಮ್ಮ ಬ್ಯಾಂಕ್ ಖಾತೆಗೆ ಜಮಾ ಆಗಿದೆಯಾ.! ಒಂದೇ ಕ್ಲಿಕ್ ನಲ್ಲಿ ಚೆಕ್ ಮಾಡಿ.?