ಎಲ್ಲರಿಗೂ ನಮಸ್ಕಾರ. ಕಾಂಗ್ರೆಸ್ ಪಕ್ಷದ ಐದು ಗ್ಯಾರಂಟಿ ಯೋಜನೆಗಲ್ಲಿ ನಾಲ್ಕನೇ ಗ್ಯಾರಂಟಿ ಯೋಜನೆ ಆಗಿರುವಂತಹ ಗೃಹಲಕ್ಷ್ಮಿ ಯೋಜನೆಗೆ ಈಗಾಗಲೇ ಸರ್ಕಾರದಿಂದ ಚಾಲನೆ ನೀಡಿ ನಾಲ್ಕು ತಿಂಗಳು ಆಗಿದೆ ಈಗಾಗಲೇ ಮೂರು ತಿಂಗಳ ಹಣವನ್ನು ಮಹಿಳೆಯರ ಬ್ಯಾಂಕ್ ಖಾತೆಗೆ ಸರ್ಕಾರದಿಂದ ಜಮೆ ಮಾಡಲಾಗಿದ್ದು ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿರುವ ಒಂದು ಕೋಟಿ 17 ಲಕ್ಷ ಫಲಾನುಭವಿಗಳಲ್ಲಿ ಒಂದು ಕೋಟಿ ಹತ್ತು ಲಕ್ಷದಷ್ಟು ಮಹಿಳೆಯರಿಗೆ ಈಗಾಗಲೇ ಯಶಸ್ವಿಯಾಗಿ ಮೂರು ಕಂಂತಿನ ಹಣ ಜಮಾ ಆಗಿದೆ ಎಂದು ಸರ್ಕಾರ ಮಾಹಿತಿ ನೀಡಿದೆ ಹಿನ್ನುಳಿದ ಏಳರಿಂದ ಎಂಟು ಲಕ್ಷ ಮಹಿಳೆಯರಿಗೆ ಸರ್ಕಾರದಿಂದ ಸೂಕ್ತ ಕ್ರಮ ಕೈಗೊಂಡು ಹಣ ಬಂದಿಲ್ಲದ ಮಹಿಳೆಯರಿಗೆ ಒಟ್ಟಿಗೆ ಕಳೆದ ಮೂರು ಕಂತಿನ ಹಣ ಸೇರಿಸಿ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತದೆ ಎಂದು ಲಕ್ಷ್ಮಿ ಹೆಬ್ಬಾಳ್ಕರ್ ರವರು ಭರವಸೆ ನೀಡಿದ್ದಾರೆ, ನೀವು ಕೂಡ ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳಾಗಿದ್ದು ನಿಮಗೂ ಹಣ ಬಂದಿಲ್ಲದಿದ್ದರೆ ಮಾಹಿತಿಯ ಬಗ್ಗೆ ಸಂಪೂರ್ಣವಾಗಿ ತಿಳಿಯಲು ಲೇಖನವನ್ನು ಪೂರ್ತಿಯಾಗಿ ಓದಿ. ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಗೃಹಲಕ್ಷ್ಮಿ ಹಣ ಬಂದಿಲ್ಲದವರಿಗೆ ಒಟ್ಟಿಗೆ ಜಮೆ ಆಗಲಿದೆ 6000.!
ಗೃಹಲಕ್ಷ್ಮಿ ಯೋಜನೆಯ ಹಣವು ಈಗಾಗಲೇ ಮೂರು ಕಂತುಗಳಲ್ಲಿ ಹಣ ಜಮೆ ಆಗಿದೆ ಇದರಲ್ಲಿ ಸರ್ಕಾರದ ಮಾಹಿತಿಯ ಪ್ರಕಾರ 90ರಷ್ಟು ಮಹಿಳೆಯರಿಗೆ ಹಣ ತಲುಪಿದೆ ಎಂದು ತಿಳಿಸಲಾಗಿದೆ ಇನ್ನು ಉಳಿದ ಕೆಲವು ಮಹಿಳೆಯರಿಗೆ ಹಣವನ್ನು ಡಿಸೆಂಬರ್ ತಿಂಗಳ ಹಣ ಜಮಾ ಆಗುವುದರೊಳಗಾಗಿ ಕಳೆದ ಮೂರು ತಿಂಗಳ ಹಣ ಒಟ್ಟಿಗೆ ಸೇರಿಸಿ ಜಮೆ ಮಾಡಲಾಗುವುದು ಎಂದು ಸರ್ಕಾರದಿಂದ ಮಾಹಿತಿ ನೀಡಲಾಗಿದೆ,
ಹೌದು ರಾಜ್ಯದಲ್ಲಿ ಸರ್ಕಾರದ ಪ್ರಕಾರ ಇನ್ನು ಸುಮಾರು ಹತ್ತರಷ್ಟು ಮಹಿಳೆಯರಿಗೆ ಗೃಹಲಕ್ಷ್ಮಿ ಯೋಜನೆಯ ಹಣ ತಲುಪಬೇಕಾಗಿದೆ ಹಾಗಾಗಿ ಸರ್ಕಾರ ಅಂತಹ ಮಹಿಳೆಯರ ದಾಖಲೆಗಳನ್ನು ಮತ್ತೊಮ್ಮೆ ಪರಿಶೀಲಿಸಿ ಈಗಾಗಲೇ ಹಣವನ್ನು ಬಿಡುಗಡೆ ಮಾಡಲು ನಿಗದಿಪಡಿಸಿರುವ ದಿನಾಂಕ ಅಂದರೆ ಪ್ರತಿ ತಿಂಗಳ 15 ನೇ ದಿನಾಂಕದಿಂದ 20ನೇ ದಿನಾಂಕದ ಒಳಗಾಗಿ ಹಣ ಬಿಡುಗಡೆ ಮಾಡಲಿರುವ ದಿನಾಂಕದ ಒಳಗಾಗಿ ಸಮಸ್ಯೆಯನ್ನು ಬಗೆಹರಿಸಿ ಎಲ್ಲ ಮಹಿಳೆಯರಿಗೂ ಹಣ ನೀಡುವುದಾಗಿ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಭರವಸೆಯನ್ನು ನೀಡಿದ್ದಾರೆ.ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಗೃಹಲಕ್ಷ್ಮಿ ಯೋಜನೆಯ ಹಣ ತಲುಪಿಸಲು ಲಕ್ಷ್ಮಿ ಹೆಬ್ಬಾಳ್ಕರ್ ಅವರ ಭರವಸೆ ಏನು.?
ಈಗಾಗಲೇ ತಿಳಿಸಿದ ಹಾಗೆ 90ರಷ್ಟು ಮಹಿಳೆಯರಿಗೆ ಹಣ ತಲುಪಿದೆ ಎಂದು ಸರ್ಕಾರ ಮಾಹಿತಿ ನೀಡಿದೆ ಇನ್ನುಳಿದ ಮಹಿಳೆಯರಿಗೆ ಹಣ ತಲುಪಿಸಲು ಸರ್ಕಾರದಿಂದ ಕೆಲವು ಕ್ರಮಗಳನ್ನು ಕೈಗೊಳ್ಳಲಾಗುತ್ತಿದ್ದು ಸರ್ಕಾರದಿಂದ ಗೃಹಲಕ್ಷ್ಮಿ ಯೋಜನೆಗೆ ಸಂಬಂಧಿಸಿದಂತೆ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಗೃಹಲಕ್ಷ್ಮಿ ಅದಾಲತ್ ನಡೆಸಲು ಮುಂದಾಗಿದೆ, ಈ ಅದಾಲತ್ ನಲ್ಲಿ ಗೃಹಲಕ್ಷ್ಮಿ ಹಣ ಬಂದಿಲ್ಲದ ಮಹಿಳೆಯರು ನಿಮ್ಮ ಗ್ರಾಮ ಪಂಚಾಯ್ತಿಗೆ ಭೇಟಿ ನೀಡಿ ಅಲ್ಲಿ ನಡೆಸಲಾಗುತ್ತಿರುವ ಅದಾಲತ್ ನಲ್ಲಿ ನಿಮ್ಮ ಖಾತೆಗೆ ಹಣ ಜಮಾ ಆಗದಿರಲು ಸಮಸ್ಯೆ ಏನು ಎಂಬ ಬಗ್ಗೆ ಮಾಹಿತಿ ಪಡೆಯಬಹುದು, ಅದರಲ್ಲಿ ನಿಮ್ಮ ಬ್ಯಾಂಕ್ ಖಾತೆ ಮಾಹಿತಿ ಸಮಸ್ಯೆ, ಬ್ಯಾಂಕ್ ಖಾತೆ ಸಂಖ್ಯೆ ಆಧಾರ್ ಲಿಂಕ್ ಆಗದಿರುವ ಮಾಹಿತಿ, ಗೃಹಲಕ್ಷ್ಮಿ ಅರ್ಜಿಯಲ್ಲಿ ಇರುವ ಸಮಸ್ಯೆ ಇನ್ನಿತರ ಕಾರಣಗಳಿಂದಾಗಿ ಹಣ ವರ್ಗಾವಣೆಗೆ ತೊಂದರೆಯಾಗಿದೆ ಎಂದು ತಿಳಿಯಬಹುದು ನಂತರ ಸಮಸ್ಯೆಗೆ ಪರಿಹಾರವನ್ನು ಗೃಹಲಕ್ಷ್ಮಿ ಅದಾಲತ್ನಲ್ಲಿ ನಿಮ್ಮ ಗ್ರಾಮದ ಅಂಗನವಾಡಿ ಕಾರ್ಯಕರ್ತರ ಜೊತೆಗೆ ನಿಮ್ಮ ಸಮಸ್ಯೆಗೆ ಪರಿಹಾರವನ್ನು ಮಾಡಿಕೊಳ್ಳಬಹುದು ಇದರಲ್ಲಿ ನಿಮ್ಮ ಬ್ಯಾಂಕ್ ಖಾತೆ ಸಮಸ್ಯೆ ಇದ್ದರೆ ನೀವು ಅಲ್ಲಿಯೇ ಅಂಚೆ ಕಚೇರಿಯ ಖಾತೆಯನ್ನು ತೆರೆದು ಗೃಹಲಕ್ಷ್ಮಿ ಯೋಜನೆ ಹಣ ಪಡೆಯಲು ಸಮಸ್ಯೆಯನ್ನು ಸರಿಪಡಿಸಿಕೊಳ್ಳಬಹುದು.
ಹೀಗೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಗೃಹಲಕ್ಷ್ಮಿ ಯೋಜನೆಯ ಹಣವನ್ನು ಪ್ರತಿ ಮಹಿಳೆಯರಿಗೂ ಮುಂದಿನ ಕಂತಿನ ಹಣ ಬಿಡುಗಡೆ ಮಾಡುವುದರೊಳಗಾಗಿ ಪ್ರತಿಯೊಬ್ಬರಿಗೂ ಕಳೆದ ಕಂತುಗಳ ಹಣ ಸೇರಿದಂತೆ ಒಟ್ಟಿಗೆ ಹಣವನ್ನು ಜಮಾ ಮಾಡಲಾಗುತ್ತದೆ ಎಂದು ಭರವಸೆ ನೀಡಿದ್ದಾರೆ. ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ