SBI ಆಶಾ ಸ್ಕಾಲರ್ಶಿಪ್ ಉಚಿತ 10,000 ಕ್ಕೆ ಅರ್ಜಿ ಸಲ್ಲಿಸಲು ಇದೆ ಕೊನೆಯ ದಿನಾಂಕ.! ಈಗಲೇ ಅರ್ಜಿ ಸಲ್ಲಿಸಿ.?

ಎಲ್ಲರಿಗೂ ನಮಸ್ಕಾರ. SBI  ಪೌಂಡೇಶನ್ ಆಶಾ  ಸ್ಕಾಲರ್ಶಿಪ್‌ಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ, ಸರ್ಕಾರದಿಂದ ಬಡ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣಕ್ಕೆ ಅನುಕೂಲ ಆಗಲಿ ಎಂದು ಮತ್ತು ಆರ್ಥಿಕವಾಗಿ ಸಹಾಯಧನ ನೀಡಲು ವಿದ್ಯಾರ್ಥಿಗಳಿಂದ ಪ್ರತಿ ವರ್ಷ ಅರ್ಜಿಯನ್ನು ಸ್ವೀಕರಿಸಿ ಸ್ಕಾಲರ್ಶಿಪ್ ಹಣ ನೀಡಲಾಗುತ್ತದೆ ಅದೇ ರೀತಿ ದೇಶದ ಪ್ರತಿಷ್ಠಿತ ಕಂಪನಿಗಳು ಕೂಡ ಬಡ ವಿದ್ಯಾರ್ಥಿಗಳಿಗೆ ಶಿಕ್ಷಣಕ್ಕೆ ಆರ್ಥಿಕ ಸಹಾಯ ನೀಡಲು ಅರ್ಜಿಗಳನ್ನು ಸ್ವೀಕರಿಸಿ ಪ್ರತಿ ವರ್ಷ ಸ್ಕಾಲರ್ಶಿಪ್ ನೀಡುತ್ತದೆ ಅದರಲ್ಲಿ ಎಸ್ ಬಿ ಐ ಫೌಂಡೇಶನ್ ಆಶಾ ಸ್ಕಾಲರ್ಶಿಪ್ ಕೂಡ ಒಂದು ಇದರಲ್ಲಿ ಶಾಲಾ ವಿದ್ಯಾರ್ಥಿಗಳಿಂದ ಅರ್ಜಿಯನ್ನು ಸ್ವೀಕರಿಸಿ ಅರ್ಹ ವಿದ್ಯಾರ್ಥಿಗೆ 10,000 ವಿದ್ಯಾರ್ಥಿ ವೇತನ ನೀಡಲಾಗುತ್ತದೆ ನೀವು ಕೂಡ ವಿದ್ಯಾರ್ಥಿಗಳಾಗಿದ್ದು SBI ಫೌಂಡೇಶನ್ ನ 10,000 ಸ್ಕಾಲರ್ಶಿಪ್ ಪಡೆಯಬೇಕು ಎಂದರೆ ಅರ್ಜಿಯನ್ನು ಹೇಗೆ ಸಲ್ಲಿಸುವುದು ಯಾರೆಲ್ಲ ಅರ್ಜಿ ಸಲ್ಲಿಸಬಹುದು ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿಯಲು ಲೇಖನವನ್ನು ಪೂರ್ತಿಯಾಗಿ ಓದಿ.ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್  ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

WhatsApp Group Join Now
Telegram Group Join Now

SBI ಆಶಾ ಸ್ಕಾಲರ್ಶಿಪ್ ಉಚಿತ 10,000 ಕ್ಕೆ ಅರ್ಜಿ ಸಲ್ಲಿಸಲು ಇದೆ ಕೊನೆಯ ದಿನಾಂಕ.! 

2023 24ನೇ ಸಾಲಿನ ವಿದ್ಯಾರ್ಥಿಗಳಿಗೆ SBI  ಫೌಂಡೇಶನ್ ಆಶಾ ಸ್ಕಾಲರ್ಶಿಪ್ ಅಡಿಯಲ್ಲಿ ವಿದ್ಯಾರ್ಥಿ ವೇತನವನ್ನು ನೀಡಲು ವಿದ್ಯಾರ್ಥಿಗಳಿಂದ ಅರ್ಜಿಯನ್ನು ಸ್ವೀಕರಿಸಲಾಗುತ್ತದೆ,  ಈ ಸ್ಕಾಲರ್ಶಿಪ್ ನಲ್ಲಿ ಅರ್ಹ ವಿದ್ಯಾರ್ಥಿಗೆ 10,000 ವಿದ್ಯಾರ್ಥಿ ವೇತನವನ್ನು ನೀಡಲಾಗುತ್ತದೆ ಈಗಾಗಲೇ ಕೆಲವು ದಿನಗಳಿಂದ ಅರ್ಜಿಯನ್ನು ಸ್ವೀಕರಿಸಲಾಗುತ್ತಿದ್ದು ಇದೀಗ ಸ್‌ಬಿಐ ಫೌಂಡೇಶನ್ ಅರ್ಜಿ ಸ್ವೀಕರಿಸುವ ಕೊನೆಯ ದಿನಾಂಕ ಕೂಡ ನಿಗದಿ ಮಾಡಿದೆ, ಹೌದು SBI  ಫೌಂಡೇಶನ್ ನ ಆಶಾ ಸ್ಕಾಲರ್ಶಿಪ್ ಅಡಿಯಲ್ಲಿ 6ನೇ ತರಗತಿಯಿಂದ 12ನೇ ತರಗತಿಯನ್ನು ಓದುತ್ತಿರುವ ವಿದ್ಯಾರ್ಥಿಗಳಿಗೆ  ಸ್ಕಾಲರ್ಶಿಪ್ ಗೆ ಅರ್ಜಿ ಸಲ್ಲಿಸಲು ಅವಕಾಶವನ್ನು ನೀಡಲಾಗಿದ್ದು ಇದೀಗ ಇದೆ ನವೆಂಬರ್ 30ನೇ ದಿನಾಂಕವನ್ನು ಅರ್ಜಿ ಸಲ್ಲಿಸುವ ಕೊನೆಯ ದಿನಾಂಕವಾಗಿ ನಿಗದಿಪಡಿಸಿದೆ ಅಂದರೆ ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳು ಈ ತಿಂಗಳ ಒಳಗಾಗಿ ಅರ್ಜಿ ಸಲ್ಲಿಸಬಹುದಾಗಿದೆ.ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್  ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

SBI ಸ್ಕಾಲರ್ಶಿಪ್ ಗೆ ಅರ್ಜಿ ಸಲ್ಲಿಸಲು ಬೇಕಾದ ಅರ್ಹತೆಗಳು.!

ಎಸ್ ಬಿ ಐ ಫೌಂಡೇಶನ್ ಆಶಾ ಸ್ಕಾಲರ್ಶಿಪ್ ಗೆ ಅರ್ಜಿ ಸಲ್ಲಿಸಲು ಆರನೇ ತರಗತಿಯಿಂದ 12ನೇ ತರಗತಿ ಓದುತ್ತಿರುವ ವಿದ್ಯಾರ್ಥಿಗಳ ವರೆಗೂ ಅರ್ಜಿಯನ್ನು ಸಲ್ಲಿಸಬಹುದು,  ಇನ್ನು ಅರ್ಜಿ ಸಲ್ಲಿಸಲು ವಿದ್ಯಾರ್ಥಿಯು ತಮ್ಮ ಹಿಂದಿನ ವರ್ಷದ ಪರೀಕ್ಷೆಯಲ್ಲಿ ಕನಿಷ್ಠ ಶೇಕಡ 75ಕ್ಕಿಂತ ಹೆಚ್ಚು ಅಂಕಗಳನ್ನು ಗಳಿಸಬೇಕು ಹಾಗೂ ಅರ್ಜಿ ಸಲ್ಲಿಸುವ ವಿದ್ಯಾರ್ಥಿಯ ವಾರ್ಷಿಕ ಆದಾಯವು 3 ಲಕ್ಷಕ್ಕಿಂತ ಮೀರಿರಬಾರದು ಇನ್ನು ಕೊನೆಯದಾಗಿ ಅರ್ಜಿ ಸಲ್ಲಿಸುವ ವಿದ್ಯಾರ್ಥಿಯು ಭಾರತ ದೇಶದ ಯಾವುದೇ ಮಾನ್ಯತೆ ಪಡೆದ ಶಿಕ್ಷಣ ಸಂಸ್ಥೆಯಲ್ಲಿ ಓದುತ್ತಿರುವ ವಿದ್ಯಾರ್ಥಿ ಅರ್ಜಿ ಸಲ್ಲಿಸಬಹುದು.

ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳು ಮತ್ತು ಅರ್ಜಿ ಸಲ್ಲಿಸುವ ವಿಧಾನ.?

SBI ಫೌಂಡೇಶನ್ ನ ಆಶಾ ಸ್ಕಾಲರ್ಶಿಪ್ ಗೆ ಅರ್ಜಿಯನ್ನು ಸಲ್ಲಿಸಲು ಈ ಮೇಲೆ ತಿಳಿಸಿದ ಅರ್ಹತೆಯನ್ನು ಹೊಂದಿರಬೇಕಾಗುತ್ತದೆ ಜೊತೆಗೆ

  •  ಇಂದಿನ ವರ್ಷದ ಅಂಕಪಟ್ಟಿ
  •  ವಿದ್ಯಾರ್ಥಿಯ ಆಧಾರ್ ಕಾರ್ಡ್
  •  ವಿದ್ಯಾರ್ಥಿಯ ಬ್ಯಾಂಕ್ ಪಾಸ್ ಬುಕ್ ಜೆರಾಕ್ಸ್
  •  ಜಾತಿ ಪ್ರಮಾಣ ಪತ್ರ ಮತ್ತು ಆದಾಯ ಪ್ರಮಾಣ ಪತ್ರ
  •  ವಿದ್ಯಾರ್ಥಿಯ ಪಾಸ್ಪೋರ್ಟ್ ಸೈಜ್ ಫೋಟೋಸ್
  •  ಪ್ರಸ್ತುತ ತರಗತಿಯ ಪ್ರವೇಶಾತಿ ದಾಖಲೆ ಅಂದರೆ ಸ್ಟೂಡೆಂಟ್ ಐಡಿ

ಇನ್ನು  ಸ್ಕಾಲರ್ಶಿಪ್ ಗೆ ಅರ್ಜಿಯನ್ನು ಆನ್ಲೈನ್ ಮೂಲಕ ಸಲ್ಲಿಸಬಹುದಾಗಿದ್ದು ಅರ್ಜಿ ಸಲ್ಲಿಸಲು SBI  ಫೌಂಡೇಶನ್ ನ ಆಶಾ ಸ್ಕಾಲರ್ಶಿಪ್ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ ಅರ್ಜಿ ಸಲ್ಲಿಸುವವರಿಗೆ ನವೆಂಬರ್ 30 ಕೊನೆಯ ದಿನಾಂಕವಾಗಿದ್ದು ಈಗಲೇ ಅರ್ಜಿ ಸಲ್ಲಿಸಬಹುದು ಧನ್ಯವಾದಗಳು. ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್  ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

Leave a Comment