ಎಲ್ಲರಿಗೂ ನಮಸ್ಕಾರ…
ಗೃಹಲಕ್ಷ್ಮಿ ಯೋಜನೆ, ಕರ್ನಾಟಕ ರಾಜ್ಯ ಸರ್ಕಾರದ ನಾಲ್ಕನೇ ಗ್ಯಾರಂಟಿ ಯೋಜನೆಯಾಗಿದ್ದು ಈಗಾಗಲೇ ರಾಜ್ಯ ಸರ್ಕಾರ ಐದು ಗ್ಯಾರಂಟಿ ಯೋಜನೆಗಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆಗೆ ಈಗಾಗಲೇ ಚಾಲನೆ ನೀಡಿದೆ, ಕರ್ನಾಟಕದಲ್ಲಿ ಗೃಹಲಕ್ಷ್ಮಿ ಯೋಜನೆಗೆ ಒಂದು ಕೋಟಿ 30 ಲಕ್ಷಕ್ಕೂ ಹೆಚ್ಚು ಮಹಿಳೆಯರು ಅರ್ಜಿ ಸಲ್ಲಿಸಿದ್ದು ಇದರಲ್ಲಿ ಕೆಲವು ಮಹಿಳೆಯರ ಹೆಸರನ್ನು ಯೋಜನೆಯ ಫಲಾನುಭವಿಗಳ ಲಿಸ್ಟ್ ಇಂದ ತೆಗೆದು ಹಾಕಿದ್ದು ಸದ್ಯಕ್ಕೆ ಒಂದು ಕೋಟಿ 28 ಲಕ್ಷ ಮಹಿಳೆಯರಿಗೆ ಗೃಹಲಕ್ಷ್ಮಿ ಯೋಜನೆ ಅಡಿಯಲ್ಲಿ ಪ್ರತಿ ತಿಂಗಳು 2000 ಹಣ ಜಮಾ ಮಾಡಲು ಸರ್ಕಾರ ಮುಂದಾಗಿದೆ ಈಗಾಗಲೇ ಸುಮಾರು 60 ರಿಂದ 65 ರಷ್ಟು ಮಹಿಳೆಯರಿಗೆ 2000 ಹಣ ಬ್ಯಾಂಕ್ ಖಾತೆಗೆ ಜಮಾ ಆಗಿದ್ದು ಉಳಿದ ಮಹಿಳೆಯರ ಹಣ ಜಮಾ ಮಾಡುವಲ್ಲಿ ಸಮಸ್ಯೆ ಉಂಟಾಗಿದೆ.
ಸದ್ಯಕ್ಕೆ ರಾಜ್ಯ ಸರ್ಕಾರ ಗೃಹಲಕ್ಷ್ಮಿ ಯೋಜನೆಗೆ ಸಂಬಂಧಿಸಿದ ಹಾಗೆ ಕೆಲವು ನಿಯಮಗಳನ್ನು ಮಹಿಳೆಯರಿಗೆ ತಿಳಿಸಿದ್ದು ಇದರಿಂದ ಉಳಿದ ಮಹಿಳೆಯರಿಗೆ ಹಣ ಜಮಾ ಮಾಡಲು ಕೆಲವು ಯೋಜನೆಗಳನ್ನು ಮಾಡಿದೆ ಇದರಿಂದ ಮುಂದಿನ ದಿನಗಳಲ್ಲಿ ಹಣ ಜಮಾ ಮಾಡುವುದಾಗಿ ಸರ್ಕಾರದಿಂದ ಸದ್ಯಕ್ಕೆ ಮಹಿಳೆಯರಿಗೆ ಭರವಸೆಯನ್ನು ನೀಡಿದೆ, ನಿಮಗೆ ಇನ್ನೂ ಕೂಡ ಗೃಹಲಕ್ಷ್ಮಿ ಯೋಜನೆಯ ಮೊದಲನೇ ಕಂತಿನ ಹಣ ಬಂದೇ ಇಲ್ಲ ಎಂದರೆ ಲೇಖನವನ್ನು ಪೂರ್ತಿಯಾಗಿ ಓದಿ ನಿಮ್ಮ ಗೃಹಲಕ್ಷ್ಮಿ ಯೋಜನೆ ಹಣ ಬರುವ ಸಾಧ್ಯತೆ ಇದೆ..
ಗೃಹಲಕ್ಷ್ಮಿ ಯೋಜನೆ ಹಣ ಇನ್ನು ಬಂದಿಲ್ಲ ಅಂದರೆ ಈಗಲೇ ಈ ಕೆಲಸ ಮಾಡಿ.!
ಗೃಹಲಕ್ಷ್ಮಿ ಯೋಜನೆಗೆ ಈಗಾಗಲೇ ತಿಳಿಸಿದ ಹಾಗೆ ಸುಮಾರು ಒಂದು ಕೋಟಿ 30 ಲಕ್ಷಕ್ಕೂ ಹೆಚ್ಚು ಮಹಿಳೆಯರು ಅರ್ಜಿಯನ್ನ ಸಲ್ಲಿಸಿದ್ದರು ಇದರಲ್ಲಿ ಸರ್ಕಾರ ಕೆಲವು ಅರ್ಜಿಗಳನ್ನ ರದ್ದು ಮಾಡಿದ್ದು ಸುಮಾರು ಒಂದು ಕೋಟಿ 28 ಲಕ್ಷ ಮಹಿಳೆಯರಿಗೆ ಗೃಹಲಕ್ಷ್ಮಿ ಯೋಜನೆಯ ಹಣವನ್ನು ಪ್ರತಿ ತಿಂಗಳು 2000 ಹಣವನ್ನು ಬ್ಯಾಂಕ್ ಖಾತೆಗೆ ಜಮಾ ಮಾಡುವುದಾಗಿ ಒಂದು ಹೊಸ ಲಿಸ್ಟ್ ಬಿಡುಗಡೆ ಮಾಡಿದ್ದು ಲಿಸ್ಟ್ ನಲ್ಲಿ ಹೆಸರು ಇರುವ ಮಹಿಳೆಯರಿಗೆ ಹಣ ಜಮಾ ಮಾಡಲು ಸರ್ಕಾರ ಮುಂದಾಗಿತ್ತು.
ಸದ್ಯಕ್ಕೆ ಇದರಲ್ಲಿ ಸುಮಾರು 70 ರಿಂದ 80 ಲಕ್ಷ ಮಹಿಳೆಯರಿಗೆ ಮಾತ್ರ 2,000 ಹಣ ಬ್ಯಾಂಕ್ ಖಾತೆಗೆ ಜಮಾ ಆಗಿದ್ದು ಉಳಿದ ಮಹಿಳೆಯರಿಗೆ ಮೊದಲ ಕಂತಿನ ಹಣ ಅಂದರೆ ಆಗಸ್ಟ್ ತಿಂಗಳ ಹಣವೆ ಬಂದಿಲ್ಲ ಇನ್ನು ಈಗಾಗಲೇ ಸೆಪ್ಟೆಂಬರ್ ತಿಂಗಳು ಮುಗಿದಿದ್ದು ಸೆಪ್ಟೆಂಬರ್ ತಿಂಗಳ ಅಂದರೆ ಎರಡನೇ ಕಂತಿನ ಹಣ ಮಹಿಳೆಯರ ಬ್ಯಾಂಕ್ ಖಾತೆಗೆ ಜಮಾ ಆಗಬೇಕಾಗಿದೆ ಇದರಿಂದ ಸರ್ಕಾರ ಈಗಾಗಲೇ ತಿಳಿಸಿದ ಕೆಲವು ಯೋಜನೆಗಳ ಮೇಲೆ ಈಗಾಗಲೇ ಮೊದಲನೇ ಕಂತಿನ ಹಣ ಪಡೆದಿರುವ ಮಹಿಳೆಯರಿಗೆ ಎರಡನೇ ಕಂತಿನ ಹಣ ಜಮಾ ಆಗಲಿದೆ ಅಲ್ಲದೆ ಯಾವುದೇ ಹಣ ಪಡೆಯದೆ ಇರುವ ಮಹಿಳೆಯರಿಗೆ ಅಕ್ಟೋಬರ್ 15 ನೇ ದಿನಾಂಕದ ಒಳಗಾಗಿ ಎರಡು ತಿಂಗಳ ಹಣವನ್ನು ಅಂದರೆ ಒಟ್ಟಾರೆ 4000 ಹಣವನ್ನು ಬ್ಯಾಂಕ್ ಖಾತೆಗೆ ಜಮಾ ಮಾಡುವುದಾಗಿ ಸರ್ಕಾರದಿಂದ ಒಂದು ಹೊಸ ಆದೇಶ ಹೊರಡಿಸಿದೆ.
ಇದೆ ರೀತಿಯ ಹೊಸ ಮಾಹಿತಿ ಗಳಿಗಾಗಿ ನಮ್ಮ WhatsApp ಗ್ರೂಪ್ ಗೆ ಜಾಯಿನ್ ಆಗಿ. ಇಲ್ಲಿ ಕ್ಲಿಕ್ ಮಾಡಿ ಜಾಯಿನ್ ಆಗಿ
ಗೃಹಲಕ್ಷ್ಮಿ ಯೋಜನೆಯ ಮೊದಲನೇ ಮತ್ತು ಎರಡನೇ ಕಂತಿನ ಹಣ ಯಾರಿಗೆಲ್ಲ ಸಿಗಲಿದೆ.?
ಈಗಾಗಲೇ ಗೃಹಲಕ್ಷ್ಮಿ ಯೋಜನೆಯ ಮೊದಲನೇ ಕಂತಿನ ಹಣ ಬಂದಿರುವ ಮಹಿಳೆಯರಿಗೆ ಅಕ್ಟೋಬರ್ ಈ 15 ನೇ ದಿನಾಂಕದೊಳಗೆ ಎರಡನೇ ಕಂತಿನ ಹಣ ಜಮಾ ಆಗಲಿದೆ ಸದ್ಯ ಇವರಿಗೆ ಮೊದಲನೇ ಕಂತಿನ ಹಣ ಬಂದಿಲ್ಲದೆ ಇರುವ ಮಹಿಳೆಯರಿಗೆ ಸರ್ಕಾರದಿಂದ ಈಗಾಗಲೇ ಕೆಲವು ಸೂಚನೆಗಳನ್ನು ನೀಡಿದ್ದು ಸೂಚನೆಗಳನ್ನು ಈಗಾಗಲೇ ಪಾಲಿಸಿದ್ದೆ ಆದಲ್ಲಿ ಅದೇ ಅಕ್ಟೋಬರ್ 15 ನೇ ದಿನಾಂಕದ ಒಳಗಾಗಿ ಎರಡು ಕಂತಿನ ಹಣವನ್ನು ಅಂದರೆ ಒಟ್ಟಾರೆ ನಾಲ್ಕು ಸಾವಿರ ಹಣವನ್ನು ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತದೆ ಎಂದು ಸರ್ಕಾರ ಸೂಚನೆಯನ್ನು ನೀಡಿದೆ.
ಇನ್ನು ಯೋಜನೆಯ ಹಣವನ್ನು ಪಡೆದುಕೊಂಡಿಲ್ಲದೆ ಇರುವ ಮಹಿಳೆಯರು ಮತ್ತೊಂದು ಬಾರಿ ಈ ಸೂಚನೆಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಏಕೆಂದರೆ ಅಕ್ಟೋಬರ್ 15 ಹಣ ಪಡೆಯುವವರಿಗೆ ಒಂದು ಕೊನೆಯ ಅವಕಾಶ ಆಗಿರುತ್ತದೆ ಅಕ್ಟೋಬರ್ 15 ರ ಒಳಗಾಗಿ ಯಾವ ಮಹಿಳೆಯರಿಗೆಲ್ಲ ಗೃಹಲಕ್ಷ್ಮಿ ಯೋಜನೆಯ ಹಣ ಸಿಗುತ್ತದೆ ಅಂತಹ ಮಹಿಳೆಯರಿಗೆ ಪ್ರತಿ ತಿಂಗಳು ಸಹ 2000 ಹಣ ಬ್ಯಾಂಕ್ ಖಾತೆಗೆ ನೇರವಾಗಿ ಜಮಾ ಆಗುತ್ತದೆ ಒಂದು ವೇಳೆ ಅಕ್ಟೋಬರ್ 15 ರ ಒಳಗಾಗಿ ಹಣ ಜಮಾ ಆಗದಿದ್ದರೆ ನಿಮಗೆ ಮುಂದಿನ ಕಂತುಗಳ ಹಣ ಪಡೆಯುವಲ್ಲಿ ಸಮಸ್ಯೆ ಆಗುತ್ತದೆ ಆದ್ದರಿಂದ ಸರ್ಕಾರ ತಿಳಿಸಿರುವ ಈ ಕೆಲವು ಸೂಚನೆಗಳನ್ನು ಪಾಲಿಸಿದ್ದರೆ ಅದರ ಸ್ಟೇಟಸ್ ಗಳನ್ನು ಚೆಕ್ ಮಾಡಿಕೊಳ್ಳುವುದು ಸೂಕ್ತ.
ಗೃಹಲಕ್ಷ್ಮಿ ಯೋಜನೆಯ ಎರಡು ಸಾವಿರ ಹಣ ಪಡೆಯಲು ಮಾಡಬೇಕಾದ ಕೆಲಸ ಏನು.?
ಸದ್ಯ ಈಗಾಗಲೇ ನಿಮಗೆಲ್ಲ ತಿಳಿದಿರುವ ಹಾಗೆ ಸರ್ಕಾರದ ಕಡೆಯಿಂದ ಅದರಲ್ಲೂ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಈ ಬಗ್ಗೆ ಕೆಲವು ಸೂಚನೆಗಳನ್ನು ಈಗಾಗಲೇ ಮಹಿಳೆಯರಿಗೆ ತಿಳಿಸಿದ್ದಾರೆ ಮೊದಲನೇ ಕಂತಿನ ಹಣ ಪಡೆಯದೆ ಇರುವ ಮಹಿಳೆಯರು ಈ ಸೂಚನೆಗಳನ್ನು ಶೀಘ್ರದಲ್ಲೇ ಪಾಲಿಸಬೇಕು ಅಂತಹ ಮಹಿಳೆಯರಿಗೆ ಮುಂದಿನ ತಿಂಗಳು ಎರಡು ತಿಂಗಳ ಹಣವನ್ನು ಒಟ್ಟಾರೆ ಜಮಾ ಮಾಡಲಾಗುತ್ತದೆ ಎಂದು ತಿಳಿಸಲಾಗಿತ್ತು. ಅದರಿಂದ ಮಹಿಳೆಯರು ಮತ್ತೊಂದು ಬಾರಿ ಈ ಕೆಲಸ ಮಾಡಿದ್ದಾರೆ ಮತ್ತೊಂದು ಬಾರಿ ಸ್ಟೇಟಸ್ ಚೆಕ್ ಮಾಡಿಕೊಳ್ಳುವುದು ಸೂಕ್ತ
- ಮೊದಲನೆಯದಾಗಿ ನೀವು ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿದ್ದು ನಿಮಗೆ ಇನ್ನೂ ಕೂಡ ಮೊದಲನೇ ಕಂತಿನ ಹಣ ಬಂದಿಲ್ಲದಿದ್ದರೆ ನೀವು ಮೊದಲು ಸಲ್ಲಿಸಿರುವ ಅರ್ಜಿ ಸಲ್ಲಿಕೆ ಆಗಿದೆಯೋ ಇಲ್ಲವೋ ಎಂದು ಚೆಕ್ ಮಾಡಿಕೊಳ್ಳಬೇಕು. ಅಂದರೆ ಫಲಾನುಭವಿಗಳ ಲಿಸ್ಟ್ ನಲ್ಲಿ ನಿಮ್ಮ ಹೆಸರು ಇದೆಯೇ ಎಂದು ಚೆಕ್ ಮಾಡಿಕೊಳ್ಳಬೇಕು.
- ಗೃಹಿಣಿಯರ ಬ್ಯಾಂಕ್ ಖಾತೆಗೆ ಕಡ್ಡಾಯವಾಗಿ ಆಧಾರ್ ಕಾರ್ಡ್ ಲಿಂಕ್ ಆಗಿರಬೇಕು
- ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿರುವ ಸಂದರ್ಭದಲ್ಲಿ ನೀಡಿರುವ ದಾಖಲೆಗಳು, ಆಧಾರ್ ಕಾರ್ಡ್ ಹಾಗೂ ಬ್ಯಾಂಕ್ ಖಾತೆಯಲ್ಲಿರುವ ದಾಖಲೆಗಳಿಗೂ ಮತ್ತು ಹೆಸರಿಗೂ ಮಿಸ್ ಮ್ಯಾಚ್ ಆಗದಿರುವುದು
- ಅರ್ಜಿ ಸಲ್ಲಿಸಿರುವ ಮಹಿಳೆಯ ಹೆಸರಿನಲ್ಲಿ ಮನೆಯ ರೇಷನ್ ಕಾರ್ಡ್ ಇರಬೇಕು ಮತ್ತು ರೇಷನ್ ಕಾರ್ಡಿಗೆ ಕಡ್ಡಾಯವಾಗಿ ಮನೆಯ ಎಲ್ಲಾ ಸದಸ್ಯರ e-kyc ಆಗಿರಬೇಕು
- ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ಆಧಾರ್ ಕಾರ್ಡ್ ಮತ್ತು ಬ್ಯಾಂಕ್ ಖಾತೆ ಹಾಗೂ ಅರ್ಜಿಯಲ್ಲಿ ಹೆಸರು ಅಥವಾ ದಾಖಲೆಯನ್ನು ತಪ್ಪಾಗಿ ನೀಡಿರುವುದು.
- ಬ್ಯಾಂಕ್ ಖಾತೆ ಸ್ಥಿತಿ ಚೆಕ್ ಮಾಡಿರಬೇಕು ಅಂದರೆ ಡಿ ಬಿ ಟಿ ಲಿಂಕ್ ಆಗಿದೆಯೇ ಇಲ್ಲವೋ ಎಂದು ಚೆಕ್ ಮಾಡಬೇಕು.
ಈ ರೀತಿ ಕೆಲವು ಸೂಚನೆಗಳನ್ನು ಲಕ್ಷ್ಮಿ ಹೆಬ್ಬಾಳ್ಕರ್ ಅವರು ಈ ಹಿಂದೆ ಮಹಿಳೆಯರಿಗೆ ತಿಳಿಸಿದ್ದು ಈ ಸೂಚನೆಗಳನ್ನು ಶೀಘ್ರದಲ್ಲಿ ಪಾಲಿಸಲು ಮಹಿಳೆಯರಿಗೆ ಎಚ್ಚರಿಕೆ ಕೂಡ ನೀಡಲಾಗಿತ್ತು ಸದ್ಯಕ್ಕೆ ಎಲ್ಲ ಮಹಿಳೆಯರಿಗೂ ಗೃಹಲಕ್ಷ್ಮಿ ಯೋಜನೆಯ ಹಣ ತಲುಪಿಸಲು ಸರ್ಕಾರ ಮುಂದಾಗಿದ್ದು ಮತ್ತೊಂದು ಬಾರಿ ಹಣ ಜಮಾ ಹಾಗೂ ಅಲ್ಲಿ ಸಮಸ್ಯೆ ಉಂಟಾಗಬಾರದು ಎಂಬ ದೃಷ್ಟಿಯಿಂದ ಸರ್ಕಾರ ಮಹಿಳೆಯರಿಗೆ ಮತ್ತೊಂದು ಬಾರಿ ಅದರ ಸ್ಟೇಟಸ್ ಗಳನ್ನು ಚೆಕ್ ಮಾಡಿಕೊಳ್ಳಲು ಸೂಚನೆ ನೀಡಿದೆ
ಕೆಲವೊಂದಷ್ಟು ಗೃಹಿಣಿಯರು ಅರ್ಜಿ ಸಲ್ಲಿಸಿದ ಬಳಿಕ ತಮ್ಮ ಅರ್ಜಿಯ ಸ್ಥಿತಿಯನ್ನು ಚೆಕ್ ಮಾಡಿಕೊಂಡಿಲ್ಲ ಕೆಲವೊಂದಷ್ಟು ತಾಂತ್ರಿಕ ಕಾರಣಗಳಿಂದ ಹಾಗೂ ನೀವು ನೀಡಿರುವ ಮಾಹಿತಿಗಳ ಕೊರತೆಯಿಂದಾಗಿ ಅರ್ಜಿಯನ್ನು ರಿಜೆಕ್ಟ್ ಮಾಡಲಾಗಿರುತ್ತದೆ ಹಾಗಾಗಿ ನೀವು ಇಲ್ಲಿ ನೀಡಿರುವ ನಂಬರ್ ಗೆ 8147500500 ನಿಮ್ಮ ರೇಷನ್ ಕಾರ್ಡ್ ನಂಬರನ್ನು ಮೆಸೇಜ್ ಮಾಡುವ ಮೂಲಕ ನಿಮ್ಮ ಅರ್ಜಿಯ ಸ್ಥಿತಿಯನ್ನು ಕ್ಷಣಮಾತ್ರದಲ್ಲಿ ಚೆಕ್ ಮಾಡಿಕೊಳ್ಳಬಹುದು..
ಹಾಗೂ ನೀವು ಆಧಾರ್ ಕಾರ್ಡಿನ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡುವ ಮೂಲಕ ನಿಮ್ಮ ಆಧಾರ್ ಕಾರ್ಡಿಗೆ ಬ್ಯಾಂಕ್ ಖಾತೆ ಲಿಂಕ್ ಆಗಿದೆಯಾ ಇಲ್ವಾ ಎಂದು ಚೆಕ್ ಮಾಡಿಕೊಳ್ಳುವುದು ಮುಖ್ಯವಾಗಿದೆ. ನಿಮ್ಮ ಬಳಿ ಒಂದಕ್ಕಿಂತ ಹೆಚ್ಚಿನ ಬ್ಯಾಂಕ್ ಖಾತೆ ಇದ್ದಲ್ಲಿ ಸರ್ಕಾರ ಯಾವುದಾದರೂ ಒಂದು ಬ್ಯಾಂಕ್ ಕಾತಿಗೆ ಮಾತ್ರವಷ್ಟೇ ಹಣವನ್ನು ವರ್ಗಾವಣೆ ಮಾಡಲಾಗುತ್ತದೆ ಯಾವ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆ ಆಗಿದೆ ಎಂದು ತಿಳಿದುಕೊಳ್ಳಲು ನೀವು ಆಧಾರ್ ಕಾರ್ಡ್ ನ ವೆಬ್ಸೈಟ್ ಗೆ ಭೇಟಿ ನೀಡಿ ಚೆಕ್ ಮಾಡಿಕೊಳ್ಳಬಹುದು ಒಂದು ವೇಳೆ ಬ್ಯಾಂಕ್ ಖಾತೆ ಲಿಂಕ್ ಆಗಿದ್ದು ನಿಮ್ಮ ಬ್ಯಾಂಕ್ ಖಾತೆಯ ಸ್ಥಿತಿ ಇನ್ಯಾಕ್ಟಿವ್ ಎಂದು ಬಂದರೆ ನೀವು ಅದನ್ನು ಸರಿಪಡಿಸಿಕೊಳ್ಳಬೇಕಾಗುತ್ತದೆ ಸರಿ ಪಡಿಸಿಕೊಂಡ ಬಳಿಕವಷ್ಟೇ ನಿಮಗೆ ಗೃಹಲಕ್ಷ್ಮಿ ಯೋಜನೆಯ ಪ್ರತಿ ತಿಂಗಳು ನಿಮ್ಮ ಬ್ಯಾಂಕ್ ಖಾತೆಗೆ ನೇರವಾಗಿ ವರ್ಗಾವಣೆ ಆಗುವಂತದ್ದು.
ಮೇಲೆ ತಿಳಿಸಿದ ಎಲ್ಲಾ ದಾಖಲಾತಿಗಳು ಹಾಗೂ ಮಾಹಿತಿಗಳು ಸರಿಯಾಗಿದ್ದರೂ ಕೂಡ ನಿಮಗೆ ಗೃಹಲಕ್ಷ್ಮಿ ಯೋಜನೆಯ ಎರಡು ಸಾವಿರ ಹಣ ಬಂದಿಲ್ಲವೆಂದರೆ ನೀವು ನಿಮ್ಮ ಹತ್ತಿರದ ಯಾವುದೇ ಶಿಶು ಅಭಿವೃದ್ಧಿ ಯೋಜನೆ ಅಧಿಕಾರಿಗಳ ಕಚೇರಿಗೆ ಭೇಟಿ ನೀಡುವ ಮೂಲಕ ಹಾಗೂ ಸಿಡಿಪಿಓ ಅಧಿಕಾರಿಗಳನ್ನು ಅಗತ್ಯ ದಾಖಲಾತಿಗಳೊಂದಿಗೆ ಭೇಟಿ ನೀಡುವ ಮೂಲಕ ನಿಮ್ಮ ಗ್ರಹಲಕ್ಷ್ಮಿ ಯೋಜನೆಯ ಹಣ ಬರೆದಿರುವ ಕುರಿತು ಚರ್ಚಿಸಿ ಪರಿಹಾರ ಪಡೆದುಕೊಳ್ಳಬಹುದು.
- ಅಲ್ಲದೆ ಒಂದು ವೇಳೆ ಈಗಾಗಲೇ ನಿಮಗೆ ರೇಷನ್ ಕಾರ್ಡ್ ನ ಅಕ್ಕಿ ಹಣ ನಿಮ್ಮ ಬ್ಯಾಂಕ್ ಖಾತೆಗೆ ಜಮಾ ಹಾಗಿದ್ದರೆ ಗೃಹಲಕ್ಷ್ಮಿ ಯೋಜನೆಯ ಹಣ ಕೂಡ ಈ ಬಾರಿ ಜಮಾ ಹಾಗೂ ಅಲ್ಲಿ ಯಾವುದೇ ಸಮಸ್ಯೆ ಆಗುವುದಿಲ್ಲ ಆದ್ದರಿಂದ ಕೊನೆಯದಾಗಿ ನೀವು ನಿಮ್ಮ ರೇಷನ್ ಕಾರ್ಡ್ ನ ಅಕ್ಕಿ ಹಣ ನಿಮ್ಮ ಬ್ಯಾಂಕ್ ಖಾತೆಗೆ ಜಮಾ ಆಗಿದೆಯೋ ಇಲ್ಲವೋ ಎಂದು ಚೆಕ್ ಮಾಡಿಕೊಳ್ಳಿ ಎಂದು ಸೂಚನೆ ನೀಡಲಾಗಿದೆ ಒಂದು ವೇಳೆ ನಿಮಗೆ ಈಗಾಗಲೇ ಅನ್ನ ಭಾಗ್ಯ ಯೋಜನೆಯ ಹಕ್ಕಿಯ ಹಣ ಬ್ಯಾಂಕ್ ಖಾತೆಗೆ ಬಂದಿದ್ದರೆ ಅಕ್ಟೋಬರ್ 15 ನೇ ದಿನಾಂಕದ ಒಳಗಾಗಿ ಗೃಹಲಕ್ಷ್ಮಿ ಯೋಜನೆಯ ಎರಡು ಸಾವಿರ ಕೂಡ ಬ್ಯಾಂಕ್ ಖಾತೆಗೆ ಜಮಾಹಾಗುವುದು ಕನ್ಫರ್ಮ್ ಎಂದು ತಿಳಿಸಲಾಗಿದೆ ಧನ್ಯವಾದಗಳು…
- ಇದೆ ರೀತಿಯ ಹೊಸ ಮಾಹಿತಿ ಗಳಿಗಾಗಿ ನಮ್ಮ WhatsApp ಗ್ರೂಪ್ ಗೆ ಜಾಯಿನ್ ಆಗಿ. ಇಲ್ಲಿ ಕ್ಲಿಕ್ ಮಾಡಿ ಜಾಯಿನ್ ಆಗಿ