ಎಲ್ಲರಿಗೂ ನಮಸ್ಕಾರ,
ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಅತಿ ಹೆಚ್ಚು ಮೋಸ ಮತ್ತು ವಂಚನೆ ನಡೆಯುತ್ತಿದ್ದು, ಇದರಿಂದಾಗಿ ಹಲವಾರು ಜನ ತಮ್ಮ ಬ್ಯಾಂಕ್ ಖಾತೆಯಲ್ಲಿರುವ ಹಣವನ್ನು ಕಳೆದುಕೊಂಡಿದ್ದಾರೆ. ಅದೇ ರೀತಿ ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ, ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಇದರ ಬಗ್ಗೆ ಈ ಲೇಖನದಲ್ಲಿಈ ಲೇಖನದಲ್ಲಿ ಸಂಪೂರ್ಣವಾಗಿ ತಿಳಿಸಿಕೊಡಲಾಗುತ್ತದೆ. ಹಾಗಾಗಿ ಲೇಖನವನ್ನು ಪೂರ್ತಿ ಓದಿ. ಜಿಯೋ ಕಂಪನಿಯ ಮಾಲೀಕರಾದ ಅಂಬಾನಿಯವರ ಹುಟ್ಟು ಹಬ್ಬದ ನಿಮಿತ್ತ ಜಿಯೋ ಕಂಪನಿಯು ಎಲ್ಲಾ ಭಾರತದ ಜಿಯೋ ಬಳಕೆದಾರರಿಗೆ 28 ದಿನಗಳ ಫ್ರೀ ರಿಚಾರ್ಜ್ ಆಫರ್ ನೀಡಿದ್ದಾರೆ, ಅದನ್ನು ಪಡೆಯಲು ಮೆಸೇಜ್ ನಲ್ಲಿ ಕಳಿಸಿದ ಲಿಂಕ್ ಅನ್ನು ಕ್ಲಿಕ್ ಮಾಡಿ ಎನ್ನುವ ಮಾಹಿತಿ ಹರಿದಾಡುತ್ತಿದ್ದು, ಇದನ್ನು ನೋಡಿದ ಜಿಯೋ ಬಳಕೆದಾರರು ನಿಜ ಎಂದು ಲಿಂಕ್ ಅನ್ನು ಕ್ಲಿಕ್ ಮಾಡಿದರೆ ಬ್ಯಾಂಕಲ್ಲಿರುವ ಹಣ ಪೂರ್ತಿಯಾಗಿ ಹೋಗುತ್ತದೆ. ಹೇಗೆಂದರೆ ಅವರು ಕಳಿಸಿರುವ ಮೆಸೇಜನ್ನು 10 ಜನರಿಗೆ ಫಾರ್ವರ್ಡ್ ಮಾಡಲು ತಿಳಿಸಿ ನಂತರ ಒಂದು ಆಪ್ ಅನ್ನು ಇನ್ಸ್ಟಾಲ್ ಮಾಡಲು ತಿಳಿಸುತ್ತಾರೆ. ಇದರಿಂದ ನಿಮ್ಮ ಮಾಹಿತಿ ಹಾಗೂ ಬ್ಯಾಂಕ್ ಖಾತೆಯಿಂದ ಹಣ ಡ್ರಾ ಆಗುವ ಸಾಧ್ಯತೆ ಇರುತ್ತದೆ.ಇದನ್ನು ಮಾಡಲು ಮೋಸಗಾರರು ಮೆಸೇಜ್ ಮಾಡುವ ಮೂಲಕ, ನಿಮ್ಮ ಬ್ಯಾಂಕ್ ನ ಕೆ ವೈ ಸಿ ಪೂರ್ಣಗೊಳಿಸಿ/ ನಿಮ್ಮ ಖಾತೆಗೆ ಹಣ ಬರಲು/ ಯಾವುದಾದರೂ ಫ್ರೀ ಮೊಬೈಲ್ ಡಾಟಾ ನೀಡಲಾಗುತ್ತದೆ ಎಂದು ನಿಮಗೆ ಮೆಸೇಜನ್ನು ಕಳಿಸಲಾಗುತ್ತದೆ. ಇದನ್ನು ಪಡೆದುಕೊಳ್ಳಲು ಕೆಳಗೆ ನೀಡಿರುವ ಲಿಂಕನ್ನು ಕ್ಲಿಕ್ ಮಾಡಿ ಎಂದು, ಮೆಸೇಜ್ ನಿಮ್ಮ ಫೋನ್ ಗೆ ಕಳಿಸಲಾಗುತ್ತದೆ. ಇದರ ಬಗ್ಗೆ ಅರಿವಿಲ್ಲದ ಹಲವಾರು ಜನ ಲಿಂಕನ್ನು ಕ್ಲಿಕ್ ಮಾಡುತ್ತಾರೆ. ಇದರ ಮೂಲಕ ಅವರ ಮೊಬೈಲ್ ಸಂಪೂರ್ಣ ಬೇರೆಯವರ ಹಿಡಿತದಲ್ಲಿರುತ್ತದೆ. ಈ ಸಂದರ್ಭದಲ್ಲಿ ಅವರು ಮೊಬೈಲ್ ನಲ್ಲಿರುವ ಎಲ್ಲಾ ಮುಖ್ಯವಾದ ದಾಖಲೆ ಮತ್ತು ಇತರ ವೈಯಕ್ತಿಕ ಪತ್ರಗಳ ಮತ್ತು ಬ್ಯಾಂಕ್ ಅಕೌಂಟ್, ಗೂಗಲ್ ಪೇ, ಫೋನ್ ಪೇ, ಪೇಟಿಎಂ ಎಲ್ಲಾ ಆಪ್ ಗಳ ಅಕ್ಸೆಸ್ ಇರುತ್ತದೆ. ಇದರಿಂದಾಗಿ ಅವರು ನಮ್ಮ ಬ್ಯಾಂಕ್ ಖಾತೆಯಲ್ಲಿರುವ ಎಲ್ಲಾ ಹಣವನ್ನು ತೆಗೆದುಕೊಳ್ಳುತ್ತಾರೆ. ಆದ್ದರಿಂದ ಈ ತರಹದ ಮೋಸದ ಜಾಲದಿಂದ ಜಾಗೃತರಾಗಿರಿ. ಇದನ್ನು ಹೊರತುಪಡಿಸಿ ನಿಮ್ಮ ಬ್ಯಾಂಕ್ ಖಾತೆಯಲ್ಲಿ ಅತಿ ಹೆಚ್ಚು ವಹಿವಾಟುಗಳಾಗುತ್ತಿದ್ದರೆ, ಅದನ್ನು ಗಮನಿಸಿ ನಿಮಗೆ ಫೋನ್ ಕಾಲ್ ಮಾಡುತ್ತಾರೆ. ನೀವು ಫೋನನ್ನು ರಿಸೀವ್ ಮಾಡಿದ ತಕ್ಷಣ ನಿಮ್ಮ ಬ್ಯಾಂಕ್ ಅಕೌಂಟ್ ಅನ್ನು ಸುರಕ್ಷಿತವಾಗಿಡಲು ಅಥವಾ ಮೋಸಗಾರರಿಂದ ಕಾಪಾಡಲು ನಿಮಗೆ ಒಂದು ಲಿಂಕನ್ನು ಕಳಿಸಲಾಗುತ್ತದೆ. ಎಂದು ಹೇಳುತ್ತಾರೆ. ಆಗ ನೀವು ಇಲ್ಲ ನಾವು ಇದರ ಬಗ್ಗೆ ಬ್ಯಾಂಕಿಗೆ ಭೇಟಿ ನೀಡಿ, ಪರಿಹರಿಸಿಕೊಳ್ಳುತ್ತೇವೆ ಎಂದು ಹೇಳಿದರೆ ನಿಮ್ಮ ಬ್ಯಾಂಕ್ ಖಾತೆ ಸುರಕ್ಷಿತವಾಗಿರುತ್ತದೆ. ಇದನ್ನು ಬಿಟ್ಟು ಸರಿ ಎಂದು ಲಿಂಕನ್ನು ಕ್ಲಿಕ್ ಮಾಡಿದರೆ ನಿಮ್ಮ ಖಾತೆಯಲ್ಲಿರುವ ಎಲ್ಲಾ ಹಣ ಅವರು ತೆಗೆದುಕೊಳ್ಳುತ್ತಾರೆ. ಹೀಗಾಗಿ ನಿಮ್ಮ ಬ್ಯಾಂಕ್ ಖಾತೆಗೆ ಸಂಬಂಧಪಟ್ಟ ಯಾವುದೇ ರೀತಿಯ ಫೋನ್ ಕಾಲ್ ಅಥವಾ ಮೆಸೇಜ್ ನ ಮೂಲಕ ಯಾವುದಾದರೂ ಲಿಂಕ್ ಅನ್ನು ಕಳುಹಿಸಿದರೆ ಅದನ್ನು ಕ್ಲಿಕ್ ಮಾಡಬೇಡಿ. ಈ ರೀತಿಯ ಮೋಸದ ಜಾಲಗಳಿಂದ ದೂರ ಇರಿ. ಯಾವುದೇ ಸೈಬರ್ ದೂರುಗಳಿಗಾಗಿ www.cybercrime.gov.in ಭೇಟಿ ನೀಡಿ ಅಥವಾ 1930 ಈ ನಂಬರ್ ಗೆ ಕರೆ ಮಾಡಿ. ಇಲ್ಲಿಯವರೆಗೆ ಲೇಖನವನ್ನು ಓದಿದ್ದಕ್ಕೆ ಧನ್ಯವಾದಗಳು. ಶುಭದಿನ .