ಟ್ರೋಲಿಗರಿಂದ ಬೇಸತ್ತು, ತನ್ನ ನೋವನ್ನು ಹೊರಹಾಕಿದ ಸೋನು ಗೌಡ. ಇದರಿಂದ ತನ್ನ ತಾಯಿಯ ಆರೋಗ್ಯ ಹಾಳಾಗಿದೆ. ದಯವಿಟ್ಟು ಹೀಗೆ ಮಾಡಿ ನನ್ನ ಜೀವನವನ್ನು ಇನ್ನು ಹಾಳು ಮಾಡಬೇಡಿ ಎಂದ ಸೋನು.

ಎಲ್ಲರಿಗೂ ನಮಸ್ಕಾರ

 

WhatsApp Group Join Now
Telegram Group Join Now

 ನಿಮಗೆಲ್ಲ ತಿಳಿದಿರುವ ಹಾಗೆ ಸೋನು ಗೌಡ ಅವರ  ಯೂಟ್ಯೂಬ್ ಚಾನೆಲ್ನಲ್ಲಿ ತಮ್ಮ ಜೀವನದ ನೋವನ್ನು ತೋಡಿಕೊಂಡಿದ್ದಾರೆ. ಬಿಗ್ ಬಾಸ್  ಸ್ಪರ್ಧಿ,  ಸೋಶಿಯಲ್ ಮೀಡಿಯಾ ಟಿಕ್ ಟಾಕ್ ಸ್ಟಾರ್  ಆಗಿರುವ  ಸೋನು ಗೌಡ ಅವರು ಟ್ರೋಲಿಗರ ವಿರುದ್ಧ ಅಸಮಾಧಾನ ಹೊರ ಹಾಕಿದ್ದಾರೆ. ಕೆಟ್ಟ ಕೆಟ್ಟ ಕಮೆಂಟ್ಗಳಿಂದ,  ಟ್ರೋಲ್ ಗಳಿಂದ ನನ್ನ ಜೀವನ ಬೇಸತ್ತು ಹೋಗಿದೆ.  ನಾನು ತಿಳಿಯದೆ ಮಾಡಿದ ತಪ್ಪಿಗೆ ಇಷ್ಟು ವರ್ಷವಾದರೂ ಮುಕ್ತಿ ಇಲ್ಲ ಎಂದು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.  ನನ್ನ ಕಷ್ಟವನ್ನು ನಾನು ಯಾರೆಂದಿಗೂ ಹಂಚಿಕೊಳ್ಳುವುದಿಲ್ಲ.  ಏಕೆಂದರೆ ಎಲ್ಲರೂ ನನ್ನನ್ನು ನೋಡುವ ದೃಷ್ಟಿಯೇ ಬೇರೆಯಾಗಿದೆ.  ಎಂದು ಬೇಸರ ವ್ಯಕ್ತಪಡಿಸಿದ್ದಾರೆ.  ಮತ್ತು ಈ ನೋವನ್ನು ಹಂಚಿಕೊಳ್ಳಲು ಮೂಲ ಕಾರಣ ಏನೆಂದು ತಿಳಿಯೋಣ ಬನ್ನಿ.  ಇದರ ಬಗ್ಗೆ ಸಂಪೂರ್ಣವಾಗಿ ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ.  ಹೀಗಾಗಿ ಲೇಖನವನ್ನು ಪೂರ್ತಿ ಓದಿ. 

 

 ನಾಲ್ಕು ವರ್ಷದ ಹಿಂದೆ ಸೋನು ಗೌಡ ಎಂದರೆ ಯಾರಿಗೂ ತಿಳಿದಿರಲಿಲ್ಲ. ಆದರೆ  ಈಗ ಸೋನು ಗೌಡ ಎಂದರೆ ಯಾರಿಗೆ ತಿಳಿದಿಲ್ಲ ಹೇಳಿ. ಏಕೆಂದರೆ ಸೋನು ಮಾಡಿದ 18 ನಿಮಿಷದ ವಿಡಿಯೋ ದಿಂದಾಗಿ ಆಕೆಯ ಜೀವನವೇ ಬದಲಾಗಿತ್ತು. ಆದರೆ ಇದು ನಡೆದು ನಾಲ್ಕೂ ವರ್ಷವಾದರೂ,  ಇದರ ಬಗ್ಗೆ  ಟ್ರೋಲಿಗರು  ಸೋನು ವಿಡಿಯೋ, ಆಕೆಯ ಜೀವನದ ಬಗ್ಗೆ ಟ್ರೋಲ್ ಮಾಡುವುದನ್ನು ನಿಲ್ಲಿಸಿಲ್ಲ . ಆದರೆ  ಇತ್ತೀಚಿನ  ದಿನಗಳಲ್ಲಿ  ಸೋನು ಗೌಡ ಅವರ ಟ್ರೋಲ್ ವಿಡಿಯೋಗಳಲ್ಲಿ ಅತಿ ಹೆಚ್ಚು ಕೆಟ್ಟ ಪದಗಳನ್ನು ಬಳಸಿದ್ದು ಮತ್ತು ಅವರ ಬಗ್ಗೆ ಮಾತ್ರ ಟ್ರೊಲ್ ಮಾಡದೆ ಕುಟುಂಬದ ಸದಸ್ಯರ ಬಗ್ಗೆ ಸಹ ಟ್ರೋಲ್ ಮಾಡಿದ್ದಾರೆ ಇದರಿಂದ ಸೋನು ಗೌಡ ಅವರ ತಾಯಿಯ ಆರೋಗ್ಯ ತುಂಬಾ ಹದಗೆಟ್ಟಿದೆ.  ಹೀಗಾಗಿ ಸೋನು ಗೌಡ ಅವರು ವಿಡಿಯೋದಲ್ಲಿ ಹೀಗೆಂದು ಹೇಳಿದ್ದಾರೆ.  ನಾನು,  ನನ್ನ ತಮ್ಮ ಹಾಗೂ ಅಮ್ಮ ಎಲ್ಲರೂ ಸಹ ಕುಳಿತುಕೊಂಡು ಟಿವಿ ನೋಡುತ್ತಿರುವ ಸಂದರ್ಭದಲ್ಲಿ ನನ್ನ ತಾಯಿ ನನ್ನ ಬಗೆಗಿನ ಟ್ರೋಲ್ ವಿಡಿಯೋಗಳನ್ನು ನೋಡುತ್ತಿದ್ದರು.  ಕೆಟ್ಟ ಕಮೆಂಟ್ ಮತ್ತು ಕೆಟ್ಟ ಮಾತುಗಳನ್ನು  ಕೇಳಿಸಿಕೊಳ್ಳುತ್ತಿದ್ದರು. ಮಾತಿಗೆ ಮುಂಚೆ ಬೀಪ್ ಪದಗಳನ್ನು ಬಳಸಿ ಮಾತನಾಡುತ್ತಿದ್ದರು.  ಆ ವಿಡಿಯೋ  ನಾನು ಕೇಳಿಸಿಕೊಂಡರೆ  ಬೇಸರ ಮಾಡಿಕೊಳ್ಳುತ್ತೇನೆ ಎಂದು ಸೌಂಡ್ ಕಡಿಮೆ ಮಾಡಿಕೊಂಡು  ನೋಡುತ್ತಾ,  ಅಳುತ್ತಿದ್ದರು.  ನನಗೆ ಅದು ಕೇಳಿಸಿದರು,  ಕೇಳಿಸದಂತೆ ಸುಮ್ಮನಿದ್ದೆ.  ನಾನು ಮಾಡಿದ ತಪ್ಪಿಗೆ ನನ್ನ ಕುಟುಂಬ ನೋವು ಪಡುತ್ತಿದೆ ದಯವಿಟ್ಟು  ಹೀಗೆ ಮಾಡಬೇಡಿ.  ನಾನು ಯಾರಿಗೂ ತೊಂದರೆ ಕೊಟ್ಟಿಲ್ಲ.  20 ವರ್ಷದ ಹುಡುಗಿ ಇದ್ದಾಗ ಮಾಡಿದ ತಪ್ಪಿಗೆ ಈಗಲೂ ಶಿಕ್ಷೆ ಕೊಡುತ್ತಿದ್ದೀರಾ? ಇದರಿಂದಾಗಿ ನನ್ನ ಅಮ್ಮನ ಆರೋಗ್ಯ ಕೆಡುತ್ತಿದೆ. 

 

ಟ್ರೋಲ್ ಮಾಡಿ ಅದರಿಂದ ನನಗೆ ಬೇಸರವಿಲ್ಲ.  ಆದರೆ ತೀರಾ ಕೆಟ್ಟದಾಗಿ  ಬೀಪ್  ಪದಗಳನ್ನು  ಬಳಸಬೇಡಿ.  ನಾನು  ಹಿಂದೆ ಮಾಡಿದ ತಪ್ಪಿನಿಂದಾಗಿ ಈಗಲೂ ಕೂಡ ನನ್ನ ಕುಟುಂಬದ ಕೆಲವು ಸಂಬಂಧಿಕರು ಈಗಲೂ ಸಹ  ನನ್ನ ಜೊತೆ ಮಾತನಾಡುತ್ತಿಲ್ಲ.  ನಾನು ಮಾಡಿರುವ ತಪ್ಪಿಗೆ troll ಮಾಡಿ,  ಅದನ್ನು ಬಿಟ್ಟು  ಸಂಬಂಧವಿಲ್ಲದೆ ಏನೇನೋ  ನನ್ನ ಬಗ್ಗೆ  ಹೇಳಬೇಡಿ. ಕೆಲವೊಂದಿಷ್ಟು ಜನ ನೀನು ಶೋಕಿ ಮಾಡ್ತೀಯಾ,  ಹೆಲ್ಪ್ ಮಾಡಕ್ಕಾಗಲ್ವಾ  ಅಂತ ಹೇಳ್ತೀರಾ. ಆದರೆ ನಮ್ಮ ಮನೆಯಲ್ಲಿ ಉಳಿದಿರುವ ದಿನಸಿ ತರಕಾರಿ ಮತ್ತಿನ್ನೀತರ ವಸ್ತುಗಳನ್ನು ಆಶ್ರಮಕ್ಕೆ ಕೊಡುತ್ತಿವೆ.  ಆದರೆ ಇದರ ಬಗ್ಗೆ ನಾನು ಎಲ್ಲಿಯೂ ಸಹ ವಿಡಿಯೋ ಮಾಡಿ ಹಾಕಿಲ್ಲ.  ವಿಡಿಯೋ ಮಾಡಿಲ್ಲ ಎಂದ ತಕ್ಷಣ ಏನು ಸಹಾಯ ಮಾಡುತ್ತಿಲ್ಲ ಎಂದು ಅರ್ಥವಲ್ಲ. ಇದೆಲ್ಲವನ್ನು ನೋಡಿ ನೋಡಿ ನನಗೆ ಸಾಕಾಗಿದೆ.  ಹೀಗಾಗಿ ನಾನು ಯಾರೊಂದಿಗೂ ಸೇರುವುದಿಲ್ಲ ,  ಮಾತನಾಡುವುದಿಲ್ಲ,  ನೀವೇ ನೋಡಿದ್ದೀರಾ!  ನಾನು ಯಾರೋಂದಿಗೂ ವಿಡಿಯೋಗಳನ್ನು ಮಾಡುವುದಿಲ್ಲ. ದಯವಿಟ್ಟು ತುಂಬಾ ಕೆಟ್ಟದಾಗಿ ಕಾಮೆಂಟ್ಗಳನ್ನು,  ಪದಗಳನ್ನು  ಬಳಸಬೇಡಿ.  ನಾನು ಯಾರೊಂದಿಗೂ ನನ್ನ ನೋವನ್ನು ಹೇಳಿಕೊಳ್ಳುವುದಿಲ್ಲ. ಎಂದು ಸೋನು ಗೌಡ  ಯೂಟ್ಯೂಬ್  ಚಾನೆಲ್ ನಲ್ಲಿ ಹೇಳಿಕೊಂಡಿದ್ದಾರೆ.  ಇಲ್ಲಿಯವರೆಗೆ ಲೇಖನವನ್ನು ಓದಿದ್ದಕ್ಕೆ ಧನ್ಯವಾದಗಳು . 

Leave a Comment