ಎಲ್ಲರಿಗೂ ನಮಸ್ಕಾರ. ಕರ್ನಾಟಕ ರಾಜ್ಯ ಸರ್ಕಾರದಿಂದ 2023 ನೇ ಸಾಲಿನ ಬರ ಪರಿಹಾರ ಹಣ ಬಿಡುಗಡೆಗೆ ಈಗಾಗಲೇ ಕೆಲವು ತಾಲೂಕುಗಳ ಹೆಸರನ್ನು ನಿಗದಿಪಡಿಸಿದೆ ಇನ್ನು ಈ ಬಾರಿ ರಾಜ್ಯದಲ್ಲಿ ಮಳೆಯ ಕೊರತೆಯಿಂದ ಹೆಚ್ಚಿನ ನೀರಿನ ಸಮಸ್ಯೆ ಉಂಟಾಗಿದೆ ಇದರಿಂದ ರೈತರ ಬೆಳೆ ಕೂಡ ಹಾನಿಯಾಗಿದೆ ಅದರಲ್ಲೂ ನಮ್ಮ ರಾಜ್ಯದ ಕಾವೇರಿ ನೀರು ತಮಿಳುನಾಡಿನ ಪಾಲಾಗಿದೆ ಇನ್ನು ಇದರಿಂದ ರೈತರಿಗೂ ಕೂಡ ಭಾರೀ ನಷ್ಟ ಉಂಟಾಗಿದ್ದು ಮುಂದಿನ ದಿನಗಳಲ್ಲಿ ಕುಡಿಯುವ ನೀರಿಗೂ ಕೂಡ ಸಮಸ್ಯೆ ಉಂಟಾಗುವ ಸಾಧ್ಯತೆ ಇದೆ ಸದ್ಯದ ಬಗ್ಗೆ ರಾಜ್ಯ ಸರ್ಕಾರವು ರೈತರಿಗೆ ಬರ ಪರಿಹಾರದ ಹಣ ನೀಡಲು ಕೆಲವು ತಾಲೂಕುಗಳ ಹೆಸರನ್ನು ನಿಗದಿಪಡಿಸಿದ್ದು ಅವುಗಳ ಹೆಸರನ್ನು ಸೂಚಿಸಿದೆ ಹಾಗೂ ರೈತರಿಗೆ ಬರ ಪರಿಹಾರ ಹಣ ನೀಡಲು ಕೇಂದ್ರ ಸರ್ಕಾರಕ್ಕೆ ಪರಿಹಾರದ ಹಣಕ್ಕೆ ಬೇಡಿಕೆ ನೀಡಿದೆ.
ಸದ್ಯ ಕೇಂದ್ರ ಸರ್ಕಾರದಿಂದ ಬರ ಪರಿಹಾರ ಹಣ ಬಿಡುಗಡೆಗೆ ಈಗಾಗಲೇ ಕ್ರಮ ಕೈಗೊಂಡಿದ್ದು ರಾಜ್ಯ ಸರ್ಕಾರವು ರೈತರಿಗೆ ಪರ ಪರಿಹಾರ ಹಣ ಪಡೆಯಲು ಮಾಡಬೇಕಾದ ಕೆಲವು ನಿಯಮಗಳ ಬಗ್ಗೆ ಮಾಹಿತಿ ನೀಡಿದೆ ಅದೇ FID ಸಂಖ್ಯೆಯನ್ನು ಕಡ್ಡಾಯವಾಗಿ ರೈತರು ಹೊಂದಿರುವುದು ಅಂತಹ ರೈತರಿಗೆ ಮಾತ್ರ ಬರ ಪರಿಹಾರದ ಹಣ ನೀಡುವುದಾಗಿ ಮಾಹಿತಿ ನೀಡಿದೆ ನೀವು ಕೂಡ ಬರ ಪರಿಹಾರಕ್ಕಾಗಿ ಸರ್ಕಾರ ತಿಳಿಸಿರುವ ತಾಲೂಕಿನ ಹೆಸರಿನ ಪಟ್ಟಿಯಲ್ಲಿ ಇದ್ದರೆ ಈ ಮಾಹಿತಿಯನ್ನು ತಪ್ಪದೆ ತಿಳಿದುಕೊಳ್ಳಲೇಬೇಕು ಹಾಗಾಗಿ ಲೇಖನವನ್ನು ಪೂರ್ತಿಯಾಗಿ ಓದಿ. ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಬರ ಪರಿಹಾರ ಹಣ ಪಡೆಯಲು FID ಗುರುತಿನ ಸಂಖ್ಯೆ ಕಡ್ಡಾಯ.?
ರಾಜ್ಯ ಸರ್ಕಾರವು ರೈತರಿಗೆ 2023 ನೇ ಸಾಲಿನ ಬರ ಪರಿಹಾರದ ಹಣವನ್ನು ನೀಡಲು ಸರ್ಕಾರ ಕ್ರಮ ಕೈಗೊಂಡಿದೆ ಇನ್ನು ಬರ ಪರಿಹಾರದ ಹಣವನ್ನು ಕೇಂದ್ರ ಸರ್ಕಾರದಿಂದ ಪಡೆಯಲು ಮನವಿ ಕೂಡ ನೀಡಿದೆ ಸದ್ಯ ಕೇಂದ್ರ ಸರ್ಕಾರದಿಂದ ಬರ ಪರಿಹಾರದ ಹಣ ಬಿಡುಗಡೆ ಬಗ್ಗೆ ಸೂಚನೆ ನೀಡಿದ್ದು ರಾಜ್ಯ ಸರ್ಕಾರವು ಇದೀಗ ಸಂಬಂಧಪಟ್ಟ ಇಲಾಖೆಗಳಿಂದ ರೈತರಿಗೆ ಬರ ಪರಿಹಾರ ಹಣ ಪಡೆಯಲು ಕಡ್ಡಾಯವಾಗಿ ಇರಬೇಕಾದ ದಾಖಲೆಗಳ ಬಗ್ಗೆ ಮಾಹಿತಿಯನ್ನು ನೀಡಿದೆ ಏಕೆಂದರೆ ಗ್ಯಾರಂಟಿ ಯೋಜನೆಗಲ್ಲಿ ಆಗಿರುವಂತಹ ಸಮಸ್ಯೆ ಈ ಬರ ಪರಿಹಾರ ಹಣ ಬಿಡುಗಡೆಯಲ್ಲಿ ಆಗಬಾರದು ಎಂಬ ಯೋಚನೆಯಿಂದ ಈ ಮಾಹಿತಿಯನ್ನು ಸರ್ಕಾರ ನೀಡಿದೆ. ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಬರ ಪರಿಹಾರ ಹಣ ಬಿಡುಗಡೆ ಯಾವಾಗ.?
ಈಗಾಗಲೇ ತಿಳಿಸಿರುವ ಹಾಗೆ ಬರ ಪರಿಹಾರ ಹಣವನ್ನು ಕೇಂದ್ರ ಸರ್ಕಾರದಿಂದ ಪಡೆಯಲು ಕರ್ನಾಟಕ ರಾಜ್ಯ ಸರ್ಕಾರವು ಮನವಿ ನೀಡಿದೆ ಇದಕ್ಕೆ ಕೇಂದ್ರ ಸರ್ಕಾರದಿಂದ ಈಗಷ್ಟೇ ಪ್ರತಿಕ್ರಿಯೆ ಬಂದಿದ್ದು ಕೆಲವೇ ದಿನಗಳಲ್ಲಿ ರಾಜ್ಯದ ಜನರಿಗೆ ಬರ ಪರಿಹಾರದ ಹಣ ಬಿಡುಗಡೆಯಾಗುವ ಸಾಧ್ಯತೆ ಇದೆ ಅಂದರೆ ಇದೇ ನವೆಂಬರ್ ಕೊನೆಯ ವಾರದ ಒಳಗಾಗಿ ರಾಜ್ಯದ ರೈತರಿಗೆ ಬರ ಪರಿಹಾರದ ಹಣ ಬಿಡುಗಡೆ ಆಗುವ ಸಾಧ್ಯತೆ ಇದೆ ಇನ್ನು ಈ ಹಣವನ್ನು ಪಡೆಯಲು ಈಗಾಗಲೇ ತಿಳಿಸಿದ ಹಾಗೆ ಪ್ರತಿಯೊಬ್ಬ ರೈತನ FID ಮಾಡಿಸಿರುವುದು ಕಡ್ಡಾಯ ಎಂದು ಸೂಚನೆ ನೀಡಲಾಗಿದೆ.
FID ಇನ್ನಿತರ ಪ್ರಯೋಜನಗಳೇನು.!
FID ರೈತನ ಗುರುತಿನ ಸಂಖ್ಯೆ ಕೇವಲ ಪರಿಹಾರ ಹಣ ಪಡೆಯಲು ಮಾತ್ರವಲ್ಲ ಇದು ಬೆಳೆ ವಿಮೆ ನೋಂದಣಿಗೆ, ಕನಿಷ್ಠ ಬೆಂಬಲ ಬೆಲೆಯಲ್ಲಿ ಕೃಷಿ ಉತ್ಪನ್ನ ಮಾರಾಟ ಮಾಡಲು, ಬೆಳೆ ಸಾಲ ಪಡೆಯಲು, ಬೆಳೆಹಾನಿಗೆ ಪರಿಹಾರ ಪಡೆಯಲು ಹಾಗೂ ಇತರ ಸೌಲಭ್ಯ ಪಡೆಯಲು ರೈತರ ಗುರುತಿನ ಸಂಖ್ಯೆ ಅಂದರೆ FID ಉಪಯೋಗ ಆಗಲಿದೆ ಆದ್ದರಿಂದ ಪ್ರತಿಯೊಬ್ಬ ರೈತರು ಕೂಡ FID ಮಾಡಿಸಿರುವುದು ಕಡ್ಡಾಯ ಎಂದು ಸರ್ಕಾರದಿಂದ ತಿಳಿಸಲಾಗಿದೆ. ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
FID ರೈತನ ಗುರುತಿನ ಸಂಖ್ಯೆ ಪಡೆಯುವುದು ಹೇಗೆ.?
ರೈತನ ಗುರುತಿನ ಸಂಖ್ಯೆ ಪಡೆಯಲು ರೈತರ ಕೂಡಲೇ ಕೃಷಿ ಅಥವಾ ತೋಟಗಾರಿಕೆ ಇಲಾಖೆ ಕಚೇರಿಯಲ್ಲಿ ತಮ್ಮ ಆಧಾರ್ ಕಾರ್ಡ್ ಪಹಣಿ ಬ್ಯಾಂಕ್ ಪಾಸ್ ಬುಕ್ ಮೊಬೈಲ್ ಸಂಖ್ಯೆಯೊಂದಿಗೆ ನೋಂದಣಿ ಮಾಡಿ ಎಫ್ಐ ಡಿ ಸಂಖ್ಯೆ ಪಡೆಯಬೇಕು, ಹಾಗೆ ದಾಖಲಿಸಿದ ಜಮೀನಿನ ವಿಸ್ತೀರ್ಣಗಳಿಗೆ ಮಾತ್ರ ಸರ್ಕಾರದ ಪರಿಹಾರ ಸೌಲಭ್ಯ ದೊರೆಯುವುದರಿಂದ ರೈತ ಬಾಂಧವರು ತಾವು ಹೊಂದಿರುವ ಎಲ್ಲಾ ಜಮೀನಿನ ಸರ್ವೆ ನಂಬರ್ ನ ವಿಸ್ತೀರ್ಣಗಳನ್ನು ಕೂಡಲೇ ಫ್ರೂಟ್ಸ್ ತಂತ್ರಾಂಶದಲ್ಲಿ ದಾಖಲಿಸಿಕೊಳ್ಳಬೇಕು ಹೆಚ್ಚಿನ ಮಾಹಿತಿಗೆ ಸಮೀಪದ ರೈತ ಸಂಪರ್ಕ ಕೇಂದ್ರ ಅಥವಾ ಸಹಾಯಕ ಕೃಷಿ ನಿರ್ದೇಶಕರ ಕಚೇರಿಗೆ ಸಂಪರ್ಕಿಸಬಹುದಾಗಿ ತಿಳಿಸಲಾಗಿದೆ ಧನ್ಯವಾದಗಳು.. ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ