ಕೊನೆಗೂ ATM  ಕಾರ್ಡ್ ಇಲ್ಲದೆ ATM  ಮಷೀನ್ ನಲ್ಲಿ ಹಣ ತೆಗೆಯುವ  ಫೀಚರ್ ಬಂತು.! RBI ನಿಂದ ಎಲ್ಲಾ ಬ್ಯಾಂಕ್ ಗಳಿಗೂ ಸೂಚನೆ.?

ಎಲ್ಲರಿಗೂ ನಮಸ್ಕಾರ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಕೊನೆಗೂ ಬ್ಯಾಂಕ್  ಗ್ರಾಹಕರಿಗೆ ಒಂದು ಸಿಹಿ ಸುದ್ದಿ ನೀಡಿದೆ. ಹೌದು ಇನ್ನು ಮುಂದೆ  ATM  ಕಾರ್ಡ್ ಇಲ್ಲದೆ  ATM  ಮಷೀನ್ ನಲ್ಲಿ  ಹಣವನ್ನು  ವಿಥ್ ಡ್ರಾ ಮಾಡಬಹುದು ಅದು ಕೂಡ ಸುಲಭವಾಗಿ, ಕೇಂದ್ರ ಸರ್ಕಾರದಿಂದ ಭಾರತವನ್ನು ಡಿಜಿಟಲ್ ವ್ಯವಹಾರದ ಕಡೆಗೆ ಬದಲಿಸಲು ಈಗಾಗಲೇ ಸಾಕಷ್ಟು ಯೋಜನೆಗಳನ್ನು ತಂದಿದೆ ಅಲ್ಲದೆ ಜನರಲ್ಲಿ UPI  ಬಳಕೆಯನ್ನು ಹೆಚ್ಚಿಸಿ ಹಣದ ವ್ಯವಹಾರಗಳನ್ನು ಕಡಿಮೆ ಮಾಡಲು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಕೂಡ ಕೆಲವು ಹೊಸ ಪ್ರಯತ್ನಗಳನ್ನು ಮಾಡುತ್ತಿದೆ ಅದರಲ್ಲಿ ಇದು ಕೂಡ ಒಂದು ಆದ್ದರಿಂದ ಈ ಲೇಖನದಲ್ಲಿ ಈಗಾಗಲೇ ನಾವು ಬಳಸುತ್ತಿರುವ UPI  ಅಪ್ಲಿಕೇಶನ್ ನಿಂದ ಯಾವುದೇ  ATM  ಕಾರ್ಡಿಲ್ಲದೆ  ATM  ಮಷೀನ್ ನಲ್ಲಿ ಹಣವನ್ನು ಹೇಗೆ ಪಡೆಯಬಹುದು ಮತ್ತು ಈ ಹೊಸ ಫೀಚರ್ ಯಾವಾಗನಿಂದ ಆರಂಭವಾಗಲಿದೆ ಹಾಗೂ ಮೊದಲು ಯಾವ ಬ್ಯಾಂಕ್ನಿಂದ ಈ ಹೊಸ ಪಿಚ್ಚರ್ ಆರಂಭವಾಗಲಿದೆ ಎಂಬ ಎಲ್ಲಾ  ಮಾಹಿತಿಯನ್ನು ತಿಳಿಯಲು ಲೇಖನವನ್ನು ಪೂರ್ತಿಯಾಗಿ ಓದಿ. ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್  ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

WhatsApp Group Join Now
Telegram Group Join Now

ಕೊನೆಗೂ ATM  ಕಾರ್ಡ್ ಇಲ್ಲದೆ ATM  ಮಷೀನ್ ನಲ್ಲಿ ಹಣ ತೆಗೆಯುವ  ಫೀಚರ್ ಬಂತು.!

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಕೇಂದ್ರ ಸರ್ಕಾರದ ಆದೇಶದಂತೆ ಭಾರತದಲ್ಲಿ UPI  ಬಳಕೆಯನ್ನು ಹೆಚ್ಚಿಸಲು ಈಗಾಗಲೇ ಸಾಕಷ್ಟು ಪ್ರಯತ್ನಗಳನ್ನು ಮಾಡುತ್ತಿದೆ ಅಲ್ಲದೆ ಈ ಬಗ್ಗೆ ಸಾಕಷ್ಟು ಯೋಜನೆಗಳನ್ನು ಕೂಡ ನೀಡಿದೆ  ಇನ್ನು ಆನ್ಲೈನ್ ನಲ್ಲೆ ಸಾಲ ಸೌಲಭ್ಯ ಸಿಗುವಂತೆ ಮತ್ತು ಆನ್ಲೈನ್ ಮೂಲಕವೇ ಮನೆಯ ಬಿಲ್ ಗಳನ್ನು ಪೇ ಮಾಡುವಂತೆ ಮತ್ತು ಸ್ನೇಹಿತರಿಗೆ ಮತ್ತು ಸಂಬಂಧಿಕರಿಗೆ ಮೊಬೈಲ್ ನಲ್ಲೆ ಹಣವನ್ನು ವರ್ಗಾವಣೆ ಮಾಡಲು ಈ ರೀತಿ ಎಲ್ಲಾ ಬದಲಾವಣೆಗಳನ್ನು ತಂದಿರುವ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಇದೀಗ ಕೊನೆಗೂ ATM  ಕಾರ್ಡ್ ಇಲ್ಲದೆ ATM ಮಷೀನ್ ನಲ್ಲಿ ಹಣ ತೆಗೆಯುವ ಒಂದು ಹೊಸ ಫೀಚರ್ ಅನ್ನು ದೇಶದ ಎಲ್ಲಾ ಬ್ಯಾಂಕುಗಳಿಗೂ ಕೂಡ ಗ್ರಾಹಕರಿಗೆ ಅನುಕೂಲವಾಗುವಂತೆ ಮತ್ತು ಈ ಫೀಚರ್ ಅನ್ನು ಪ್ರತಿಯೊಂದು ಬ್ಯಾಂಕ್ ATM  ಗಳಲ್ಲೂ ಬಳಸಲು ಸೂಚನೆ ನೀಡಿದೆ. ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್  ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

RBI ನಿಂದ ಎಲ್ಲಾ ಬ್ಯಾಂಕ್ ಗಳಿಗೂ ಸೂಚನೆ.?

ಪ್ರಸ್ತುತ ದಿನಗಳಲ್ಲಿ ಬ್ಯಾಂಕ್ ಅಕೌಂಟ್ ನಲ್ಲಿ ಇರುವ ಹಣವನ್ನು ಪಡೆದುಕೊಳ್ಳಲು ಹೆಚ್ಚಿನ ಜನರು ಎಟಿಎಂ ಅನ್ನೇ ಅವಲಂಬಿಸಿದ್ದಾರೆ ಆದರೆ ಕೆಲವು ಬಾರಿ ಹಣ ವಿತ್ ಡ್ರಾ ಮಾಡಲು ಎಟಿಎಂ ಗೆ ತೆರೆದಾಗ ಕಾರ್ಡನ್ನು ಮರೆತು ಹೋಗಿರುತ್ತೇವೆ ಈ ಪರಿಸ್ಥಿತಿಯಲ್ಲಿ ನಿರಾಶೆ ಗೊಳ್ಳುವ ಅಗತ್ಯವಿಲ್ಲ ಏಕೆಂದರೆ ಈ ಸಮಸ್ಯೆಗಳನ್ನು ಬಗೆಹರಿಸಲು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಕಾರ್ಡಿಲ್ಲದೆ ಎಟಿಎಂನಿಂದ ಹಣವನ್ನು ಪಡೆಯುವ ಹೊಸ ಯೋಜನೆಯನ್ನು ತಂದಿದೆ.

 ಹೌದು ಮೊದಲ ಬಾರಿಗೆ ATM ಕಾರ್ಡ್ ಇಲ್ಲದೆ ಯುಪಿಐ ಬಳಸಿ ಹಣ ಪಡೆಯುವ ಪ್ರಯತ್ನ ಯಶಸ್ವಿಯಾಗಿದೆ ಈಗಾಗಲೇ ಎಲ್ಲಾ ರೀತಿಯ ಪ್ರಯೋಗಗಳನ್ನು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ನಡೆಸಿದ್ದು ಈ ತಂತ್ರಜ್ಞಾನದಿಂದಾಗಿ  ಎಟಿಎಂ ಕಾರ್ಡ್ ತೆಗೆದುಕೊಂಡು ಹೋಗುವ ಅವಶ್ಯಕತೆ ಇಲ್ಲ ಏಕೆಂದರೆ ನೀವು ಸಾಮಾನ್ಯವಾಗಿ ಬಳಸುವ UPI  ಗಳನ್ನು ಬಳಸಿ ಎಟಿಎಂ ಮಷೀನ್ ಗಳಲ್ಲಿ ಹಣವನ್ನು ಪಡೆಯಬಹುದು ಇದನ್ನು ಕಾರ್ಡ್ ರಹಿತ ಎಟಿಎಂ ಯುಪಿಐ ನಗದು ಪಡೆಯುವ ಪ್ರಕ್ರಿಯೆ ಎನ್ನಬಹುದಾಗಿದೆ. ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್  ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

ATM ಕಾರ್ಡ್ ಇಲ್ಲದೆ UPI  ಬಳಸಿ ಹಣ ಡ್ರಾ ಮಾಡುವುದು ಹೇಗೆ.?

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ATM  ಕಾರ್ಡ್ ಇಲ್ಲದೆ ಕೇವಲ ಯುಪಿಐ ಮೂಲಕವೇ  ಎಟಿಎಂ ಮಷೀನ್ ಗಳಲ್ಲಿ ಹಣ ತೆಗೆಯಬಹುದಾದ ಒಂದು ವಾಸ ಫೀಚರ್ ಪರಿಚಯಿಸಿದೆ ಇದರಿಂದ ಇನ್ನು ಸುಲಭವಾಗಿ ಮೊಬೈಲ್ ಇದ್ದರೆ ಸಾಕು ಹಣವನ್ನು ಎಟಿಎಂ ಮಷೀನ್ ನಲ್ಲಿ ಡ್ರಾ ಮಾಡಬಹುದು.

  • ಮೊದಲು ಎಟಿಎಂ ನಲ್ಲಿ upi  ಕಾರ್ಡ್ ರಹಿತ ನಗದು  ಪ್ರಕ್ರಿಯೆಯನ್ನು ಆಯ್ಕೆ ಮಾಡಬೇಕು
  •  ನಂತರ ಎಷ್ಟು ಹಣವನ್ನು ಪಡೆಯಲು ಬಯಸುತ್ತೀರಿ ಎಂಬುದನ್ನು ನಿರ್ಧರಿಸಬೇಕು
  •  ನಂತರ ಎಟಿಎಂನಲ್ಲಿ ಯುಪಿಐ ನಗದು ಹಿಂತೆಕೊಳ್ಳುವ ಆಯ್ಕೆಯನ್ನು ಆರಿಸಿ
  • . ಹಿಂಪಡದ ಹಣದ ಮೊತ್ತವನ್ನು ನಮೂದಿಸಿ
  • QR  ಕೋಡ್ ಸ್ಕ್ಯಾನರ್ ಆಯ್ಕೆಯನ್ನು ಆರಿಸಿ
  •  ನಂತರ ನಿಮ್ಮ ಫೋನ್ನಲ್ಲಿ ಯುಪಿಐ ಅಪ್ಲಿಕೇಶನ್ ತೆರೆಯಿರಿ
  • QR ಕೋಡ್ ಅನ್ನು ಸ್ಕ್ಯಾನ್ ಮಾಡಿ
  •  ನಂತರ ನೀವು ಯುಪಿಐ ಪಿನ್ ಅನ್ನು ನಮೂದಿಸಬೇಕು
  •  ಕೊನೆಯದಾಗಿ UPI  ಪಿನ್ ಅನ್ನು ಸರಿಯಾಗಿ ನಮೂದಿಸಿದ ನಂತರ ವಹಿವಾಟು ಪೂರ್ಣಗೊಳ್ಳುತ್ತದೆ
  •  ವಹಿವಾಟು ಪೂರ್ಣಗೊಂಡ ನಂತರ ಏಟಿಎಂನಿಂದ ಹಣ ಬರುತ್ತದೆ.

ಹೀಗೆ ಸುಲಭವಾಗಿ ನಾವು ಮೊಬೈಲ್ನಲ್ಲಿ ಯುಪಿಐ ಮೂಲಕ ಹಣವನ್ನು  ಎಟಿಎಂ ಮಷೀನ್ ನಲ್ಲಿ ಸ್ಕ್ಯಾನ್ ಮಾಡುವ ಮೂಲಕ ಹಣವನ್ನು ಪಡೆಯಬಹುದಾಗಿದೆ ಧನ್ಯವಾದಗಳು.. ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್  ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

Leave a Comment