ರೈತರ ಬ್ಯಾಂಕ್ ಖಾತೆಗೆ ಬೆಳೆ ಪರಿಹಾರ ಹಣ ಜಮಾ.!  ನಿಮ್ಮ ಖಾತೆಗೆ ಪರಿಹಾರ ಹಣ ಬಂತು ಸ್ಟೇಟಸ್ ಈಗಲೇ ಚೆಕ್ ಮಾಡಿ.?

 ಎಲ್ಲರಿಗೂ ನಮಸ್ಕಾರ..

  ರಾಜ್ಯದ ಎಲ್ಲಾ ರೈತರಿಗೂ ಸರ್ಕಾರದಿಂದ ಬಿಡುಗಡೆ ಮಾಡಲಾಗಿರುವ ಬೆಳೆ ಪರಿಹಾರದ ಸಹಾಯಧನದ ಮಾಹಿತಿಯ ಬಗ್ಗೆ ಈ ಲೇಖನದಲ್ಲಿ ತಿಳಿಸಲಾಗಿದೆ,  ಸದ್ಯ ಕರ್ನಾಟಕ ರಾಜ್ಯ ಸರ್ಕಾರವು ರೈತರ ಬೆಳೆ ಪರಿಹಾರ ಹಣವನ್ನು ಬ್ಯಾಂಕ ಖಾತೆಗೆ ಜಮಾ ಮಾಡಲಾಗಿದ್ದು ಯಾವೆಲ್ಲ ರೈತರಿಗೆ ಈ ಬೆಳೆ ಪರಿಹಾರದ ಹಣ ಸಿಕ್ಕಿದೆ ಎಷ್ಟು ಬೆಳೆ ಪರಿಹಾರದ ಹಣ ರೈತರ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗಿದೆ ಅದರ ಸ್ಟೇಟಸ್ ಅನ್ನು ಚೆಕ್ ಮಾಡುವುದು ಹೇಗೆ ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿಯಲು ಲೇಖನವನ್ನು ಪೂರ್ತಿಯಾಗಿ ಓದಿ.

WhatsApp Group Join Now
Telegram Group Join Now

 ರೈತರ ಬ್ಯಾಂಕ್ ಖಾತೆಗೆ ಬೆಳೆ ಪರಿಹಾರ ಹಣ ಜಮಾ.! 

 2023 ನೇ ಸಾಲಿನಲ್ಲಿ ರಾಜ್ಯದಲ್ಲಿ ಉಂಟಾದ ಬರಗಾಲದ ಕಾರಣದಿಂದ ರೈತರು ಕಂಗಾಲಾಗಿದ್ದು ಮಳೆಯ ಕೊರತೆಯಿಂದ ರೈತರು ತಮ್ಮ ಬೆಳೆಯನ್ನು ಕಳೆದುಕೊಂಡಿದ್ದಾರೆ ಹಾಗಾಗಿ ರಾಜ್ಯ ಸರ್ಕಾರ ರೈತರಿಗೆ ಬೆಳೆ ಪರಿಹಾರ ನೀಡುವುದಾಗಿ ಘೋಷಣೆ ಮಾಡಿದ್ದು ಆ ಬೆಳೆ ಪರಿಹಾರ ಹಣವನ್ನು ರೈತರ ಬ್ಯಾಂಕ್ ಖಾತೆಗೆ ಜಮಾ ಮಾಡುದಾಗಿ ರಾಜ್ಯದ ಮುಖ್ಯಮಂತ್ರಿಗಳು ಆದೇಶ ಹೊರಡಿಸಿರುತ್ತಾರೆ.

 ಆದರೆ  ನಂತರ ರಾಜ್ಯ ಸರ್ಕಾರವು ರೈತರ ಬೆಳೆ ಪರಿಹಾರ ಹಣ ಬಿಡುಗಡೆಗೆ ಕೇಂದ್ರದಿಂದ ಸೂಕ್ತ ಸ್ಪಂದನೆ ಸಿಕ್ಕಿಲ್ಲ ಎಂದು ರೈತರಿಗೆ ಬರ ಪರಿಹಾರ ಹಣ ನೀಡಲು ಸರ್ಕಾರದಿಂದ ತುರ್ತು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಮಾಹಿತಿ ನೀಡಿದ್ದು  ಈ ತುರ್ತು ಕ್ರಮದಲ್ಲಿ ರೈತರಿಗೆ ರಾಜ್ಯ ಸರ್ಕಾರವೇ ಬೆಳೆ ಪರಿಹಾರ ಸಹಾಯಧನವಾಗಿ ಮೊದಲ ಕಂತಿನಲ್ಲಿ 2000ಗಳನ್ನು ಫಲಾನುಭವಿಗಳ ಬ್ಯಾಂಕ್ ಖಾತೆಗೆ ಜಮಾ ಮಾಡಬಹುದಾಗಿ ತಿಳಿಸಲಾಗಿತ್ತು ಇದೀಗ ರಾಜ್ಯ ಸರ್ಕಾರವು ಕೊಟ್ಟ ಮಾತಿನಂತೆ ಮೊದಲ ಕಂತಿನ ಎರಡು ಸಾವಿರ ಹಣವನ್ನು ರೈತರ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ನಿಮ್ಮ ಖಾತೆಗೆ ಪರಿಹಾರ ಹಣ ಬಂತು ಸ್ಟೇಟಸ್ ಈಗಲೇ ಚೆಕ್ ಮಾಡಿ.?

ಈಗಾಗಲೇ ತಿಳಿಸಿದ ಹಾಗೆ ರಾಜ್ಯ ಸರ್ಕಾರವು ರೈತರಿಗೆ ಬರಗಾಲದ ಕಾರಣದಿಂದ ಬೆಳೆ ಪರಿಹಾರ ಹಣವನ್ನು ನೀಡುವುದಾಗಿ ಘೋಷಣೆ ಮಾಡಿರುತ್ತದೆ ಆದರೆ ಕೇಂದ್ರದಿಂದ ಇದಕ್ಕೆ ಯಾವುದೇ ಉತ್ತರ ಸಿಕ್ಕಿಲ್ಲ ಅಂದರೆ ಯಾವುದೇ ಬೆಳೆ ಪರಿಹಾರದ ಹಣ ಬಿಡುಗಡೆಗೆ ಹಣವನ್ನು ಮಂಜೂರು ಮಾಡಿಲ್ಲ ಹಾಗಾಗಿ ರೈತರಿಗೆ ಮೊದಲ  ಕಂತಿನ ರೂಪದಲ್ಲಿ 2000 ಪರಿಹಾರದ ಹಣವನ್ನು ರಾಜ್ಯ ಸರ್ಕಾರವೇ ನೀಡುತ್ತದೆ ಎಂದು ಸ್ಪಷ್ಟನೆ ನೀಡಿರುತ್ತದೆ ಸದ್ಯ  ಇದೀಗ ಸರ್ಕಾರದಿಂದ ರೈತರಿಗೆ ಬೆಳೆ ಪರಿಹಾರ ಮಾಡಲಾಗಿದೆ ಪರಿಹಾರದ ಹಣವನ್ನು ಬ್ಯಾಂಕ ಖಾತೆಗೆ ಜಮಾ ಮಾಡಲಾಗಿದೆ ಎಂದು ತಿಳಿಸಲಾಗಿದೆ ಈ ಹಣವು ಯಾವೆಲ್ಲ ರೈತರಿಗೆ ಬಂದಿದೆ ಯಾವ ದಿನಾಂಕದಂದು ಹಾಗೂ ಯಾವ ಬ್ಯಾಂಕ್ ಖಾತೆಗೆ ಹಣ ಜಮಾ ಆಗಿದೆ ಎಂಬ ಮಾಹಿತಿಯನ್ನು ನೀವು ನಿಮ್ಮ ಮೊಬೈಲ್ ನಲ್ಲಿಯೇ ಸುಲಭವಾಗಿ ಚೆಕ್ ಮಾಡಿಕೊಳ್ಳಬಹುದು. 

ನಿಮ್ಮ ಮೊಬೈಲ್ ನಲ್ಲಿ ಸುಲಭವಾಗಿ ಪರಿಹಾರದ ಸ್ಟೇಟಸ್ ಚೆಕ್ ಮಾಡಿ.?

 ರಾಜ್ಯ ಸರ್ಕಾರದಿಂದ ರೈತರಿಗೆ ನೀಡಲಿರುವ ಬೆಳೆ ಪರಿಹಾರದ ಹಣ ನಿಮಗೂ ಕೂಡ ಬಂದಿದೆಯೇ ಎಂದು ಚೆಕ್ ಮಾಡುವುದು ಬಹಳ ಸುಲಭ ಈಗಾಗಲೇ ತಿಳಿಸಿದ ಹಾಗೆ ನಿಮ್ಮ ಮೊಬೈಲ್ ನಲ್ಲೆ ಅದರ ಸ್ಟೇಟಸ್ ಅನ್ನು ಚೆಕ್ ಮಾಡಿಕೊಳ್ಳಬಹುದು.

  • ಮೊದಲನೇದಾಗಿ ಸುಲಭವಾಗಿ ನಿಮ್ಮ ಮೊಬೈಲ್ ನಲ್ಲಿ ಪರಿಹಾರದ ಹಣ ಪಡೆದಿರುವ ಸ್ಟೇಟಸ್ ಚೆಕ್ ಮಾಡಲು ನಿಮ್ಮ ಮೊಬೈಲ್ ನಲ್ಲಿ ಪ್ಲೇ ಸ್ಟೋರ್ ಓಪನ್ ಮಾಡಿ ಅದರಲ್ಲಿ DBT karnataka ಎಂದು ಟೈಪ್ ಮಾಡಿ. 
  • ನಂತರ ಒಂದು APP  ಓಪನ್ ಆಗುತ್ತದೆ ಅದನ್ನು ಇನ್ಸ್ಟಾಲ್ ಮಾಡಿಕೊಂಡು ಅದನ್ನು ಓಪನ್ ಮಾಡಿ.
  •  ನಂತರ ಅದರಲ್ಲಿ ನಿಮ್ಮ ಆಧಾರ್ ಕಾರ್ಡ್ ನಂಬರ್ ಕೇಳುತ್ತದೆ ಅದನ್ನು ನಮೂದಿಸಿ
  •  ನಂತರ ನಮೂದಿಸಿರುವ ಆಧಾರ್ ಕಾರ್ಡ್ಗೆ ಲಿಂಕ್ ಆಗಿರುವ ಫೋನ್ ನಂಬರ್ ಗೆ ಓಟಿಪಿ ಬರುತ್ತದೆ ಆ ಒಟಿಪಿಯನ್ನು ಎಂಟರ್ ಮಾಡಿ.
  • ನಂತರ ಅದು ಓಪನ್ ಆಗುತ್ತದೆ ಅದರಲ್ಲಿ payment status  ಮೇಲೆ ಕ್ಲಿಕ್ ಮಾಡಿ.
  • ಕೊನೆಯದಾಗಿ ಆಧಾರ್ ಕಾರ್ಡ್ ಸಂಖ್ಯೆ ನಮೂದಿಸಿರುವ ಫಲಾನುಭವಿಗೆ ಸರ್ಕಾರದಿಂದ ಯಾವೆಲ್ಲ ಹಣ ಬ್ಯಾಂಕು ಖಾತೆಗೆ ಬಂದಿದೆ ಎಂಬ ಸಂಪೂರ್ಣ ಮಾಹಿತಿ ಸಿಗುತ್ತದೆ ಜೊತೆಗೆ ಯಾವ ದಿನಾಂಕದಂದು ಆ ಹಣ ಬ್ಯಾಂಕ ಖಾತೆಗೆ ಜಮಾ ಆಗಿದೆ ಎಂಬ ಮಾಹಿತಿ ಕೂಡ ಸಿಗುತ್ತದೆ.

Leave a Comment