ಉಚಿತ 10 ಕೆಜಿ ಅಕ್ಕಿ ಭಾಗ್ಯ ಸಿಗುವುದು ಡೌಟ್. BPL ಕಾರ್ಡ್ ದಾರರ ಉಚಿತ 10 ಕೆಜಿ ಅಕ್ಕಿ ಗ್ಯಾರಂಟಿ ಗೆ ಬೀಳಲಿದೆ ಕತ್ತರಿ,
ಕರ್ನಾಟಕ ರಾಜ್ಯದ ನೂತನ ಸರ್ಕಾರದಿಂದ ಬಿಪಿಎಲ್ ಕಾರ್ಡ್ ಹೊಂದಿರುವ ಪ್ರತಿ ಸದಸ್ಯರಿಗೆ ತಿಂಗಳಿಗೆ 10 ಕೆಜಿ ಅಕ್ಕಿ ಉಚಿತವಾಗಿ ನೀಡುವುದಾಗಿ ಚುನಾವಣೆಯ ಸಮಯದಲ್ಲಿ ಭರವಸೆ ನೀಡಿದ್ದು ಇದೀಗ ಸರ್ಕಾರದ ಮೂರನೇ ಕ್ಯಾಬಿನೆಟ್ ಮೀಟಿಂಗ್ ನಲ್ಲಿ ಅಂದರೆ ಜೂನ್ ಎರಡನೇ ದಿನಾಂಕ ನೀಡಿದ್ದ 5 ಗ್ಯಾರಂಟಿಗಳನ್ನು ಈಡೇರಿಸುವುದಾಗಿ ಘೋಷಣೆ ಮಾಡಿದ್ದು ಇದೀಗ ಈಗಾಗಲೇ ಮಹಿಳೆಯರಿಗೆ ರಾಜ್ಯದ್ಯಂತ ಉಚಿತ ಬಸ್ ಪ್ರಯಾಣದ ಗ್ಯಾರಂಟಿ ಜಾರಿಯಾಗಿದೆ ಅಲ್ಲದೆ ಗೃಹಲಕ್ಷ್ಮಿ ಯೋಜನೆ ಅಡಿಯಲ್ಲಿ ಮನೆಯ ಯಜಮಾನಿಯರಿಗೆ ಪ್ರತಿ ತಿಂಗಳು 2000 ಹಣ ಬ್ಯಾಂಕ್ ಖಾತೆಗೆ ಜಮಾ ಮಾಡಲು ಅರ್ಜಿಗಳನ್ನು ಸ್ವೀಕರಿಸುತ್ತಿದ್ದು ಇದೀಗ ಈ ಗ್ಯಾರೆಂಟಿಗಳಲ್ಲಿ ಒಂದಾದ ಪ್ರತಿ ಬಿಪಿಎಲ್ ಕಾರ್ಡ್ ಅವರಿಗೆ ಉಚಿತ 10 ಕೆಜಿ ಅಕ್ಕಿ ಗ್ಯಾರಂಟಿಗೆ ಇದೀಗ ಕತ್ತರಿ ಬೀಳಲಿದೆ.
ರಾಜ್ಯದ ಬಿಪಿಎಲ್ ಕಾರ್ಡ್ದಾರರಿಗೆ ಉಚಿತ 10 ಕೆಜಿ ಅಕ್ಕಿ ಭಾಗ್ಯಾ ಸಿಗುವುದು ಡೌಟ್.
ಸದ್ಯ ಈ ಬಗ್ಗೆ ರಾಜ್ಯ ಸರ್ಕಾರ ಜೂನ್ ಎರಡನೇ ದಿನಾಂಕ ನಡೆದ ಕ್ಯಾಬಿನೆಟ್ ಮೀಟಿಂಗ್ ನಲ್ಲಿ ನೀಡಿದ ಐದು ಭರವಸೆಗಳನ್ನು ಕೆಲವೇ ದಿನಗಳಲ್ಲಿ ಈಡೇರಿಸುವುದಾಗಿ ಎಲ್ಲಾ ಮಾಧ್ಯಮಗಳ ಮುಂದೆಯೂ ಘೋಷಣೆ ಮಾಡಿದ್ದು ಇದೀಗ ಜೂನ್ 11ನೇ ದಿನಾಂಕದಿಂದ ರಾಜ್ಯದ ಎಲ್ಲಾ ಮಹಿಳೆಯರಿಗೂ ಸರ್ಕಾರಿ ಬಸ್ಸುಗಳಲ್ಲಿ ಉಚಿತ ಬಸ್ ಪ್ರಯಾಣ ಮಾಡಲು ಅವಕಾಶ ನೀಡಲಾಗಿದೆ ಅಲ್ಲದೆ ಇದೇ ಜೂನ್ 15ರಿಂದ ಜುಲೈ 15 ರವರೆಗೆ ಗೃಹಲಕ್ಷ್ಮಿ ಯೋಜನೆ ಅಡಿಯಲ್ಲಿ ಮಹಿಳೆಯರಿಗೆ ಪ್ರತಿ ತಿಂಗಳು 2000 ಹಣ ಬ್ಯಾಂಕ್ ಖಾತೆಗೆ ಜಮಾ ಮಾಡುವ ಸಲುವಾಗಿ ಅರ್ಜಿಗಳನ್ನು ಸ್ವೀಕರಿಸಲಾಗುತ್ತಿದೆ ಈ ಮಧ್ಯೆ ಈ ಗ್ಯಾರಂಟಿಗಳ ಜೊತೆಗೆ ಘೋಷಣೆ ಮಾಡಿದ್ದ ಬಿಪಿಎಲ್ ಕಾರ್ಡ್ ಹೊಂದಿರುವ ಎಲ್ಲಾ ಸದಸ್ಯರಿಗೆ ಪ್ರತಿ ತಿಂಗಳು ಉಚಿತ 10 ಕೆಜಿ ಅಕ್ಕಿ ನೀಡುವ ಗ್ಯಾರಂಟಿ ಸಿಗುವುದು ಕಷ್ಟವಾಗಿದೆ.
ಹೌದು ಇದೀಗ ರಾಜ್ಯ ಸರ್ಕಾರ ಈ ಬಗ್ಗೆ ಸ್ಪಷ್ಟನೆ ನೀಡಿದ್ದು ಬಿಪಿಎಲ್ ಕಾರ್ಡ್ದಾರರಿಗೆ ಈಗಾಗಲೇ ತಿಳಿಸಿರುವ ಹಾಗೆ ಪ್ರತಿ ತಿಂಗಳು ಉಚಿತ 10 ಕೆಜಿ ಅಕ್ಕಿ ನೀಡಲು ರಾಜ್ಯ ಸರ್ಕಾರ ನಿರ್ಧರಿಸಿದೆ ಆದರೆ ಈ ಉಚಿತ ಅಕ್ಕಿ ಯೋಜನೆಗೆ ಕೇಂದ್ರ ಸರ್ಕಾರ ಅಡ್ಡವಾಗಿದ್ದು ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ 10 ಕೆಜಿ ಅಕ್ಕಿಯನ್ನು ನಾವು ವಿತರಣೆ ಮಾಡದಿದ್ದರೆ ಅದಕ್ಕೆ ಕೇಂದ್ರ ಸರ್ಕಾರವೇ ಕಾರಣ ಎಂದು ರಾಜ್ಯದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಇದೀಗ ಪ್ರಧಾನ ಮಂತ್ರಿಗಳಾದ ಮೋದಿ ಅವರ ಮೇಲೆ ಅಂದರೆ ಕೇಂದ್ರ ಸರ್ಕಾರದ ಮೇಲೆ ಏರುತ್ತಿದ್ದಾರೆ ಇದರಿಂದ ಮುಂದಿನ ದಿನಗಳಲ್ಲಿ ರಾಜ್ಯ ಸರ್ಕಾರ ಕೇಂದ್ರ ಸರ್ಕಾರದ ಮೇಲೆ ಕಾರಣಗಳನ್ನು ಹೇಳುತ್ತಾ ಉಚಿತ 10 ಕೆಜಿ ಅಕ್ಕಿಗೆ ಕತ್ತರಿ ಹಾಕಲಿದೆ.
ರಾಜ್ಯ ಸರ್ಕಾರ ಉಚಿತ 10 ಕೆಜಿ ಅಕ್ಕಿ ನೀಡದಿರಲು ಕಾರಣ ಏನು.?
ಹೌದು. ರಾಜ್ಯ ಸರ್ಕಾರ ಈಗಾಗಲೇ ಐದು ಗ್ಯಾರಂಟಿಗಳನ್ನು ಘೋಷಣೆ ಮಾಡಿರುವುದು ನಿಮಗೆಲ್ಲ ತಿಳಿದೇ ಇದೆ ಅವುಗಳಲ್ಲಿ ಈಗಾಗಲೇ ಎರಡು ಗ್ಯಾರಂಟಿಗಳು ಜಾರಿ ಕೂಡ ಆಗಿವೆ ಅಲ್ಲದೆ ಗೃಹಲಕ್ಷ್ಮಿ ಯೋಜನೆ ಅಡಿ ಮನೆಯ ಯಜಮಾನರು ಪ್ರತಿ ತಿಂಗಳು 2000 ಹಡಪಡೆಯಲು ಈಗಾಗಲೇ ಅರ್ಜಿಗಳನ್ನು ಸರ್ಕಾರ ಸ್ವೀಕರಿಸುತ್ತಿದ್ದು ಇನ್ನೂ ಮುಂದಿನ ಜುಲೈ ಒಂದರಿಂದ ರಾಜ್ಯದಲ್ಲಿ ಎಲ್ಲರಿಗೂ 200 ಯೂನಿಟ್ ವರೆಗೆ ಉಚಿತ ವಿದ್ಯುತ್ ಯೋಜನೆಯು ಸಿಗಲಿದೆ ಈ ಮಧ್ಯೆ ಜನರು ಅದರಲ್ಲೂ ಬಿಪಿಎಲ್ ಕಾರ್ಡ್ ಹೊಂದಿರುವ ಅವರು ಸರ್ಕಾರ ಘೋಷಣೆ ಮಾಡಿದ ಹಾಗೆ ಯಾವ ತಿಂಗಳಿನಿಂದ ಉಚಿತ 10 ಕೆಜಿ ಅಕ್ಕಿ ನೀಡಲಿದೆ ಎಂಬ ನಿರೀಕ್ಷೆಯಲ್ಲಿದ್ದು ಈ ಬಗ್ಗೆ ಇದೀಗ ರಾಜ್ಯದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಇಂದು ಸ್ಪಷ್ಟನೆ ನೀಡಿದ್ದಾರೆ.
, ಜೂನ್ ತಿಂಗಳಲ್ಲೂ ಉಚಿತ 10 ಕೆಜಿ ಅಕ್ಕಿ ನೀಡದೆ ಇರುವ ರಾಜ್ಯ ಸರ್ಕಾರ ಜುಲೈ ತಿಂಗಳಲ್ಲೂ ಸಹ 10 ಕೆಜಿ ಅಕ್ಕಿಯನ್ನು ಅಂದರೆ ಗ್ಯಾರಂಟಿಯನ್ನು ಜಾರಿ ಮಾಡಲು ಸಾಧ್ಯವಿಲ್ಲ ಎಂದು ಸ್ಪಷ್ಟವಾಗಿ ರಾಜ್ಯದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಇಂದು ಮಾಧ್ಯಮದಲ್ಲಿ ತಿಳಿಸಿದ್ದಾರೆ ಅದರಲ್ಲೂ ರಾಜ್ಯ ಸರ್ಕಾರ ಬಡವರಿಗೆ ಬರವಸೆ ನೀಡಿದ ಹಾಗೆ ಪ್ರತಿ ತಿಂಗಳು 10 ಕೆಜಿ ಅಕ್ಕಿ ವಿತರಣೆ ಮಾಡಲು ನಿರ್ಧರಿಸಿದೆ ಆದರೆ ಕೇಂದ್ರ ಸರ್ಕಾರದಿಂದ 10 ಕೆಜಿ ಅಕ್ಕಿ ನೀಡಲು ನಿರಾಕರಿಸಿದ್ದು ಅಂದರೆ ಈ ಯೋಜನೆಗೆ ಕೇಂದ್ರ ಸರ್ಕಾರ ಅಡ್ಡಲಾಗಿ ನಿಂತಿದ್ದು ಮುಂದಿನ ಜುಲೈ ತಿಂಗಳನ್ನು ಉಚಿತ 10 ಕೆಜಿ ಅಕ್ಕಿ ವಿತರಣೆ ಮಾಡಲು ಸಾಧ್ಯವಿಲ್ಲ ಎಂದು ತಿಳಿಸಲಾಗಿದೆ.
ಉಚಿತ 10 ಕೆಜಿ ಅಕ್ಕಿ ವಿತರಣೆ ಮಾಡದಿರಲು ಕಾರಣ ಇಷ್ಟೇ ರಾಜ್ಯ ಸರ್ಕಾರ ಈಗಾಗಲೇ ಹಲವು ಗ್ಯಾರಂಟಿಗಳನ್ನು ಜಾರಿ ಮಾಡಿದ್ದು ಈ ಗ್ಯಾರಂಟಿಗಳಿಂದ ರಾಜ್ಯ ಸರ್ಕಾರಕ್ಕೆ ಹೆಚ್ಚಿನ ಹೊರೆ ಬೀಳುತ್ತಿದ್ದು ಈಗಾಗಲೇ ವಿದ್ಯುತ್ ಶುಲ್ಕ ಮದ್ಯಪಾನದ ಮೇಲೆ ತೆರಿಗೆ ಪೆಟ್ರೋಲ್ ಡೀಸೆಲ್ ಮತ್ತು ಹಿನ್ನಿತರ ವಸ್ತು ಮತ್ತು ಸೇವೆಗಳ ಮೇಲೆ ಬೆಲೆ ಹೆಚ್ಚಳವನ್ನು ಮಾಡಿದ್ದು ಇವುಗಳ ಮಧ್ಯೆ ರಾಜ್ಯದ ಎಲ್ಲಾ ಬಿಪಿಎಲ್ ಕಾರ್ಡ್ದಾರರಿಗೂ ಅದರಲ್ಲೂ ಪ್ರತಿ ಸದಸ್ಯರಿಗೂ 10 ಕೆಜಿ ಅಕ್ಕಿ ವಿತರಣೆ ಮಾಡುವುದು ಅಸಾಧ್ಯ ಎಂದು ತಿಳಿದು ಇದೀಗ ಇವರಿಗೆ ದೇಶದ ಎಲ್ಲ ಬಿಪಿಎಲ್ ಕಾರ್ಡ್ ದಾರರಿಗೆ ಕೇಂದ್ರ ಸರ್ಕಾರ ಅಕ್ಕಿ ವಿತರಣೆ ಮಾಡುತ್ತಿರುವ ರೀತಿ ರಾಜ್ಯ ಸರ್ಕಾರದ ಆದೇಶದಂತೆ 10 ಕೆಜಿ ಅಕ್ಕಿ ವಿತರಣೆ ಮಾಡಲಿ ಎಂಬುದು ರಾಜ್ಯ ಸರ್ಕಾರದ ಕೋರಿಕೆ. ಅಲ್ಲದೆ ಈ ಯೋಜನೆಯಿಂದ ಕೆಲವು ತಿಂಗಳು ರಾಜ್ಯ ಸರ್ಕಾರ ತಪ್ಪಿಸಿಕೊಂಡು ಮುಂದಿನ ಲೋಕಸಭಾ ಚುನಾವಣೆಯಲ್ಲಿ ಕೇಂದ್ರ ಸರ್ಕಾರವೇ ಈ 10 ಕೆಜಿ ಅಕ್ಕಿ ವಿತರಣೆಗೆ ಸಮಸ್ಯೆಯಾಗಿದ್ದು ಎಂದು ಮತ ಪಡೆಯುವ ಒಂದು ಚಿಂತನೆಯಾಗಿದೆ ಆದರೆ ಇದೀಗ ರಾಜ್ಯದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಹೇಳುತ್ತಿರುವ ಪ್ರಕಾರ ಜುಲೈ ಮತ್ತು ಆಗಸ್ಟ್ ತಿಂಗಳಿನಲ್ಲೂ ಉಚಿತ ಹತ್ತು ಕೆಜಿ ಅಕ್ಕಿ ಗ್ಯಾರಂಟಿ ಜಾರಿಯಾಗುವುದು ಡೌಟ್ ಎಂದು ಹೇಳಬಹುದು.
ಉಚಿತ 10 ಕೆಜಿ ಅಕ್ಕಿ ಪಡೆಯಲು ಬಿಪಿಎಲ್ ಕಾರ್ಡ್ ಮಾಡಿಸಿಕೊಳ್ಳಲು ಮತ್ತೊಂದು ಅವಕಾಶ.
ಹೌದು ರಾಜ್ಯ ಸರ್ಕಾರ ಅಧಿಕಾರಕ್ಕೆ ಬಂದ ಬೆಂದಲ್ಲೇ ರಾಜ್ಯದಲ್ಲಿ ಈ ಗ್ಯಾರಂಟಿ ವಿಷಯವಾಗಿ ಬಿಪಿಎಲ್ ಕಾರ್ಡ್ಗಳನ್ನು ಪರಿಶೀಲಿಸಿ ಅದರಲ್ಲಿ ಅಕ್ರಮ ಬಿಪಿಎಲ್ ಕಾರ್ಡ್ಗಳನ್ನು ರದ್ದು ಮಾಡಲಾಗಿದೆ ಅಲ್ಲದೆ ಈಗಾಗಲೇ ಬಿಪಿಎಲ್ ಕಾರ್ಡ್ಗಳನ್ನು ತಿದ್ದುಪಡಿ ಮತ್ತು ಹೊಸ ಅರ್ಜಿಗಳನ್ನು ಸಲ್ಲಿಸಲು ಕಾಯುತ್ತಿರುವ ಜನರಿಗೆ ಬಿಪಿಎಲ್ ಕಾರ್ಡ್ ಗೆ ಅರ್ಜಿ ಸಲ್ಲಿಸಲು ರಾಜ್ಯ ಸರ್ಕಾರ ಮತ್ತೊಂದು ಅವಕಾಶ ನೀಡಿದ್ದು ಇದೇ ಜೂನ್ 30ರ ಒಳಗಾಗಿ ಹೊಸ ಬಿಪಿಎಲ್ ಕಾರ್ಡಿಗೆ ಅರ್ಜಿ ಸಲ್ಲಿಸುವವರು ಅರ್ಜಿ ಸಲ್ಲಿಸಬಹುದು ಅದೇ ರೀತಿ ಈಗಾಗಲೇ ಬಿಪಿಎಲ್ ಕಾರ್ಡ್ ಹೊಂದಿದ್ದು ಒಂದು ವೇಳೆ ನಿಮ್ಮ ಬಿಪಿಎಲ್ ಕಾರ್ಡ್ ಗೆ ಆಧಾರ್ ಕಾರ್ಡ್ ಲಿಂಕ್ ಮಾಡಿಸಿಲ್ಲದಿದ್ದರೆ ಅಂತಹ ಕಾಡುಗಳಿಗೆ ಆಧಾರ್ ಲಿಂಕ್ ಮಾಡಿಸಿಕೊಳ್ಳಲು ಇದೇ ಕೊನೆಯ ಅವಕಾಶವಾಗಿದೆ ಎಂದು ತಿಳಿಸಲಾಗಿದೆ ಇಲ್ಲದಿದ್ದರೆ ನಿಮ್ಮ ಬಿಪಿಎಲ್ ಕಾರ್ಡ್ ಗಳು ರದ್ದಾಗುವ ಸಾಧ್ಯತೆ ಇದೆ ಎಚ್ಚರ ಎಂದು ಸ್ಪಷ್ಟವಾಗಿ ರಾಜ್ಯ ಸರ್ಕಾರ ಎಚ್ಚರಿಕೆ ನೀಡಿದೆ .