ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಸರ್ಕಾರದಿಂದ ಹೊಸ ಯೋಜನೆ.!  ವಿದ್ಯಾರ್ಥಿಗಳಿಗೆ ಉಚಿತ ಚಪ್ಪಲಿ ಭಾಗ್ಯ.?

ಎಲ್ಲರಿಗೂ ನಮಸ್ಕಾರ.  ಕರ್ನಾಟಕ ರಾಜ್ಯ ಸರ್ಕಾರವು ಸರ್ಕಾರಿ ಶಾಲಾ ಮಕ್ಕಳಿಗೆ ಈಗಾಗಲೇ ಬಹಳಷ್ಟು ಯೋಜನೆಗಳನ್ನು ಮತ್ತು ಉಚಿತ ಸೇವೆಗಳನ್ನು ನೀಡುತ್ತಿದೆ ಇವುಗಳಲ್ಲಿ ಇದೀಗ ಮತ್ತೊಂದು ಹೊಸ ಭಾಗ್ಯ ಸರ್ಕಾರಿ ಶಾಲೆ ಮಕ್ಕಳಿಗೆ ನೀಡಲು ಆರಂಭಿಸಿದೆ,  ಹೌದು ಸರ್ಕಾರಿ ಶಾಲಾ ಮಕ್ಕಳಿಗೆ   ಸಮವಸ್ತ್ರ ಮತ್ತು  ಶೂ ಸಾಕ್ಸ್ ವಿತರಣೆ ಮಾಡಲಾಗುತ್ತಿದೆ ಈ ಯೋಜನೆಗಳು ಇರುವಾಗಲೇ ಸರ್ಕಾರಿ ಶಾಲಾ ಮಕ್ಕಳಿಗೆ ಮತ್ತೊಂದು ಹೊಸ ಉಚಿತ ಭಾಗ್ಯವನ್ನು ನೀಡಲಿದ್ದು ಇದೀಗ ವಿದ್ಯಾರ್ಥಿಗಳಿಗೆ ಸಂತಸವನ್ನು ಉಂಟುಮಾಡಿದೆ ಸರ್ಕಾರದ ಈ ಹೊಸ ಉಚಿತ ಭಾಗ್ಯ ಯೋಜನೆ ಆದರೂ ಏನು,  ಯಾರಿಗೆಲ್ಲ ಈ ಉಚಿತ ಭಾಗ್ಯ ಸಿಗಲಿದೆ ಯಾವಾಗ ಸಿಗಲಿದೆ ಎಂಬ ಸಂಪೂರ್ಣ ಮಾಹಿತಿ ತಿಳಿಯಲು ಲೇಖನವನ್ನು ಪೂರ್ತಿಯಾಗಿ ಓದಿ.

WhatsApp Group Join Now
Telegram Group Join Now

 ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಸರ್ಕಾರದಿಂದ ಹೊಸ ಯೋಜನೆ.! 

ರಾಜ್ಯ ಸರ್ಕಾರವು ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಪ್ರತಿ ವರ್ಷವೂ ಉಚಿತ ಸಮವಸ್ತ್ರ  ಮತ್ತು ಶೂ ಸಾಕ್ಸ್ ಗಳನ್ನು ವಿತರಣೆ  ಮಾಡುತ್ತದೆ ಅದೇ ರೀತಿ ಈ ವರ್ಷ ಕೂಡ ಈಗಾಗಲೇ ಶಾಲೆಗಳ ಆರಂಭದಲ್ಲೇ ಸಮವಸ್ತ್ರಗಳನ್ನು ವಿದ್ಯಾರ್ಥಿಗಳಿಗೆ ಉಚಿತವಾಗಿ ವಿತರಣೆ ಮಾಡಿದ್ದು ಸದ್ಯ ಶೂ ಸಾಕ್ಸ್ ವಿತರಣೆ ತಡವಾದ ಕಾರಣ ದೀಪಾವಳಿ ಹಬ್ಬದ ಒಳಗಾಗಿ ಎಲ್ಲಾ ಸರ್ಕಾರಿ ಶಾಲೆ ವಿದ್ಯಾರ್ಥಿಗಳಿಗೂ ಉಚಿತ ಶೂ ಸಾಕ್ಸ್  ವಿತರಣೆಗೆ ಕ್ರಮ ಕೈಗೊಂಡಿದೆ ಸದ್ಯ ಈಗಾಗಲೇ ಕೆಲವು ಜಿಲ್ಲೆಗಳಲ್ಲಿ ಸರ್ಕಾರದ ಉಚಿತ ಶೂ ಸಾಕ್ಸ್  ಗಳನ್ನು ವಿದ್ಯಾರ್ಥಿಗಳಿಗೆ ನೀಡಲಾಗಿದ್ದು ಕೆಲವು ಜಿಲ್ಲೆಗಳಲ್ಲಿ ಸಹಕಾರಿ ಶಾಲಾ ವಿದ್ಯಾರ್ಥಿಗಳಿಗೆ ಶೂ ಸಾಕ್ಸ್ ಬದಲಾಗಿ ಚಪ್ಪಲಿಗಳನ್ನು ಉಚಿತವಾಗಿ ನೀಡಲಾಗುತ್ತಿದೆ ಇದು ಕರ್ನಾಟಕ ರಾಜ್ಯ ಸರ್ಕಾರದ ಸರ್ಕಾರಿ ಶಾಲಾ ವಿದ್ಯಾರ್ಥಿಗಳ ಮತ್ತೊಂದು ಹೊಸ ಭಾಗ್ಯ ಯೋಜನೆಯಾಗಿದೆ.

ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಉಚಿತ ಚಪ್ಪಲಿ ಭಾಗ್ಯ.?

ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಪ್ರತಿವರ್ಷ ಉಚಿತವಾಗಿ ನೀಡುವ ಶೂ ಸಾಕ್ಸ್  ವಿತರಣೆಗೆ ಸರ್ಕಾರ ಆದೇಶ ನೀಡಿದೆ ಆದರೆ ಕೆಲವು ಜಿಲ್ಲೆಗಳಲ್ಲಿ ಸರ್ಕಾರದ ಆದೇಶದಂತೆ ಈಗಾಗಲೇ ವಿದ್ಯಾರ್ಥಿಗಳಿಗೆ ಶೂ ಸಾಕ್ಸ್  ವಿತರಣೆ ಕೂಡ ಮಾಡಲಾಗಿದೆ ಅದೇ ಕೆಲವು ಜಿಲ್ಲೆಗಳಲ್ಲಿ ಶೂ ಸಾಕ್ಸ್  ಬದಲಾಗಿ ಚಪ್ಪಲಿ ವಿತರಣೆಯನ್ನು  ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ನೀಡಿದ್ದು ಇದೀಗ ಸರ್ಕಾರದ ಹೊಸ ಚಪ್ಪಲಿ ಭಾಗ್ಯ ಯೋಜನೆ ಎಂದು ಚರ್ಚೆ ಉಂಟು ಮಾಡಿದೆ. ಹೌದು ಇದು ಸರ್ಕಾರದ ಶೂ ಸಾಕ್ಸ್  ವಿತರಣೆಯ  ಯೋಜನೆ ಆಗಿದೆ ಆದರೆ ಗದಗ ಜಿಲ್ಲೆಯಲ್ಲಿ ಕೆಲವು ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಶೂ ಸಾಕ್ಸ್  ಬದಲಾಗಿ ದೀಪಾವಳಿ ಹಬ್ಬದ ಪ್ರಯುಕ್ತ ಹೊಸ ಚಪ್ಪಲಿಗಳನ್ನು ವಿದ್ಯಾರ್ಥಿಗಳಿಗೆ ವಿತರಣೆ ಮಾಡಿದ್ದು ಇದೀಗ ಇದು ಸರ್ಕಾರದ ಹೊಸ ಚಪ್ಪಲಿ ಭಾಗ್ಯ ಯೋಜನೆಯ ಆಗಿರಬಹುದು ಎಂದು ಸಾಮಾಜಿಕ ಜಾಲತಾಣಗಳಲ್ಲಿ ಬಹಳಷ್ಟು ಚರ್ಚೆ ಉಂಟಾಗುತ್ತಿದೆ.

 ಅಲ್ಲದೆ ಸರ್ಕಾರಿ ಶಾಲೆಗಳಿಗೂ ಕೂಡ ವಿದ್ಯಾರ್ಥಿಗಳು ಶೂ ಸಾಕ್ಸ್ ಗಳನ್ನು ಹಾಕಬೇಕಾಗಿದ್ದು ಇದೀಗ ಸರ್ಕಾರದಿಂದಲೇ ಚಪ್ಪಲಿ ಇತರೆ ಮಾಡಿದ್ದು ಮಕ್ಕಳಿಗೆ ಶೂ ಸಾಕ್ಸ್  ಇಲ್ಲದಿರುವುದರಿಂದ ಅವರಿಗೆ ಶೂ ಸಾಕ್ಸ್  ಕೊಡಿಸುವುದು ಯಾವಾಗ ಹಾಗೂ ಕೊಡಿಸುವುದು ಯಾರು ಎಂದು ಪೋಷಕರು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ ಇದರಿಂದ ಕೆಲವು ಪೋಷಕರು ಚಪ್ಪಲಿ ಬದಲಾಗಿ ಮೊದಲಂತೆ ಶೂ ಸಾಕ್ಸ್  ವಿತರಣೆಯೇ ಸೂಕ್ತ ಎಂದು ಮನವಿ ಮಾಡಿದ್ದಾರೆ.

ಶೂ ಸಾಕ್ಸ್  ಭಾಗ್ಯದ ಬದಲು ಚಪ್ಪಲಿ ಭಾಗ್ಯ ಸೂಕ್ತವೇ.?

ಸದ್ಯ ರಾಜ್ಯ ಸರ್ಕಾರದಿಂದ ಉಚಿತವಾಗಿ ನೀಡುತ್ತಿದ್ದ ಶೂ ಸಾಕ್ಸ್  ಭಾಗ್ಯ ಇದೀಗ ಚಪ್ಪಲಿ ಭಾಗ್ಯ ಆಗಿ ಕೆಲವು ಜಿಲ್ಲೆಗಳಲ್ಲಿ ಬದಲಾಗಿದೆ ಇದರಿಂದ ಕೆಲವು ಪೋಷಕರು ಆಕ್ರೋಶ ಕೂಡ ವ್ಯಕ್ತಪಡಿಸಿದ್ದಾರೆ ಇದು ಕೆಲವು ವಿದ್ಯಾರ್ಥಿಗಳು ಇದಕ್ಕೆ ಸಂತೋಷ ವ್ಯಕ್ತಪಡಿಸಿದ್ದಾರೆ ಹಾಗಾಗಿ ಸರ್ಕಾರದ  ಉಚಿತಶೂ ಸಾಕ್ಸ್  ಭಾಗ್ಯದ ಬದಲಾಗಿ ಚಪ್ಪಲಿ ಭಾಗ್ಯ ನಿಮ್ಮ ಪ್ರಕಾರ ಸೂಕ್ತವೇ ಆದರೆ ಇನ್ಮುಂದೆ ಸರ್ಕಾರ ಸರ್ಕಾರಿ ವಿದ್ಯಾರ್ಥಿಗಳಿಗೆ ಶೂ ಸಾಕ್ಸ್  ಬದಲಾಗಿ ಚಪ್ಪಲಿ ವಿತರಣೆ ಮಾಡುವುದು ಸರಿಯೇ ಎಂಬುದನ್ನು ಕಮೆಂಟ್ ನಲ್ಲಿ ತಿಳಿಸಿ ಧನ್ಯವಾದಗಳು…

Leave a Comment