ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಲು  ಜುಲೈ 12 ರಿಂದ ಹೊಸ ಆಪ್ ಬಿಡುಗಡೆ.  ಅರ್ಜಿ ಸಲ್ಲಿಸಲು ಈ ಎಲ್ಲಾ ದಾಖಲೆಗಳು ಕಡ್ಡಾಯ.?

 

WhatsApp Group Join Now
Telegram Group Join Now

ಕರ್ನಾಟಕ ರಾಜ್ಯ ಸರ್ಕಾರ 2023 ನೇ ಸಾಲಿನ ವಿಧಾನಸಭಾ ಚುನಾವಣೆ ಸಮಯದಲ್ಲಿ ಅತಿ ಹೆಚ್ಚು ಕ್ಷೇತ್ರಗಳಲ್ಲಿ ಜಯ ಗಳಿಸಿ ಅಧಿಕಾರಕ್ಕೆ ಬರುವ ಸಲುವಾಗಿ ಜನರಿಗೆ  ಕೆಲವು ಗ್ಯಾರಂಟಿಗಳನ್ನು ನೀಡಿದ್ದು ಇದರಂತೆ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ಅಧಿಕಾರಕ್ಕೆ ಬಂದಿದ್ದು ರಾಜ್ಯದ ಮುಖ್ಯಮಂತ್ರಿಗಳಾಗಿ ಸಿದ್ದರಾಮಯ್ಯನವರು ಪ್ರಮಾಣವಚನ ಸ್ವೀಕರಿಸಿದ್ದು ಇದರ ಬೆನ್ನಲ್ಲೇ ಜನರಿಗೆ ನೀಡಿದ್ದ ಐದು ಗ್ಯಾರಂಟಿಗಳನ್ನು ಈಡೇರಿಸುವುದಾಗಿ ಮಾಧ್ಯಮಗಳ ಮುಂದೆ ಘೋಷಣೆ ಮಾಡಿದ್ದು.

ಅದರಂತೆ ಜೂನ್ ಎರಡನೇ ದಿನಾಂಕ ಕ್ಯಾಬಿನೆಟ್ ಮೀಟಿಂಗ್ ನಲ್ಲಿ ಎಲ್ಲಾ ಗ್ಯಾರಂಟಿಗಳ ಜಾರಿ ಮಾಡುವ ದಿನಾಂಕವನ್ನು ಘೋಷಣೆ ಮಾಡಿದ್ದು ಈಗಾಗಲೇ ಜೂನ್ 11ರಿಂದ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಅಂದರೆ ಶಕ್ತಿ ಯೋಜನೆ ಜಾರಿಯಾಗಿದೆ ಅಲ್ಲದೆ ಪ್ರತಿಮನೆಗೆ 200 ಯೂನಿಟ್ ವಿದ್ಯುತ್ ಉಚಿತ ಯೋಜನೆಯಾದ ಗೃಹಜೋತಿ ಯೋಜನೆಗೂ ಅರ್ಜಿಗಳನ್ನು ಈಗಾಗಲೇ ಸ್ವೀಕರಿಸುತ್ತಿದ್ದು ಗೃಹಲಕ್ಷ್ಮಿ ಯೋಜನೆಯ ಅರ್ಜಿಯಲ್ಲಿ ಕೆಲವು ಸಮಸ್ಯೆಗಳಾಗಿದ್ದು ಇದೀಗ ರಾಜ್ಯ ಸರ್ಕಾರ ಮನೆಯ ಯಜಮಾನಿಯರಿಂದ ಅರ್ಜಿಗಳನ್ನು ಸ್ವೀಕರಿಸಲು ಹೊಸ ಆಪ್ ಒಂದನ್ನು ಬಿಡುಗಡೆ ಮಾಡಲಿದೆ ಮುಂದಿನ ಕೆಲವೇ ದಿನಗಳಲ್ಲಿ ಈ ಆಪ್ ಮೂಲಕ ಅರ್ಜಿ ಸಲ್ಲಿಸಲು ಆದೇಶ ಹೊರಡಿಸಲಿದೆ.

ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಲು  ಜುಲೈ 12 ರಿಂದ ಹೊಸ ಆಪ್ ಬಿಡುಗಡೆ. 

 ಹೌದು ಗೃಹಲಕ್ಷ್ಮಿ ಯೋಜನೆಗೆ ಈಗಾಗಲೇ ಅರ್ಜಿ ಸಲ್ಲಿಸಲು ರಾಜ್ಯ ಸರ್ಕಾರ ದಿನಾಂಕವನ್ನು ಘೋಷಣೆ ಮಾಡಿದ್ದು ಇದೇ ಜೂನ್ 15ನೇ ದಿನಾಂಕದಿಂದ ಗೃಹಲಕ್ಷ್ಮಿ ಯೋಜನೆಗೆ ಜುಲೈ 15 ನೇ ದಿನಾಂಕದವರೆಗೆ ಅರ್ಜಿ ಸಲ್ಲಿಸಲು ಮನೆಯ ಯಜಮಾನಿಯರಿಗೆ ಅವಕಾಶ ನೀಡಲಾಗಿತ್ತು ಆದರೆ ರಾಜ್ಯ ಸರ್ಕಾರ ಅರ್ಜಿ ಸಲ್ಲಿಸಲು ನೀಡಿದ್ದ ಸರ್ಕಾರದ ಅಧಿಕೃತ ವೆಬ್ಸೈಟ್ ಸೇವಾ ಸಿಂಧು ಹೋರ್ಟಲ್ಲಿ ಅದಾಗಲೇ ಗೃಹಜೋತಿ ಯೋಜನೆಗೆ ಅಂದರೆ ಪ್ರತಿಮನೆಗೆ 200 ಯೂನಿಟ್ ವಿದ್ಯುತ್ ಉಚಿತಪಡೆಯರುವ ಯೋಜನೆಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಿದ್ದು ಇದರಿಂದ ವೆಬ್ಸೈಟ್ನಲ್ಲಿ ಹೆಚ್ಚಾಗಿ ಅರ್ಜಿಗಳನ್ನು ಹಾಕುತ್ತಿದ್ದ ಕಾರಣ ಕೆಲವು ತಾಂತ್ರಿಕ ಕಾರಣಗಳಿಂದ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಲು ಸಾಧ್ಯವಾಗಲಿಲ್ಲ ಆದ್ದರಿಂದ ರಾಜ್ಯ ಸರ್ಕಾರ ಗೃಹಲಕ್ಷ್ಮಿ ಯೋಜನೆಗೆ  ಹೊಸ ಆಪ್ ಬಿಡುಗಡೆ ಮಾಡುವುದಾಗಿ ತಿಳಿಸಿದ್ದು ಇದರಲ್ಲಿಯೇ ಮುಂದಿನ ದಿನದಲ್ಲಿ ಅರ್ಜಿ ಸಲ್ಲಿಸಬೇಕು ಎಂದು ತಿಳಿಸಲಾಗಿತ್ತು.

 ಅದರಂತೆ ಇದೀಗ ರಾಜ್ಯ ಸರ್ಕಾರ ಜುಲೈ 12 ರಿಂದ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಲು ಹೊಸ ಆಪ್ ಬಿಡುಗಡೆ ಮಾಡಲಿದ್ದು ಈ ಆಪ್ ನಲ್ಲಿ ಮನೆಯ ಯಜಮಾನರು ಪ್ರತಿ ತಿಂಗಳು 2000 ಹಣ ಪಡೆಯಲು ಅರ್ಜಿ ಸಲ್ಲಿಸಬಹುದಾಗಿದೆ ಅಲ್ಲದೆ ಈ ಅರ್ಜಿ ಸಲ್ಲಿಕೆಗೆ ಆಗಸ್ಟ್ ಒಂದನೇ ದಿನಾಂಕದವರೆಗೆ ಅವಕಾಶ ನೀಡಲಿದ್ದು ಇದರ ಒಳಗಾಗಿ ಅರ್ಜಿ ಸಲ್ಲಿಸಲು ಅರ್ಹ ಮನೆಯ ಯಜಮಾನರು ಅರ್ಜಿ ಸಲ್ಲಿಸಬಹುದು.

ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಲು ಈ ಎಲ್ಲಾ ದಾಖಲೆಗಳು ಕಡ್ಡಾಯ.

ಈಗಾಗಲೇ ಎಲ್ಲರಿಗೂ ತಿಳಿದಿರುವ ಹಾಗೆ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಲು ಬೇಕಾಗಿರುವ ಎಲ್ಲಾ  ದಾಖಲೆಗಳ ಬಗ್ಗೆ ನಿಮಗೆ ಮಾಹಿತಿ ಇದೆ ಅಂದರೆ  ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಲು ಯಾವುದೇ ಎಪಿಎಲ್ ಕಾರ್ಡ್ ಅಥವಾ ಬಿಪಿಎಲ್ ಕಾರ್ಡ್ ದಾರ ಆಗಿದ್ದರೂ ಅರ್ಜಿ ಸಲ್ಲಿಸಬಹುದು ಆದರೆ ಬಿಪಿಎಲ್ ಕಾರ್ಡ್ ನಲ್ಲಿ ಅಥವಾ ಎಪಿಎಲ್ ಕಾರ್ಡ್ ನಲ್ಲಿ ಮನೆಯ ಯಜಮಾನಿಯಾ ಫೋಟೋ ಮೊದಲು ಇರಬೇಕು ಅಲ್ಲದೆ ಬಿಪಿಎಲ್ ಕಾರ್ಡ್ ನಲ್ಲಿ ಎಷ್ಟೇ ಮಹಿಳೆಯರ ಹೆಸರು ಇದ್ದರು ಅದರಲ್ಲಿ ಮೊದಲ ಪುಟದಲ್ಲಿ ಇರುವ ಒಬ್ಬ  ಮಹಿಳೆಗೆ ಅಂದರೆ ಮನೆ ಯಜಮಾನಿಗೆ ಮಾತ್ರ ಪ್ರತಿ ತಿಂಗಳು 2000 ಹಣ ನೀಡಲಾಗುತ್ತದೆ.

  • ಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಲು ಮನೆ ಯಜಮಾನಿಯ ಹೆಸರು ಮತ್ತು ವಿಳಾಸ.
  •  ಮನೆಯ ಆಧಾರ್ ಕಾರ್ಡ್ ಸಂಖ್ಯೆ
  •  ಚುನಾವಣಾ ಗುರುತಿನ ಚೀಟಿ ಸಂಖ್ಯೆ
  •  ಮಹಿಳೆ ಮನೆಯ ಪಡಿತರ ಚೀಟಿ ಸಂಖ್ಯೆ ಮತ್ತು ಮಹಿಳೆಯ ಉದ್ಯೋಗ
  •  ಪತಿಯ ಹೆಸರು ಮತ್ತು ಪತಿಯ ಆಧಾರ್ ಕಾರ್ಡ್ ಸಂಖ್ಯೆ
  •  ಪತಿಯ ಗುರುತಿನ ಚೀಟಿ ಸಂಖ್ಯೆ
  •  ಅರ್ಜಿ ಸಲ್ಲಿಸುವ ಮಹಿಳೆಯ ಜಾತಿ
  •  ಹಾಗೆ ಮಹಿಳೆಯ ಆಧಾರ್ ಕಾರ್ಡ್ ಲಿಂಕ್ ಆಗಿರುವ ಫೋನ್ ನಂಬರ್
  •   ಮಹಿಳೆಯ ಬ್ಯಾಂಕ್ ಖಾತೆ ಸಂಖ್ಯೆ ಮತ್ತು ಐಎಫ್‌ಎಸ್‌ಸಿ ಕೋಡ್
  •   ಕೊನೆಯದಾಗಿ ಈಗಾಗಲೇ ಈ ಮೇಲೆ ತಿಳಿಸಿದ ಎಲ್ಲಾ ದಾಖಲೆಗಳ ಪ್ರತಿ ಅಂದರೆ ಆಧಾರ್ ಕಾರ್ಡ್,  ಬಿಪಿಎಲ್ ಕಾರ್ಡ್,  ಪಡಿತರ ಚೀಟಿ,  ಬ್ಯಾಂಕ್ ಪಾಸ್ ಬುಕ್,  ಅದೇ ರೀತಿ ಪತಿಯ ಆಧಾರ್  ಜೆರಾಕ್ಸ್ ಗಳನ್ನು ನೀಡುವುದು ಕಡ್ಡಾಯ ಎಂದು ಸ್ಪಷ್ಟವಾಗಿ ತಿಳಿಸಲಾಗಿದೆ.
  •  ಹಾಗೆ ಇನ್ನಿತರ ಕೆಲವು ಮಾಹಿತಿಗಳನ್ನು ಮತ್ತು ದಾಖಲೆಗಳನ್ನು ಅರ್ಜಿ ಸಲ್ಲಿಸುವಾಗ ಪಡೆಯಲಾಗುತ್ತದೆ ಆ ಎಲ್ಲಾ ದಾಖಲೆಗಳನ್ನು ಅರ್ಜಿ ಸಲ್ಲಿಸುವ ಮಹಿಳೆಯರು ಕಡ್ಡಾಯವಾಗಿ ನೀಡಬೇಕು ಇಲ್ಲದಿದ್ದರೆ ಅರ್ಜಿ ತಿರಸ್ಕರಿಸಲಾಗುತ್ತದೆ ಅಂದರೆ 2000 ನೀಡಲಾಗುವುದಿಲ್ಲ ಎಂದು ತಿಳಿಸಲಾಗಿದೆ. 

 

Leave a Comment