ರೇಷನ್ ಕಾರ್ಡ್ ತಿದ್ದುಪಡಿಗೆ ಮತ್ತೆ  ಅವಧಿ ವಿಸ್ತರಣೆ : ಯಾವ್ಯಾವ ಜಿಲ್ಲೆಗೆ ಯಾವಾಗ ತಿದ್ದುಪಡಿಗೆ ಅವಕಾಶ.? ಇಲ್ಲಿದೆ ಮಾಹಿತಿ.. 

ಎಲ್ಲರಿಗೂ ನಮಸ್ಕಾರ… 

Ration card: ರಾಜ್ಯದಲ್ಲಿ ಸರ್ಕಾರದಿಂದ ರೇಷನ್ ಕಾರ್ಡ್ ತಿದ್ದುಪಡಿಗೆ ನೀಡಿದ್ದ ಅವಧಿಯನ್ನು ಮತ್ತೆ ವಿಸ್ತರಣೆ ಮಾಡಲಾಗಿದೆ,  ತಿದ್ದುಪಡಿಗೆ ಹೊಸ ದಿನಾಂಕಗಳನ್ನು ನಿಗದಿಪಡಿಸಿದ್ದು  ಆಯಾ ದಿನಗಳಲ್ಲಿ ತಿದ್ದುಪಡಿ ಮಾಡಿಸಿಕೊಳ್ಳಲು ಅವಕಾಶ ನೀಡಲಾಗುತ್ತಿದೆ.

WhatsApp Group Join Now
Telegram Group Join Now

 ಈ ಹಿಂದೆ ಅಕ್ಟೋಬರ್ ಐದನೇ ದಿನಾಂಕದಿಂದ 13ನೇ ದಿನದವರೆಗೆ ಮೂರು ಹಂತಗಳಲ್ಲಿ ರಾಜ್ಯದ ಜನರಿಗೆ ರೇಷನ್ ಕಾರ್ಡ್ ತಿದ್ದುಪಡಿಗೆ ಅವಕಾಶವನ್ನು ನೀಡಲಾಗಿತ್ತು ಆದರೆ ತಿದ್ದುಪಡಿಗೆ ಸಾಕಷ್ಟು ಕಡೆಯಲ್ಲಿ ಸರ್ವರ್ ಸಮಸ್ಯೆ ಎದುರಾದ ಹಿನ್ನೆಲೆ ಆಹಾರ ಪೂರೈಕೆ ಮತ್ತು ನಾಗರಿಕ ಸರಬರಾಜು ಇಲಾಖೆ ಈ ಕ್ರಮವನ್ನು ಕೈಗೊಂಡಿದೆ ಅಂದರೆ  ಈ ಬಗ್ಗೆ ಚರ್ಚೆ ನಡೆಸಿ ಇಲಾಖೆಯು ಮತ್ತೊಂದು ಹೊಸ ಸುತ್ತೋಲೆಯನ್ನು ಹೊರಡಿಸಿದೆ ನೀವು ಕೂಡ ರೇಷನ್ ಕಾರ್ಡ್ ತಿದ್ದುಪಡಿ ಮಾಡಿಸಬೇಕಾದಲ್ಲಿ ಮಾಹಿತಿಯನ್ನು ಸಂಪೂರ್ಣವಾಗಿ ತಿಳಿಯಲು ಲೇಖನವನ್ನು ಪೂರ್ತಿಯಾಗಿ ಓದಿ.

 ರೇಷನ್ ಕಾರ್ಡ್ ತಿದ್ದುಪಡಿಗೆ ಮತ್ತೆ  ಅವಧಿ ವಿಸ್ತರಣೆ.?

ಸರ್ಕಾರದಿಂದ ರೇಷನ್ ಕಾರ್ಡ್ ತಿದ್ದುಪಡಿಗೆ ಹೇಗಾಗಲೇ ಒಂಬತ್ತು ದಿನಗಳ ಕಾಲಾವಕಾಶವನ್ನು ನೀಡಿತ್ತು ಅಲ್ಲದೆ ಯಾವುದೇ ಸಮಸ್ಯೆಗಳು ಎದುರಾಗಬಾರದು ಎಂಬ ದೃಷ್ಟಿಯಿಂದ ಮೂರು ಹಂತಗಳ ರೇಷನ್ ಕಾರ್ಡ್ ತಿದ್ದುಪಡಿಗೆ ಅವಕಾಶವನ್ನು ನೀಡಲಾಗಿತ್ತು ಆದರೆ ಇದರಲ್ಲೂ ಕೆಲವು ಕಡೆ ಸರ್ವರ್ ಸಮಸ್ಯೆ ಎದುರಾಗಿದೆ ಈ ಕಾರಣ ಆಹಾರ  ನಾಗರೀಕ ಸರಬರಾಜು ಇಲಾಖೆ ರೇಷನ್ ಕಾರ್ಡ್ ತಿದ್ದುಪಡಿಗೆ ಮತ್ತೊಂದು ಅವಕಾಶ ನೀಡಲಿದ್ದು ಹೊಸ ಸುತ್ತೋಲೆ ಒಂದನ್ನು ಹೊರಡಿಸಿದೆ.

 ಹೌದು ರೇಷನ್ ಕಾರ್ಡ್  ತಿದ್ದುಪಡಿಗೆ ದಿನಾಂಕವನ್ನು ವಿಸ್ತರಣೆ ಮಾಡಿದ್ದು ಇದು ಎಲ್ಲಾ ಜಿಲ್ಲೆಗಳಿಗೂ ಅನ್ವಯಿಸುವುದಿಲ್ಲ ಕೇವಲ ಯಾವ ಯಾವ ಜಿಲ್ಲೆಗಳಲ್ಲಿ ತಿದ್ದುಪಡಿ ಸಂದರ್ಭದಲ್ಲಿ  ಸರ್ವರ್ ಸಮಸ್ಯೆ ಹೆಚ್ಚಾಗಿ ಕಂಡುಬಂದಿದೆ ಆಯಾ ಜಿಲ್ಲೆಗಳಲ್ಲಿ ಅವಕಾಶ ನೀಡಲಾಗುತ್ತಿದೆ.

ಇದೆ ರೀತಿಯ ಹೊಸ ಮಾಹಿತಿ ಗಳಿಗಾಗಿ ನಮ್ಮ WhatsApp ಗ್ರೂಪ್ ಗೆ ಜಾಯಿನ್ ಆಗಿ. ಇಲ್ಲಿ ಕ್ಲಿಕ್ ಮಾಡಿ ಜಾಯಿನ್ ಆಗಿ

ಇದನ್ನು ಓದಿ:  ಕಳೆದ ತಿಂಗಳ ಅನ್ನಭಾಗ್ಯ ಯೋಜನೆ ಹಣ ನಿಮ್ಮ ಬ್ಯಾಂಕ್ ಖಾತೆಗೆ ಜಮಾ  ಆಗಿದೆಯಾ.! ಒಂದೇ ಕ್ಲಿಕ್  ನಲ್ಲಿ ಚೆಕ್ ಮಾಡಿ.?

ರೇಷನ್ ಕಾರ್ಡ್ ತಿದ್ದುಪಡಿಗೆ ಯಾವ್ಯಾವ ಜಿಲ್ಲೆಗೆ ಯಾವಾಗ ಅವಕಾಶ.?

ಕೆಲವು ಜಿಲ್ಲೆಗಳಲ್ಲಿ ಅತಿ ಹೆಚ್ಚು ಸರ್ವ ಸಮಸ್ಯೆ ಉಂಟಾದ ಕಾರಣ ಎಪಿಎಲ್ ಕಾರ್ಡ್ ಮತ್ತು ಬಿಪಿಎಲ್ ಕಾರ್ಡ್ ತಿದ್ದುಪಡಿಗೆ ಹೆಚ್ಚಿನ ಸಮಯ ನೀಡುವಂತೆ ಮನವಿ ಬಂದ ಹಿನ್ನೆಲೆ ಸಮಯವನ್ನು ವಿಸ್ತರಣೆ ಮಾಡಲು ಆಹಾರ ಇಲಾಖೆ ಸೂಚನೆ ನೀಡಿದೆ.  ಇನ್ನು ತಿದ್ದುಪಡಿಗೆ ಕೇವಲ ಎರಡು ಮತ್ತು ಮೂರನೇ   ಹಂತದಲ್ಲಿ ಅವಕಾಶ ನೀಡಿದ್ದ ಜಿಲ್ಲೆಗಳಿಗೆ ಮಾತ್ರ ಅವಕಾಶ.

ಎರಡನೇ ಮತ್ತು ಮೂರನೇ ಹಂತದ ರೇಷನ್ ಕಾರ್ಡ್ ತಿದ್ದುಪಡಿಯ ಜಿಲ್ಲೆಗಳಿಗೆ ಸರ್ವರ್ ಸಮಸ್ಯೆ ಹೆಚ್ಚಾಗಿ ಆಗಿರುವುದರಿಂದ ಆಹಾರ  ಇಲಾಖೆಯಿಂದ ಮತ್ತೊಮ್ಮೆ ಬೆಂಗಳೂರು ಒನ್ ಕರ್ನಾಟಕ ಒನ್ ಗ್ರಾಮ ಒನ್ ಕೇಂದ್ರದಲ್ಲಿ ತಿದ್ದುಪಡಿಗೆ ಅವಕಾಶ ನೀಡಲಾಗುತ್ತಿದೆ.

ಇದೆ ರೀತಿಯ ಹೊಸ ಮಾಹಿತಿ ಗಳಿಗಾಗಿ ನಮ್ಮ WhatsApp ಗ್ರೂಪ್ ಗೆ ಜಾಯಿನ್ ಆಗಿ. ಇಲ್ಲಿ ಕ್ಲಿಕ್ ಮಾಡಿ ಜಾಯಿನ್ ಆಗಿ

ಯಾವ ಜಿಲ್ಲೆಗೆ ಯಾವ ದಿನಾಂಕ ತಿದ್ದುಪಡಿಗೆ ಅವಕಾಶ.?

  •  ಇದೇ ಅಕ್ಟೋಬರ್ 16 17 ಮತ್ತು 18ನೇ ದಿನಾಂಕ ಬಾಗಲಕೋಟೆ,  ಬೆಳಗಾವಿ,ಚಾಮರಾಜಪೇಟೆ, , ಚಿಕ್ಕಮಂಗಳೂರು,  ದಕ್ಷಿಣ ಕನ್ನಡ,  ಧಾರವಾಡ,  ಗದಗ,  ಹಾಸನ್,  ಹಾವೇರಿ, , ಕೊಡಗು,  ಮಂಡ್ಯ,  ಮೈಸೂರ್,  ಉಡುಪಿ,  ಉತ್ತರಕನ್ನಡ ಮತ್ತು ವಿಜಯಪುರ ಜಿಲ್ಲೆಗಳಿಗೆ ಬೆಳಗ್ಗೆ 10 ಗಂಟೆಯಿಂದ ಸಂಜೆ 7 ಗಂಟೆವರೆಗೆ ತಿದ್ದುಪಡಿ ಮಾಡಿಸಿಕೊಳ್ಳಲು ಅವಕಾಶ ನೀಡಿದೆ.
  • ಅಕ್ಟೋಬರ್ 19 20 21ನೇ ದಿನಾಂಕ ದಾವಣಗೆರೆ,  ಬಳ್ಳಾರಿ, , ಬೀದರ್,  ಚಿಕ್ಕಬಳ್ಳಾಪುರ,  ಚಿತ್ರದುರ್ಗ,  ಕಲಬುರಗಿ,  ಕೋಲಾರ,  ಕೊಪ್ಪಳ,  ರಾಯಚೂರು,  ರಾಮನಗರ,  ಶಿವಮೊಗ್ಗ,  ತುಮಕೂರು,  ಯಾದಗಿರಿ,  ವಿಜಯನಗರ ಜಿಲ್ಲೆಗಳಲ್ಲಿ ಬೆಳೆಗೆ 10 ಗಂಟೆಯಿಂದ ಸಂಜೆ 7 ಗಂಟೆವರೆಗೆ ತಿದ್ದುಪಡಿಗೆ ಅವಕಾಶ ನೀಡಲಾಗಿದೆ. 

 ಇನ್ನು ಇವರಿಗೆ ಈಗಾಗಲೇ 70000 ಕ್ಕಿಂತ ಹೆಚ್ಚು ಅರ್ಜಿಗಳು ಸಲ್ಲಿಕೆಯಾಗಿದೆ ಎಂದು ಮಾಹಿತಿ ನೀಡಿದ್ದು ಈಗಾಗಲೇ ಅರ್ಜಿಗಳನ್ನು ಪರಿಶೀಲನೆ ಮಾಡುತ್ತಿದೆ ನೀಡಿದ ದಾಖಲೆಗಳು ಸರಿ ಇದ್ದರೆ ಮಾತ್ರ ಕಾರ್ಡ್ ವಿತರಣೆ ಮಾಡಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ,  ಇನ್ನು ಅರ್ಜಿ ಸಲ್ಲಿಸುವವರಿಗೆ ಈ ಮೇಲೆ ತಿಳಿಸಿದ ದಿನಾಂಕಗಳು ಕೊನೆಯ ದಿನಾಂಕಗಳಾಗಿದ್ದು ಅರ್ಜಿ ಸಲ್ಲಿಸುವವರು ಮತ್ತು ತಿದ್ದುಪಡಿ  ಮಾಡಿಸಿಕೊಳ್ಳುವವರಿಗೆ ಇದೆ ಕೊನೆಯ ಅವಕಾಶ ಧನ್ಯವಾದಗಳು. 

ಇದೆ ರೀತಿಯ ಹೊಸ ಮಾಹಿತಿ ಗಳಿಗಾಗಿ ನಮ್ಮ WhatsApp ಗ್ರೂಪ್ ಗೆ ಜಾಯಿನ್ ಆಗಿ. ಇಲ್ಲಿ ಕ್ಲಿಕ್ ಮಾಡಿ ಜಾಯಿನ್ ಆಗಿ

ಇದನ್ನು ಓದಿ:  ಕಳೆದ ತಿಂಗಳ ಅನ್ನಭಾಗ್ಯ ಯೋಜನೆ ಹಣ ನಿಮ್ಮ ಬ್ಯಾಂಕ್ ಖಾತೆಗೆ ಜಮಾ  ಆಗಿದೆಯಾ.! ಒಂದೇ ಕ್ಲಿಕ್  ನಲ್ಲಿ ಚೆಕ್ ಮಾಡಿ.?

Leave a Comment