ಎಲ್ಲರಿಗೂ ನಮಸ್ಕಾರ. ಕರ್ನಾಟಕ ಪರೀಕ್ಷಾ ಮಂಡಳಿಯು ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ಈಗಾಗಲೇ ವಾರ್ಷಿಕ ಪರೀಕ್ಷೆಯ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದ್ದು ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿ ನೀಡಿದೆ ಆದರೆ ಈ ಬಾರಿ ಪರೀಕ್ಷಾ ಪದ್ಧತಿಯನ್ನು ಬದಲಾವಣೆ ಮಾಡಿರುವ ಕಾರಣ ಕೆಲವು ಮೂಲಗಳಿಂದ ಇದಕ್ಕೆ ವಿರೋಧ ವ್ಯಕ್ತಪಡಿಸಲಾಗಿದೆ, ಹೌದು ರಾಜ್ಯ ಪರೀಕ್ಷಾ ಮಂಡಳಿ ಎಸ್ ಎಸ್ ಎಲ್ ಸಿ ಮತ್ತು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ 2023 24 ನೇ ಸಾಲಿನ ವಾರ್ಷಿಕ ಪರೀಕ್ಷೆಯ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದ್ದು ಈ ಬಾರಿ ಹೊಸ ಪರೀಕ್ಷಾ ಪದ್ಧತಿಯನ್ನು ಕೂಡ ನೀಡಿದೆ ಇದರಿಂದ ಶಾಲೆಗಳ ಶಿಕ್ಷಕರು ಪ್ರಾಂಶುಪಾಲರು ಉಪನ್ಯಾಸಕರು ಈ ಹೊಸ ಪದ್ದತಿಗೆ ವಿರೋಧ ವ್ಯಕ್ತಪಡಿಸಿದ್ದು ಪ್ರತಿಭಟನೆಗೆ ಮುಂದಾಗಿದ್ದಾರೆ, ನೀವು ಕೂಡ ಎಸ್ ಎಸ್ ಎಲ್ ಸಿ ಅಥವಾ ಪಿಯುಸಿ ವಿದ್ಯಾರ್ಥಿಗಳಾಗಿದ್ದು ಹೊಸ ಪರೀಕ್ಷಾ ಪದ್ಧತಿ ನಿಮಗೆ ಇಷ್ಟ ಆಗಿದ್ದರೆ ಮತ್ತು ಇಲ್ಲದಿದ್ದರೆ ಇದರ ಬಗ್ಗೆ ತಿಳಿಯಲು ಲೇಖನವನ್ನು ಪೂರ್ತಿಯಾಗಿ ಓದಿ. ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
SSLC ಹೊಸ ಪರೀಕ್ಷಾ ಪದ್ಧತಿಗೆ ವಿರೋಧ.!
ಕರ್ನಾಟಕ ಪರೀಕ್ಷೆ ಮಂಡಳಿಯು 2023 24 ನೇ ಸಾಲಿನ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ಮತ್ತು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಪರೀಕ್ಷಾ ವೇಳಾಪಟ್ಟಿಯನ್ನು ಪ್ರಕಟಿಸಿದೆ ಹಾಗೂ ಈ ಬಾರಿ ವಿದ್ಯಾರ್ಥಿಗಳಿಗೆ ಹೊಸ ಪರೀಕ್ಷಾ ಪದ್ಧತಿಯನ್ನು ಪರಿಚಯಿಸಿದ್ದು ಈ ಹೊಸ ಪರೀಕ್ಷಾ ಪದ್ಧತಿಯ ಪ್ರಕಾರ 3 ಬಾರಿ ವಾರ್ಷಿಕ ಪರೀಕ್ಷೆಯನ್ನು ಬರೆಯಲು ಅವಕಾಶ ನೀಡುವುದಾಗಿ ಮತ್ತು ಆ ಮೂರು ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕವನ್ನು ಗಳಿಸಿದ ಪರೀಕ್ಷೆಯ ಅಂಕವನ್ನು ಪರಿಗಣಿಸಲಾಗುತ್ತದೆ. ಇನ್ನು ಮೊದಲ ಬಾರಿ ಪಾಸಾದ ಅಭ್ಯರ್ಥಿಯು ಕೂಡ ಉಳಿದ ಇನ್ನೆರಡು ಪರೀಕ್ಷೆಗಳನ್ನು ಬರೆಯಬಹುದು ಇದರಲ್ಲಿ ಅತಿ ಹೆಚ್ಚು ಅಂಕವನ್ನು ಗಳಿಸಿದರೆ ಅದನ್ನು ಪರಿಗಣಿಸಲಾಗುತ್ತದೆ ಹಾಗೂ ಫೇಲಾದ ವಿದ್ಯಾರ್ಥಿಗೂ ಕೂಡ ಮತ್ತೆರಡು ಅವಕಾಶವನ್ನು ನೀಡಲಾಗುತ್ತದೆ ಅದು ಕೂಡ ಯಾವುದೇ ಪರೀಕ್ಷೆ ಶುಲ್ಕ ಇಲ್ಲದೆ ಎಂದು ಹೊಸ ಪರೀಕ್ಷೆ ಪದ್ಧತಿಯನ್ನು ಪರೀಕ್ಷಾ ಮಂಡಳಿಯು ಪರಿಚಯಿಸಿದೆ ಹಾಗಾಗಿ ಈ ಹೊಸ ನಿಯಮಕ್ಕೆ ಬೋಧಕ್ಕೆ ತರ ನೌಕರರ ಸಂಘಟನೆಗಳು ವಿರೋಧ ವ್ಯಕ್ತಪಡಿಸಿದ್ದಾರೆ. ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ವಾರ್ಷಿಕ 3 ಪರೀಕ್ಷೆ ವಿರುದ್ಧ ಪ್ರತಿಭಟನೆಗೆ ನಿರ್ಧಾರ.?
ಈಗಾಗಲೇ ತಿಳಿಸಿದ ಹಾಗೆ 2023 24ನೇ ಸಾಲಿನ ವಾರ್ಷಿಕ ಪರೀಕ್ಷೆಯಲ್ಲಿ ವಿದ್ಯಾರ್ಥಿಗೆ ಒಂದು ಬಾರಿ ಪರೀಕ್ಷಾ ಶುಲ್ಕವನ್ನು ಪಡೆದು ಅದರಲ್ಲಿ ಮೂರು ಬಾರಿ ಪರೀಕ್ಷೆ ಬರೆಯಲು ಅವಕಾಶವನ್ನು ನೀಡುವುದಾಗಿ ಹಾಗೂ ಮೂರು ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕವನ್ನು ಗಳಿಸಿದ ಅಂಕವನ್ನೇ ಪರಿಗಣಿಸುವುದಾಗಿ ತಿಳಿಸಿರುವ ಪರೀಕ್ಷಾ ಪದ್ಧತಿಯ ವಿರುದ್ಧ ಬೋಧಕ್ಕೆ ತರ ನೌಕರರ ಸಂಘಟನೆಗಳು ವಿರೋಧ ವ್ಯಕ್ತಪಡಿಸಿದ್ದಾರೆ ಹಾಗೂ ಈ ಹಿಂದೆ ಇದ್ದ ಎರಡು ಪರೀಕ್ಷೆ ಬದಲು ಈ ಬಾರಿ ಮೂರು ಪರೀಕ್ಷೆ ನಡೆಸಲು ಸರ್ಕಾರ ಅನುಮತಿ ನೀಡಿದ್ದು ಇದರಿಂದ ಶಿಕ್ಷಕರಿಗೆ ಪರೀಕ್ಷೆಯ ಉತ್ತರ ಪತ್ರಿಕೆಗಳನ್ನು ಮೌಲ್ಯಮಾಪನ ಮಾಡಲು ಸಮಯ ಸಿಗದಂತೆ ಆಗುತ್ತದೆ ಹಾಗೂ ಇದರಿಂದ ಸಮಸ್ಯೆ ಹೆಚ್ಚು ಉಂಟಾಗಲಿದೆ ಎಂದು ವಿರೋಧಿಸಿದ್ದಾರೆ ಹಾಗೂ ಎರಡು ಬಾರಿ ಪರೀಕ್ಷೆ ನಡೆಸಲು ಸಾಕಷ್ಟು ಸಮಯ ತೆಗೆದುಕೊಳ್ಳುತ್ತಿದ್ದು ಇದೀಗ ಮೂರು ಬಾರಿ ಪರೀಕ್ಷೆ ನಡೆಸುವುದು ಎಂದರೆ ಸುಲಭವಲ್ಲ ಎಂದು ಬೋಧಕೇತರ ನೌಕರರ ಸಂಘಟನೆಗಳು, ಚರ್ಚೆ ನಡೆಸಿ ಸರ್ಕಾರಕ್ಕೆ ಈ ಹೊಸ ಪರೀಕ್ಷಾ ಪದ್ಧತಿಯನ್ನು ರದ್ದು ಪಡಿಸಲು ಮನವಿ ಮಾಡಿದೆ. ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಹೌದು ಸರ್ಕಾರದಿಂದ ಈ ಬಗ್ಗೆ ಯಾವುದೇ ಉತ್ತರ ಸಿಗದ ಕಾರಣ ನವೆಂಬರ್ 23 ರಿಂದ ಡಿಸೆಂಬರ್ ಒಂದನೇ ದಿನಾಂಕದವರೆಗೆ ಬೋಧಕ್ಕೆ ತರ ನೌಕರರ ಸಂಘಟನೆಗಳು ಪ್ರತಿಭಟನೆಗೆ ಸಿದ್ದರಾಗಿದ್ದು ಬೇಡಿಕೆ ಈಡೇರಿಕೆಗೆ ಒತ್ತಾಯಿಸಿದೆ ಹಾಗೂ ಆಯಾ ಜಿಲ್ಲೆ ಹಂತದಲ್ಲಿ ಕಪ್ಪುಪಟ್ಟಿ ಧರಿಸಿ ಮೆರವಣಿಗೆ ನಡೆಸಲಾಗುವುದು ದತ್ತರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲು ಡಿಸೆಂಬರ್ ಒಂದರಂದು ಬೆಂಗಳೂರಿನ ಸ್ವತಂತ್ರ ಉದ್ಯಾನದಲ್ಲಿ ಬೃಹತ್ ಪ್ರತಿಭಟದ ಸಭೆ ನಡೆಸಲು ನಿರ್ಧರಿಸಲಾಗಿದೆ ಎಂದು ಮಾಹಿತಿ ಹೊರಬಂದಿದೆ. ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ