ನವೋದಯ ಪರೀಕ್ಷೆ ಡೇಟ್ ಫಿಕ್ಸ್.! ನವೋದಯ ವಿದ್ಯಾಲಯ ಸಮಿತಿಯಿಂದ ಪರೀಕ್ಷೆ ಪ್ರವೇಶ ಪತ್ರ ( hall ticket ) ಬಿಡುಗಡೆ.?

 ಎಲ್ಲರಿಗೂ ನಮಸ್ಕಾರ…

ನವೋದಯ ವಿದ್ಯಾಲಯ ಸಮಿತಿ: ಸಾಮಾನ್ಯವಾಗಿ ಪ್ರತಿಯೊಬ್ಬರು ಕೂಡ ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಬೇಕು ಎಂದುಕೊಂಡಿರುತ್ತಾರೆ.  ಹಾಗೆ ಉತ್ತಮ ಶಿಕ್ಷಣ ಕೊಡಿಸಲು ಖಾಸಗಿ ಶಾಲೆಗಳ ಕಡೆಗೆ ಹೋಗಲು ಸಾಧ್ಯವಾಗದ ಕಾರಣ ಹೆಚ್ಚಾಗಿ ನವೋದಯ ವಿದ್ಯಾಲಯದಲ್ಲಿ ಪರೀಕ್ಷೆ ಬರೆಸಿ ಇದರಲ್ಲಿ ವಿದ್ಯಾಭ್ಯಾಸ ಕೊಡಿಸಬೇಕು ಎಂದು ಪೋಷಕರು ಯೋಚಿಸುತ್ತಿರುತ್ತಾರೆ.  ಸದ್ಯ ಇದೀಗ 2023 ನೇ ಸಾಲಿನ ನವೋದಯ ಪರೀಕ್ಷೆಗೆ ವಿದ್ಯಾರ್ಥಿಗಳಿಂದ ಅರ್ಜಿಗಳನ್ನು ಸ್ವೀಕರಿಸಿದ್ದು ಇದೀಗ ಅರ್ಜಿ ಸಲ್ಲಿಸಿರುವವರಿಗೆ ಪ್ರವೇಶ ಪತ್ರವನ್ನು ಮತ್ತು ನವೋದಯ ಪರೀಕ್ಷೆಯ ದಿನಾಂಕವನ್ನು ಸಮಿತಿಯಿಂದ ತಿಳಿಸಲಾಗಿದೆ ನೀವು ಕೂಡ ನವೋದಯ ಪರೀಕ್ಷೆಗೆ  ನಿಮ್ಮ ಮಕ್ಕಳ ಹೆಸರನ್ನು ಸೇರಿಸಿದ್ದಲ್ಲಿ ಲೇಖನವನ್ನು ಪೂರ್ತಿಯಾಗಿ ಓದಿ.

WhatsApp Group Join Now
Telegram Group Join Now

ನವೋದಯ ವಿದ್ಯಾಲಯ ಸಮಿತಿಯಿಂದ ಪರೀಕ್ಷೆ ಪ್ರವೇಶ ಪತ್ರ ( hall ticket ) ಬಿಡುಗಡೆ.?

ನವೋದಯ ವಿದ್ಯಾಲಯ ಸಮಿತಿಯಿಂದ ಇದೀಗ ಅರ್ಜಿ ಸಲ್ಲಿಸಿರುವ 5ನೇ ತರಗತಿ ನಂತರದ ಮೊದಲನೇ ಹಂತದ ವಿದ್ಯಾರ್ಥಿಗಳಿಗೆ ಪರೀಕ್ಷೆಯನ್ನು ನೀಡುತ್ತಿದ್ದು ಈಗಾಗಲೇ ಅರ್ಜಿಗಳನ್ನು ಸ್ವೀಕರಿಸಿದ ಅರ್ಜಿ ಸಲ್ಲಿಸಿರುವ ವಿದ್ಯಾರ್ಥಿಗಳಿಗೆ ಪರೀಕ್ಷೆ ನೀಡಲು ನವೋದಯ ವಿದ್ಯಾಲಯ ಮುಂದಾಗಿದ್ದು ಇದೀಗ ದಿನಾಂಕವನ್ನು ನಿಗದಿ ಮಾಡಿದೆ ಆದ್ದರಿಂದ ಅರ್ಜಿ ಸಲ್ಲಿಸಿರುವ ವಿದ್ಯಾರ್ಥಿಗಳಿಗೆ ಪ್ರವೇಶ ಪತ್ರ ಪಡೆದುಕೊಳ್ಳಲು ಸೂಚನೆಯನ್ನು ನೀಡಿದ್ದು ಅರ್ಜಿ ಸಲ್ಲಿಸಿರುವ ವಿದ್ಯಾರ್ಥಿಗಳು ಅಥವಾ ಪೋಷಕರು ಆನ್ಲೈನ್ ನಲ್ಲಿ ನವೋದಯ ಪರೀಕ್ಷೆಯ ಪ್ರವೇಶ ಪತ್ರವನ್ನು ಪಡೆದುಕೊಳ್ಳಬೇಕಾಗಿದೆ.

ಇದೆ ರೀತಿಯ ಹೊಸ ಮಾಹಿತಿ ಗಳಿಗಾಗಿ ನಮ್ಮ WhatsApp ಗ್ರೂಪ್ ಗೆ ಜಾಯಿನ್ ಆಗಿ. ಇಲ್ಲಿ ಕ್ಲಿಕ್ ಮಾಡಿ ಜಾಯಿನ್ ಆಗಿ

ನವೋದಯ ಪರೀಕ್ಷೆ ಪ್ರವೇಶ ಪತ್ರವನ್ನು ಆನ್ಲೈನಲ್ಲಿ ಪಡೆಯುವುದು ಹೇಗೆ.?

ನವೋದಯ ಪರೀಕ್ಷೆಗೆ ಅರ್ಜಿ ಸಲ್ಲಿಸಿರುವವರಿಗೆ ಪ್ರವೇಶ ಪತ್ರವನ್ನು ಆನ್ಲೈನ್ ನಲ್ಲಿ ಪಡೆದುಕೊಳ್ಳಲು ವಿದ್ಯಾಲಯ ಸಮಿತಿಯಿಂದ ಸೂಚನೆ ನೀಡಿದ್ದು ಪ್ರವೇಶ ಪತ್ರವನ್ನು ಆನ್ಲೈನ್ ನಲ್ಲಿ ಪಡೆಯಲು ಮೊದಲು.

  • ನವೋದಯ ವಿದ್ಯಾಲಯ ಸಮಿತಿಯ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಬೇಕು ಅಂದರೆ https://novodaya.gov.in ಗೆ ಭೇಟಿ ನೀಡಿ
  •  ನಂತರ ಮುಖಪುಟದಲ್ಲಿ ಗೋಚರಿಸುವ JNVST ಅಡ್ಮಿಟ್ ಕಾರ್ಡ್ ಲಿಂಕ್ ಅನ್ನು ಕ್ಲಿಕ್ ಮಾಡಿ
  •  ಈಗ ನಿಮ್ಮ ಮುಂದೆ ಇರುವ VI JNVST-2024 ಅಂತ ಒಂದು ಲಿಂಕನ್ನು ಕ್ಲಿಕ್ ಮಾಡಿ
  •  ಈಗ ಹೊಸ ಲಾಗಿನ್ ಪೇಜ್  ತೆರೆದುಕೊಳ್ಳುತ್ತದೆ ಇದರಲ್ಲಿ ನಿಮ್ಮ ಅಂದರೆ ವಿದ್ಯಾರ್ಥಿಯ ನೋಂದಣಿ ಸಂಖ್ಯೆ ಅಂದರೆ ಅರ್ಜಿ ಸಲ್ಲಿಸಿದಾಗ ನೀಡಿರುವ ಅರ್ಜಿ ನೋಂದಣಿ ಸಂಖ್ಯೆ ಮತ್ತು ವಿದ್ಯಾರ್ಥಿಯ ಹುಟ್ಟಿದ ದಿನಾಂಕವನ್ನು ನಮೂದಿಸಿ ಮುಂದುವರೆದರೆ ನಿಮಗೆ ವಿದ್ಯಾರ್ಥಿಯ ಪರೀಕ್ಷೆ ಪ್ರವೇಶ ಪತ್ರ ಓಪನ್ ಆಗುತ್ತದೆ.
  •  ನಂತರ ಅದನ್ನು ಡೌನ್ಲೋಡ್ ಮಾಡಿ ಪ್ರಿಂಟ್ ಔಟ್ ತೆಗೆದುಕೊಳ್ಳಬೇಕು

 

ನವೋದಯ  ಪರೀಕ್ಷೆ ನಡೆಯುವ ಡೇಟ್ ಯಾವಾಗ.?

ಈಗಾಗಲೇ ನವೋದಯ ಪರೀಕ್ಷೆಗೆ ಅರ್ಜಿ ಸಲ್ಲಿಸಿರುವ ವಿದ್ಯಾರ್ಥಿಗಳಿಗೆ ಪ್ರವೇಶ ಪತ್ರವನ್ನು ಬಿಡುಗಡೆ ಮಾಡಿದ್ದು ಇನ್ನು ವಿದ್ಯಾರ್ಥಿಗಳಿಗೆ ಪರೀಕ್ಷೆಗೆ ಸಿದ್ಧರಾಗುವಂತೆ ಸೂಚನೆ ಕೂಡ ನೀಡಲಾಗಿದೆ ಇದೆ ನವೆಂಬರ್ 4ನೇ ದಿನಾಂಕ ನವೋದಯ ಪರೀಕ್ಷೆ ನಡೆಯಲಿದೆ. ಅಲ್ಲದೆ ಈಗಾಗಲೇ ಪಡೆದುಕೊಂಡಿರುವ ಪ್ರವೇಶ ಪರೀಕ್ಷೆಯನ್ನು  ಒಂದು ಬಾರಿ ವಿದ್ಯಾರ್ಥಿ ಅಥವಾ ಪೋಷಕರು ಆ ಪ್ರವೇಶ ಪತ್ರವನ್ನು ಪರಿಶೀಲಿಸಲು ಸಲಹೆ ನೀಡಿದೆ ಈ ಮಾರ್ಗಸೂಚಿಗಳ ಆಧಾರದ ಮೇಲೆ ಮಾತ್ರ ಪರೀಕ್ಷೆಯಲ್ಲಿ ಕಾಣಿಸಿಕೊಳ್ಳಬೇಕಾಗುತ್ತದೆ ಪ್ರವೇಶ ಪರೀಕ್ಷೆಯನ್ನು ನವೆಂಬರ್ ನಾಲ್ಕನೇ ದಿನಾಂಕದಂದು ನಡೆಸಲಾಗುವುದು ಬೆಳಗ್ಗೆ 11:30 ರಿಂದ ಮಧ್ಯಾಹ್ನ 1:30ರ ವರೆಗೆ ಪರೀಕ್ಷೆಯನ್ನು ನಡೆಸಲಾಗುತ್ತದೆ ಎಂದು ತಿಳಿಸಲಾಗಿದೆ

ನವೋದಯ ಪರೀಕ್ಷೆಗೆ ಅರ್ಜಿ ಸಲ್ಲಿಸಿರುವ ವಿದ್ಯಾರ್ಥಿಯ ಪೋಷಕರು ಸೂಚನೆಗಳನ್ನು ಪಾಲಿಸಲು ತಿಳಿಸಲಾಗಿದೆ ಮತ್ತು ವಿದ್ಯಾರ್ಥಿಗಳಿಗೆ ಪರೀಕ್ಷೆಗೆ ಸಿದ್ಧರಾಗಲು ನವೋದಯ ವಿದ್ಯಾಲಯ ಸಮಿತಿ ತಿಳಿಸಿದೆ ಧನ್ಯವಾದಗಳು …

ಇದೆ ರೀತಿಯ ಹೊಸ ಮಾಹಿತಿ ಗಳಿಗಾಗಿ ನಮ್ಮ WhatsApp ಗ್ರೂಪ್ ಗೆ ಜಾಯಿನ್ ಆಗಿ. ಇಲ್ಲಿ ಕ್ಲಿಕ್ ಮಾಡಿ ಜಾಯಿನ್ ಆಗಿ

Leave a Comment