ಎಲ್ಲರಿಗೂ ನಮಸ್ಕಾರ..
ಬೆಂಗಳೂರು: ಸ್ಯಾಂಡಲ್ ವುಡ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ವಿರುದ್ಧ ಇದೀಗ ಮತ್ತೊಂದು FIR ದಾಖಲಾಗಿದೆ. ಹೌದು ಈಗಷ್ಟೇ ಕೆಲವು ದಿನಗಳ ಹಿಂದೆ ನಟ ದರ್ಶನ್ ಅವರ ಮನೆಯ ಮೇಲೆ ಅರಣ್ಯ ಅಧಿಕಾರಿಗಳು ದಾಳಿ ನಡೆಸಿ ಅವರು ಹಾಕಿಕೊಳ್ಳುತ್ತಿದ್ದಂತಹ ಹುಲಿ ಉಗುರಿನ ಪೆಂಡೆಂಟ್ ಗಳನ್ನು ವಶಕ್ಕೆ ಪಡೆದಿದ್ದರು ಹಾಗೂ ದರ್ಶನ್ ಅವರನ್ನು ತನಿಖೆಗೆ ಬರಲು ನೋಟಿಸ್ ಕೂಡ ನೀಡಿದರು ಆದರೆ ದರ್ಶನವರು ಸಿನಿಮಾ ಶೂಟಿಂಗ್ ಕಾರಣ ಬೇರೆ ಕಡೆಗೆ ಹೋಗಿದ್ದು ಸದ್ಯಕ್ಕೆ ಈ ವಿಚಾರ ಸ್ವಲ್ಪ ಸಮಾಧಾನ ಕಂಡಿದೆ ಆದರೆ ಇದೀಗ ಮತ್ತೊಂದು ವಿಚಾರದಲ್ಲಿ ನಟ ದರ್ಶನ್ ಅವರ ಮೇಲೆ ಹೊಸ ಪ್ರಕರಣ ಒಂದು ದಾಖಲಾಗಿದೆ.ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ನಟ ದರ್ಶನ್ ವಿರುದ್ಧ ಮಹಿಳೆಯ ಮತ್ತೊಂದು FIR ದಾಖಲು.!
ನವೆಂಬರ್ 1 ಸ್ಯಾಂಡಲ್ವುಡ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ವಿರುದ್ಧ ಮಹಿಳೆಯೊಬ್ಬರು ದೂರು ದಾಖಲಿಸಿದ್ದಾರೆ. ಈಗಾಗಲೇ ತಿಳಿಸಿದ ಹಾಗೆ ನಟ ದರ್ಶನ್ ಅವರ ಮನೆಯ ಮೇಲೆ ಅರಣ್ಯ ಅಧಿಕಾರಿಗಳು ರೈಡ್ ಮಾಡಿದ್ದು ಅವರ ಕೆಲವು ಪೆಂಡೆಂಟ್ ಗಳನ್ನು ವಶಕ್ಕೆ ಪಡೆದಿರುವಂತಹ ಘಟನೆ ಈಗ ಕೆಲವು ದಿನಗಳ ಬಳಿಕವೇ ಮತ್ತೊಂದು ದೂರು ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
ಹೌದು ನಟ ದರ್ಶನ್ ಅವರ ಮನೆಯ ನಾಯಿ ಮಹಿಳೆ ಒಬ್ಬರನ್ನು ಕಚ್ಚಿದೆ ಎಂದು ಪೊಲೀಸ್ ಠಾಣೆಯಲ್ಲಿ ದೂರಲು ದಾಖಲಿಸಲಾಗಿದೆ. ಅಕ್ಟೋಬರ್ 28 ರಂದು ನಾಯಿ ದಾಳಿ ನಡೆಸಿದೆ ಗಾಯಗಳು ಕೂಡ ಆಗಿವೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಮಹಿಳೆಯಿಂದ ನಟ ದರ್ಶನ್ ಸೇರಿ ಇಬ್ಬರ ವಿರುದ್ಧ ಎಫ್ಐಆರ್ ದಾಖಲು.?
ಮಹಿಳೆಯೊಬ್ಬರು ರಾಜರಾಜೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ನಟ ದರ್ಶನ್ ಸೇರಿದಂತೆ ಇಬ್ಬರ ವಿರುದ್ಧ ದೂರನ್ನು ದಾಖಲಿಸಿದ್ದಾರೆ, ಅದೇ ರಾಜರಾಜೇಶ್ವರಿ ನಗರದ ಬಿ ಇ ಎಂ ಎಲ್ ಐದನೇ ಹಂತದ ನಿವಾಸಿ ವಕೀಲೆಯಾಗಿರುವ ಅಮಿತಾ ಜಿಂದಾಲ್ ಎನ್ನುವರು ದೂರು ನೀಡಿದ್ದಾರೆ.
ದೂರುದಾರರಾದ ಅಮಿತಾ ಜಿಂದಾಲ್ ಅವರು ಕಳೆದ ಅಕ್ಟೋಬರ್ 28ನೇ ದಿನಾಂಕದಂದು ಕಾರ್ಯಕ್ರಮ ಒಂದಕ್ಕೆ ತೆರಳುವ ವೇಳೆ ನಟ ದರ್ಶನ್ ಅವರ ಮನೆಯ ಎದುರಿನ ಕಾಲಿ ಸ್ಥಳದಲ್ಲಿದ್ದ ತಮ್ಮ ಕಾರು ನಿಲ್ಲಿಸಿ ತೆರಳಿದ್ದರು ಕಾರ್ಯಕ್ರಮ ಮುಗಿಸಿ ವಾಪಸ್ ಕಾರು ತೆಗೆಯಲು ಬಂದಾಗ ದರ್ಶನ್ ಅವರ ಮೂರು ನಾಯಿಗಳ ಪೈಕಿ 2 ನಾಯಿಗಳನ್ನು ಮಾತ್ರ ಕಟ್ಟಲಾಗಿತ್ತು ದಾಳಿ ನಡೆಸಿದ ಎಂದು ಅವರು ದೂರನ್ನು ದಾಖಲಿಸಿದ್ದಾರೆ ಅಲ್ಲದೆ ದರ್ಶನ್ ಮನೆಯ ಸಿಬ್ಬಂದಿಯೊಬ್ಬರು ಸ್ಥಳದಲ್ಲೇ ಇದ್ದರು ಸಿಬ್ಬಂದಿ ಈ ಸ್ಥಳದಲ್ಲಿ ಕಾರು ನಿಲ್ಲಿಸಿದ್ದಕ್ಕೆ ನಮ್ಮೊಂದಿಗೆ ವಾಗ್ವಾದಕ್ಕೆ ಇಳಿದರು ಈ ವೇಳೆ ನಾಯಿಯು ನನ್ನ ಮೇಲೆ ದಾಳಿ ನಡೆಸಿ ಕಚ್ಚಿದೆ ಎಂದು ಅವರು ವಿವರಿಸಿದ್ದಾರೆ.
ಹಾಗೆ ನಾಯಿ ಮಹಿಳೆಯ ಬಟ್ಟೆ ಹರಿದಿದ್ದು ಹೊಟ್ಟೆ ಭಾಗಕ್ಕೆ ಗಾಯವಾಗಿದೆ ನಾಯಿಗಳು ಕಚ್ಚುತ್ತವೆ ಎಂದು ಗೊತ್ತಿದ್ದರೂ ಸಹ ಸಿಬ್ಬಂದಿ ಎಚ್ಚರಿಕೆ ವಹಿಸದೆ ನಿರ್ಲಕ್ಷ ತೋರಿದ್ದರಿಂದಲೇ ಘಟನೆ ನಡೆದಿದೆ, ಆದ್ದರಿಂದ ಆ ಸಿಬ್ಬಂದಿ ಮತ್ತು ನಾಯಿ ಮಾಲೀಕರಾದ ನಟ ದರ್ಶನ್ ಅವರ ವಿರುದ್ಧ ಸೂಕ್ತ ಕ್ರಮಕ್ಕೆ ಮಹಿಳೆಯು ದೂರು ದಾಖಲಿಸಿ ದೂರಿನಲ್ಲಿ ಆಗ್ರಹಿಸಿದ್ದಾರೆ.ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ನಟ ದರ್ಶನ್ ಅವರ ವಿರುದ್ಧನು ಕೂಡ ಎಫ್ಐಆರ್ ದಾಖಲು ಮುಂದೇನು.?
ಸದ್ಯ ನಾಯಿ ಕಡಿತಕ್ಕೆ ಒಳಗಾಗಿರುವ ಮಹಿಳೆಯು ವಕೀಲರಾಗಿದ್ದು ರಾಜರಾಜೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ ಇನ್ನು ಈ ದೂರಿನಲ್ಲಿ ಸಿಬ್ಬಂದಿ ಮತ್ತು ನಾಯಿ ಮಾಲಿಕನಾದ ದರ್ಶನ್ ಅವರ ವಿರುದ್ಧ ಕೂಡ ದೂರು ದಾಖಲಾಗಿದ್ದು ಇದೀಗ ಎಫ್ಐಆರ್ ಕೂಡ ಆಗಿದೆ ಹಾಗಾಗಿ ಈ ಬಗ್ಗೆ ತನಿಖೆ ನಡೆಯಲಿದ್ದು ತನಿಕೆಯಲ್ಲಿ ನಟ ದರ್ಶನ್ ಅವರ ಸಿಬ್ಬಂದಿಯಿಂದ ತಪ್ಪಾಗಿದ್ದಲ್ಲಿ ದರ್ಶನ್ ಅವರು ಕೂಡ ಪೊಲೀಸ್ ಠಾಣೆಗೆ ಭೇಟಿ ನೀಡಿ ತನಿಕೆಯಲ್ಲಿ ಮಾಹಿತಿ ನೀಡಬೇಕಾಗುವ ಸಾಧ್ಯತೆ ಇದೆ ಇನ್ನು ಹಿಂದೂ ರಾಜ್ಯದ್ಯಂತ ಕನ್ನಡ ರಾಜ್ಯೋತ್ಸವ ನಡೆಯುತ್ತಿರುವ ಕಾರಣ ನಾಳೆ ಈ ಪ್ರಕರಣದ ವಿಚಾರವಾಗಿ ತನಿಖೆ ನಡೆಯಲಿದೆ ಧನ್ಯವಾದಗಳು..ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ