BPL ಕಾರ್ಡ್ ತಿದ್ದುಪಡಿ ಮಾಡಿಸಲು ಇದೆ ಕೊನೆಯ ಅವಕಾಶ. ರೇಷನ್ ಕಾರ್ಡ್ ತಿದ್ದುಪಡಿಯನ್ನು ನಿಮ್ಮ ಮೊಬೈಲ್ ನಲ್ಲಿ ಮಾಡಿಕೊಳ್ಳಿ. ಲಿಂಕ್ ಇಲ್ಲಿದೆ ನೋಡಿ.?

ಎಲ್ಲರಿಗೂ ನಮಸ್ಕಾರ…

 ರೇಷನ್ ಕಾರ್ಡ್ ತಿದ್ದುಪಡಿಗೆ ಮಾಡಲು ಅವಕಾಶ ನೀಡಲಾಗಿದೆ. ಈ ಒಂದು ಡೈರೆಕ್ಟ್ ಲಿಂಕ್ ನ ಮುಖಾಂತರ ನೇರವಾಗಿ ರೇಷನ್ ಕಾರ್ಡ್ ತಿದ್ದುಪಡಿ ಮಾಡಬಹುದಾಗಿದೆ.  ರೇಷನ್ ಕಾರ್ಡ್ ತಿದ್ದುಪಡಿಗೆ ಕೊನೆಯ ದಿನಾಂಕ ಯಾವುದು? ಇನ್ನು ಯಾವ ಯಾವ ಸದಸ್ಯರ ರೇಷನ್ ಕಾರ್ಡ್ ತಿದ್ದುಪಡಿ ಮಾಡಿಕೊಂಡಿಲ್ಲ!  ಆ ಸದಸ್ಯರು ಈ ಕೂಡಲೇ ರೇಷನ್ ಕಾರ್ಡ್ ತಿದ್ದುಪಡಿಯನ್ನು ಮಾಡಿಕೊಳ್ಳಬೇಕಾಗಿದೆ.  ಏಕೆಂದರೆ ಸೆಪ್ಟೆಂಬರ್ 10 ನೆ  ತಾರೀಕು ಕೊನೆಯ ದಿನಾಂಕವಾಗಿದ್ದರಿಂದ  ಈ ಕೂಡಲೇ ರೇಷನ್ ಕಾರ್ಡ್ ತಿದ್ದುಪಡಿಯನ್ನು ಮಾಡಿಕೊಳ್ಳಿ. ರೇಷನ್ ಕಾರ್ಡ್ ತಿದ್ದುಪಡಿಗೆ ಎಷ್ಟು ದಿನಗಳ ಕಾಲಾವಕಾಶ ತೆಗೆದುಕೊಳ್ಳಲಾಗುತ್ತದೆ,   ರೇಷನ್ ಕಾರ್ಡ್ ತಿದ್ದುಪಡಿಯಲ್ಲಿ ಯಾವ ಯಾವ ರೀತಿಯ ತಿದ್ದುಪಡಿಗಳನ್ನು ಮಾಡಬಹುದು ಮತ್ತು ಅದರ ಜೊತೆಗೆ ರೇಷನ್ ಕಾರ್ಡ್ ತಿದ್ದುಪಡಿಗೆ ಯಾವ ಎಲ್ಲ ದಾಖಲಾತಿಗಳು  ಬೇಕಾಗುತ್ತದೆ, ಮತ್ತು ರೇಷನ್ ಕಾರ್ಡ್ EKYC ಯನ್ನು ಹೇಗೆ ಮಾಡಬಹುದು,  ಜೊತೆಗೆ ನಿಮ್ಮ ಆಧಾರ್ ಕಾರ್ಡನ್ನು  ಲಿಂಕ್ ಕೂಡ ಮಾಡಿಸಬಹುದಾಗಿದೆ. ರೇಷನ್ ಕಾರ್ಡ್ ತಿದ್ದುಪಡಿಗೆ ಏನೆಲ್ಲ ಕ್ರಮಗಳನ್ನು ತೆಗೆದುಕೊಳ್ಳಬೇಕು, ಎನ್ನುವುದರ ಬಗ್ಗೆ ಸಂಪೂರ್ಣವಾಗಿ ಈ ಲೇಖನದಲ್ಲಿ ತಿಳಿಸಿಕೊಡಲಾಗುವುದು.  ಹಾಗಾಗಿ ಲೇಖನವನ್ನು ಪೂರ್ತಿಯಾಗಿ ಓದಿ. 

WhatsApp Group Join Now
Telegram Group Join Now

 

 ರೇಷನ್ ಕಾರ್ಡ್ ನಲ್ಲಿ  ಮಾಡುವ ತಿದ್ದುಪಡಿಗಳು

  • ಕುಟುಂಬದ ಮುಖ್ಯಸ್ಥರ ಬದಲಾವಣೆ
  •  ಹಳೆ ಸದಸ್ಯರ ಹೆಸರು ತೆಗೆದು ಹಾಕುವುದು ಮತ್ತು ಹೊಸ ಸದಸ್ಯರ ಹೆಸರು ಸೇರ್ಪಡೆ ಮಾಡಲಾಗುವುದು. 
  •  ಆಧಾರ್ ಕಾರ್ಡ್ ಲಿಂಕ್ ಮಾಡುವುದು. 
  •  ಬ್ಯಾಂಕ್ ಅಕೌಂಟ್ ಲಿಂಕ್ ಮಾಡುವುದು.
  •  ಹೆಸರನ್ನು ತಿದ್ದುಪಡಿ ಮಾಡುವುದು

 

ಕುಟುಂಬದ ಮುಖ್ಯಸ್ಥರ ಬದಲಾವಣೆ ಮತ್ತು ತಿದ್ದುಪಡಿಗೆ ಅವಕಾಶ 

ನಿಮಗೆಲ್ಲಾ ತಿಳಿದಿರುವ ಹಾಗೆ ಕುಟುಂಬದ ಮುಖ್ಯಸ್ಥರ ಬದಲಾವಣೆಯನ್ನು ಹಲವಾರು ರೇಷನ್ ಕಾರ್ಡ್ ನಲ್ಲಿ ಮಾಡಲಾಗಿದೆ.  ಏಕೆಂದರೆ ಗೃಹಲಕ್ಷ್ಮಿ ಯೋಜನೆಗೆ ಕುಟುಂಬದ ಮುಖ್ಯಸ್ಥರ ಹೆಸರು  ಮನೆಯ ಯಜಮಾನಿಯದ್ದಾಗಿರಬೇಕು.  ಅನ್ನಭಾಗ್ಯ ಯೋಜನೆ ಮತ್ತು ಗೃಹಲಕ್ಷ್ಮಿ ಯೋಜನೆ ಲಾಭವನ್ನು ಪಡೆಯಲು ರೇಷನ್ ಕಾರ್ಡ್ ನಲ್ಲಿ ಮುಖ್ಯಸ್ಥರು ಮನೆಯ ಯಜಮಾನಿಯ ಹೆಸರಿರಬೇಕಾಗುತ್ತದೆ.  ಒಂದು ವೇಳೆ ಮನೆಯ ಯಜಮಾನನ ಹೆಸರಿದ್ದರೆ,  ಅನ್ನ ಭಾಗ್ಯ ಯೋಜನೆ ಮತ್ತು ಗ್ರಹಲಕ್ಷ್ಮಿ ಯೋಜನೆಯ ಲಾಭವನ್ನು ಪಡೆಯಲಾಗುವುದಿಲ್ಲ.  ಕಳೆದ ತಿಂಗಳು ರೇಷನ್ ಕಾರ್ಡ್ ತಿದ್ದುಪಡಿಗೆ ಅವಕಾಶವನ್ನು ನೀಡಲಾಗಿತ್ತು ಆದರೆ ಈ ಸಂದರ್ಭದಲ್ಲಿ ಸರ್ವರ್ ತೊಂದರೆಯಿಂದಾಗಿ ಹಲವಾರು ಜನ ರೇಷನ್ ಕಾರ್ಡ್ ತಿದ್ದುಪಡಿ ಮಾಡುವಲ್ಲಿ ವಿಫಲರಾಗಿದ್ದರು. ಅಂತಹ ಸದಸ್ಯರು ಈಗ ರೇಷನ್ ಕಾರ್ಡ್ ತಿದ್ದುಪಡಿಯನ್ನು ಮಾಡಿಕೊಳ್ಳಬಹುದಾಗಿದೆ.  ಅದರ ಜೊತೆಗೆ ಕುಟುಂಬದ ಸದಸ್ಯರ ಹೆಸರನ್ನು ಸೇರ್ಪಡೆ ಮತ್ತು ತೆಗೆದು ಹಾಕಬಹುದು. 

 

ರೇಷನ್ ಕಾರ್ಡ್ ತಿದ್ದುಪಡಿ ಮಾಡಿಕೊಳ್ಳುವುದು ಹೇಗೆ? 

ರೇಷನ್ ಕಾರ್ಡ್ ತಿದ್ದುಪಡಿ ಮಾಡಿಕೊಳ್ಳಲು ನಿಮಗೆ ಹತ್ತಿರದ ಗ್ರಾಮ ಒನ್,ಕರ್ನಾಟಕಒನ್, ಬೆಂಗಳೂರು  ಒನ್, CSCಕೇಂದ್ರ  ಅಥವಾ ಸರ್ಕಾರ ತಿಳಿಸಿರುವ ಆನ್ಲೈನ್ ಕೇಂದ್ರಗಳಿಗೆ ಭೇಟಿ ನೀಡಿ ತಿದ್ದುಪಡಿ ಮಾಡಿಸಬಹುದು. ಸೆಪ್ಟೆಂಬರ್ 1  ರಿಂದ ಸೆಪ್ಟಂಬರ್ 10  ಒಳಗಾಗಿ ನಿಮ್ಮ ರೇಷನ್ ಕಾರ್ಡ್ ತಿದ್ದುಪಡಿಯನ್ನು ಮಾಡಿಕೊಳ್ಳಬಹುದಾಗಿದೆ. 

 

ಆನ್ಲೈನ್ ಮೂಲಕ ರೇಷನ್ ಕಾರ್ಡ್ ತಿದ್ದುಪಡಿ ಮಾಡುವ ವಿಧಾನ

Website link : https://ahara.kar.nic.in/rcamend

 ಮೇಲೆ ನೀಡಿರುವ ಲಿಂಕನ್ನು ಕ್ಲಿಕ್ ಮಾಡಿದರೆ RC AMENDMENT MODULE ಅಥವಾ ಆಹಾರ,  ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ  ಎನ್ನುವಂತಹ ಪೇಜ್ ಓಪನ್ ಆಗುತ್ತದೆ. 

ನಿಮ್ಮ ಊರು ಯಾವ ಜಿಲ್ಲೆಯಲ್ಲಿ ಬರುತ್ತದೆ ಆ ಲಿಂಕನ್ನು ಕ್ಲಿಕ್ ಮಾಡಬೇಕಾಗುತ್ತದೆ. ಈ ವೆಬ್ ಸೈಟ್ ಗೆ  ನಿರ್ದಿಷ್ಟ ಸಮಯವನ್ನು ನಿಗದಿಪಡಿಸಲಾಗಿರುತ್ತದೆ.  ಈ ಸಂದರ್ಭದಲ್ಲಿ ನೀವು ನಿಮ್ಮ ರೇಷನ್ ಕಾರ್ಡ್ ತಿದ್ದುಪಡಿಯನ್ನು ಮಾಡಬಹುದಾಗಿದೆ. ಕೆಲವೊಮ್ಮೆ ಸರ್ವರ್ ತೊಂದರೆಗಳಿಂದ ಲಿಂಕ್ ಕ್ಲಿಕ್ ಮಾಡಿದರೆ ಓಪನ್ ಆಗುವುದಿಲ್ಲ.  ಹಾಗಾಗಿ ಪದೇಪದೇ ಲಿಂಕ್ ಅನ್ನು ಕ್ಲಿಕ್ ಮಾಡಿ. ನಿಮ್ಮ ಜಿಲ್ಲೆಗೆ ಸಂಬಂಧಪಟ್ಟ ಲಿಂಕ್ ಅನ್ನು ಕ್ಲಿಕ್ ಮಾಡಿದರೆ ಈ ರೀತಿಯಾದ ಪೇಜ್ ಓಪನ್ ಆಗುತ್ತದೆ. 

ಇಲ್ಲಿ ನೀವು ನಿಮ್ಮ ರೇಷನ್ ಕಾರ್ಡ್ ನಂಬರನ್ನು  ಹಾಕಬೇಕಾಗುತ್ತದೆ.  ನಂತರ ಪಕ್ಕದಲ್ಲಿರುವ ಮುಂದೆ(Go) ಎನ್ನುವ ಆಪ್ಷನ್ ಮೇಲೆ ಕ್ಲಿಕ್ ಮಾಡಿ. 

ನಂತರ ಈ ರೀತಿಯಾದ ಪೇಜ್ ಓಪನ್ ಆಗುತ್ತದೆ.  ಮೊದಲನೆಯದಾಗಿ ನಿಮ್ಮ ಬೆರಳಚನ್ನು(Thumb) ನೀಡುವ ಮುಖಾಂತರ ರೇಷನ್ ಕಾರ್ಡ್ ತಿದ್ದುಪಡಿಯನ್ನು ಮಾಡಬಹುದಾಗಿದೆ.

ನಿಮಗೆ ಯಾವ ಯಾವ ತಿದ್ದುಪಡಿಯನ್ನು ಮಾಡಿಕೊಳ್ಳಬೇಕು. ಅದನ್ನು ಈ ವೆಬ್ಸೈಟ್ನಲ್ಲಿ ಸುಲಭವಾಗಿ ತಿದ್ದುಪಡಿ ಮಾಡಬಹುದಾಗಿದೆ.  ಅದಲ್ಲದೆ ಈ ವೆಬ್ಸೈಟ್ಗೆ ನಿರ್ದಿಷ್ಟ ಸಮಯದಲ್ಲಿ ಲಾಗಿನ್ ಆದರೆ ಮಾತ್ರ ವೆಬ್ಸೈಟ್ ಓಪನ್ ಆಗುತ್ತದೆ.  ಈ ಸಂದರ್ಭದಲ್ಲಿ ನೀವು ತಿದ್ದುಪಡಿಯನ್ನು ಮಾಡಿಕೊಳ್ಳಬಹುದಾಗಿದೆ.  ಇಲ್ಲಿಯವರೆಗೆ ಲೇಖನವನ್ನು ಓದಿದ್ದಕ್ಕೆ ಧನ್ಯವಾದಗಳು.  ಶುಭದಿನ. 

 

 

 

Leave a Comment