ಗೃಹಲಕ್ಷ್ಮಿ ಯೋಜನೆಯ  2000 ಹಣ ಪಡೆಯಲು  ಈ ಮೂರು ಕೆಲಸವನ್ನು ಕಡ್ಡಾಯವಾಗಿ ಮಾಡಿರಲೇಬೇಕು.!  ಇಲ್ಲದಿದ್ದರೆ ನಿಮಗೆ ಗೃಹಲಕ್ಷ್ಮಿ ಯೋಜನೆಯ ಹಣ ಸಿಗೋದಿಲ್ಲ.?

 

ಎಲ್ಲರಿಗೂ ನಮಸ್ಕಾರ…

WhatsApp Group Join Now
Telegram Group Join Now

ಗೃಹಲಕ್ಷ್ಮಿ ಯೋಜನೆಗೆ  ಯಾರೆಲ್ಲ ಮಹಿಳೆಯರು ಅರ್ಜಿ ಸಲ್ಲಿಸಿದ್ದೀರಿ ಅಂತಹ ಎಲ್ಲರು  ಸರ್ಕಾರದಿಂದ ತಿಳಿಸಲಾಗಿರುವ ಈ ಕ್ರಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಇಲ್ಲದಿದ್ದರೆ ನಿಮ್ಮ ಗೃಹಲಕ್ಷ್ಮಿ ಯೋಜನೆಯ ಹಣ ನಿಮ್ಮ ಬ್ಯಾಂಕ್ ಖಾತೆಗೆ ಜಮಾ ಆಗಲು ಸಮಸ್ಯೆ  ಆಗುತ್ತದೆ.  ಹೌದು. ಕರ್ನಾಟಕ ರಾಜ್ಯ ಸರ್ಕಾರದ ಐದು ಗ್ಯಾರಂಟಿ ಯೋಜನೆಗಲ್ಲಿ ಒಂದಾಗಿರುವ ಗೃಹಲಕ್ಷ್ಮಿ ಯೋಜನೆಗೆ ರಾಜ್ಯದ ಮುಖ್ಯಮಂತ್ರಿಗಳು ಇದೆ ಆಗಸ್ಟ್ 30ನೇ ದಿನಾಂಕ ಚಾಲನೆ ನೀಡಿದ ಈಗಾಗಲೇ ಮಹಿಳೆಯರ ಬ್ಯಾಂಕ್ ಖಾತೆಗೆ ಹಣ ಮಾಡೋದು ಸರ್ಕಾರ ಮುಂದಾಗಿದೆ ಈ ಮಧ್ಯೆ ಕೆಲವು ಮಹಿಳೆಯರಿಗೆ ಹಣ ಜಮಾ  ಆಗುವ ಅಲ್ಲಿ ಸಮಸ್ಯೆ ಆಗಿದ್ದು ಸಹಕಾರದಿಂದ ತಿಳಿಸಿರುವ ಕ್ರಮವನ್ನು ಕಡ್ಡಾಯವಾಗಿ ಪಾಲಿಸಬೇಕಾಗಿದೆ.

ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿರುವ ಮಹಿಳೆಯರಿಗೆ ಇದು  ಬಹು ಮುಖ್ಯ  ಮಾಹಿತಿ.

ಸದ್ಯ ಈಗಾಗಲೇ ರಾಜ್ಯ ಸರ್ಕಾರದಿಂದ ಈ ಒಂದು ಗೃಹಲಕ್ಷ್ಮಿ ಯೋಜನೆಗೆ ಚಾಲನೆ ನೀಡಿದ್ದು ರಾಜ್ಯದಲ್ಲಿ ಸುಮಾರು ಒಂದು ಕೋಟಿ 30 ಲಕ್ಷಕ್ಕೂ ಹೆಚ್ಚು ಮಹಿಳೆಯರು ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿದ್ದು ಇದರಲ್ಲಿ ಒಂದು ಕೋಟಿ 28 ಲಕ್ಷ ಮಹಿಳೆಯರಿಗೆ ಈ ಗೃಹಲಕ್ಷ್ಮಿ ಯೋಜನೆಯ ಜಮಾ ಮಾಡುವುದಾಗಿ ಸರ್ಕಾರದಿಂದ ಈಗಾಗಲೇ ಫಲಾನುಭವಿಗಳ ಲಿಸ್ಟ್ ಕೂಡ ಬಿಡುಗಡೆ ಮಾಡಿದೆ ಅಲ್ಲದೆ ಈ  ಲಿಸ್ಟ್ ನಲ್ಲಿ ಹೆಸರು ಇರುವ ಮಹಿಳೆಯರಿಗೆ ಮಾತ್ರ ಯೋಜನೆಯ ಎರಡು ಸಾವಿರ ಹಣ ಸಿಗಲಿದೆ ಎಂದು ಸ್ಪಷ್ಟವಾಗಿ ತಿಳಿಸಿದ್ದು ಇದೀಗ ಸರ್ಕಾರವು ಯೋಜನೆಯ ಹಣವನ್ನು ಜಮಾ ಮಾಡಲು ಮುಂದಾಗಿದೆ ಸದ್ಯ ಕೆಲವು ಮಹಿಳೆಯರಿಗೆ ಈಗಾಗಲೇ 2000 ಹಣ ಬ್ಯಾಂಕ್ ಖಾತೆಗೆ ಜಮಾ ಆಗಿದ್ದು ಕೆಲವರಿಗೆ ಈ ಮೂರು ಕೆಲಸಗಳನ್ನು ಮಾಡದೆ ಇರುವುದರಿಂದ ಹಣ ಬ್ಯಾಂಕ್ ಖಾತೆಗೆ ಜಮಾ ಹಾಗೂ ಅಲ್ಲಿ ಸಮಸ್ಯೆ ಉಂಟಾಗಿದೆ.

 ಮಹಿಳೆಯರು 2000 ಹಣ ಪಡೆಯಲು ಈ ಮೂರು ಕೆಲಸವನ್ನು ಕಡ್ಡಾಯವಾಗಿ ಮಾಡಲೇಬೇಕು.?

ಹೌದು ಈಗಾಗಲೇ ತಿಳಿಸಿದ ಹಾಗೆ ರಾಜ್ಯ ಸರ್ಕಾರದಿಂದಲೇ ಈ ಮೂರು ಕೆಲಸವನ್ನು ಕ್ರಮಬದ್ಧವಾಗಿ ಪ್ರತಿಯೊಬ್ಬರು ಮಾಡಬೇಕು ಇಲ್ಲವಾದಲ್ಲಿ ನಿಮಗೆ ಗೃಹಲಕ್ಷ್ಮಿ ಯೋಜನೆಯ ಎರಡು ಸಾವಿರ ಹಣ ಸಿಗುವುದಿಲ್ಲ ಆದ್ದರಿಂದ ಈ ಕೂಡಲೇ ಈ ಕೆಲಸಗಳನ್ನು ಮಾಡುವುದು ಸೂಕ್ತ ಎಂದು ಸೂಚನೆ ನೀಡಿದ್ದು ಈಗಾಗಲೇ ಸೂಚನೆಯನ್ನು ತಿಳಿದು ಈ ಮೂರು ಕೆಲಸಗಳನ್ನು ಮಾಡಿರುವ ಮಹಿಳೆಯರಿಗೆ ಹಣ ಬ್ಯಾಂಕ್ ಖಾತೆಗೆ ಜಮ ಆಗಿದ್ದು ಕೆಲವರಿಗೆ ಮಾತ್ರ ಗೃಹಲಕ್ಷ್ಮಿ ಯೋಜನೆಯ ಹಣ ಸಿಕ್ಕಿಲ್ಲ.

ಹಾಗಾದ್ರೆ ಈಗಲೇ ಈ ಮೂರು ಕೆಲಸವನ್ನು ಮಾಡಿ.?

  1. ಫಲಾನುಭವಿಗಳ ಲಿಸ್ಟ್ ನಲ್ಲಿ ನಿಮ್ಮ ಹೆಸರು ಇದೆಯಾ ಎಂದು ಚೆಕ್ ಮಾಡುವುದು.

ಮೊದಲು ನೀವು ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿದ್ದಾರೆ ಈ ಯೋಜನೆಯಲ್ಲಿ ನಾವು ಹಣ ಪಡೆಯಲು ಫಲಾನುಭವಿಗಳಾಗಿ ಆಯ್ಕೆ ಆಗಿದ್ದೀವ ಎಂದು ಚೆಕ್ ಮಾಡಿಕೊಳ್ಳುವುದು ಮೊದಲ ಕ್ರಮವಾಗಿದ್ದು ಈಗಾಗಲೇ ಸರ್ಕಾರದಿಂದ ಇದರ ಲಿಸ್ಟ್ ಕೂಡ ಬಿಡುಗಡೆ  ಮಾಡಿದೆ.  ಒಂದುವೇಳೆ  ನೀವು ಇನ್ನೂ ಫಲಾನುಭವಿಗಳ ಲಿಸ್ಟ್ ನಲ್ಲಿ ನಿಮ್ಮ ಹೆಸರು ಇದೆಯಾ ಎಂದು ಚೆಕ್  ಮಾಡಿ ಕೊಂಡಿಲ್ಲವಾದರೆ ಈಗಲೇ ಸುಲಭವಾಗಿ ಈ ರೀತಿ ಚೆಕ್ ಮಾಡಿಕೊಳ್ಳಿ. 

  • ಮೊದಲು ನೀವು ನಿಮ್ಮ ಮೊಬೈಲ್ ನಲ್ಲಿ  8147500500 ನಂಬರಿಗೆ ನಿಮ್ಮ ರೇಷನ್ ಕಾರ್ಡ್ ನಂಬರ್ ಅನ್ನು ಎಸ್ಎಂಎಸ್ ಮಾಡಬೇಕು.
  • ನಂತರ ನಿಮಗೆ ಕೆಲವೇ ಕ್ಷಣಗಳಲ್ಲಿ ಅದೇ  ಹೆಲ್ಪ್ ಲೈನ್ ನಂಬರ್ ಇಂದ ಎಸ್ಎಂಎಸ್ ಬರುತ್ತದೆ.
  •  ಇದರಲ್ಲಿ ನಿಮ್ಮ ರೇಷನ್ ಕಾರ್ಡ್ ನಲ್ಲಿ ಅರ್ಜಿ ಸಲ್ಲಿಸಿರುವ ಮನೆಯ ಯಜಮಾನಿಯ ಹೆಸರಿಗೆ ಗೃಹಲಕ್ಷ್ಮಿ ಯೋಜನೆಯ  ಹಣ ಪಡೆಯಲು ಫಲಾನುಭವಿಗಳ ಲಿಸ್ಟ್ ನಲ್ಲಿ ಹೆಸರು ಇದೆಯಾ ಎಂದು ಎಸ್ಎಂಎಸ್ ಮೂಲಕ ತಿಳಿಸಲಾಗುತ್ತದೆ.

(ಅಭಿನಂದನೆಗಳು ನಿಮ್ಮ ಗೃಹಲಕ್ಷ್ಮಿ ಯೋಜನೆಯ ಅರ್ಜಿ ಸಂಖ್ಯೆ rc***********  ಅನ್ನು ಅನುಮೋದಿಸಲಾಗಿದೆ ರೂ 2000 ಮೊತ್ತವನ್ನು ನೋಂದಾಯಿಸಿಕೊಂಡಿರುವ ಬ್ಯಾಂಕ್  ಖಾತೆಗೆ ಜಮಾ ಮಾಡಲಾಗುತ್ತದೆ ಧನ್ಯವಾದಗಳು.  ನಿಮ್ಮ ಕರ್ನಾಟಕ ಸರ್ಕಾರ)

  1. 2000 ಹಣವನ್ನು ಬ್ಯಾಂಕ್ ಖಾತೆಗೆ ಪಡೆಯಲು ಡಿ ಬಿ ಟಿ ಲಿಂಕ್ ಆಗಿದೆಯಾ ಎಂದು ಚೆಕ್ ಮಾಡುವುದು.

ಈಗಾಗಲೇ ನಿಮಗೆಲ್ಲ ತಿಳಿದಿರುವ ಹಾಗೆ ಸರ್ಕಾರದಿಂದ ಯಾವುದೇ ಹಣವನ್ನ ನಿಮ್ಮ ಬ್ಯಾಂಕ್ ಖಾತೆಗೆ ಪಡೆಯಬೇಕು ಎಂದರೆ ಡಿ ಬಿ ಟಿ ಲಿಂಕ್ ಆಗಿರುವುದು ಕಡ್ಡಾಯವಾಗಿರುತ್ತದೆ ಏಕೆಂದರೆ  ಸರ್ಕಾರದ ಎಲ್ಲಾ ಹಣವು ಆಧಾರ್ ಕಾರ್ಡ್ ಮೂಲಕವೇ ಹಣ ಜಮಾ ಮಾಡುತ್ತಿದ್ದು ಆಧಾರ್ ಕಾರ್ಡ್ ಗೆ ಬ್ಯಾಂಕ್ ಖಾತೆ ಲಿಂಕ್ ಆಗಿದ್ದರೆ ಮಾತ್ರ ಯೋಜನೆಯ ಹಣ ನಿಮಗೆ ಸಿಗುತ್ತದೆ ಆದ್ದರಿಂದ ಲಿಂಕ್ ಆಗಿದೆಯೋ ಇಲ್ಲವೋ ಎಂದು ಚೆಕ್ ಮಾಡಿಕೊಳ್ಳಿ.

  • ಮೊದಲು  ಈ ಲಿಂಕ್ ಮೇಲೆ ಕ್ಲಿಕ್ ಮಾಡಿ. https://resident.uidai.gov.in/bank-mapper
  • ನಂತರ ನಿಮಗೆ ಒಂದು ಹೊಸ ಪುಟ್ಟ ಓಪನ್ ಆಗುತ್ತದೆ
  •  ಅದರಲ್ಲಿ ನಿಮ್ಮ ಆಧಾರ್ ಕಾರ್ಡ್ ಸಂಖ್ಯೆ ಮತ್ತು ಕ್ಯಾಪ್ಚ ಎಂಟರ್ ಮಾಡಿ ಸೆಂಡ್ ಓಟಿಪಿ ಮೇಲೆ ಕ್ಲಿಕ್ ಮಾಡಿ.
  •  ನಂತರ ನಿಮಗೆ ನಿಮ್ಮ ಆಧಾರ್ ಕಾರ್ಡ್ಗೆ ಯಾವ ಫೋನ್ ನಂಬರ್ ಲಿಂಕ್ ಆಗಿದೆಯೋ ಆ ನಂಬರ್ಗೆ ಒಂದು ಒಟಿಪಿ ಬರುತ್ತದೆ ಅದನ್ನು ನಮೂದಿಸಿ ಸಬ್ಮಿಟ್ ಮೇಲೆ ಕ್ಲಿಕ್ ಮಾಡಿ

 

  •  ಕೊನೆದಾಗಿ ನಿಮಗೆ ನಿಮ್ಮ ಆಧಾರ್ ಕಾರ್ಡಿಗೆ ಯಾವ ಒಂದು ಬ್ಯಾಂಕ್ ಖಾತೆ ಲಿಂಕ್ ಆಗಿದೆ ಎಂಬುದನ್ನು ತೋರಿಸುತ್ತದೆ.
  •  ಒಂದು ವೇಳೆ ಅಲ್ಲಿ   ನೋ ಡಾಟಾ ಫಂಡ್ ಎಂದು ಬಂದರೆ ನೀವು ನಿಮ್ಮ ಹತ್ತಿರದ ಬ್ಯಾಂಕ್ ಶಾಖೆಗೆ ಹೋಗಿ  ಡಿ ಬಿ ಟಿ ಫಾರಂ ಫೀಲ್ ಮಾಡಿ ಲಿಂಕ್ ಮಾಡಿಸಿಕೊಳ್ಳಿ.\
  1. ಬಿಪಿಎಲ್ ಕಾರ್ಡ್ ನಲ್ಲಿ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿರುವ ಮಹಿಳೆಯ ಹೆಸರು ಮೊದಲು ಇರುವುದು.

ಸದ್ಯ ಈಗಾಗಲೇ ಸರ್ಕಾರದಿಂದ ಸ್ಪಷ್ಟವಾಗಿ ಮಾಹಿತಿಯನ್ನು ನೀಡಿದ್ದು ಈ ಒಂದು ಗೃಹಲಕ್ಷ್ಮಿ ಯೋಜನೆಗೆ ಸಂಬಂಧಪಟ್ಟ ಹಾಗೆ ಈಗಾಗಲೇ ಬಿಪಿಎಲ್ ಕಾರ್ಡ್ಗಳಲ್ಲಿ ಇರುವ ಕೆಲವು ತಪ್ಪು ಮಾಹಿತಿಗಳನ್ನು ಮತ್ತು ಬಿಪಿಎಲ್ ಕಾರ್ಡ್ ಅಪ್ಡೇಟ್ ಮಾಡಿಸಿಕೊಳ್ಳಲು ಸರ್ಕಾರದಿಂದ ಅವಕಾಶವನ್ನು ನೀಡಿದ್ದು ಇದೀಗ ಮತ್ತಷ್ಟು ಕಲಾವಕಾಶವನ್ನು ಹೆಚ್ಚಿಸಿದೆ ಈಗಾಗಲೇ ಯೋಜನೆಗೆ ಬಿಪಿಎಲ್ ಕಾರ್ಡ್ ನಲ್ಲಿ ಸಮಸ್ಯೆ ಇದ್ದರೂ ಅರ್ಜಿಗಳನ್ನು ಸ್ವೀಕರಿಸಿದ್ದು ಹಣ ಬಿಡುಗಡೆ ಆಗುವ ಮೊದಲು ರೇಷನ್ ಕಾರ್ಡ್ ತಿದ್ದುಪಡಿ ಮಾಡಿಸಿಕೊಳ್ಳಬೇಕಾಗಿ ಆದೇಶ ಹೊರಡಿಸಿದ್ದು ಕಾಲಾವಕಾಶವನ್ನು ನೀಡಿದೆ,

  • ಅರ್ಜಿ ಸಲ್ಲಿಸಿರುವ ಮನೆಯ ಮಹಿಳೆಯ ಹೆಸರು ಬಿಪಿಎಲ್ ಕಾರ್ಡ್ ನಲ್ಲಿ ಮೊದಲೇ ಇರಬೇಕು
  •  ಅಂದರೆ ಬಿಪಿಎಲ್  ಕಾರ್ಡ್ ನಲ್ಲಿ ಎಷ್ಟೇ ಸದಸ್ಯರು ಇದ್ದರು ಅರ್ಜಿ ಸಲ್ಲಿಸಿರುವ ಮಹಿಳೆಯ ಹೆಸರಿನಲ್ಲಿ ಬಿಪಿಎಲ್ ಕಾರ್ಡ್ ಇರಬೇಕು.
  •  ಬಿಪಿಎಲ್ ಕಾರ್ಡಿಗೆ ಕಡ್ಡಾಯವಾಗಿ ಆಧಾರ್ ಕಾರ್ಡ್ ಲಿಂಕ್ ಆಗಿರಲೇಬೇಕು.
  • ಲಿಂಕ್ ಮಾಡಿಸಲು ಮತ್ತು ತಿದ್ದುಪಡಿ ಮಾಡಿಸಲು  ಇದೇ ಸೆಪ್ಟೆಂಬರ್ ಹತ್ತನೇ ದಿನಾಂಕ ಕೊನೆಯ ಅವಕಾಶ. 

ಈ ಮೂರು ಕೆಲಸಗಳನ್ನು ಗೃಹಲಕ್ಷ್ಮಿ ಯೋಜನೆಗೆ ಹಣ ಪಡೆಯಲು ಕಡ್ಡಾಯವಾಗಿ ಮಾಡಲೇಬೇಕು ಇದರಲ್ಲಿ ಯಾವುದೇ ಒಂದು ಕೆಲಸವನ್ನು ಮಾಡದೆ ಇದ್ದರೆ ನಿಮಗೆ ಗೃಹಲಕ್ಷ್ಮಿ ಯೋಜನೆಯ ಹಣ ಸಿಗುವುದು ಡೌಟ್ ಧನ್ಯವಾದಗಳು…. 

 

Leave a Comment