ಎಲ್ಲರಿಗೂ ನಮಸ್ಕಾರ,
ಕನ್ನಡದ ಬಿಗ್ ಬಾಸ್ ಮೊದಲ ಸೀಸನ್ ಅದೊಂದು ಅದ್ಭುತ ಕ್ಷಣವಾಗಿತ್ತು. ರಾಜಕುಮಾರ್ ಕುಟುಂಬದ ವಿಜಯ ರಾಘವೇಂದ್ರ ಈ ಸೀಸನ್ ನಲ್ಲಿ ಸ್ಪರ್ಧಿಯಾಗಿದ್ದರು. ಅದೊಂದು ಎಪಿಸೋಡ್ ನಲ್ಲಿ ಇವರನ್ನು ನೋಡೋದಕ್ಕೆ ವಿಜಯ್ ರಾಘವೇಂದ್ರ ಅವರ ಪತ್ನಿ ಬರ್ತಾರೆ . ಪತ್ನಿ ಬರುತ್ತಾ ಇದ್ದಂತೆ, ತನ್ನ ಮುದ್ದಿನ ಮಡದಿಯನ್ನು ನೋಡಲು ಓಡೋಡಿ ಬಂದು ಅವರನ್ನು ತಬ್ಬಿ ಕೊಳ್ಳುತ್ತಾರೆ. ಪತ್ನಿಯನ್ನು ಕೂರಿಸಿ ಅವರ ಮಡಿಲ ಮೇಲೆ ಮಗುವಿನಂತೆ ಮಲಗಿಕೊಳ್ಳುತ್ತಾರೆ. ವಿಜಯ್ ರಾಘವೇಂದ್ರ ಅವರಿಗೆ ತಮ್ಮ ಪತ್ನಿ ಎಂದರೆ ತುಂಬಾ ಪ್ರೀತಿ. ಅದನ್ನು ಅವರು ತುಂಬಾ ವೇದಿಕೆಗಳಲ್ಲಿ ಈಗಾಗಲೇ ಹೇಳಿಕೊಂಡಿದ್ದಾರೆ. ಆದರೆ ಇವರ ಬದುಕಿನಲ್ಲಿ ವಿಧಿ ಘೋರವಾದ ಆಟವನ್ನು ಆಡಿದೆ. ವಿಜಯ್ ರಾಘವೇಂದ್ರ ಅವರ ಪತ್ನಿ ಸ್ಪಂದನಾ ವಿಧಿ ಆಟಕ್ಕೆ ಬಲಿಯಾಗಿದ್ದಾರೆ. ದೂರದ ಥೈಲ್ಯಾಂಡ್ ನಲ್ಲಿ ಅವರ ಉಸಿರು ನಿಂತು ಹೋಗಿದೆ. ಇದ್ದಕ್ಕಿದ್ದ ಇದ್ದಕ್ಕಿದ್ದ ಹಾಗೆ ರಾಘವೇಂದ್ರ ಅವರ ಪತ್ನಿಗೆ ಏನಾಯ್ತು ಎನ್ನುವುದರ ಬಗ್ಗೆ ಈ ಲೇಖನದಲ್ಲಿ ತಿಳಿಸಿಕೊಡಲಾಗುವುದು. ಹಾಗಾಗಿ ಲೇಖನವನ್ನು ಪೂರ್ತಿಯಾಗಿ ಓದಿ .
ಚಂದನ ವನಕ್ಕೆ ಮತ್ತೊಂದು ಬರ ಸಿಡಿಲು ಹೊಡೆದು ಬಿಟ್ಟಿದೆ. ಅದಕ್ರಲ್ಲೂ ರಾಜಕುಮಾರ್ ಕುಟುಂಬ ಒಂದು ನೋವಿನಿಂದ ಹೊರ ಬರಬೇಕು ಅನ್ನುವಷ್ಟರಲ್ಲಿ ,ಮತ್ತೊಂದು ಆಘಾತವಾಗಿ ಬಿಟ್ಟಿದೆ. ವಿಜಯ ರಾಘವೇಂದ್ರ ಅವರ ಪತ್ನಿ ಸ್ಪಂದನ ಇನ್ನಿಲ್ಲ, ಎನ್ನುವ ಸುದ್ದಿಯನ್ನು ಯಾರಿಂದಲೂ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. 3 ದಿನದ ಹಿಂದೆ ದಿನದ ಹಿಂದೆ ಥೈಲ್ಯಾಂಡ್ಗೆ ತೆರಳಿದ್ದ ಸ್ಪಂದನಾ ಅವರಿಗೆ low BP ಕಾಣಿಸಿಕೊಂಡಿದೆ, ಕೊಡಲೇ ಹೃಧಯಾಘಾತ ಸಹ ಆಗಿದೆ. ಆಸ್ಪತ್ರೆಗೆ ಕರೆದುಕೊಂಡು ಹೋದರು, ಏನು ಪ್ರಯೋಜನ ಆಗಲಿಲ್ಲ. ಚಿನ್ನಾರಿ ಮುತ್ತ ತನ್ನ ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಿದ್ದ ತನ್ನ ಮಡದಿಯನ್ನು ಕಳೆದುಕೊಂಡಿದ್ದಾರೆ. ಸ್ಪಂದನಾ ಅವರು ಇತ್ತೀಚೆಗೆ ತೂಕವನ್ನು ಇಳಿಸಲು ವರ್ಕೌಟ್ ಅನ್ನು ಮಾಡುತ್ತಿದ್ದರು, ಅದರ ಜೊತೆಗೆ ಡಯಟನ್ನು ಸಹ ಮಾಡುತ್ತಿದ್ದರು. ಹೀಗೆ ಜಿಮ್ ಮತ್ತು ಡಯಟ್ ಮಾಡಿ 19ಕೆಜಿಯನ್ನು ಸ್ಪಂದನ ತಿಳಿಸಿಕೊಂಡಿದ್ದರು. 26 ಆಗಸ್ಟ್ 2007 ರಲ್ಲಿ ರಾಘವೇಂದ್ರ ಮತ್ತು ಸ್ಪಂದನಾ ಅವರು ಮದುವೆಯನ್ನು ಆಗುತ್ತಾರೆ. ಇನ್ನೇನು ಮಾಡುವೆ ವಾರ್ಷಿಕೋತ್ಸವಕ್ಕೆ ಕೇವಲ 20 ದಿನ ಕೂಡ ಬಾಕಿ ಇತ್ತು.
ಅಷ್ಟರಲ್ಲಿ ವಿಧಿ ತನ್ನ ಘೋರ ಆಟವನ್ನೇ ಆಡಿಬಿಟ್ಟಿದೆ. ಅಂದಹಾಗೆ ಸ್ಪಂದನಾ ಅವರ ಕಸಿನ್ಸ್ ಬ್ಯಾಂಕೋಕ್ ಗೆ ತೆರಳಿದ್ದಾರೆ, ವಿಜಯ ರಾಘವೇದ್ರ ಶೂಟಿಂಗ್ ಇದ್ದಿದ್ದರಿಂದ ಶೂಟಿಂಗ್ ಮುಗಿಸಿ ಜಾಯಿನ್ ಆಗಿದ್ದಾರೆ. ಹೀಗೆ ಖುಷಿ ಇಂದಲೇ ಇದ್ದ ಆ ಕುಟುಂಬ ತುಂಬಾ ಎಂಜಾಯ್ ಮಾಡ್ತಾ ಇತ್ತು. ಆದರೆ ಈ ಖುಷಿ ತುಂಬಾ ಸಮಯ ಉಳಿಯಲಿಲ್ಲ. ಸ್ಪಂದನಾ ರೆಸ್ಟ್ ಮಾಡೋದ ಅಂತ ಮಲಗಿದವರು , ಮತ್ತೆ ಏಳಲೇ ಇಲ್ಲ. ಮಲಗಿದ್ದಲ್ಲೇ LOW BP ಕಾಣಿಸಿಕೊಂಡು , ಹೃದಯಾಘಾತ ಆಗಿದೆ. ವಿಜಯ ರಾಘವೇಂದ್ರ ಜೀವನದಲ್ಲಿ ಬ್ಯಾಕ್ ಬೋನ್ ಆಗಿದ್ರು ಸ್ಪಂದನಾ , ಪ್ರತಿಯೊಂದು ವಿಚಾರದಲ್ಲಿ ತನ್ನ ಪತಿಗೆ ತಾಯಿಯಂತೆ ಸಪೋರ್ಟ್ ಮಾಡ್ತಾ ಇದ್ರೂ , ಇವರಿಬ್ಬರ ದಾಂಪತ್ಯ ಎಲ್ಲರಿಗು ಕೂಡ ಮಾದರಿಯಾಗಿತ್ತು. ಅದರಲ್ಲೂ ಅವರ ಸಾಮಾಜಿಕ ಜಾಲತಾಣಗಳಲ್ಲಿ ಫೋಟೋ ಗಳನ್ನೂ ನೋಡ್ತಾ ಇದ್ರೆ, ವಿಜಯ ತನ್ನ ಪತ್ನಿಯನ್ನ ಅದೆಷ್ಟು ಪ್ರೀತಿ ಮಾಡುತ್ತಿದ್ದರು ಎಂದು ಗೊತ್ತಾಗತ್ತೆ. ತನ್ನ ಹೆಂಡತಿಯ ಫೋಟೋ ಹಾಕಿ ಚಿನ್ನ, ಬಂಗಾರ, ಹೀಗೆ ಮುದ್ದು ಮುದ್ದಾಗಿ ಕ್ಯಾಪ್ಶನ್ ಗಳನ್ನ ಹಾಕುತ್ತಿದ್ದರು. ಇಂತಹ ಮಡದಿಯನ್ನು ಕಳೆದುಕೊಂಡ ವಿಜಯ ರಾಘವೇಂದ್ರ ಅವರ ಪರಿಸ್ಥಿತಿಯನ್ನು ಈಗ ನೆನೆಸಿಕೊಳ್ಳೋದಕ್ಕೂ ಕೂಡ ಸಾಧ್ಯವಿಲ್ಲ. ತುತುಂಬಾ ಒಳ್ಳೆಯವರಿಗೆ ಆ ದೇವ್ರು ತುಂಬಾ ದಿನಾ ಬಡ್ಕೋದಕ್ಕೆ ಬಿಡೋದಿಲ್ಲ ಅನ್ಸತ್ತೆ. ಆದ್ರೆ ದೇವರು ವಿಜಯ ರಾಘವೇಂದ್ರ ಅವರ ಬದುಕಿನಲ್ಲಿ ಈ ರೀತಿ ಆಟವಾಡಬಾರದಿತ್ತು. ಇಲ್ಲಿಯವಗೆರೆ ಓದಿದ್ದಕ್ಕೆ ಧನ್ಯವಾದಗಳು.