ರೈತರ ಕೃಷಿ ಸಾಲದ ಬಡ್ಡಿ ಮನ್ನಾ,:  ರಾಜ್ಯದ ರೈತ ಸಮುದಾಯಕ್ಕೆ ಇಲ್ಲಿದೆ ಮಹತ್ವದ ಮಾಹಿತಿ.?

ಎಲ್ಲರಿಗೂ ನಮಸ್ಕಾರ..

 ರೈತ ಸಮುದಾಯಕ್ಕೆ ರಾಜ್ಯ ಸರ್ಕಾರದಿಂದ ಒಂದು ಸಿಹಿ ಸುದ್ದಿ ಸಿಗುತ್ತಾ ಇದೆ,  ರಾಜ್ಯದ  ರೈತರ ಮಧ್ಯಮಾವಧಿ ಮತ್ತು ದೀರ್ಘಾವಧಿ ಕೃಷಿ ಮತ್ತು ಕೃಷಿಗೆ ಸಂಬಂಧಪಟ್ಟ ಸಾಲದ ಮೇಲಿನ ಬಡ್ಡಿಯನ್ನು  ಮನ್ನ ಮಾಡಲು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ,  ರಾಜ್ಯದಲ್ಲಿ 2023ನೇ ಸಾಲಿನಲ್ಲಿ ಮಳೆಯ ಕೊರತೆ ಉಂಟಾಗಿದ್ದು ಈಗಾಗಲೇ  ರಾಜ್ಯದ್ಯಂತ ಬರ ಉಂಟಾಗಿದೆ ಈ ಬಗ್ಗೆ ಈಗಾಗಲೇ ಸರ್ಕಾರದಿಂದ ಬರ ಪರಿಹಾರ ಹಣ ನೀಡಲು ಸುಮಾರು 200ಕ್ಕೂ ಹೆಚ್ಚು ತಾಲೂಕುಗಳನ್ನು ಕೂಡ ಬರಪಿಡಿತ ತಾಲೂಕುಗಳು ಎಂದು ಘೋಷಣೆ ಕೂಡ ಮಾಡಿದೆ ಆದರೆ ಸರ್ಕಾರದಿಂದ ನೀಡಬೇಕಾದ ಬರ ಪರಿಹಾರದ ಹಣ ಇನ್ನೂ ಕೂಡ ರೈತರಿಗೆ ತಲುಪಿಲ್ಲ ಈ ಬಗ್ಗೆ ರಾಜ್ಯ ಸರ್ಕಾರವು ಕೇಂದ್ರದಿಂದ ಯಾವುದೇ ಪರಿಹಾರ ಹಣ ಬಿಡುಗಡೆ ಹಾಗಿಲ್ಲ ಎಂದು ಮಾಹಿತಿ ನೀಡುತ್ತಿದೆ.

WhatsApp Group Join Now
Telegram Group Join Now

 ಸದ್ಯ ರೈತರಿಗೆ ಮೊದಲ ಕಂತಿನ ಬರ ಪರಿಹಾರ ಹಣವನ್ನು ರಾಜ್ಯ ಸರ್ಕಾರವೇ ನೀಡಲು ನಿರ್ಧರಿಸಿದ್ದು ಈಗಾಗಲೇ ರೈತರ ಫ್ರೂಟ್ಸ್ ಐಡಿ ಮೂಲಕ ಹಣವನ್ನು ಕೆಲವೇ ದಿನಗಳಲ್ಲಿ ರೈತರ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತದೆ ಎಂದು ಮಾಹಿತಿ ನೀಡಿದೆ. ಹಾಗಾಗಿ  ಸರ್ಕಾರದಿಂದ ರೈತರಿಗಾಗಿ ಕೃಷಿ ಸಾಲದ ಬಡ್ಡಿಯನ್ನು ಮನ್ನಾ ಮಾಡಲು ಆದೇಶ ಹೊರಡಿಸಿದ್ದು ನೀವು ಕೂಡ ಕೃಷಿ ಸಾಲ ಹೊಂದಿದ್ದರೆ ಯಾವೆಲ್ಲ ಕೃಷಿ ಸಾಲದ ಬಡ್ಡಿ ಮನ್ನಾ ಆಗಲಿದೆ ಎಂಬ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿಯಲು ಲೇಖನವನ್ನು ಪೂರ್ತಿಯಾಗಿ ಓದಿ. ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್  ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

 

ರಾಜ್ಯ ಸರ್ಕಾರದಿಂದ ರೈತರ ಕೃಷಿ ಸಾಲದ ಬಡ್ಡಿ  ಮನ್ನಾ.!

ಹೌದು ಸರ್ಕಾರದಿಂದ ರೈತರ ಸಮಸ್ಯೆಗಳಿಗೆ ಪರಿಹಾರವನ್ನು ನೀಡಲು ಈಗಾಗಲೇ ಬರ ಪರಿಹಾರ ಹಣ ನೀಡುವುದಾಗಿ ಘೋಷಣೆ ಮಾಡಿರುತ್ತದೆ ಸದ್ಯ ಕೇಂದ್ರ ಸರ್ಕಾರದಿಂದ ಯಾವುದೇ ಪರಿಹಾರ ಹಣ ಬಿಡುಗಡೆ ಆಗಿಲ್ಲ ಎಂದು ರಾಜ್ಯ ಸರ್ಕಾರವೇ ರೈತರಿಗಾಗಿ ಮೊದಲ  ಕಂತಿನ ರೂಪದಲ್ಲಿ 2000 ಹಣವನ್ನು ಫ್ರೂಟ್ಸ್ ಐಡಿ ಮೂಲಕ ರೈತರ ಬ್ಯಾಂಕ್ ಖಾತೆಗೆ ಜಮಾ ಮಾಡಲು ಮುಂದಾಗಿದೆ ಆದರೆ ನೀರಿನ ಕೊರತೆಯಿಂದ ಆಗಿರುವ ಬೆಳೆಹನಿಗೆ ಸರ್ಕಾರವು ರೈತರ ಕೃಷಿ ಸಾಲದ ಬಡ್ಡಿಯನ್ನು ಮನ್ನಾ ಮಾಡಲು ಆದೇಶ ಹೊರಡಿಸಿದೆ.

 ರಾಜ್ಯದ ಸಹಕಾರಿ ಸಂಸ್ಥೆಗಳ ಮೂಲಕ ಸಾಲ  ಪಡೆದಿರುವ 2023ರ ಮಧ್ಯಮಾವಧಿ ಮತ್ತು ದೀರ್ಘಾವಧಿ ಕೃಷಿ ಮತ್ತು  ಕೃಷಿಗೆ ಸಂಬಂಧಪಟ್ಟ ಸಾಲಗಳ ಬಡ್ಡಿಯನ್ನು ಮನ್ನಾ ಮಾಡಲು ಸರ್ಕಾರ ಸಂಬಂಧಪಟ್ಟ ಸಹಕಾರಿ ಸಂಸ್ಥೆಗಳಿಗೆ ಆದೇಶ ನೀಡಿದೆ,  ಸರ್ಕಾರದ ಆದೇಶದಂತೆ ರೈತರು ಸಾಲದ ಅಸಲು ಪಾವತಿಸಿದ್ದಲ್ಲಿ ಅದರ ಮೇಲಿನ ಬಡ್ಡಿಯನ್ನು ಮನ್ನಾ ಮಾಡುವುದಾಗಿ ರಾಜ್ಯದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಘೋಷಣೆ ಮಾಡಿದ್ದಾರೆ. ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್  ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

ರೈತರ ಕೃಷಿ ಸಾಲದ ಬಡ್ಡಿ ಮನ್ನಾದ ಷರತ್ತುಗಳೇನು.?

  • ಈ ಯೋಜನೆ ಕೃಷಿಯತರ ಸಾಲಗಳಿಗೆ ಅನ್ವಯಿಸುವುದಿಲ್ಲ.
  •  ನಿಗದಿತ ಸಹಕಾರ ಸಂಘಗಳಲ್ಲದೆ ಇತರೆ ಸಹಕಾರ ಸಂಸ್ಥೆಗಳಲ್ಲಿ ಪಡೆದ ಸಾಲಗಳಿಗೆ ಯೋಜನೆ.
  • ನಬಾರ್ಡ್ ಗುರುತಿಸಿದ ಕೃಷಿ /  ಕೃಷಿ ಸಂಬಂಧಿತ  ಮಧ್ಯಮಾವಧಿ ಮತ್ತು ದೀರ್ಘಾವಧಿ ಸಾಲಗಳಿಗೆ ಅಂದರೆ ಲಘು ನೀರಾವರಿ,  ಭೂ ಅಭಿವೃದ್ಧಿ, ಸಾವಯುವ ಕೃಷಿ, ಪಶು ಸಂಗೋಪನೆ, ಹೈನುಗಾರಿಕೆ, ಮೀನು ಕೃಷಿ, ರೇಷ್ಮೆ ಕೃಷಿ, ಕೃಷಿ ಯಂತ್ರೀಕರಣ, ಪ್ಲಾಂಟೇಶನ್ ಮತ್ತು ತೋಟಗಾರಿಕಾ ಅಭಿವೃದ್ಧಿ ಉದ್ದೇಶಗಳಿಗೆ ಮಾಡಿದ ಸಾಲಕ್ಕೆ ಈ ಯೋಜನೆ ಅನ್ವಯ.
  •  ರಾಜ್ಯ ಸರ್ಕಾರದ ಬಡ್ಡಿಯಾಯಿತಿ ಬದ್ಧತೆ ಅಡಿ ವಿತರಿಸಿರುವ ಕೃಷಿ ಮತ್ತು ಕೃಷಿ ಸಂಬಂಧಿತ ಮಧ್ಯಮಾವಧಿ ಮತ್ತು ದೀರ್ಘಾವಧಿ ಸಾಲಗಳಿಗೆ ಅನ್ವಯ.

ಈ ಮೇಲೆ ತಿಳಿಸಿದ ಹಾಗೆ ಸರ್ಕಾರದ ಸಾಲದ ಬಡ್ಡಿ ಮಲ್ಲಕ್ಕೆ ಈ ಕೆಲವು ಶರತ್ತುಗಳನ್ನು ವಿಧಿಸಲಾಗಿದೆ ಈ ಶರತ್ತುಗಳಂತೆ ಮಾಡಿರುವ ಸಾಲದ ಬಡ್ಡಿಯನ್ನು ರಾಜ್ಯ ಸರ್ಕಾರವು ಮನ್ನ ಮಾಡಲಿದೆ ನೀವು ಕೂಡ ಸಹಕಾರ ಸಂಸ್ಥೆಗಳಲ್ಲಿ ಕೃಷಿ ಸಾಲ ಮಾಡಿದ್ದರೆ ನಿಮಗೂ ಕೂಡ ಸಾಲದ ಬಡ್ಡಿ ಮನ್ನಾ ಆಗಲಿದೆ ಧನ್ಯವಾದಗಳು.. ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್  ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

Leave a Comment