ಎಲ್ಲರಿಗೂ ನಮಸ್ಕಾರ. ಕರ್ನಾಟಕ ರಾಜ್ಯ ಸರ್ಕಾರದ 5 ಗ್ಯಾರಂಟಿ ಯೋಜನೆಗಳಲ್ಲಿ ಯುವ ನಿಧಿ ಯೋಜನೆ ಕೂಡ ಒಂದಾಗಿದ್ದು ಈಗಾಗಲೇ ನಾಲ್ಕು ಗ್ಯಾರೆಂಟಿ ಯೋಜನೆಗಳಿಗೆ ಸರ್ಕಾರದಿಂದ ಚಾಲನೆ ನೀಡಲಾಗಿದೆ ಇನ್ನು ಕೊನೆಯದಾಗಿ ಉಳಿದಿರುವ ಯುವ ನಿಧಿ ಯೋಜನೆಗೂ ಕೂಡ ಸರ್ಕಾರ ಚಾಲನೆ ನೀಡಲು ಮುಂದಾಗಿದ್ದು ಇದೀಗ ಯುವನಿಧಿ ಯೋಜನೆಗೆ ಯಾರೆಲ್ಲಾ ಅರ್ಜಿಯನ್ನು ಸಲ್ಲಿಸಬಹುದು ಅರ್ಜಿ ಸಲ್ಲಿಸಲು ಏನೆಲ್ಲ ದಾಖಲೆಗಳು ಬೇಕಾಗುತ್ತದೆ ಮತ್ತು ಯಾವ ದಿನಾಂಕದಿಂದ ಯೋಜನೆಗೆ ಚಾಲನೆ ನೀಡಲಾಗುತ್ತದೆ ಹಾಗೂ ಯುವನಿಧಿ ಯೋಜನೆಯ ಕೆಲವು ಹೊಸ ನಿಯಮಗಳನ್ನು ಕೂಡ ಇದೀಗ ಸರ್ಕಾರದಿಂದ ತಿಳಿಸಲಾಗಿದೆ, ನಿಮಗೂ ಕೂಡ ಈ ಯೋಜನೆಯ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳಬೇಕು ಎಂದುಕೊಂಡಿದ್ದಲ್ಲಿ ಲೇಖನವನ್ನು ಪೂರ್ತಿಯಾಗಿ ಓದಿ. ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಯುವ ನಿಧಿ ಯೋಜನೆಯ ಚಾಲನೆಗೆ ಸರ್ಕಾರದಿಂದ ಡೇಟ್ ಫಿಕ್ಸ್.!
ಸರ್ಕಾರದಿಂದ ನಿರುದ್ಯೋಗ ಸಮಸ್ಯೆಯನ್ನು ಎದುರಿಸುತ್ತಿರುವ ಯುವಕ ಮತ್ತು ಯುವತಿಯರಿಗಾಗಿ ಪರಿಚಯಿಸಿದ ಯೋಜನೆ ಇದಾಗಿದೆ, ಯುವ ನಿಧಿ ಯೋಜನೆಗೆ ಸರ್ಕಾರ ಚಾಲನೆ ನೀಡಲು ದಿನಾಂಕ ನಿಗದಿ ಮಾಡಿದ್ದು ಈಗಾಗಲೇ ಎಲ್ಲಾ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ, ಹೌದು ಸರಕಾರದಿಂದ ಭರವಸೆ ನೀಡಿದ್ದ ಯೋಜನೆಗಳಲ್ಲಿ ಇಲ್ಲಿವರೆಗೆ ನಾಲ್ಕು ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿದೆ ಐದನೇ ಗ್ಯಾರಂಟಿ ಯೋಜನೆಯಾಗಿರುವಂತಹ ಯುವನಿಧಿ ಯೋಜನೆಗೆ ಚಾಲನೆ ನೀಡಲು ಜನವರಿ 12ನೇ ದಿನಾಂಕವನ್ನು ನಿಗದಿಪಡಿಸಿದೆ 2024ರ ಜನವರಿ 12ನೇ ದಿನಾಂಕದಂದು ಐದನೇ ಗ್ಯಾರಂಟಿ ಯೋಜನೆ ಆಗಿರುವಂತಹ ಯುವನಿಧಿ ಯೋಜನೆಗೆ ಸರ್ಕಾರದಿಂದ ಚಾಲನೆ ನೀಡಲಾಗುತ್ತಿದೆ.
ಯುವ ನಿಧಿ ಯೋಜನೆಗೆ ಯಾರೆಲ್ಲಾ ಅರ್ಜಿಯನ್ನು ಸಲ್ಲಿಸಬಹುದು.?
ಸರ್ಕಾರದಿಂದ ಈಗಾಗಲೇ ತಿಳಿಸಿರುವ ಹಾಗೆ ಯುವ ನಿಧಿ ಯೋಜನೆಗೆ ಪದವಿ ಮತ್ತು ಡಿಪ್ಲೋಮೋ ಹೊಂದಿರುವ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದಾಗಿದೆ ಅಲ್ಲದೆ ಯಾವ ವರ್ಷದಲ್ಲಿ ಪದವಿ ಮತ್ತು ಡಿಪ್ಲೋಮೋ ಹೊಂದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು ಮತ್ತು ಯಾರಿಗೆ ಎಷ್ಟು ಹಣ ಸಿಗಲಿದೆ ಎಂಬ ಕೆಲವು ಮಾಹಿತಿಯನ್ನು ಕೂಡ ಸರ್ಕಾರದಿಂದ ಸ್ಪಷ್ಟಪಡಿಸಲಾಗಿದೆ.
ಹೌದು ಯುವ ನಿಧಿ ಯೋಜನೆಗೆ 2022 23ನೇ ಸಾಲಿನಲ್ಲಿ ಪದವಿ ಮತ್ತು ಡಿಪ್ಲೋಮೋ ಪಾಸ್ ಆಗಿರುವ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದಾಗಿದೆ ಆದರೆ ಅರ್ಜಿ ಸಲ್ಲಿಸಲು ಕೆಲವು ನಿಯಮಗಳನ್ನು ತಿಳಿಸಲಾಗಿದೆ ನಿಯಮಗಳಿಗೆ ಅರ್ಹರಾದ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಅರ್ಜಿ ಸಲ್ಲಿಸಲು ಸರ್ಕಾರದಿಂದ ತಿಳಿಸಿರುವ ನಿಯಮಗಳು ಯಾವು.?
ಐದನೇ ಗ್ಯಾರಂಟಿ ಯೋಜನೆ ಆಗಿರುವ ಯುವ ನಿಧಿ ಯೋಜನೆ ಅಡಿಯಲ್ಲಿ ಪದವಿ ಮತ್ತು ಡಿಪ್ಲೋಮೋ ಅಭ್ಯರ್ಥಿಗಳಿಗೆ ಪ್ರತಿ ತಿಂಗಳು 3000 ಮತ್ತು 1500 ಹಣವನ್ನು ನೀಡಲು ಸರ್ಕಾರ ನಿರ್ಧರಿಸಿದೆ ಈ ಯೋಜನೆಗೆ ಈಗಾಗಲೇ ತಿಳಿಸಿದ ಹಾಗೆ 2022 23ನೇ ಸಾಲಿನಲ್ಲಿ ಪಾಸಾದ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು ಆದರೆ ಅರ್ಜಿ ಸಲ್ಲಿಸಲು ಸರ್ಕಾರದ ನಿಯಮದ ಪ್ರಕಾರ ಅಭ್ಯರ್ಥಿ ಕಳೆದ ಆರು ತಿಂಗಳಲ್ಲಿ ಯಾವುದೇ ಕೆಲಸ ಅಥವಾ ಉದ್ಯೋಗ ಸಿಗದೇಯಿದ್ದಲ್ಲಿ ಮತ್ತು ಉನ್ನತ ಶಿಕ್ಷಣ ಪಡೆಯದೆ ಇದ್ದಲ್ಲಿ ಅಂತಹ ಅಭ್ಯರ್ಥಿಯು ಅರ್ಜಿಯನ್ನು ಸಲ್ಲಿಸಬಹುದಾಗಿ ತಿಳಿಸಲಾಗಿದೆ ಇನ್ನು ಯೋಜನೆಗೆ ಚಾಲನೆ ದಿನಾಂಕ ಕೂಡ ನಿಗದಿಯಾಗಿದ್ದು ಅಭ್ಯರ್ಥಿಗಳಿಗೆ ದಾಖಲೆಗಳನ್ನು ಹೊಂದಿಸಿಕೊಳ್ಳಲು ಸೂಚನೆ ನೀಡಲಾಗಿದೆ.
ಯುವ ನಿಧಿ ಯೋಜನೆಗೆ ಅರ್ಜಿ ಸಲ್ಲಿಸಲು ಬೇಕಾಗಿರುವ ದಾಖಲೆಗಳು ಮತ್ತು ಮಾನದಂಡಗಳು.!
ಯುವ ನಿಧಿ ಯೋಜನೆ ಮೂಲಕ ಸರ್ಕಾರದಿಂದ ಪದವಿ ಮತ್ತು ಡಿಪ್ಲೋಮೋ ಪಾಸ್ ಆಗಿದ್ದು ಉದ್ಯೋಗ ಸಿಗದೇ ಇರುವ ಅಭ್ಯರ್ಥಿಗಳಿಗೆ ಸಹಾಯಧನ ನೀಡುವ ಸಲುವಾಗಿ ಯೋಜನೆಯನ್ನು ಪರಿಚಯಿಸಿದೆ ಈ ಯೋಜನೆಯಲ್ಲಿ ಪದವಿ ಮತ್ತು ಡಿಪ್ಲೋಮೋ ಪಾಸಾಗಿ ಆರು ತಿಂಗಳಲ್ಲಿ ಉದ್ಯೋಗ ಸಿಗದಿದ್ದಲ್ಲಿ ಪ್ರತಿ ತಿಂಗಳು ಪದವಿ ಪಾಸಾದವರಿಗೆ 3000 ಮತ್ತು ಡಿಪ್ಲೋಮೋ ಹೊಂದಿರುವವರಿಗೆ ಸಹಾಯಧನವಾಗಿ ನೀಡಲಾಗುತ್ತದೆ ಅದು ಮುಂದಿನ ಎರಡು ವರ್ಷದವರೆಗೆ ನೀಡಲಾಗುತ್ತದೆ ಇದರ ಒಳಗಾಗಿ ಅಭ್ಯರ್ಥಿಗೆ ಉದ್ಯೋಗ ಸಿಕ್ಕಲ್ಲಿ ಮತ್ತು ಎರಡು ವರ್ಷದ ನಂತರ ಹಣ ನೀಡುವುದನ್ನು ನಿಲ್ಲಿಸಲಾಗುವುದಾಗಿ ಸರ್ಕಾರದಿಂದ ತಿಳಿಸಲಾಗಿದೆ. ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಇನ್ನು ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳೆಂದರೆ..
- ಅರ್ಜಿಯನ್ನು 2022 23ನೇ ಸಾಲಿನಲ್ಲಿ ಪದವಿ ಮತ್ತು ಡಿಪ್ಲೋಮೋ ಹೊಂದಿರುವವರು ಸಲ್ಲಿಸಬಹುದು
- ಅರ್ಜಿ ಸಲ್ಲಿಸಲು ನಿರುದ್ಯೋಗಿ ಎನ್ನುವ ಸ್ವಯಂ ಘೋಷಣ ಪತ್ರ ಹೊಂದಿರಬೇಕು
- ಪದವಿ ಅಥವಾ ಡಿಪ್ಲೋಮೋ ಅಭ್ಯರ್ಥಿಯು ತಮ್ಮ ವಿಶ್ವವಿದ್ಯಾಲಯದ ಪ್ರಮಾಣಿಕೃತ ಸಂಸ್ಥೆಯಿಂದ ಅಂಕಪಟ್ಟಿ ಹಾಗೂ ಪ್ರಮಾಣ ಪತ್ರ ಒದಗಿಸಿದ ಬೇಕು
- ಅಭ್ಯರ್ಥಿಯ ಆಧಾರ್ ಕಾರ್ಡ್ ಕಡ್ಡಾಯ
- ಅಭ್ಯರ್ಥಿಯ ಬ್ಯಾಂಕ್ ಖಾತೆ ವಿವರ
- ಹೀಗೆ ಇನ್ನಿತರ ಕೆಲವು ಮಾಹಿತಿಗಳನ್ನು ಅರ್ಜಿಯಲ್ಲಿ ಪಡೆಯಲಾಗುತ್ತದೆ
- ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಅರ್ಜಿ ಸಲ್ಲಿಸಲು ಬೇಕಾಗುವ ಮಾನದಂಡಗಳು..
- ಕರ್ನಾಟಕದಲ್ಲಿಯೇ ವಾಸಿಸುವ ಕನ್ನಡಿಗರಿಗೆ ಮಾತ್ರ ಅವಕಾಶ
- 2022 23ನೇ ಸಾಲಿನಲ್ಲಿ ತೆರಗಡೆಯಾದ ಪದವಿ ಮತ್ತು ಡಿಪ್ಲೋಮೋ ಅಭ್ಯರ್ಥಿಗಳಿಗೆ ಮಾತ್ರ ಅರ್ಜಿ ಸಲ್ಲಿಸಲು ಅವಕಾಶ
- ಉದ್ಯೋಗ ಸಿಗದೆ ಆರು ತಿಂಗಳು ಕಳೆದಿದ್ದರೆ ಮಾತ್ರ ಯೋಜನೆಯ ಪ್ರಯೋಜನ ಪಡೆಯುತ್ತಾರೆ
- ಇನ್ನು ಈ ಯೋಜನೆಯ ಸೌಲಭ್ಯ ಕೇವಲ ಎರಡು ವರ್ಷ ಮಾತ್ರ ಲಭ್ಯವಿರುತ್ತದೆ
- ಈ ಎರಡು ವರ್ಷದ ಮಧ್ಯದಲ್ಲಿ ಉದ್ಯೋಗ ಸಿಕ್ಕಲ್ಲಿ ಸೌಲಭ್ಯ ರದ್ದಾಗಲಿದೆ
ಕೊನೆಯದಾಗಿ ಯುವ ನಿಧಿ ಯೋಜನೆಗೆ ಜನವರಿ 12ನೇ ದಿನದಿಂದ ಅರ್ಜಿ ಸಲ್ಲಿಸಲು ಅವಕಾಶ ನೀಡಲಿದ್ದು ಅರ್ಜಿಯನ್ನು ಸೇವಾ ಸಿಂಧು ಪೋರ್ಟಲ್ ಮೂಲಕ ಸ್ವೀಕರಿಸಲಾಗುತ್ತದೆ ನಂತರ ಅರ್ಜಿಯನ್ನು ಪರಿಶೀಲಿಸಿ ಅರ್ಹ ಅಭ್ಯರ್ಥಿಗೆ ನಿರುದ್ಯೋಗ ಬತ್ತಿಯನ್ನು ನೇರವಾಗಿ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುವುದು , ನಂತರ ಯೋಜನೆಯ ಮಧ್ಯದಲ್ಲಿ ಉದ್ಯೋಗ ಪಡೆದುಕೊಂಡು ಸರ್ಕಾರದ ಗಮನಕ್ಕೆ ತರದೆ ಯುವ ನಿಧಿ ಯೋಜನೆ ಹಣವನ್ನು ಪಡೆಯುತ್ತಿದ್ದಾರೆ ಎಚ್ಚರಿಕೆಯನ್ನು ಕೂಡ ನೀಡಲಾಗಿದೆ ಧನ್ಯವಾದಗಳು.. ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ