ರಾಜ್ಯದ ರೈತರಿಗೆ ಸರ್ಕಾರದಿಂದ ಭರ್ಜರಿ ಸಿಹಿ ಸುದ್ದಿ.!  ನರ್ಸರಿ ಹಾಗೂ ಇತರ ಕೃಷಿ ಚಟುವಟಿಕೆಗೆ ಸಿಗಲಿದೆ 50% ಸಬ್ಸಿಡಿ ಈಗಲೇ ಅರ್ಜಿ ಸಲ್ಲಿಸಿ.?

 ಎಲ್ಲರಿಗೂ ನಮಸ್ಕಾರ. ಭಾರತ ದೇಶವು ಕೃಷಿಗೆ ಅವಲಂಬಿತವಾಗಿದೆ  ಅಲ್ಲದೆ ರೈತರನ್ನು ದೇಶದ ಬೆನ್ನೆಲುಬು ಎಂದು ಕೂಡ ಕರೆಯಲಾಗುತ್ತದೆ ಹಾಗಾಗಿ ರಾಜ್ಯ ಸರ್ಕಾರದಿಂದ ಮತ್ತು ಕೇಂದ್ರ ಸರ್ಕಾರದಿಂದ ರೈತರಿಗಾಗಿ ಬಹಳಷ್ಟು ಯೋಜನೆಗಳನ್ನು ಪ್ರತಿವರ್ಷ ಜಾರಿಗೆ  ತರುತ್ತಲೇ ಇದೆ ಇದರ ಜೊತೆಗೆ ಈಗಿನ ಯುವಕರಲ್ಲಿಯೂ ಕೂಡ ಕೃಷಿ ಮಾಡಲು ಪ್ರೋತ್ಸಾಹಿಸಲು ಕೆಲವು ಹೊಸ ಯೋಜನೆಗಳು ಮತ್ತು ಸಬ್ಸಿಡಿ ಗಳನ್ನು ಸರ್ಕಾರ ನೀಡಲು ಮುಂದಾಗಿದ್ದು ಇದೀಗ ರಾಜ್ಯ ಸರ್ಕಾರದಿಂದ ಹೊಸದಾಗಿ ಕೃಷಿ ಚಟುವಟಿಕೆಗಳನ್ನು   ಆರಂಭಿಸಲಿರುವವರಿಗೆ ಸಬ್ಸಿಡಿ ನೀಡಿ ಪ್ರೋತ್ಸಾಹಿಸಲು ನಿರ್ಧರಿಸಿದ್ದು ಅರ್ಹ ರೈತರಿಂದ ಅರ್ಜಿಯನ್ನು ಸ್ವೀಕರಿಸಲಾಗುತ್ತಿದೆ ನೀವು ಕೂಡ ಸರ್ಕಾರದ ಈ ಸಬ್ಸಿಡಿಯನ್ನು ಪಡೆಯಬೇಕು ಎಂದುಕೊಂಡಿದ್ದಲ್ಲಿ ಯಾವೆಲ್ಲ ಕೃಷಿ ಚಟುವಟಿಕೆಗಳಿಗೆ ಸಬ್ಸಿಡಿ ಸಿಗಲಿದೆ ಮತ್ತು ಎಲ್ಲಿ ಅರ್ಜಿ ಸಲ್ಲಿಸುವುದು ಹೇಗೆ ಅರ್ಜಿ ಸಲ್ಲಿಸುವುದು ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿಯಲು ಲೇಖನವನ್ನು ಪೂರ್ತಿಯಾಗಿ ಓದಿ. ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್  ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

WhatsApp Group Join Now
Telegram Group Join Now

ರಾಜ್ಯದ ರೈತರಿಗೆ ಸರ್ಕಾರದಿಂದ ಭರ್ಜರಿ ಸಿಹಿ ಸುದ್ದಿ.!  

ನಮ್ಮ ಕರ್ನಾಟಕ ರಾಜ್ಯದಲ್ಲಿ ಕಳೆದ  ಕರೋನದ ನಂತರದಲ್ಲಿ ಸಾಕಷ್ಟು ಯುವಕರು ಕೃಷಿ ಚಟುವಟಿಕೆಗಳ ಮೇಲೆ ಮತ್ತು ಹೈನುಗಾರಿಕೆಗಳಲ್ಲಿ ತೊಡಗಿಕೊಂಡಿದ್ದಾರೆ ಹೀಗಾಗಿ ಸರ್ಕಾರದಿಂದ ಇದಕ್ಕೆ ಹೆಚ್ಚಿನ ಪ್ರೋತ್ಸಾಹವನ್ನು ನೀಡಿ,   ಮುಂದಿನ ದಿನಗಳಲ್ಲಿ ಹೆಚ್ಚಾಗಿ ಉದ್ಯೋಗ ಅವಕಾಶಕ್ಕಾಗಿ ಕಾಯದೆ ಕೃಷಿ ಚಟುವಟಿಕೆಗಳಲ್ಲಿ ತೊಡಗಿ ಭವಿಷ್ಯವನ್ನು ರೂಪಿಸಿಕೊಳ್ಳಬೇಕು ಎಂಬ ದೃಷ್ಟಿಯಿಂದ ಇದೀಗ ರಾಜ್ಯ ಸರ್ಕಾರವು ರೈತರಿಗೆ ನರ್ಸರಿ ಅಥವಾ ಇತರೆ ಕೃಷಿ ಚಟುವಟಿಕೆಗಳನ್ನು ಮಾಡಲು ಯೋಚಿಸುತ್ತಿರುವವರಿಗೆ 50% ನಷ್ಟು  ಸಬ್ಸಿಡಿ ನೀಡಲು ನಿರ್ಧರಿಸಿದೆ.

ಸರ್ಕಾರದಿಂದ ಕೃಷಿ ಚಟುವಟಿಕೆ ಮಾಡುವವರಿಗೆ ಸಿಗಲಿದೆ 50% ಸಬ್ಸಿಡಿ.?

ಈಗಾಗಲೇ ತಿಳಿಸಿದ ಹಾಗೆ ಕರೋನದ ನಂತರ ಸಾಕಷ್ಟು ಜನರು ಕೃಷಿ ಚಟುವಟಿಕೆ ಮತ್ತು ಹೈನುಗಾರಿಕೆ ಮಾಡಲು ಮುಂದಾಗಿದ್ದಾರೆ ಹಾಗಾಗಿ ಅಂತವರಿಗೆ ಸರ್ಕಾರ ಸಹಾಯಧನವನ್ನು ನೀಡಿ ಪ್ರೋತ್ಸಾಹಿಸಲು ಮುಂದಾಗಿದ್ದು,  ಪ್ರಸ್ತುತ ವರ್ಷದಿಂದ ಕೃಷಿ ಹಾಗೂ ಕೃಷಿಗೆ ಸಂಬಂಧಪಟ್ಟ  ಉಪಕಸುಬುಗಳನ್ನು ಕೈಗೊಳ್ಳಲು ಸೆಕೆಂಡರಿ ಕೃಷಿ ನಿರ್ದೇಶನಾಲಯ ಎನ್ನುವ ಹೊಸ ವಿಭಾಗವನ್ನು ಆರಂಭಿಸಲಾಗಿದೆ ಇದು ಕೃಷಿ ಕಾರ್ಯವನ್ನು ಮಾಡುವವರಿಗೆ ಉತ್ತೇಜನವನ್ನು ನೀಡಲಿದ್ದು ಶೇಕಡ 50ರಷ್ಟು ಸಬ್ಸಿಡಿ ಪಡೆದು ಕೃಷಿ ಮಾಡಲು ಅರ್ಜಿ ಆಹ್ವಾನಿಸಲಾಗುತ್ತದೆ. ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್  ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

ಯಾವ ಯಾವ ಕೃಷಿ ಚಟುವಟಿಕೆಗಳಿಗೆ ಸಿಗಲಿದೆ 50% ಸಬ್ಸಿಡಿ ಸೌಲಭ್ಯ.!

ಸಾವಯವ ಗೊಬ್ಬರ ತಯಾರಿಕೆ,  ಎರೆಹುಳ ಗೊಬ್ಬರ ತಯಾರಿಕೆ, ಜೈವಿಕ ಗೊಬ್ಬರ ತಯಾರಿಕೆ, ಕಾಂಪೋಸ್ಟ್ ಗೊಬ್ಬರ ತಯಾರಿಕೆ, ತೋಟಗಾರಿಕೆ  ಹೂ ಹಣ್ಣುಗಳ ನರ್ಸರಿ,  ನೀರು ಮಣ್ಣು ಪರೀಕ್ಷಾ ಘಟಕ, ಪಶು ಆಹಾರ ಮತ್ತು ಮೇವು ತಯಾರಿಕಾ ಘಟಕ, ಹೂವು ಹಣ್ಣು ಸಾಂಬಾರ ಪದಾರ್ಥಗಳನ್ನು ಸಿದ್ಧಪಡಿಸಿ ಮಾರುಕಟ್ಟೆಗೆ ತಲುಪಿಸುವ ಘಟಕ ಸ್ಥಾಪನೆಗೆ ಸಹಾಯಧನ ನೀಡಲಾಗುತ್ತದೆ.  ಜೊತೆಗೆ ಉಪ್ಪಿನಕಾಯಿ ತಯಾರಿಕಾ ಘಟಕ,  ಜಾಮ್,  ಅರಿಶಿನಪುಡಿ, ಶುಂಠಿ ಬೆಳ್ಳುಳ್ಳಿ ಪೇಸ್ಟ್ ತಯಾರಿಕಾ ಘಟಕ,  ಜೇನು ಸಾಕಾಣಿಕೆ ಅಣಬೆ ಬೇಸಾಯ ನಾರಿನ ಉದ್ಯಮ ಸ್ಥಾಪನೆ ಅಲೋವೆರಾ ಉತ್ಪನ್ನಗಳ ತಯಾರಿಕೆ ರೇಷ್ಮೆ ಉತ್ಪನ್ನಗಳ ತಯಾರಿಕೆ ಹಾಗೂ ಅಡಿಕೆ ಹಾಳೆ ಉತ್ಪಾದನೆ ಘಟಕ ಜೀವಾಮೃತ ತಯಾರಿಕಾ ಘಟಕ ಸ್ಥಾಪನೆಗೂ ಸಹಾಯಧನ ಸಿಗಲಿದೆ.ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್  ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

ಸರ್ಕಾರದ ಈ ಸಬ್ಸಿಡಿ ಸೌಲಭ್ಯಕ್ಕೆ ಯಾರೆಲ್ಲಾ ಅರ್ಜಿ ಸಲ್ಲಿಸಬಹುದು.

ರಾಜ್ಯ ಸರ್ಕಾರ ಬಿಡುಗಡೆ ಮಾಡಿರುವ ಈ ಹೊಸ ಕೃಷಿ ಚಟುವಟಿಕೆಯ ಸಬ್ಸಿಡಿ ಸೌಲಭ್ಯಕ್ಕೆ ಆಸಕ್ತ ರೈತರು ಸೂಕ್ತ ದಾಖಲೆಗಳೊಂದಿಗೆ ಸಮೀಪದ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿ ಅರ್ಜಿಯನ್ನು ಸಲ್ಲಿಸಬಹುದು.  ಅರ್ಜಿ ಸಲ್ಲಿಸಲು ಈ ಮೇಲೆ ತಿಳಿಸಲಾಗಿರುವ ಯಾವ ಚಟುವಟಿಕೆಯನ್ನು ನೀವು ಮಾಡಲು ಬಯಸುತ್ತಿದ್ದೀರಿ ಮತ್ತು ಎಷ್ಟು ಪ್ರಮಾಣದಲ್ಲಿ ಮಾಡಲಿದ್ದೀರಿ ಎಂಬ ಸಂಪೂರ್ಣ ಮಾಹಿತಿಯನ್ನು ಅರ್ಜಿ ಸಲ್ಲಿಸಲು ನೀಡಬೇಕಾಗುತ್ತದೆ ಇದರ ಆಧಾರದ ಮೇಲೆ ನಿಮಗೆ ಸಬ್ಸಿಡಿ ಸೌಲಭ್ಯ ಸಿಗಲಿದೆ.

 ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು.?

ಅರ್ಜಿ ಸಲ್ಲಿಸಲು ರೈತನ ಜಮೀನಿನ ಪಹಣಿ ಪ್ರತಿ,  ಆಧಾರ್ ಕಾರ್ಡ್,  ಬ್ಯಾಂಕ್ ಪುಸ್ತಕದ ನಕಲು ಪ್ರತಿ,  ಎರಡು ಭಾವಚಿತ್ರ,  ರೈತರ ಮೊಬೈಲ್ ಸಂಖ್ಯೆ,  ಇದರ ಜೊತೆಗೆ ಇನ್ನಿತರ ಕೆಲವು ಮಾಹಿತಿಗಳನ್ನು ಅಥವಾ ದಾಖಲೆಗಳನ್ನು ನೀಡಬೇಕಾಗುತ್ತದೆ, , ನೀವು ಕೂಡ ಕೃಷಿ ಚಟುವಟಿಕೆಯ ಈ ಸಬ್ಸಿಡಿ ಸೌಲಭ್ಯವನ್ನು ಪಡೆದುಕೊಳ್ಳಬೇಕು ಎಂದುಕೊಂಡಿದ್ದಲ್ಲಿ ಈಗಲೇ ಹತ್ತಿರದ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿ ಅರ್ಜಿಯನ್ನು ಸಲ್ಲಿಸಿ, ಧನ್ಯವಾದಗಳು.ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್  ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

Leave a Comment