ಯುವನಿಧಿ ಯೋಜನೆಗೆ ಚಾಲನೆ , ಒಂದೇ ವಾರ ಕಾಲಾವಕಾಶ ,3000 ಪಡೆಯಲು ಇಲ್ಲಿ ಅರ್ಜಿ ಹಾಕಿ .

ಎಲ್ಲರಿಗೂ  ನಮಸ್ಕಾರ ,

ನಮ್ಮ ಈಗಿನ ಸರ್ಕಾರ ನಮ್ಮ ಈಗಿನ ಸರ್ಕಾರವು ರಾಜ್ಯದ ಜನತೆಗೆ ಸಹಾಯವಾಗಲೆಂದು 5 ಗ್ಯಾರಂಟಿಗಳನ್ನು  ಮೊದಲೇ ಜಾರಿಗೊಳಿಸುವ ಕುರಿತು ಆಶ್ವಾಸನೆಯನ್ನು ನೀಡಿತ್ತು.  ಈಗ ಅದರಂತೆಯೇ  ಒಂದೊಂದೇ ಯೋಜನೆಗಳನ್ನು ಪೂರ್ಣಗೊಳಿಸುತ್ತಾ ಬಂದಿದೆ, ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ಆಶ್ವಾಸನೆಯನ್ನು ನೀಡಿತ್ತು, ಈಗಾಗಲೇ ಮಹಿಳೆಯರು ಇದರ ಸದುಪಯೋಗವನ್ನು ಪಡೆಯುತ್ತಿದ್ದಾರೆ.  ರಾಜ್ಯದ ಪ್ರತಿ ಮನೆಗೆ ಉಚಿತವಾಗಿ 200 ಯೂನಿಟ್ ವಿದ್ಯುತ್ತನ್ನು ನೀಡಿದೆ, ಅನ್ನಭಾಗ್ಯ ಯೋಜನೆ ಅಡಿ 10 ಕೆಜಿ ಅಕ್ಕಿಯನ್ನು ನೀಡುವ ಕುರಿತಾಗಿ ಹೇಳಿದ್ದು, ಆದರೆ ಇದನ್ನು ಜಾರಿ ಮಾಡಲು ಸರ್ಕಾರಕ್ಕೆ ಸ್ವಲ್ಪ ಅಡೆತಡೆಗಳಾಗಿವೆ. ಹಾಗಾಗಿ ಅಕ್ಕಿಯ ಬದಲು ಹಣವನ್ನು ನೀಡಲು ಮುಂದಾಗಿದೆ, ಗೃಹಲಕ್ಷ್ಮಿ ಯೋಜನೆ ಅಡಿ ಪ್ರತಿ ಮನೆಯ ಗ್ರಹೀಣಿಯರಿಗೆ 2000 ಧನಸಹಾಯವನ್ನು ಈಗಾಗಲೇ ಜಾರಿಗೊಳಿಸುವಲ್ಲಿ ಕಾರ್ಯನಿರತವಾಗಿದೆ.  ಇವುಗಳಂತೆಯೇ ಈಗ ಯುವನಿಧಿ ಯೋಜನೇ  ಜಾರಿಯಾಗಲಿದೆ, ಸಂಪುಟದಲ್ಲಿ ಈ ಯೋಜನೆಗೆ ಅನುಮತಿಯನ್ನು ಈಗಾಗಲೇ ನೀಡಿದೆ, ಈ ಯೋಜನೆಯ ಮುಖ್ಯ ಉದ್ದೇಶ ನಿರುದ್ಯೋಗಿಗಳಿಗೆ ಪದವೀಧರರಿಗೆ 3000ಗಳ ಧನ ಸಹಾಯ ಡಿಪ್ಲೋಮೋ ಓದಿದವರಿಗೆ1500 ಸಹಾಯಧನ.  ಈ ಯೋಜನೆಗೆ ಕೆಲವು ನಿರ್ಬಂಧನೆಗಳನ್ನು ವಿಧಿಸಿದೆ 2023ರಲ್ಲಿ ಪದವಿ ಡಿಪ್ಲೋಮೋ ತೇರ್ಗಡೆ ಆಗಿರಬೇಕು, ಎರಡು ವರ್ಷ ಮಾತ್ರ ಈ ಸೌಲಭ್ಯ. 

WhatsApp Group Join Now
Telegram Group Join Now

Yuva Nidhi Scheme:3000 ಭತ್ಯೆ ಯಾರಿಗೆಲ್ಲಾ ಸಿಗುತ್ತೆ? ಯುವನಿಧಿ ಯೋಜನೆಯ  ಮಾನದಂಡಗಳೇನು? ಇಲ್ಲಿದೆ ವಿವರ | karnataka government released eligibility  criteria for yuva nidhi scheme– News18 Kannada

ಕರ್ನಾಟಕದಲ್ಲಿ ಪ್ರತಿ ವರ್ಷವೂ ನಿರುದ್ಯೋಗದ ಸಮಸ್ಯೆ ಹೆಚ್ಚಾಗುತ್ತಲೇ ಬರುತ್ತಿವೆ, ಕರ್ನಾಟಕದಲ್ಲಿ ಸ್ಥಳೀಯರಿಗಿಂತ ಬೇರೆ ರಾಜ್ಯದ ಉದ್ಯೋಗಗಳಿಗೆ ಇಲ್ಲಿ ಉದ್ಯೋಗವಕಾಶ ದೊರೆಯುತ್ತಿದೆ ಹೊರತು, ಕರ್ನಾಟಕದಲ್ಲಿರುವ ನಿರುದ್ಯೋಗಿಗಳಿಗೆ ಯಾವುದೇ ರೀತಿಯ ಉದ್ಯೋಗಗಳು ದೊರೆಯುತ್ತಿಲ್ಲ . ಅದಲ್ಲದೆ ಸರ್ಕಾರವು ಇದರ ಬಗ್ಗೆ ಹೆಚ್ಚಾಗಿ ಗಮನವನ್ನು ವಹಿಸಿಲ್ಲಆದಕಾರಣ ಈ ಬಾರಿ ಕಾಂಗ್ರೆಸ್ ಸರ್ಕಾರವು ನಿರುದ್ಯೋಗಿಗಳಿಗೆ ಉದ್ಯೋಗಗಳನ್ನು ಕಲ್ಪಿಸುವ ಬಗ್ಗೆ ಚಿಂತನೆಯನ್ನು ನಡೆಸುತ್ತಿದೆ.  ಅದರ ಜೊತೆಗೆ ನಿರುದ್ಯೋಗಿಗಳಿಗೆ ಸಹಾಯಧನವನ್ನು ಈ ಬಾರಿ ಜಾರಿಗೊಳಿಸಿದೆ.  ಆದರೆ ಯಾವ ಸರ್ಕಾರವು ಸಹಾಯಧನವನ್ನು ಕೊಡುವುದರ ಬಗ್ಗೆ ಮಾತ್ರ ಚಿಂತಿಸುತ್ತದೆ, ಅದನ್ನು ಹೊರತುಪಡಿಸಿ ನಿರುದ್ಯೋಗಿಗಳಿಗೆ ಉದ್ಯೋಗವನ್ನು ಸರಿಯಾಗಿ ನೀಡುತ್ತಿಲ್ಲ.  ಒಂದು ವೇಳೆ ಈ ಸಹಾಯಧನದ ಬದಲು ಪದವೀಧರರಿಗೆ ಡಿಪ್ಲೋಮೋ ಮುಗಿಸಿದವರಿಗೆ ಉದ್ಯೋಗವನ್ನು ನೀಡಿದ್ದರೆ ಇನ್ನೂ ಹೆಚ್ಚಿನ ಪ್ರಗತಿಯನ್ನು ನಮ್ಮ ರಾಜ್ಯ ಕಾಣುತ್ತಿತ್ತು.  ಆದರೆ ಯಾರು ಸಹ ಇದರ ಬಗ್ಗೆ ಅಷ್ಟಾಗಿ ಯೋಚಿಸುತ್ತಿಲ್ಲ ಆದರೆ ಇದರ ಬದಲು ಪದವೀಧರರು ಹಾಗೆ ಡಿಪ್ಲೋಮೋ ಮುಗಿಸಿದವರಿಗೆ ಸಹಾಯಧನವನ್ನು ನೀಡುವುದರ ಮೂಲಕ ನಿರುದ್ಯೋಗಿಗಳಿಗೆ ಸಹಾಯ ಮಾಡುತ್ತಿದೆ.  ಯುವನಿಧಿ ಯೋಜನೆಯು ಪದವೀಧರರಿಗೆ ಮತ್ತು ಡಿಪ್ಲೋಮೋ ಮುಗಿಸಿದವರಿಗೆ ಯುವನಿಧಿ ಸಹಾಯಧನವನ್ನು ನೀಡುತ್ತಿದೆ. 

Karnataka Yuva Nidhi Scheme: Apply Online ಯುವನಿಧಿ ಯೋಜನೆ - Today Kannada News

 ಈ ಹಣವನ್ನು ಪಡೆಯಲು ಪದವೀಧರರು ಅಥವಾ ಡಿಪ್ಲೋಮೋ ಮುಗಿಸಿದವರು 2023ರಲ್ಲಿ ಅವರ ಪದವಿಯನ್ನು ಮುಗಿಸಿರಬೇಕು, 6 ತಿಂಗಳ ನಂತರ ಅವರಿಗೆಯಾವುದೇ ರೀತಿಯ ಉದ್ಯೋಗ ದೊರೆಯದಿದ್ದರೆ ಈ ಯೋಜನೆಗೆ ಅರ್ಜಿಯನ್ನು ಸಲ್ಲಿಸಿ ಈ ಯುವನಿಧಿ ಯೋಜನೆಯಡಿಯಲ್ಲಿ ಅವರು ಸಹಾಯಧನವನ್ನು ಪಡೆಯಬಹುದಾಗಿದೆ ಅಥವಾ ನೀವು ಯಾವುದಾದರೂ ಉದ್ಯೋಗದಲ್ಲಿದ್ದರೆ ಈ ಯುವನಿಧಿ ಸಹಾಯಧನವನ್ನು ಪಡೆಯಲಾಗುವುದಿಲ್ಲ.  ಈ ಯುವ ನಿದಿಯ  ಸಹಾಯಧನವು ಕೇವಲ ಎರಡು ವರ್ಷ ಮಾತ್ರ ಪಡೆಯಬಹುದಾಗಿದೆ.ಎರಡು ವರ್ಷದ ನಂತರವೂ ನಿರುದ್ಯೋಗಿಗೆ ಯಾವುದೇ ರೀತಿಯ ಉದ್ಯೋಗ ಸಿಗದಿದ್ದರೆ ಈ ಯುವನಿಧಿ ಸಹಾಯಧನವು ಎರಡು ವರ್ಷದ ನಂತರವೂ ಮುಂದುವರೆಯುತ್ತದೆ.  ನಿಮಗೆ ಉದ್ಯೋಗ ಸಿಗುವವರೆಗೂ ಈ ಯುವ ನಿಧಿ ಯೋಜನೆಯ ಅಡಿಯಲ್ಲಿ ನೀವು ಈ ಸಹಾಯಧನವನ್ನು ಪಡೆಯಬಹುದು. ಈ ಭತ್ಯೆಯನ್ನು  ಡಿಬೆಟಿ ಮೂಲಕ ಒದಗಿಸಲಾಗುತ್ತದೆ. ಸೇವಾ ಸಿಂಧು ಪೋರ್ಟಲ್ ಮೂಲಕ ಅರ್ಜಿಯನ್ನು ಸಲ್ಲಿಸಲು ಅವಕಾಶವಿದೆ.  ಉನ್ನತ ವ್ಯಾಸಂಗ ಮಾಡುತ್ತಿರುವವರು ಈ ಸೇವೆಯನ್ನು ಪಡೆಯಲಾಗುವುದಿಲ್ಲ.  ಸರ್ಕಾರಿ ಮತ್ತು ಖಾಸಗಿ ವಲಯದಲ್ಲಿ ಉದ್ಯೋಗವನ್ನು ಪಡೆದವರು ಈ ಸೇವೆಯನ್ನುಪಡೆಯಲಾಗುವುದಿಲ್ಲ.  ಈ ಸೌಲಭ್ಯವನ್ನು ಪಡೆಯಲು ನಿರುದ್ಯೋಗಿ ಎಂದು ಘೋಷಣೆ ಮಾಡಿಕೊಂಡು ಅರ್ಜಿ ಸಲ್ಲಿಸಬೇಕು.  ಈ ಯುವನಿಧಿ ಯೋಜನೆ ಕರ್ನಾಟಕದ ಕನ್ನಡಿಗರಿಗಷ್ಟೇ ಈ ಯೋಜನೆ ಅನುಕೂಲವಾಗಲಿದೆ ಇದಲ್ಲದೆ ಮುಂದಿನ ದಿನಗಳಲ್ಲಿ ಉದ್ಯೋಗ ಸೃಷ್ಟಿಯ ಬಗ್ಗೆ ಸಂಪುಟಗಳಲ್ಲಿ ಚರ್ಚಿಸುವ ಕುರಿತು ಭರವಸೆಯನ್ನು ನೀಡಿದೆ. ಯುವ ನಿಧಿ ಯೋಜನೆ ಜಾರಿಗೆ ಹೊರಬಿದ್ದ ಆದೇಶ; ಷರತ್ತುಗಳೇನು? ಅರ್ಹರು ಯಾರು? ಅರ್ಜಿ  ಸಲ್ಲಿಸುವುದೇಗೆ? ಇಲ್ಲಿದೆ ವಿವರ - karnataka government order issued to  implement yuva nidhi yojana ...

 

ಈ ಯೋಜನೆಯ ನಾಡಿನ ಯುವ ಜನತೆಗೆ ಆರ್ಥಿಕ ನೆರವು ನೀಡಿ,  ಆತ್ಮವಿಶ್ವಾಸ ತುಂಬಿ ಬದುಕಿನಲ್ಲಿ ನೆಲೆ ಕಂಡುಕೊಳ್ಳಲು ಸಹಾಯವಾಗುತ್ತದೆ ಏಕೆಂದರೆ ಹಲವಾರು ಜನರು ಉದ್ಯೋಗ ಇಲ್ಲದ ಕಾರಣ ತಮ್ಮ ಪ್ರಾಣವನ್ನೇ ಬಿಟ್ಟಿದ್ದಾರೆ, ಏಕೆಂದರೆ ಮನೆಯಲ್ಲಿ ಬಡತನ, ತಂದೆ ತಾಯಿಯ ಮೇಲೆ ಜವಾಬ್ದಾರಿ, ಇನ್ನೊಂದು ಕಡೆ ಇನ್ನೂ ಕೆಲಸ ಸಿಗದೇ ಪರದಾಡುತ್ತಿರುವ ಯುವ ಜನತೆ, ಇದರಿಂದ ಬೇಸತ್ತು ಹಲವಾರು ಜನ ಪ್ರಾಣವನ್ನೇ ತೆಗೆದುಕೊಂಡಿದ್ದಾರೆ.  ಈ ಯುವನಿಧಿಯಿಂದ ಸ್ವಲ್ಪ ಆರ್ಥಿಕವಾಗಿ ಅವರಿಗೆ ಬಲವನ್ನು ಕೊಡುತ್ತದೆ ಅದಲ್ಲದೆ ಈ ಯುವನಿದೆ ಯೋಜನೆಯಲ್ಲಿ ಸುಮಾರು 3.7 ಲಕ್ಷ ಯುವ ಜನರಿಗೆ ಈ ಯೋಜನೆಯ ಲಾಭ ಸಿಗುತ್ತದೆ.  ಅಂದರೆ ಕರ್ನಾಟಕದಲ್ಲಿ  3.7 ಲಕ್ಷ ಯುವಕರು ಹಾಗೂ ಯುವತಿಯರು ನಿರುದ್ಯೋಗ ದಿಂದ ಕಷ್ಟವನ್ನು ಅನುಭವಿಸುತ್ತಿದ್ದಾರೆ.  ಇದರಿಂದ 3.7 ಲಕ್ಷ ಯುವ ಜನತೆಗೆ ಸ್ವಲ್ಪ ಸಹಾಯವಾದರೂ ಆಗುತ್ತಿದೆ ಇಲ್ಲಿಯವರೆಗೆ ಲೇಖನವನ್ನು ಓದಿದ್ದಕ್ಕೆ ಧನ್ಯವಾದಗಳು.

Leave a Comment