ಎಲ್ಲರಿಗು ನಮಸ್ಕಾರ ,
Dr BRO ಎಂದರೆ ಯಾರಿಗೆ ಗೊತ್ತಿಲ್ಲ ಹೇಳಿ ನಮಸ್ಕಾರ ದೇವ್ರು ಎನ್ನುತ್ತಲೆ, ಕನ್ನಡಿಗರಿಗೆ ಜಗತ್ತಿನ ವಿವಿಧ ಪ್ರದೇಶಗಳನ್ನು ತೋರಿಸುತ್ತ ಅಲ್ಲಿನ ಸಂಸ್ಕೃತಿ , ಭಾಷೆ, ಆಟ ,ಪಾಠ, ಜೀವನ್ ಶೈಲಿ, ಅಲ್ಲಿಯ ಪದ್ಧತಿ ಇನ್ನು ಹಲವಾರು ವಿಶೇಷತೆಗಳನ್ನು ಕನ್ನಡದಲ್ಲೇ ವಿವರಿಸುತ್ತಾ,ಕನ್ನಡಿಗರ ಮನಸ್ಸನ್ನು ಗೆದ್ದಿರುವ ನಮ್ಮ DR .BRO. ಇತ್ತೀಚಿನ ದಿನಗಳಲ್ಲಿ ನಾವು ಯಾವುದೇ ಸಾಮಾಜಿಕ ಜಾಲತಾಣ ಅಂದರೆ ಫೇಸ್ಬುಕ್,ಇನ್ಸ್ಟಾ,ಯು ಟ್ಯೂಬ್ ಯಾವುದನ್ನೇ ತೆರೆದರು DR .BRO ಅವರ VLOGS ಗಳನ್ನೂ ನೋಡಬಹುದಾಗಿದೆ . ಏಕೆಂದರೆ ಇಷ್ಟು ಸಣ್ಣ ವಯಸ್ಸಿನಲ್ಲಿ, ಜನಪ್ರಿಯನಾಗಿದ್ದಾರೆ.ಅದಲ್ಲದೆ ಇವತ್ತಷ್ಟೇ youtube ನಲ್ಲಿ” 44 ಮಕ್ಕಳ ಮಹಾತಾಯಿ” ಎನ್ನುವ ವಿಡಿಯೋ ಕೆಲವೇ ನಿಮಿಷದಲ್ಲಿ ಲಕ್ಷಗಟ್ಟಲೆ ವೀಕ್ಷಣೆಯನ್ನು ಪಡೆಯಿತು. ಈ ಲೇಖನದಲ್ಲಿ ಇವತ್ತಿನ ವಿಡಿಯೋದ ೪೪ ಮಕ್ಕಳ ಮಹಾತಾಯಿ ಯ ಬಗ್ಗೆ ತಿಳಿದುಕೊಳ್ಳೋಣಾ ಬನ್ನಿ, ಹಾಗಾಗಿ ಲೇಖನವನ್ನು ಪೂರ್ತಿ ಓದಿ.
DR.BRO ಬಗ್ಗೆ ನಿಮಗೆಷ್ಟು ಗೊತ್ತು :
Dr.bro ಅವರ ನಿಜವಾದ ಹೆಸರು ಗಗನ್ ಶ್ರೀನಿವಾಸ್, ಇವರು ಮೂಲತಃ ಬೆಂಗಳೂರಿನವರು, ಇವರ ವಯಸ್ಸು ೨೩ ವರ್ಷ,ತಂದೆ : ಶ್ರೀನಿವಾಸ್, ತಾಯಿ: ಪದ್ಮಾವತಿ, ಮತ್ತು ಗಗನ್ ಹಾಗು ಅವರ ಸಹೋದರ. ಗಗನ್ ಅವರಿಗೆ ಓದಿನಲ್ಲಿ ಅಷ್ಟೊಂದ್ ಆಸಕ್ತಿ ಇರಲಿಲ್ಲ, ಹಾಗಾಗಿ ಇವರು driver ಆಗಿ ಕೆಲಸವನ್ನು ಮಾಡುತ್ತ ದೇವಸ್ಥಾನದಲ್ಲಿ ಪೂಜೆಯನ್ನು ಮಾಡುತ್ತ ಇರುತ್ತಾರೆ 2016 ರಲ್ಲಿ, ನಂತರದ ದಿನಗಳಲ್ಲಿ youtube ಚಾನೆಲ್ ಅನ್ನು ಶುರು ಮಾಡುತ್ತಾರೆ. ಅದರಲ್ಲಿ ಕಾಮಿಡಿ ವಿಡಿಯೋಗಳನ್ನು, ಆಕ್ಟರ್ಸ್ ಗಳ ಸಂದರ್ಶನವನ್ನು ಮಾಡಲು ಶುರು ಮಾಡುತ್ತಾರೆ. 2018 ರಲ್ಲಿ ಗಗನ್ ಅವರು ತಮ್ಮದೇ ಆದ youtube ಚಾನೆಲ್ ಅನ್ನು ಶುರು ಮಾಡುತ್ತಾರೆ. ಮೊದಲು ಕರ್ನಾಟಕದ ಸ್ಥಳಗಳನ್ನು vlog ಮಾಡುವ ಮುಖಾಂತರ, ನಂತರದ ದಿನಗಳಲ್ಲಿ ಇಡೀ ಭಾರತವನ್ನು ಅಂದರೆ ಕೇರಳ,ಅಸ್ಸಾಂ, ರಾಜಸ್ತಾನ್, ಹಿಮಾಚಲ್ ಪ್ರದೇಶಗಳ ಬಗ್ಗೆ ವಿವರಿಸುತ್ತಿದ್ದರು. ಗಗನ್ ಅವರು ಜನಪ್ರಿಯವಾಗಲು ಕಾರಣ ಇವರು ಮಾತನಾಡುವ ಕನ್ನಡದ ಶೈಲಿಯಿಂದಲೇ , ಇವರು ವಿಡಿಯೋ ಶುರು ಮಾಡುವ ಮೊದಲು “ ನಮಸ್ಕಾರ ದೇವ್ರು “ ಎನ್ನುವ ಡೈಲಾಗ್ನ ಮೂಲಕ, ಎಲ್ಲ ಅವರ subscriber ಗಳಿಗೆ ನಮಸ್ಕಾರ ಹೇಳುತ್ತಾ ಶುರು ಮಾಡುತ್ತಾರೆ. ಸದ್ಯದ ದಿನಗಳಲ್ಲಿ ವಿದೇಶದ ಗಳಿಗೆ ಭೇಟಿ ನೀಡುತ್ತಿದ್ದಾರೆ. ದುಬೈ,ಥೈಲ್ಯಾಂಡ್, ರಷ್ಯಾ, ಅಫಘಾನಿಸ್ತಾನ,ಪಾಕಿಸ್ತಾನ,ಆಫ್ರಿಕಾ ಮುಂತಾದ ದೇಶಗಳಿಗೆ ಭೇಟಿ ಕೊಡುತ್ತಿದ್ದಾರೆ. ಎಲ್ಲರು ಸಹ ಅಫಘಾನಿಸ್ತಾನ ಮತ್ತು ಪಾಕಿಸ್ತಾನ ಎಂದರೆ ಹೆದರುತ್ತಾರೆ ಏಕೆಂದರೆ ತಾಲಿಬಾನ್ ಗಳು, ಅವರ ಮುಂದೆಯೇ ನಮ್ಮ ಹೆಮ್ಮೆಯ dr.bro ವಿಡಿಯೋಗಳನ್ನು ಮಾಡಿದ್ದಾರೆ, ಇದು ನಮಗೆಲ್ಲ ಹೆಮ್ಮೆಯ ವಿಷಯ. ಅದಲ್ಲದೆ ಇವರಿಗೆ ಅಷ್ಟಾಗಿ ಇಂಗ್ಲಿಷ್ ಬರದೇ ಇದ್ದರು ಸಹ ವಿದೇಶಗಳಿಗೆ ಭೇಟಿ ನೀಡಿ ಅಲ್ಲಿಯ ಬಗ್ಗೆ ತಿಳಿಸಿ ಕೊಡುತ್ತಿದ್ದಾರೆ.
ಉಗಾಂಡದ ಮಹಾತಾಯಿಗೆ 44 ಜನ ಮಕ್ಕಳು
Dr.bro ಅವರು ಮೊನ್ನೆಯೆಷ್ಟೇ ಆಫ್ರಿಕಾ ಗೆ ಭೇಟಿ ನೀಡಿ ಅಲ್ಲಿಯ ಜನರ ಜೀವನ, ಭಾಷೆ,ಊಟ ಎಲ್ಲದರ ಬಗ್ಗೆ ತಿಳಿಸಿ ಕೊಡುತ್ತಿದ್ದಾರೆ. ಆದರೆ ಇವತ್ತು Youtube ನಲ್ಲಿ ವಿಡಿಯೋವನ್ನು ಅಪ್ಲೋಡ್ ಮಾಡಿದ್ದರು,ಕೆಲವೇ ನಿಮಿಷಗಳಲ್ಲಿ ಲಕ್ಷಗಟ್ಟಲೆ ವೀಕ್ಷಣೆಯನ್ನು ಪಡೆದಿತ್ತು, ಏಕೆಂದರೆ ಇವತ್ತಿನ ವಿಡಿಯೋದಲ್ಲಿ ಉಗಾಂಡದ ಮಹಾತಾಯಿ, 41 ವರ್ಷಕ್ಕೆ 44 ಮಕ್ಕಳನ್ನ ಹೆತ್ತಿರುವಂತಹ ಮಹಾತಾಯಿ. ಇದರ ಬಗ್ಗೆ ಕೇಳಿದ ತಕ್ಷಣ ನಮಗೆ ಮೊದಲು ತಲೆಯಲ್ಲಿ ಬರುವುದು, ಅದು ಹೇಗೆ ಸದ್ಯ 41 ವರ್ಷಕ್ಕೆ 44 ಮಕ್ಕಳನ್ನು ಹೊಂದಲು ಹೇಗೆ ಸಾದ್ಯಾ ಎಂದು? ಬನ್ನಿ, ಉಗಾಂಡದ ಮಹಾತಾಯಿಗೆ 44 ಮಕ್ಕಳು. ಪ್ರತಿ ರೂಮ್ ನಲ್ಲಿ 8 ಬೆಡ್ ಗಳಿದ್ದು ೮ ಜನ ಮಲಗುತ್ತಾರೆ. 44 ಮಕ್ಕಳು ಒಂದೇ ಮನೆಯಲ್ಲಿ ಇರಲಾಗುವುದಿಲ್ಲ ಹಾಗಾಗಿ ಚಿಕ್ಕ ಚಿಕ್ಕ ಕೊಠಡಿಗಳಾಗಿ ಮಾಡಲಾಗಿದೆ. ಈ ಮಹಾತಾಯಿ ತನ್ನ 44 ಮಕ್ಕಳ ಊಟ , ತಿಂಡಿ, ಬಟ್ಟೆ, ಶಾಲೆ ಇದೆಲ್ಲದರ ಜವಾಬ್ದಾರಿಯನ್ನು ತೆಗೆದುಕೊಳ್ಳುತ್ತಿದ್ದಾರೆ. ಮೇಲ್ನೋಟಕ್ಕೆ ನಮಗೆ ಇದು ತಮಾಷೆ ಎನಿಸಿದರೂ , ಆ ಮಕ್ಕಳನ್ನು ಸಾಕುವ ಹೊಣೆ ಅಷ್ಟು ಸುಲಭದ್ದಲ್ಲ. ಮಕ್ಕಳಿಗೆ ೩ ಹೊತ್ತು ಅಡುಗೆ ಮಾಡಿ, ಮಾಡಿ, ಆ ತಾಯಿಯ ಜೀವವೇ ಸೋತೋಗಿದೆ. ನಿಮಗೇಲ್ಲಾರೀಗು ಒಂದು ಅನುಮಾನ ಹುಟ್ಟಬಹುದು, ಈ ಮಹಾ ತಾಯಿಗೆ 41 ವರ್ಷ ಆದ್ರೆ ಈಕೆಗೆ 44 ಮಕ್ಕಳು ಹೇಗೆ ಸಾಧ್ಯ ಎಂದು. ಈ ತಾಯಿ ಜನ್ಮ ನೀಡುವ ಸಂದರ್ಭದಲ್ಲಿ ಕೆಲವೊಮ್ಮೆ 1 ಮಕ್ಕಳು, ಕೆಲವೊಮ್ಮೆ 3 ಮಕ್ಕಳು, ಕೆಲವೊಮ್ಮೆ 4 ಮಕ್ಕಳಿಗೂ ಸಹ ಈ ತಾಯಿ ಜನ್ಮ ನೀಡಿದ್ದಾರೆ. 5 ಬಾರಿ 4ಕ್ಕೂ ಮಕ್ಕಳಿಗೆ ಒಮ್ಮೆಲೇ ಜನ್ಮವನ್ನು ನೀಡಿದ್ದಾರೆ. ನೀವು ನಂಬುದಿಲ್ಲ ಏಕೆಂದರೆ, ಈ ಮಹಾತಾಯಿ ಅವರ ಕೊನೆಯ ಮಗುವಿಗೆ ಜಗದೀಶ್ ಎಂದು ಹೆಸರಿಟ್ಟಿದ್ದಾರೆ. ಈ ಹೆಸರಿಡಲು ಕಾರಣ ಏನೆಂದರೆ ಭಾರತದ ಕೆಲವು ಸಿನಿಮಾ ಮತ್ತು ಧಾರಾವಾಹಿಗಳನ್ನು ನೋಡಿ ಅದರಕ್ಕಿ ಬರುವ ಪಾತ್ರಗಳನ್ನು ನೋಡಿ ಅದೇ ಹೆಸರನ್ನು ಇಟ್ಟಿದ್ದಾರೆ, ಅದಲ್ಲದೆ ಈ ೪೪ ಜನ ಮಕ್ಕಳಿಗೆ ಎಲ್ಲರಿಗು ಹೆಸರನ್ನು ಇಡಲು ಹೆಸರನ್ನು ಹುಡುಕಬೇಕಾಗುತ್ತದೆ. ಹಾಗೆ ನಮ್ಮ DR.BRO ಹೋದ ಉಗಾಂಡದ ಮನೆಯವರಿಗೆ ಆಹಾರವನ್ನು ತೆಗೆದುಕೊಂಡು ಹೋಗಿದ್ದಾರೆ. ಸ್ನೇಹಿತರೆ ಎಲ್ಲ ಮನುಷ್ಯರಿಗೂ ಹಂಚುವ ಭಾವನೆ ಇರುವುದಿಲ್ಲ ಆದರೆ ಗಗನ್ ಅವರು , ಅವರ ಮಾನವೀಯತೆ ಗುಣವನ್ನು ಜಗತ್ತಿಗೆ ತೋರಿಸಿದ್ದಾರೆ. ಉಗಾಂಡದ ಟ್ರಡಿಷನಲ್ ಫುಡ್ ಮಟೊಕೆ .
ಈ ಮಹಾತಾಯಿಯ ಗಂಡ ಸುಮಾರು ವರ್ಷಗಳ ಹಿಂದೆ ಬಿಟ್ಟು ಹೋಗಿದ್ದಾರೆ. ಈ ತಾಯಿಗೆ ಯಾವುದೇ ಟಾರ್ಗೆಟ್ ಇಲ್ಲ , ಇಷ್ಟು ಮಕ್ಕಳನ್ನು ಪಡೆಯಲು ಆದರೆ ಇವರಿಗೆ ಜೆನೆಟಿಕಲ್ ತೊಂದರೆ ಇದೆ ಹಿ, ಆ ತೊಂದ್ರೆ ಏನು? ಅಂದ್ರೆ ಒಂದು ಸೈಕಲ್ ಗೆ ಒಂದು ಎಗ್ ರೆಲೀಸ್ ಆಗುತ್ತದೆ , ಆದರೆ ಇವರಿಗೆ ಒಂದು ಸೈಕಲ್ ಗೆ ಹಲವಾರು ಎಗ್ ರಿಲೀಸ್ ಆಗತ್ತೆ, ಅದು ದಿನ ಕಳೆದಂತೆ ಅದರಿಂದ ತೊಂದರೆ ಉಂಟಾಗುತ್ತದೆ, ಆ ತೊಂದರೆಗಳನ್ನು ತಡೆಗಟ್ಟಲು ಪ್ರತಿ ಸಲ ಮಗುವಿಗೆ ಜನ್ಮವನ್ನು ನೀಡಲು ಸಿದ್ಧರಾಗುತ್ತಾರೆ, ಮಗುವಿಗೆ ಜನ್ಮವನ್ನು ಕೊಟ್ಟು ಕೊಟ್ಟು ಇವರು ಜೀವವನ್ನು ಉಳಿಸಿಕೊಂಡಿದ್ದಾರೆ. ಹೀಗಾಗಿ ಈ ಮಹಾತಾಯಿಗೆ ೪೪ ಮಕ್ಕಳು. ಈ ತಾಯಿಗೆ ಗೊತ್ತು ಈ ಕಷ್ಟ , ಇಷ್ಟು ಮಕ್ಕಳನ್ನು ಸಾಕುವುದು ಅಷ್ಟು ಸುಲಭದ ಮಾತಲ್ಲ . ನೋಡಿದ್ರಲ್ಲಾ ಸ್ನೇಹಿತರೆ ಈ ಮಹಾತಾಯಿಯ ಬಗ್ಗೆ , ಇಲ್ಲಿಯವರೆಗೆ ಲೆಹ್ಕನವನ್ನು ಓದಿದ್ದಕ್ಕೆ ಧನ್ಯವಾದಗಳು .